ಇಂದು ಕಾರು ಖರೀದಿದಾರರಿಗೆ ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ (EV) ವಾಹನಗಳ ಹಲವು ಆಯ್ಕೆಗಳಿವೆ. ಪೆಟ್ರೋಲ್ ಕಾರುಗಳ ಆರಂಭಿಕ ಬೆಲೆ ಕಡಿಮೆಯಿದ್ದರೂ ದೀರ್ಘಾವಧಿಯಲ್ಲಿ ಇಂಧನ ವೆಚ್ಚ ಹೆಚ್ಚು, ಆದರೆ ಸಿಎನ್‌ಜಿ ಮತ್ತು ಇವಿಗಳು ಆರಂಭದಲ್ಲಿ ದುಬಾರಿಯಾದರೂ ಭವಿಷ್ಯದಲ್ಲಿ ಹಣ ಉಳಿತಾಯಕ್ಕೆ ನೆರವಾಗುತ್ತವೆ. ನಿಮ್ಮ ದೈನಂದಿನ ಪ್ರಯಾಣ ಮತ್ತು ಇಂಧನ ಲಭ್ಯತೆ ಆಧಾರದ ಮೇಲೆ ಸೂಕ್ತ ಕಾರನ್ನು ಆಯ್ಕೆ ಮಾಡಿಕೊಳ್ಳಬೇಕು.

ನೀವು ಕಾರು ಖರೀದಿಸಬೇಕು ಅಂದ್ಕೊಂಡಿದ್ದೀರಿ.. ಥಟ್ ಅಂತಾ ನಿಮ್ಮ ಮುಂದೆ ಈಗ ಹಲವು ಆಯ್ಕೆಗಳು ಬರುತ್ತವೆ.. ಅದು ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್! ಇಂದು ಖರೀದಿದಾರನಿಗೆ ಅಪ್ಷನ್ ದೊಡ್ಡದಾಗಿದೆ. ಮೊದಲೆಲ್ಲ ಹಾಗೆ ಇರಲಿಲ್ಲ. ಇವತ್ತು ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ವಾಹನಗಳಿಗೂ ಡಿಮ್ಯಾಂಡ್ ಇದೆ.

ಹೀಗಾಗಿ ಕಾರು ಖರೀದಿ ವೇಳೆ ಕೇವಲ ಅದರ ಬೆಲೆಯನ್ನ ನೋಡಿದ್ರೆ ಸಾಕಾಗಲ್ಲ. ಹಾಗಿದ್ದರೆ ನಮ್ಮ ಆಯ್ಕೆ ಯಾವುದಾಗಿರಬೇಕು? ಪೆಟ್ರೋಲ್ ಮಾಡೆಲ್ ಕಾರನ್ನು ಆಯ್ಕೆ ಮಾಡಿಕೊಂಡರೆ ಆರಂಭದಲ್ಲಿ ಖರ್ಚು ಕಡಿಮೆ. ಮೈಲೇಜ್ ವಿಚಾರಕ್ಕೆ ಬಂದರೆ ತಿಂಗಳ ಅಥವಾ ವಾರ್ಷಿಕ ವೆಚ್ಚ ಹೆಚ್ಚು. ಅದೇ ರೀತಿ CNG ಕಾರಿನ ಆರಂಭಿಕ ಬಲೆ ಸ್ವಲ್ಪ ಜಾಸ್ತಿ. ಇಂಧನ ವೆಚ್ಚವು ದೀರ್ಘಾವಧಿಯ ಉಳಿತಾಯಕ್ಕೆ ಕಾರಣ. ಇನ್ನು ವಿದ್ಯುತ್ ವಾಹನಗಳ ವಿಷಯದಲ್ಲಿ ಚಿತ್ರಣ ಸ್ವಲ್ಪ ಭಿನ್ನ. ವಿದ್ಯುತ್ ಚಾಲಿತ ಕಾರಿನ ಆರಂಭಿಕ ವೆಚ್ಚ ಹೆಚ್ಚು. ಆದರೆ ಮನೆಯಲ್ಲೇ ಚಾರ್ಜ್ ಮಾಡೋದ್ರಿಂದ ಪ್ರತಿ ಕಿಲೋಮೀಟರ್ ವೆಚ್ಚ ಗಣನೀಯವಾಗಿ ಕಡಿಮೆ.

ಪೆಟ್ರೋಲ್ ಕಾರುಗಳ ಪ್ರಯೋಜನ

  • ಮಾಲೀಕತ್ವದ ಸುಲಭತೆ ಮತ್ತು ಅನುಕೂಲತೆ
  • ಪೆಟ್ರೋಲ್ ಪಂಪ್‌ಗಳು ಸುಲಭವಾಗಿ ಲಭ್ಯ
  • ಇಂಧನ ತುಂಬಲು ಹೆಚ್ಚು ಸಮಯ ಬೇಡ
  • ಆರಂಭಿಕ ಬೆಲೆ ಸಾಮಾನ್ಯವಾಗಿ CNG, EV ಗಳಿಗಿಂತ ಕಡಿಮೆ

ಅನಾನೂಕೂಲ: ದೀರ್ಘಾವಧಿಯ ಕಾರ್ಯಾಚರಣೆಗೆ ಪೆಟ್ರೋಲ್ ವೆಚ್ಚಗಳು ಹೆಚ್ಚು. ಉದಾಹರಣೆಗೆ.. ಪ್ರಸ್ತುತ ಹೋಲಿಕೆಯು ಉದಾಹರಣೆಗೆ ನೆಕ್ಸಾನ್ ಪೆಟ್ರೋಲ್‌ನ ಚಾಲನಾ ವೆಚ್ಚ ಪ್ರತಿ ಕಿಲೋಮೀಟರ್‌ಗೆ ಸುಮಾರು 7.69 ಎಂದು ಅಂದಾಜಿಸುತ್ತದೆ. ಪ್ರತಿ ತಿಂಗಳು ಕಾರನ್ನು ಹೆಚ್ಚು ಕಿಲೋಮೀಟರ್ ಓಡಿಸಿದರೆ ಐದು ವರ್ಷಗಳಲ್ಲಿ ಇಂಧನ ವೆಚ್ಚಗಳು ಸಿಕ್ಕಾಪಟ್ಟೆ ಆಗಿರುತ್ತದೆ. CNG ಕೂಡ ಒಂದು ಆಯ್ಕೆಯಾಗಿದೆ. CNG ಸಾಮಾನ್ಯವಾಗಿ ಪೆಟ್ರೋಲ್ ಗಿಂತ ಕಡಿಮೆ ಖರ್ಚು ಆಗಲಿದೆ.

ಮೂರನ್ನೂ ಚಲಾಯಿಸಲು ಎಷ್ಟು ವೆಚ್ಚವಾಗುತ್ತದೆ?

ನೆಕ್ಸಾನ್ ಸಿಎನ್‌ಜಿಯ ಚಾಲನಾ ವೆಚ್ಚವು ಪ್ರತಿ ಕಿಲೋಮೀಟರ್‌ಗೆ ಸುಮಾರು ₹5.30 ಆಗಿರಬಹುದು. ಇದು ಪೆಟ್ರೋಲ್‌ಗೆ ಹೋಲಿಸಿದರೆ ಪ್ರತಿ ಕಿಲೋಮೀಟರ್‌ಗೆ ಕೆಲವು ರೂಪಾಯಿಗಳ ಉಳಿತಾಯಕ್ಕೆ ಕಾರಣ ಆಗುತ್ತದೆ. ದೂರದ ಪ್ರಯಾಣ ಮಾಡುವ ಗ್ರಾಹಕರಿಗೆ ಇದು ಐದು ವರ್ಷಗಳಲ್ಲಿ ಗಣನೀಯ ವೆಚ್ಚ ಆಗಲಿದೆ. ಹೀಗಾಗಿ ಸಿಎನ್‌ಜಿ ಕಾರು ಖರೀದಿಸುವ ಮೊದಲು ನೀವು ಇರುವ ಏರಿಯಾದಲ್ಲಿ ಸಿಎನ್‌ಜಿ ಕೇಂದ್ರಗಳ ಲಭ್ಯತೆಯನ್ನ ಪರಿಶೀಲಿಸಬೇಕು. ಸಿಎನ್‌ಜಿ ಸುಲಭವಾಗಿ ಲಭ್ಯವಿದ್ದರೆ ಮತ್ತು ಕಾರನ್ನು ಆಗಾಗ ಓಡಿಸುತ್ತಿದ್ದರೆ ಪ್ರಯೋಜನ ಆಗಬಹುದು.

EV: ಹಣ ಉಳಿತಾಯಕ್ಕೆ ಹೇಗೆ ಬೆಸ್ಟ್?

  • ಈ ಕಾರಿಗೆ ಪೆಟ್ರೋಲ್ ಅಥವಾ ಗ್ಯಾಸ್ (CNG) ಹಾಕಿಸೋ ಹಾಗಿಲ್ಲ
  • ಮನೆಯಲ್ಲೇ ಚಾರ್ಜ್ ಮಾಡಿಕೊಂಡರೆ ಸಾಕು
  • 1 ಕಿಲೋಮೀಟರ್‍‌ಗೆ ₹2.50 ಖರ್ಚಾಗಬಹುದು
  • ಪೆಟ್ರೋಲ್ ಕಾರಿಗೆ ಹೋಲಿಸಿದರೆ ಇದು ತುಂಬಾನೇ ಅಗ್ಗ

ಆಫೀಸ್‌ಗೆ ಅಥವಾ ದಿನನಿತ್ಯ ಹೆಚ್ಚು ದೂರ ಕಾರು ಓಡಿಸುವವರಾಗಿದ್ದರೆ.. ಪೆಟ್ರೋಲ್‌ಗೆ ಸುರಿಯುವ ಹಣದಲ್ಲಿ ದೊಡ್ಡ ಮೊತ್ತ ಉಳಿಸಬಹುದು. ಇದರಲ್ಲಿ ಸಾಮಾನ್ಯ ಕಾರುಗಳಂತೆ ಪೆಟ್ರೋಲ್ ಎಂಜಿನ್ ಇರುವುದಿಲ್ಲ, ಸವೀಸ್ ಖರ್ಚು ಕಡಿಮೆ. ಮನೆ ಅಥವಾ ಆಫೀಸ್‌ನಲ್ಲಿ ಚಾರ್ಜ್ ಮಾಡಿಕೊಂಡರೆ ಮಾತ್ರ ಈ ಕಾರು ಲಾಭ ತಂದುಕೊಡುತ್ತದೆ. ಹೊರಗಡೆ ಚಾರ್ಜ್ ಮಾಡಿದರೆ ಖರ್ಚು ಹೆಚ್ಚು. ತುರ್ತು ಸಂದರ್ಭದಲ್ಲಿ ಹೊರಗಡೆ ಇರುವ ಫಾಸ್ಟ್ ಚಾರ್ಜರ್ ಬಳಸಿದರೆ ಕರೆಂಟ್ ಬಿಲ್ ಕೂಡ ಜಾಸ್ತಿ ಆಗಲಿದೆ.