ಕಾರು ಖರೀದಿಸುವ ಕನಸು ನನಸು ಮಾಡಿಕೊಳ್ಳಬೇಕೆ? ಐದು ಲಕ್ಷದ ಒಳಗೆ ಬಜೆಟ್ ಸ್ನೇಹಿಯುಳ್ಳ ಒಳ್ಳೊಳ್ಳೆ ಕಾರುಗಳ ಲಿಸ್ಟ್ ಇಲ್ಲಿದೆ.
ಕಾರು ತೆಗೆದುಕೊಳ್ಳುವ ಕನಸು. ಆದರೆ ಕಾರಿನ ಬೆಲೆ ಮಾತ್ರ ಕೈಗೆಟುಕುತ್ತಿಲ್ಲ. ಹೀಗಾಗಿ ಕಾರು ಖರೀದಿ ಕನಸು ಕನಸಾಗಿಯೇ ಇನ್ನೂ ಉಳಿದಿದೆ. ಆಗಿದ್ದು ಆಗಿಯೇ ಹೋಗಲಿ ಹಳೇ ಕಾರಾದರೂ ಖರೀದಿಸಿಯೇ ಬಿಡೋಣ ಅನ್ಕೊಂಡಿದ್ದರೆ ನಿಮ್ಮ ಮುಂದೆ ಹಲವು ಆಯ್ಕೆಗಳಿವೆ..
ನನ್ನ ಬಜೆಟ್ 5 ಲಕ್ಷ ರೂಪಾಯಿ ಒಳಗೆ.. ಅಷ್ಟರಲ್ಲಿಯೇ ಬೆಸ್ಟ್ ಕಾರು ಯಾವುದಾದರೂ ಇದೆ ಅಂದುಕೊಂಡವರಿಗೆ ಸ್ಪಿನ್ನಿ ಮತ್ತು ಕಾರ್ಸ್24 (Spinny and Cars24) ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ಯೋಗ್ಯ ಬೆಲೆಗೆ ಯೋಗ್ಯ ಕಾರುಗಳನ್ನ ಖರೀದಿಸಬಹುದಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್, ಹುಂಡೈ ಗ್ರ್ಯಾಂಡ್ ಐ10, ಟಾಟಾ ಟಿಯಾಗೊ, ಮಾರುತಿ ಸುಜುಕಿ ವ್ಯಾಗನ್ ಆರ್ ಮತ್ತು ಹೋಂಡಾ ಅಮೇಜ್ ಸೇರಿದಂತೆ ಜನಪ್ರಿಯ ಮಾದರಿಗಳನ್ನು 5 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಪಟ್ಟಿಮಾಡಿವೆ.
ನಿಮಗೆ ಅಗತ್ಯ ಇರುವ ಫೀಚರ್ಸ್, ವಿಶ್ವಾಸಾರ್ಹ ಎಂಜಿನ್, ಕ್ಯಾಬಿನ್ ಸ್ಥಳಾವಕಾಶ ಹೊಂದಿರುವ ಬಜೆಟ್ ಸ್ನೇಹಿ ಕಾರುಗಳ ಲಿಸ್ಟ್ ಇದೆ. ಇವು ನೀವು ಅಂದುಕೊಂಡ ಬೆಲೆಯಲ್ಲಿ ಕಾರನ್ನು ಖರೀದಿಸಲು ಅನುಕೂಲ ಆಗಿದೆ. ನೀವು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮುನ್ನ, ಮಾಡೆಲ್ ಇಯರ್, ವರ್ಷನ್, ಕಿಲೋ ಮೀಟರ್ ಹಾಗೂ ವಾಹನದ ಸದ್ಯದ ಸ್ಥಿತಿ ಹೇಗಿದೆ ಅನ್ನೋದನ್ನೂ ತಿಳಿದಿಕೊಳ್ಳಬೇಕಾಗುತ್ತದೆ. ಅದರ ಆಧಾರದ ಮೇಲೆಯೇ ಕಾರಿನ ಬೆಲೆ ನಿರ್ಧಾರವಾಗುತ್ತದೆ.
ಸೆಕೆಂಡ್ ಹ್ಯಾಂಡ್‌ಗೆ ಖರೀದಿಸಲು ಐದು ಬೆಸ್ಟ್ ಕಾರುಗಳು
- ಮಾರುತಿ ಸುಜುಕಿ ಸ್ವಿಫ್ಟ್
- ಮಾರುತಿ ಸುಜುಕಿ ಸ್ವಿಫ್ಟ್ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್
- ಸ್ಪಿನ್ನಿಯಲ್ಲಿ ಹಳೆಯ ಸ್ವಿಫ್ಟ್ ಮಾಡೆಲ್‌ನ ಬೆಲೆ 3.12 ಲಕ್ಷ ರೂಗಳಿಂದ ಲಭ್ಯ
- ಕಾರ್ಸ್ 24 ನಲ್ಲಿ 4-5 ಲಕ್ಷ ರೂ.ಗಳ ಶ್ರೇಣಿಯಲ್ಲಿ ಹಲವು ಕಾರುಗಳ ಲಭ್ಯ
ಉಪಯೋಗ ಏನು?: ಪೆಟ್ರೋಲ್ ಎಂಜಿನ್, ಕಡಿಮೆ ನಿರ್ವಹಣಾ ವೆಚ್ಚ, ಈಜಿ ಡ್ರೈವ್, ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಇದೆ. ಜೊತೆಗೆ ದೇಶದ ಯಾವುದೇ ಮೂಲೆಯಲ್ಲೂ ಹೋದರೂ ನಿಮಗೆ ಸುಲಭವಾಗಿ ಸರ್ವಿಸ್ ಸಿಗಲಿದೆ. ಇದರಿಂದ ರಿಪೇರಿಗೆ ಬಂದಾಗ ಅನುಕೂಲ ಆಗಲಿದೆ.
ಹುಂಡೈ ಗ್ರ್ಯಾಂಡ್ ಐ10
5 ಲಕ್ಷ ರೂಪಾಯಿ ಒಳಗಿನ ಬಜೆಟ್‌ನಲ್ಲಿ ಕಾರು ಖರೀದಿಸುವ ಪ್ಲಾನ್‌ನಲ್ಲಿದ್ದರೆ ಹುಂಡೈ ಗ್ರ್ಯಾಂಡ್ ಐ10 ಬೆಸ್ಟ್ ಆಯ್ಕೆ. ಹೆಚ್ಚು ಪ್ರೀಮಿಯಂ ಫೀಲಿಂಗ್ ಕ್ಯಾಬಿನ್ ಮತ್ತು ಆರಾಮದಾಯಕ ಚಾಲನಾ ಅನುಭವ ಬಯಸೋರಿಗೆ ಈ ಕಾರು ಅತ್ಯುತ್ತಮ ಆಯ್ಕೆ. ಸ್ಪಿನ್ನಿ ಪ್ರಕಾರ.. ಬಳಸಿದ ಗ್ರ್ಯಾಂಡ್ ಐ10 ಮಾಡೆಲ್‌ಗಳ ಬೆಲೆ ಸುಮಾರು 2.65 ಲಕ್ಷ ರೂ.ಗಳಿಂದ ಪ್ರಾರಂಭವಾಗಲಿದೆ. ಖರೀದಿದಾರರು 5 ಲಕ್ಷ ರೂ. ಬಜೆಟ್‌ನಲ್ಲಿ ಹೊಸ ಅಥವಾ ಹೆಚ್ಚಿನ ಸ್ಪೆಕ್ ರೂಪಾಂತರಗಳನ್ನು ಕಾಣಬಹುದು.
ಅನುಕೂಲ ಏನು?
- ಸಂಸ್ಕರಿಸಿದ ಪೆಟ್ರೋಲ್ ಎಂಜಿನ್
- ಕ್ಯಾಬಿನ್ ಗುಣಮಟ್ಟ
- ನಗರ ಸಂಚಾರಕ್ಕೆ ಅನುಕೂಲ
- ಆರಾಮದಾಯಕ ಆಸನಗಳು
- ಸಣ್ಣ ಕುಟುಂಬಗಳಿಗೆ ಅನುಕೂಲ
ಟಾಟಾ ಟಿಯಾಗೊ
ಗುಣಮಟ್ಟ ಮತ್ತು ಸುರಕ್ಷತೆಗೆ ಒತ್ತು ನೀಡೋದಾಗಿದ್ದರೆ ಟಾಟಾ ಟಿಯಾಗೋ ಅತ್ಯುತ್ತಮ ಆಯ್ಕೆ. ಸ್ಪಿನ್ನಿಯಲ್ಲಿ3.28 ಲಕ್ಷ ರೂ.ಗಳಿಂದ ಕಾರು ಲಭ್ಯವಿದೆ.ಕಾರ್ಸ್24 ನಲ್ಲಿ 4-5 ಲಕ್ಷ ರೇಂಜ್‌ನಲ್ಲಿ ನಿಮ್ಮ ಮುಂದೆ ಹಲವು ಆಯ್ಕೆಗಳಿವೆ.
ಅನುಕೂಲ ಏನು?
- ಸಾಕಷ್ಟು ಕ್ಯಾಬಿನ್ ಸ್ಥಳಾವಕಾಶ
- ದೈನಂದಿನ ಪ್ರಯಾಣಕ್ಕೆ ಸೂಕ್ತ ಪೆಟ್ರೋಲ್ ಎಂಜಿನ್
ಮಾರುತಿ ಸುಜುಕಿ ವ್ಯಾಗನ್ ಆರ್
ಮಾರುತಿ ಸುಜುಕಿ ವ್ಯಾಗನ್ ಆರ್ ವಿನ್ಯಾಸ ಮತ್ತು ಕಡಿಮೆ ನಿರ್ವಹಣಾ ವೆಚ್ಚಗಳಿಗೆ ಹೆಸರುವಾಸಿ. ಇದರ ಟಾಲ್-ಬಾಯ್ ವಿನ್ಯಾಸವು ಉತ್ತಮ ಹೆಡ್‌ರೂಮ್ ಒದಗಿಸುತ್ತದೆ. ಕ್ಯಾಬಿನ್ ವಿಶಾಲವಾದ ಅನುಭವ ನೀಡುತ್ತದೆ. ಕಾರ್ಸ್24ನಲ್ಲಿ 4-5 ಲಕ್ಷ ರೂ.ಗಳ ವ್ಯಾಪ್ತಿಯಲ್ಲಿ ಹಲವು ವ್ಯಾಗನ್ ಆರ್ ಮಾದರಿಗಳಿವೆ. ಆದರೆ ಹಳೆಯ ವಾಹನಗಳು ಇನ್ನೂ ಕಡಿಮೆ ಬೆಲೆಗೆ ಲಭ್ಯವಿದೆ.
ಅನುಕೂಲ ಏನು?
- ಉತ್ತಮ ಇಂಧನ ದಕ್ಷತೆ
- ಕೈಗೆಟುಕುವ ಬಿಡಿಭಾಗಗಳು
- ಮಾರುಕಟ್ಟೆಯಲ್ಲಿ ಡಿಮ್ಯಾಂಡ್
- ನಗರ ಬಳಕೆಗೆ ಹೆಚ್ಚು ಜನಪ್ರಿಯತೆ
ಹೋಂಡಾ ಅಮೇಜ್: ಬಜೆಟ್ ದೃಷ್ಟಿಯಿಂದ ಈ ಕಾರು ಕೂಡ ಉತ್ತಮ ಆಯ್ಕೆ ಮಾಡಿಕೊಳ್ಳಬಹುದು. Cars24 ರೂ. 4-5 ಲಕ್ಷ ರೇಂಜ್‌ನಲ್ಲಿ ಹಲವಾರು ಬಳಸಿದ ಅಮೇಜ್ ಮಾಡೆಲ್‌ಗಳ ಲಿಸ್ಟ್ ಇದೆ.
ಏನು ಅನುಕೂಲ?
- ಆರಾಮದಾಯಕವಾದ ಕ್ಯಾಬಿನ್
- ಕುಟುಂಬ ಪ್ರವಾಸಗಳು, ದೀರ್ಘ ಪ್ರಯಾಣಕ್ಕೆ ಅನುಕೂಲ
- ಪೆಟ್ರೋಲ್ ಎಂಜಿನ್‌ಗಳು ಪರಿಷ್ಕರಣೆ
- ವಿಶ್ವಾಸಾರ್ಹತೆಗೆ ಹೆಸರುವಾಸಿ
ಇನ್ನು ನೀವು ಬಳಸಿದ ಕಾರನ್ನು ಖರೀದಿಸುವಾಗ ಅದರ ಬೆಲೆ ಒಂದನ್ನೇ ಪರಿಗಣಿಸಬೇಡಿ. ಕಾರು ಖರೀದಿಗೂ ಮೊದಲು ವಾಹನ ಎಷ್ಟು ಕಿಲೋ ಮೀಟರ್ ಓಡಿದೆ.ಅದರ ಸರ್ವಿಸ್ ಹಿಸ್ಟರಿ, ಆಕ್ಸಿಡೆಂಡ್ ಆಗಿದ್ಯಾ? ಇನ್ಸುರೆನ್ಸ್, ನೋದಣಿ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳನ್ನ ಬಗ್ಗೆ ನೀವು ಎಚ್ಚರಿಕೆಯಿಂದ ಪರಿಶೀಲಿಸಬೇಕಾಗುತ್ತದೆ.
ಜೊತೆಗೆ ಕಾರು ಖರೀದಿಗೂ ಮುನ್ನ ನೀವು ಟೆಸ್ಟ್ ಡ್ರೈವ್ ಮಾಡಿ ನಿರ್ಧರಿಸಿ. ಅಂದರೆ ಖರೀದಿ ಪೂರ್ಣಗೊಳಿಸುವ ಮೊದಲು ಒಳ್ಳೆ ಮೆಕ್ಯಾನಿಕ್ ಅಥವಾ ಅಧಿಕೃತ ಸೇವಾ ಕೇಂದ್ರದಿಂದ ಕಾರನ್ನು ಪರಿಶೀಲಿಸುವುದು ಟೆಸ್ಟ್ ಡ್ರೈವ್ ಮಾಡಿಸಬೇಕು. ಇದರಿಂದ ಕಾರಿನಲ್ಲಿರುವ ಸಮಸ್ಯೆಗಳು ಏನಾದರೂ ಇದ್ದರೆ ಕೂಡಲೇ ಗೊತ್ತಾಗುತ್ತದೆ.


