Royal Enfield Classic: ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ತನ್ನ ರೆಟ್ರೋ ವಿನ್ಯಾಸ ಮತ್ತು ಆರಾಮದಾಯಕ ಸವಾರಿಗೆ ಜನಪ್ರಿಯವಾಗಿದೆ. ಇದು 13 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ಡ್ಯುಯಲ್-ಚಾನೆಲ್ ABS ಮತ್ತು 349 ಸಿಸಿ ಎಂಜಿನ್ ಹೊಂದಿರುವ ಈ ಬೈಕ್ ದೂರದ ಪ್ರಯಾಣಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ.

Royal Enfield Classic: ಈ ಬೈಕ್ ಇಂದಿಗೂ ತನ್ನ ಬೇಡಿಕೆಯನ್ನ ಇಟ್ಕೊಂಡಿದೆ. ರೆಟ್ರೋ ವಿನ್ಯಾಸ, ಶಕ್ತಿಯುತ ಧ್ವನಿ, ಆರಾಮಾದಾಯಕ ಸವಾರಿ.. ಇದು ಅದರ ಜನಪ್ರಿಯತೆ.. ಹೀಗಾಗಿಯೇ ಇಂದಿಗೂ ಜನರು ಆಯ್ಕೆ ಮಾಡಿಕೊಳ್ತಿದ್ದಾರೆ.. ನೀವು ಏನಾದರೂ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಖರೀದಿಸುವ ಪ್ಲಾನ್‌ನಲ್ಲಿ ಇದ್ದರೆ ಒಳ್ಳೆಯ ಆಯ್ಕೆ ಆಗಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

ಎಷ್ಟು ಕಿಲೋ ಮೀಟರ್ ಕೊಡುತ್ತೆ?

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350ರ ಮೈಲೇಜ್ ಎಷ್ಟು ಅಂತಾ ನೋಡೋದಾದರೆ.. ಪ್ರತಿ ಲೀಟರ್‌ಗೆ ಸುಮಾರು 35 ಕಿಲೋ ಮೀಟರ್‌ ಪ್ರಯಾಣಿಸಬಹುದು. ಅಂದರೆ ನೀವು 100 ರೂಪಾಯಿ ಪೆಟ್ರೋಲ್ ತುಂಬಿಸಿದರೆ 30 ಕಿಲೋಮೀಟರ್‌ ಪ್ರಯಾಣಿಸಬಹುದು. ಆದರೆ ಅದು ಪ್ರತಿಯೊಬ್ಬ ಬೈಕ್ ಸವಾರನ ಮೈಲೇಜ್ ಆಗಿರೋದಿಲ್ಲ.

ಯಾಕೆಂದು ನೋಡೋದಾದ್ರೆ.. ನಗರ ಸಂಚಾರ, ಆಗಾಗ ಬ್ರೇಕ್ ಹಾಕುವುದು, ಹೆಚ್ಚಿನ ವೇಗದ ಸವಾರಿ ಮತ್ತು ಹಠಾತ್ ವೇಗವರ್ಧನೆ ಇವೆಲ್ಲವೂ ಮೈಲೇಜ್ ನಿರ್ಧರಿಸುತ್ತದೆ. ಇನ್ನು ಕ್ಲಾಸಿಕ್ 350 ಬೈಕ್ 13 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ದೂರದ ಪ್ರಯಾಣಿಕರಿಗೆ ದೊಡ್ಡ ಇಂಧನ ಟ್ಯಾಂಕ್ ಸಾಮರ್ಥ್ಯವು ನಿರ್ಣಾಯಕ ಆಗಲಿದೆ. 13 ಲೀಟರ್‍‌ ಟ್ಯಾಂಕ್ ಇರೋದ್ರಿಂದ ನೀವು ಪದೇ ಪದೆ ಪೆಟ್ರೋಲ್ ಬಂಕ್‌ಗೆ ಹೋಗೋದನ್ನು ತಪ್ಪಿಸುತ್ತದೆ. ಪ್ರತಿ ಲೀಟರ್‌ಗೆ 35 ಕಿಲೋಮೀಟರ್ ಮೈಲೇಜ್ ಮತ್ತು 13 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಆಧಾರವಾಗಿ ಪರಿಗಣಿಸಿದರೆ ಗಣಿತದ ಪ್ರಕಾರ, ಪೂರ್ಣ ಟ್ಯಾಂಕ್‌ನಲ್ಲಿ 455 ಕಿಲೋಮೀಟರ್ ದೂರ ಸಾಗಬಹದು.

ಇನ್ನು, ಈ ರಾಯಲ್ ಎನ್‌ಫೀಲ್ಡ್ 349 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್‌ ಹೊಂದಿದೆ. ಈ ಎಂಜಿನ್ ದೈನಂದಿನ ನಗರ ಚಾಲನೆಗೆ ಹಾಗೂ ದೂರದ ಹೆದ್ದಾರಿ ಸವಾರಿಗಳಿಗೆ ಉತ್ತಮ. ಈ ಎಂಜಿನ್ 20.2 ಬಿಎಚ್‌ಪಿ ಮತ್ತು 27 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ವಿಶೇಷವಾಗಿ ನಿಧಾನವಾಗಿ ಪ್ರಯಾಣಿಸಲು ಇಷ್ಟಪಡುವವರಿಗೆ ಕ್ಲಾಸಿಕ್ 350 ರ ಎಂಜಿನ್ ಸೆಟಪ್ ತುಂಬಾನೇ ಒಳ್ಳೆಯದು.

ರೈಡರ್‍‌ನ ಸುರಕ್ಷತೆಗಾಗಿ ಕ್ಲಾಸಿಕ್ 350 ಡ್ಯುಯಲ್-ಚಾನೆಲ್ ABS ಹೊಂದಿದೆ. ABS ಅಥವಾ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಹಠಾತ್ ಬ್ರೇಕಿಂಗ್ ಸಮಯದಲ್ಲಿ ಚಕ್ರಗಳು ಲಾಕ್ ಆಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಬೈಕ್‌ನ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಠಾತ್ ಮತ್ತು ಬ್ರೇಕಿಂಗ್ ಅಗತ್ಯವಿರುವ ಸಂದರ್ಭಗಳಲ್ಲಿ ಆರಾಮಾಗಿ ಮ್ಯಾನೇಜ್ ಮಾಡಬಹದು.

ನಿಮಗೆ ಬೈಕ್ ಮೇಲೆ ವಿಪರಿತ ಕ್ರೇಜ್ ಇದ್ದರೆ, ಜೊತೆಗೆ ಆಗಾಗ ತುಂಬಾ ಲಾಂಗ್ ಡ್ರೈವ್ ಮಾಡುತ್ತಿದ್ದರೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಒಳ್ಳೆಯ ಸೆಲೆಕ್ಷನ್ ಆಗಬಹುದು. ಯಾಕೆಂದರೆ ಮತ್ತೆ ಮತ್ತೆ ಪೆಟ್ರೋಲ್ ಇಲ್ಲ, ಕೂತು ಬೆನ್ನು ನೋವು ಬಂತು, ಓಡಿಸಿ ಓಡಿಸಿ ಸುಸ್ತಾಗಿದೆ ಅಂತಾ ಕೊರಗುವ ಪ್ರಮೇಯ ಬರೋದಿಲ್ಲ. ಅತ್ಯುತ್ತಮ ಸೂಪರ್ ಬೈಕ್‌ಗಳಲ್ಲಿ ಇದೂ ಒಂದಾಗಿದೆ.