ವಿಚ್ಛೇದನದ ಬಳಿಕ ಮೊದಲ ಬಾರಿಗೆ ಮಾಜಿ ಪತಿಯ ಫೋಟೋ ಶೇರ್ ಮಾಡಿದ ಸಮಂತಾ
ತೆಲುಗು ಸ್ಟಾರ್ ನಟಿ ಸಮಂತಾ ಮಾಜಿ ಪತಿ ನಾಗಚೈತನ್ಯ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶಏರ್ ಮಾಡಿದ್ದಾರೆ. ಸಮಂತಾ ಮತ್ತು ನಾಗಚೈತನ್ಯ ನಟನೆಯ ಮಜಿಲಿ ಸಿನಿಮಾ 3 ವರ್ಷ ಪೂರೈಸಿದ ಸಂತಸದಲ್ಲಿ ಸಮಂತಾ ಮಾಜಿ ಪತಿಯ ಫೋಟೋ ಶೇರ್ ಮಾಡಿದ್ದಾರೆ.
ತೆಲುಗು ಸ್ಟಾರ್ ನಟಿ ಸಮಂತಾ (Samantha) ಮತ್ತು ನಾಗಚೈತನ್ಯ(Naga Chaitanya) ವಿಚ್ಛೇದನ ನೀಡಿ ಅನೇಕ ತಿಂಗಳಾಗಿದೆ. ಆದರೂ ಇಬ್ಬರ ವಿಚಾರ ಸದ್ದು ಮಾಡುತ್ತಲೇ ಇದೆ. ಇತ್ತೀಚಿಗಷ್ಟೆ ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ಮಾಜಿ ಪತಿ ನಾಗ ಚೈತನ್ಯ ರನ್ನು ಅನ್ ಫಾಲ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ನಾಗ ಚೈತನ್ಯ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಪತಿಯಿಂದ ಸಂಪೂರ್ಣವಾಗಿ ದೂರ ಆದ ಬಳಿಕವೂ ಸಮಂತಾ, ನಾಗ ಚೈತನ್ಯ ಫೋಟೋ ಹಂಚಿಕೊಂಡಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಅಂದಹಾಗೆ ಈ ಜೋಡಿ ಮತ್ತೆ ಒಂದಾಗುವ ಸೂಚನೆ ನೀಡಿದ್ಯಾ ಅಂತ ಅಂದ್ಕೋಬೇಡಿ. ಮಾಜಿ ಪತಿಯ ಫೋಟೋ ಶೇರ್ ಮಾಡಲು ಕಾರಣವಾಗಿದ್ದು ಮಜಿಲಿ(Majili) ಸಿನಿಮಾ.
ಸಮಂತಾ ಮತ್ತು ನಾಗ ಚೈತನ್ಯ ನಟನೆಯ ಮಜಿಲಿ ಸಿನಿಮಾ ಬಿಡುಗಡೆಯಾಗಿ 3 ವರ್ಷ ಪೂರೈಸಿದೆ. ಏಪ್ರಿಲ್ 5ರಂದು ಸಿನಿಮಾ ತೆರೆಗೆ ಬಂದಿತ್ತು. ಸ್ಯಾಮ್ ಮತ್ತು ಚೈ ನಟನೆಯ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆ ಸಿನಿಮಾದ ನೆನಪನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಸಮಂತಾ. ವಿಚ್ಛೇದನದ ಬಳಿಕ ಸಮಂತಾ ಮೊದಲ ಬಾರಿಗೆ ಮಾಜಿ ಪತಿಯ ಫೋಟೋವನ್ನು ಶೇರ್ ಮಾಡಿದ್ದಾರೆ. ಮಜಿಲಿ ಸಿನಿಮಾದ ನಾಗ ಚೈತನ್ಯ ಅವರ ಆಂಗ್ರಿ ಲುಕ್ ಫೋಟೋವನ್ನು ಶೇರ್ ಮಾಡಿದ್ದಾರೆ. ಆದರೆ ನಾಗ ಚೈತನ್ಯ ಸಿನಿಮಾದ ಯಾವುದೇ ಫೋಟೋ ಹಂಚಿಕೊಂಡಿಲ್ಲ.
ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ನಾಗ ಚೈತನ್ಯ ಸಾಮಾಜಿಕ ಜಾಲತಾಣದಿಂದ ದೂರ ಉಳಿದ್ದಾರೆ. ಹೆಚ್ಚು ಪೋಸ್ಟ್ ಗಳನ್ನು ಶೇರ್ ಮಾಡುವುದಿಲ್ಲ. ಇನ್ನು ಸಮಂತಾ ವಿಚ್ಛೇದನ ನೀಡಿದ ಬಳಿಕ ಮಾಜಿ ಪತಿಯನ್ನು ಇನ್ಸ್ಟಾಗ್ರಾಮ್ ನಿಂದ ಅನ್ ಫಾಲೋ ಮಾಡಿದ್ದರು. ಆದರೆ ಅದಕ್ಕೂ ಮೊದಲು ಸ್ಯಾಮ್ ಮದುವೆ ಸೀರೆಯನ್ನು ಹಿಂತಿರುಗಿಸಿದ್ದರು ಎನ್ನುವ ಮಾತು ಕೇಳಿಬಂದಿತ್ತು. ಸಮಂತಾ ಮತ್ತು ನಾಗಚೈತನ್ಯ ಮತ್ತೆ ಒಂದಾಗುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು ಆ ಸಮಯದಲ್ಲಿ ಸಮಂತಾ ಸೀರೆ ಪಾವಾಸ್ ಮಾಡುವ ಮೂಲಕ ಅಚ್ಚರಿ ವದಂತಿಗೆ ಬ್ರೇಕ್ ಹಾಕಿದ್ದರು. ನಾಗಚೈತನ್ಯ ನೆನೆಪುಗಳಿಂದ ಸಂಪೂರ್ಣ ದೂರ ಸರಿಯಲು ಪ್ರಯತ್ನಿಸುತ್ತಿರುವ ಸಮಂತಾ ಇದೀಗ ಫೋಟೋ ಹಂಚಿಕೊಂಡಿದ್ದು ಅಚ್ಚರಿ ಮೂಡಿಸಿದೆ.
Instagramನಲ್ಲಿ ನಾಗಚೈತನ್ಯರನ್ನು ಅನ್ ಫಾಲೋ ಮಾಡಿದ ನಟಿ ಸಮಂತಾ
ಅಕ್ಟೋಬರ್ ನಲ್ಲಿ ವಿಚ್ಛೇದನ ಘೋಷಣೆ
ಸಮಂತಾ ಮತ್ತು ನಾಗ ಚೈತನ್ಯ ಕಳೆದ ವರ್ಷ ಅಕ್ಟೋಬರ್ ನಲ್ಲಿ ವಿಚ್ಛೇದನ ನೀಡುವ ಮೂಲಕ ಸಂಚಲನ ಮೂಡಿಸಿದ್ದರು. ಬೆಸ್ಟ ಕಪಲ್ ಎನಿಸಿಕೊಂಡಿದ್ದ ಈ ಜೋಡಿಯ ವಿಚ್ಛೇದನ ಸುದ್ದಿ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಬಳಿಕ ಈ ಜೋಡಿಯ ವಿಚ್ಛೇದನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿತ್ತು. ಆದರೆ ಸಮಂತಾ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಸಮಂತಾ ನೋಡಿ ಬೆರಗಾದ ಅಭಿಮಾನಿಗಳು
ವಿಚ್ಛೇದನದ ಬಳಿಕ ಸಮಂತಾ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2 ಸಕ್ಸಸ್ ಬಳಿಕ ಸಮಂತಾ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಪುಷ್ಪಾ ಚಿತ್ರದ ಐಟಂ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಬಾಲಿವುಡ್ ಕಡೆಯೂ ಮುಖ ಮಾಡಲಿದ್ದಾರೆ. ಸದ್ಯ ಯಶೋದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಹುಭಾಷೆಯಲ್ಲಿ ತಯಾರಾಗುತ್ತಿದೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿತ್ರದಲ್ಲಿ ಆಕ್ಷನ್ ದೃಶ್ಯಗಳು ಜಾಸ್ತಿ ಇರಲಿದೆಯಂತೆ. ಸ್ಟಂಟ್ ನಿರ್ದೇಶನ ಮಾಡಲು ಹಾಲಿವುಡ್ ನಿಂದ ಸ್ಟಂಟ್ ಮಾಸ್ಟರ್ ಸಮಂತಾ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ರಾಜ್ ಮತ್ತು ಡಿಕೆ ನಿರ್ದೇಶನದ ಹೊಸ ವೆಬ್ ಸೀರಿಸ್ ನಲ್ಲಿ ಸಮಂತಾ ನಟಿಸುತ್ತಿದ್ದು, ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.