ಐಫೋನ್ 18 ಪ್ರೊ ಮ್ಯಾಕ್ಸ್‌ಗೆ ಪೈಪೋಟಿ ನೀಡಲು ಶಿಯೋಮಿ ತನ್ನ ಹೊಸ 'ಶಿಯೋಮಿ 18 ಪ್ರೊ ಮ್ಯಾಕ್ಸ್' ಸ್ಮಾರ್ಟ್‌ಫೋನ್ ಅನ್ನು ಸೆಪ್ಟೆಂಬರ್ 23, 2026 ರಂದು ಚೀನಾದಲ್ಲಿ ಬಿಡುಗಡೆ ಮಾಡುತ್ತಿದೆ. ಇದು 8500mAh ಬ್ಯಾಟರಿ, ಪ್ರೈವೆಸಿ ಡಿಸ್‌ಪ್ಲೇ, ಹಿಂಭಾಗದಲ್ಲೂ ಡಿಸ್‌ಪ್ಲೇಯಂತಹ ಅತ್ಯಾಧುನಿಕ ಫೀಚರ್‌ ಇರಲಿದೆ.

ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಆಪಲ್‌ ಕಂಪನಿಯೊಂದಿಗೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಐಫೋನ್ 18 Pro ಜಾಗತಿಕವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಬೆನ್ನಲ್ಲೇ ಒಪ್ಪೋ, ವಿವೋ ಕೂಡ ಹೊಸ ಮಾದರಿಯ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿ ಆಪಲ್‌ಗೆ ಸೆಡ್ಡು ಹೊಡೆದಿದೆ. ಇದೀಗ ಲೇಟೆಸ್ಟ್ ಸುದ್ದಿ ಎಂದರೆ ಶಿಯೋಮಿ ಕಂಪನಿ ಕೂಡ Xiaomi 18 Pro Max ಬಿಡುಗಡೆ ಮಾಡುವುದಾಗಿ ಘೋಷಿಸಿದ ಬಳಿಕ ಇದೀಗ ದೈತ್ಯ ಮೊಬೈಲ್ ಕಂಪನಿಗಳ ನಡುವೆ ತೀವ್ರ ಪೈಪೋರ್ಟಿ ಏರ್ಪಟ್ಟಿದೆ.

ಐಫೋನ್ ತನ್ನ ಹೊಸ ಮಾದರಿ ಬಿಡುಗಡೆ ಮಾಡಿದ ಎರಡೇ ವಾರದೊಳಗೆ ಶಿಯೋಮಿ ಕೂಡ ಅತ್ಯಾಧುನಿಕ ಫಿಚರ್ಸ್ ಹೊಂದಿರುವ ಫ್ಲ್ಯಾಗ್‌ಶಿಪ್ ಸಿರೀಸ್‌ನ Xiaomi 18 ಮತ್ತು Xiaomi 18 Pro Max 5G ಮಾದರಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿರುವ ಬೆನ್ನಲ್ಲೇ ಕೆಲವು ಮಾಹಿತಿಗಳು, ಫೋಟೋಗಳು ಲೀಕ್ ಆಗಿವೆ. ಸದ್ಯ Xiaomi 18 Pro Max ಭಾರತದಲ್ಲಿ ಬಿಡುಗಡೆಯಾಗುತ್ತಿಲ್ಲ. ಮೊದಲಿಗೆ ಚೀನಾದಲ್ಲಿ ನಾಳೆ ಅಂದರೆ ಸೆಪ್ಟೆಂಬರ್ 23, 2026ರಂದು ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ಈ ಫೋನ್‌ನ ಹಲವು ಪ್ರಮುಖ ಫೀಚರ್‌ಗಳು ಮತ್ತು ವಿಶೇಷತೆಗಳ ಮಾಹಿತಿ ಲೀಕ್ ಆಗಿದೆ.

ಇದನ್ನೂ ಓದಿ: Iphone ಗೆ ವಿವೋ ಸೆಡ್ಡು: ನಾಳೆ ನಾಡಿದ್ದು Vivo X500, X500 Pro ಎರಡು ಶಕ್ತಿಶಾಲಿ ಹೊಸ ಫೋನ್ ಬಿಡುಗಡೆ! ಬೆಲೆ ಎಷ್ಟು, ಹೊಸತೇನಿದೆ?

ಸ್ಯಾಮ್‌ಸಂಗ್ ಗ್ಯಾಲಕ್ಸಿ ರೀತಿಯಲ್ಲೇ Xiaomi 18 Pro Max ಪ್ರೈವೆಸಿ ಡಿಸ್‌ಪ್ಲೇ!

ಸೋರಿಕೆಯಾದ ಮಾಹಿತಿಯ ಪ್ರಕಾರ, Xiaomi 18 Pro Maxನಲ್ಲಿ ದೊಡ್ಡ 8500mAh ಬ್ಯಾಟರಿ ಇರಲಿದೆ. ಜೊತೆಗೆ ಕ್ವಾಲ್ಕಾಮ್‌ನ ಹೊಸ 2nm Snapdragon 8 Elite Gen 6 Pro ಚಿಪ್‌ಸೆಟ್‌ ಇರಲಿದೆ ಎಂದು ಹೇಳಲಾಗಿದೆ. ಹೊಸ ಚಿಪ್‌ಸೆಟ್ ಜೊತೆಗೆ, Samsung Galaxy S26 Ultra ದಲ್ಲಿನ ಅತ್ಯಾಧುನಿಕ ಫಿಚರ್‌ ಆದ Privacy Displayಗೆ ಸೆಡ್ಡು ಹೊಡೆಯಲು ಶಿಯೋಮಿ ಕೂಡ ಹೊಸ Privacy Display ತನ್ನದೇ ತಂತ್ರಜ್ಞಾನವನ್ನು ಪರಿಚಯಿಸಲಿದೆ.

ಲೀಕ್ ಆಗಿರುವ ಈ ವಿಶೇಷತೆಗಳನ್ನು ಗಮನಿಸಿದರೆ, Xiaomi 18 Pro Max ಇತ್ತೀಚೆಗೆ ಬಿಡುಗಡೆಯಾದ Apple iPhone 18 Pro Maxಗೆ ನೇರ ಸ್ಪರ್ಧೆ ನೀಡುವ ಸಾಧ್ಯತೆ ಇದೆ. iPhone 18 Pro Max ಬಿಡುಗಡೆಯಾಗಿ ಕೇವಲ ಎರಡು ವಾರಗಳಾಗಿವೆಯಷ್ಟೇ. ಕೇವಲ ಎರಡುವಾರದಲ್ಲೇ ಶಿಯೋಮಿ ತನ್ನ ಹೊಸ ಮಾದರಿಯ ಮೊಬೈಲ್ ಬಿಡುಗಡೆ ಮಾಡಲಿರುವುದು ಆಪಲ್ ಕಂಪನಿಗೆ ನೇರ ಪೈಪೋಟಿ ಎಂದೇ ಹೇಳಬಹುದು.

ಇದನ್ನೂ ಓದಿ: ಕೇವಲ 17 ನಿಮಿಷದಲ್ಲಿ iPhone 18 Pro ಮನೆ ಬಾಗಿಲಿಗೆ! ಸರತಿ ಸಾಲಲ್ಲಿ ಕಾಯದೆ ಇಷ್ಟು ಮಾಡಿ ಸಾಕು

Xiaomi 18 Pro Max ಹೊಸ ಡಿಸ್‌ಪ್ಲೇ ತಂತ್ರಜ್ಞಾನ

ನಾಳೆ (ಸೆಪ್ಟೆಂಬರ್ 23, 2026) ಚೀನಾದಲ್ಲಿ ಬಿಡುಗಡೆಯಾಗಲಿರುವ Xiaomi 18 Pro Maxನಲ್ಲಿ ಹೊಸ TCL M11 Super Pixel Real RGB OLED ಫ್ಲ್ಯಾಟ್ ಡಿಸ್‌ಪ್ಲೇ ಇರಲಿದೆ ಎಂದು ವರದಿಗಳು ತಿಳಿಸಿವೆ. ಇದರಲ್ಲಿ Privacy Display ತಂತ್ರಜ್ಞಾನವೂ ಇರಲಿದೆ. Privacy Display ಫೀಚರ್‌ ಸ್ಯಾಮ್‌ಸಂಗ ಹೊರತುಪಡಿಸಿ ಬೇರಾವ ಸ್ಮಾರ್ಟ್‌ಫೋನ್‌ಗಳಲ್ಲೂ ಈ ಸೌಲಭ್ಯವಿರಲಿಲ್ಲ. ಇದೀಗ ಸ್ಯಾಮ್‌ಸಂಗ್ ಬಳಲಿಕ ಮತ್ತೊಂದು ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಹೊಂದಿರುವ ಫೋನ್ ಇದಾಗಲಿದೆ. ಅಲ್ಲದೆ ಫೋನ್‌ನ ಡಿಸ್‌ಪ್ಲೇ ಸುತ್ತಲಿನ ಬೆಜಲ್‌ ಕೇವಲ 0.99mm ಇರಲಿದೆ ಎನ್ನಲಾಗಿದೆ. ಇದರಿಂದ ಮುಂಭಾಗದಲ್ಲಿ ಬಹುತೇಕ ಸಂಪೂರ್ಣ ಸ್ಕ್ರೀನ್ ಇರುವಂತಹ ವಿನ್ಯಾಸವನ್ನು ಕಾಣಬಹುದು.

ಹಿಂಭಾಗದಲ್ಲೂ ಡಿಸ್‌ಪ್ಲೇ

ಫ್ಲ್ಯಾಗ್‌ಶಿಪ್ ಮುಂಭಾಗದ ಡಿಸ್‌ಪ್ಲೇ ಜೊತೆಗೆ Xiaomi 18 Pro Maxನಲ್ಲಿ ಹಿಂಭಾಗದಲ್ಲೂ ಬಹುಪಯೋಗಿ ಡಿಸ್‌ಪ್ಲೇ ಇರಲಿದೆ ಎಂದು ವರದಿಗಳು ಹೇಳಿವೆ. ಹಿಂಭಾಗದ ಡಿಸ್‌ಪ್ಲೇನಲ್ಲಿ ನಿರ್ದಿಷ್ಟ ಕೆಲಸಗಳನ್ನು ಮಾಡುವಂತಹ AI ಆಧಾರಿತ ಆ್ಯಪ್‌ಗಳನ್ನು ಬಳಕೆದಾರರು ರಚಿಸಿಕೊಳ್ಳಬಹುದು ಎನ್ನಲಾಗಿದೆ. ಉದಾಹರಣೆಗೆ ನೀರು ಕುಡಿಯುವ ಸಮಯವನ್ನು ನೆನಪಿಸುವ ಆ್ಯಪ್‌ ಅನ್ನು ರಚಿಸಿಕೊಳ್ಳಬಹುದು.

Xiaomi 18 Pro Maxನಲ್ಲಿ ಐಫೋನ್‌ನಂತಯೇ ಶಕ್ತಿಶಾಲಿ ಚಿಪ್‌ಸೆಟ್

ಇಂತಹ ಹಲವು ಕಾರ್ಯಗಳನ್ನು ನಿರ್ವಹಿಸಲು Xiaomi 18 Pro Maxನಲ್ಲಿ Qualcomm Snapdragon 8 Elite Gen 6 Pro ಚಿಪ್‌ಸೆಟ್‌ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹೊಸ ಚಿಪ್‌ಸೆಟ್‌ ಅನ್ನು ಕ್ವಾಲ್ಕಾಮ್ ತನ್ನ Summit ಕಾರ್ಯಕ್ರಮದಲ್ಲಿ ಪರಿಚಯಿಸಲಿದೆ.

Xiaomi 18 Pro Max ಕ್ಯಾಮೆರಾ ಹೇಗಿರಲಿದೆ?

ಕ್ಯಾಮೆರಾ ವಿಭಾಗದಲ್ಲೂ Xiaomi 18 Pro Max ಹಲವು ವೈಶಿಷ್ಠ್ಯಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಫೋನ್‌ನಲ್ಲಿ Leica Dual 200MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು 200MP OIS ಪೆರಿಸ್ಕೋಪ್ ಕ್ಯಾಮೆರಾ ಇರಲಿದೆ ಎಂದು ವರದಿಗಳು ತಿಳಿಸಿವೆ. ಇದರಲ್ಲಿ IP68 ಮತ್ತು IP69 ನೀರು ಹಾಗೂ ಧೂಳು ನಿರೋಧಕ ರೇಟಿಂಗ್‌ಗಳು ಇರಲಿವೆ ಎಂದು ಹೇಳಲಾಗಿದೆ. ಇದೇ ರೀತಿ Apple iPhone 18 Pro Max ಕೂಡ ಹಲವು ಪ್ರಮುಖ ಫೀಚರ್‌ಗಳನ್ನು ಹೊಂದಿದೆ. ಇದರಲ್ಲಿ ಹೊಸ 2nm ಆಧಾರಿತ Apple A20 Pro ಚಿಪ್‌ಸೆಟ್‌ ಮತ್ತು ವೇರಿಯಬಲ್ ಅಪರ್ಚರ್ ಲೆನ್ಸ್ ಹೊಂದಿರುವ ಮೂರು 48MP ಕ್ಯಾಮೆರಾಗಳ ಸೆಟಪ್ ಇದೆ. ಆದರೆ ಮೆಮೊರಿ ಬೆಲೆ ಏರಿಕೆಯಿಂದಾಗಿ iPhone 18 Pro Max ಹೆಚ್ಚಿನ ಬೆಲೆಯಲ್ಲಿ ಬಿಡುಗಡೆಯಾಗಿದೆ ಎಂದು ವರದಿಯಾಗಿದೆ. Xiaomi 18 Pro Max ಅನ್ನು iPhone 18 Pro Maxಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲು ಶಿಯೋಮಿ ಯಶಸ್ವಿಯಾದರೆ, ಬಿಡುಗಡೆಯ ಬಳಿಕ ಈ ಫೋನ್‌ಗೆ ಹೆಚ್ಚಿನ ಬೇಡಿಕೆ ಬರಬಹುದು.

ಹೆಚ್ಚು ಕೇಳಲಾದ ಪ್ರಶ್ನೆಗಳು ಕೆಳಗಿವೆ

Xiaomi 18 Pro Max ಬೆಲೆ ಎಷ್ಟು?

Xiaomi 18 Pro Max ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಬಿಡುಗಡೆಯಾದ Xiaomi 17 Pro Max ಬೆಲೆ CNY 4,999ರಿಂದ ಆರಂಭವಾಗಿತ್ತು.

ಈ ಬಾರಿ Xiaomi 18 Pro Max ಬೆಲೆ ಸುಮಾರು CNY 5,999 ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು ₹90,000 ಆಗುತ್ತದೆ.

Xiaomi 18 Pro Max ಯಾವಾಗ ಬಿಡುಗಡೆಯಾಗಲಿದೆ?

ಉತ್ತರ: Xiaomi 18 Pro Max ಫೋನ್‌ ಚೀನಾದಲ್ಲಿ ಸೆಪ್ಟೆಂಬರ್ 23, 2026ರಂದು ಬಿಡುಗಡೆಯಾಗಲಿದೆ.

Xiaomi 18 Pro Maxನಲ್ಲಿ ಯಾವ ಚಿಪ್‌ಸೆಟ್ ಇರಲಿದೆ?

ಉತ್ತರ: Xiaomi 18 Pro Maxನಲ್ಲಿ Qualcomm Snapdragon 8 Elite Gen 6 Pro ಚಿಪ್‌ಸೆಟ್‌ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

Xiaomi 18 Pro Max ಭಾರತದಲ್ಲಿ ಬಿಡುಗಡೆಯಾಗಲಿದೆಯೇ?

ಉತ್ತರ: ಚೀನಾದಲ್ಲಿ ಸೆಪ್ಟೆಂಬರ್ 23, 2026ರಂದು ಬಿಡುಗಡೆಯಾಗಲಿದೆ. ಆದರೆ ಭಾರತದಲ್ಲಿ ಈ ಫೋನ್ ಯಾವಾಗ ಬಿಡುಗಡೆಯಾಗಲಿದೆ ಮತ್ತು ಬೆಲೆ ಎಷ್ಟಿರಲಿದೆ ಎಂಬುದನ್ನು ಶಿಯೋಮಿ ಮಾಹಿತಿ ಬಿಟ್ಟುಕೊಟ್ಟಿಲ್ಲ.

Xiaomi 18 Pro Max ಮತ್ತು iPhone 18 Pro Max ನಡುವೆ ಏನು ವ್ಯತ್ಯಾಸ?

Xiaomi 18 Pro Maxನಲ್ಲಿ Snapdragon 8 Elite Gen 6 Pro ಚಿಪ್‌ಸೆಟ್‌, 8,500mAh ಬ್ಯಾಟರಿ, Privacy Display ಮತ್ತು ಹೆಚ್ಚಿನ ರೆಸಲ್ಯೂಶನ್ ಹೊಂದಿರುವ Leica ಕ್ಯಾಮೆರಾಗಳು ಇರಲಿವೆ ಎಂದು ನಿರೀಕ್ಷಿಸಲಾಗಿದೆ.

ಇನ್ನು iPhone 18 Pro Maxನಲ್ಲಿ Apple A20 Pro ಚಿಪ್‌ಸೆಟ್‌ ಮತ್ತು ವೇರಿಯಬಲ್ ಅಪರ್ಚರ್ ಲೆನ್ಸ್ ಹೊಂದಿರುವ ಮೂರು ಕ್ಯಾಮೆರಾಗಳ ವ್ಯವಸ್ಥೆ ಇದೆ.

Xiaomi 18 Pro Max ನೀರು ನಿರೋಧಕವಾಗಿದೆಯೇ?

ವರದಿಗಳ ಪ್ರಕಾರ, Xiaomi 18 Pro Max IP68 ಮತ್ತು IP69 ರೇಟಿಂಗ್‌ಗಳೊಂದಿಗೆ ನೀರು ಮತ್ತು ಧೂಳಿನಿಂದ ರಕ್ಷಣೆ ನೀಡುವ ಸಾಧ್ಯತೆ ಇದೆ.