ಮ್ಯೂಚುವಲ್ ಫಂಡ್‌ಗಳಲ್ಲಿ ಸರಿಯಾದ ಮಾಹಿತಿ ಪಡೆದು ಹೂಡಿಕೆ ಮಾಡಿದರೆ ಉತ್ತಮ ಆದಾಯ ಗಳಿಸಬಹುದು. ಕಳೆದ ಮೂರು ವರ್ಷಗಳಲ್ಲಿ, ವಿಶೇಷವಾಗಿ ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಅತ್ಯಧಿಕ ಆದಾಯವನ್ನು ನೀಡಿವೆ, ₹1 ಲಕ್ಷದ ಹೂಡಿಕೆಯನ್ನು ₹2.5 ಲಕ್ಷಕ್ಕೂ ಅಧಿಕವಾಗಿ ಬೆಳೆಸಿವೆ. ಈ ಲೇಖನವು ಯುಟಿಐ, ಎಸ್‌ಬಿಐ, ಮತ್ತು ಆಕ್ಸಿಸ್‌ನಂತಹ ಟಾಪ್-5 ಉತ್ತಮ ಪ್ರದರ್ಶನ ನೀಡುವ ಫಂಡ್‌ಗಳನ್ನು ಪಟ್ಟಿಮಾಡುತ್ತದೆ.
ಮ್ಯೂಚುವಲ್ ಫಂಡ್‌ಗಳು ಒಳ್ಳೆಯದಾಗಿದ್ದರೂ, ಇದರ ಬಗ್ಗೆ ಅರಿಯದೇ ಮಾರುಕಟ್ಟೆಗೆ ನುಗ್ಗಿದರೆ ಅಪಾಯ ಕಟ್ಟಿಟ್ಟದ್ದೇ. ಆದ್ದರಿಂದ ಮ್ಯೂಚುವಲ್ ಫಂಡ್‌ಗಳ ಬಗ್ಗೆ ಸರಿಯಾದ ಮಾಹಿತಿ ಪಡೆದು ಹೂಡಿಕೆ ಮಾಡಿದರೆ, ದುಪ್ಪಟ್ಟು ಆದಾಯವನ್ನೂ ಗಳಿಸಬಹುದು. ಇದಾಗಲೇ ಇದರಿಂದ ಕೋಟ್ಯಂತರ ರೂಪಾಯಿಗಳ ಆದಾಯವನ್ನು ಗಳಿಸಿದವರೂ ಇದ್ದಾರೆ. ಬಲ್ಲವರಿಂದ ಮಾಹಿತಿ ಪಡೆದು, ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡರೆ ನೀವು ಲಾಭ ಮಾಡಬಹುದು. ಹಾಗಿದ್ದರೆ, ಮೂರು ವರ್ಷಗಳ ಹೂಡಿಕೆ ಅವಧಿಗೆ ಉತ್ತಮವಾದ ಮ್ಯೂಚುವಲ್ ಫಂಡ್‌ಗಳನ್ನು ಹುಡುಕುತ್ತಿದ್ದೀರಾ? ಮೂರು ವರ್ಷಗಳ ಆದಾಯದ ಆಧಾರದ ಮೇಲೆ ಐದು ಅತ್ಯುತ್ತಮ ಪ್ರದರ್ಶನ ನೀಡುವ ಫಂಡ್‌ಗಳು ಇಲ್ಲಿವೆ.
ವ್ಯಾಲ್ಯೂ ರೀಸರ್ಚ್ ನಡೆಸಿರುವ ಅಧ್ಯಯನ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಲೇ ಇದೆ. ಭಾರತೀಯ ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರಿಗೆ ಇಲ್ಲಿಯವರೆಗೆ ಅತ್ಯಧಿಕ ಆದಾಯ ತಂದುಕೊಟ್ಟಿವೆ. ಕಳೆದ 3 ವರ್ಷಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ ಗ್ರಾಹಕರಿಗೆ 2.50 ಲಕ್ಷದವರೆಗೂ ರಿಟರ್ನ್ಸ್ ಲಭಿಸಿದೆ. SBI, UTI ಹಾಗೂ ಆಕ್ಸಿಸ್‌ನಂತಹ ಪ್ರಮುಖ ಕಂಪೆನಿಗಳ ಟಾಪ್-5 ಗೋಲ್ಡ್ ಫಂಡ್‌ಗಳು ವಾರ್ಷಿಕ ಸರಾಸರಿ ಶೇ.25 ಕ್ಕೂ ಹೆಚ್ಚು ಸಿಎಜಿಆರ್ ಪ್ರಗತಿ ಸಾಧಿಸಿ ಗಮನಸೆಳೆದಿವೆ.
ಯುಟಿಐ ಗೋಲ್ಡ್ ಈಟಿಎಫ್ ( UTI Gold ETF FoF )
ಯುಟಿಐ ಮ್ಯೂಚುವಲ್ ಫಂಡ್‌ನ ಈ ಯೋಜನೆಯು ಕಳೆದ 3 ವರ್ಷಗಳಲ್ಲಿ ಸರಾಸರಿ 36.14% ವಾರ್ಷಿಕ ರಿಟರ್ನ್ಸ್ ನೀಡಿದೆ. ಮೂರು ವರ್ಷಗಳ ಹಿಂದೆ ಈ ಯೋಜನೆಯಲ್ಲಿ 1 ಲಕ್ಷ ರೂಪಾಯಿ ಲಂಪ್‌ಸಮ್ ಹೂಡಿಕೆ ಮಾಡಿದಿದ್ದರೆ, ಅದರ ಮೌಲ್ಯ ಇಂದು 2.52 ಲಕ್ಷ ರೂಪಾಯಿಗೆ ಏರಿಕೆಯಾಗುತ್ತಿತ್ತು.
ಕ್ವಾಂಟಮ್ ಗೋಲ್ಡ್ ಈಟಿಎಫ್ (Quantum Gold ETF FoF)
ಕ್ವಾಂಟಮ್ ಮ್ಯೂಚುವಲ್ ಫಂಡ್‌ನ ಈ ಸ್ಕೀಮ್ ಕಳೆದ 3 ವರ್ಷಗಳಲ್ಲಿ ವಾರ್ಷಿಕ ಸರಾಸರಿ 35.98% ಆದಾಯ ನೀಡಿದೆ. 1 ಲಕ್ಷ ರೂಪಾಯಿ ಹೂಡಿಕೆಯು ಇಂದು 2.51 ಲಕ್ಷ ರೂಪಾಯಿ ಮೌಲ್ಯ ಪಡೆದುಕೊಂಡಿದೆ.
ಎಸ್‌ಬಿಐ ಗೋಲ್ಡ್ ಫಂಡ್ (SBI Gold Fund):
ದೇಶದ ಅತಿದೊಡ್ಡ ಮ್ಯೂಚುವಲ್ ಫಂಡ್ ಸಂಸ್ಥೆಯಾದ ಎಸ್‌ಬಿಐನ ಈ ಯೋಜನೆಯು 3 ವರ್ಷಗಳಲ್ಲಿ ವಾರ್ಷಿಕ 35.77% ದರದಲ್ಲಿ ಬೆಳೆದಿದೆ. ಇದರಲ್ಲಿ 1 ಲಕ್ಷ ರೂಪಾಯಿ ಹೂಡಿದ ಗ್ರಾಹಕರ ಬಂಡವಾಳ ಈಗ 2.50 ಲಕ್ಷ ರೂಪಾಯಿ ತಲುಪಿದೆ.
ಆಕ್ಸಿಸ್ ಗೋಲ್ಡ್ ಫಂಡ್ (Axis Gold Fund):
ಆಕ್ಸಿಸ್ ಮ್ಯೂಚುವಲ್ ಫಂಡ್‌ನ ಈ ಗೋಲ್ಡ್ ಸ್ಕೀಮ್ ಕಳೆದ 3 ವರ್ಷಗಳಲ್ಲಿ ಪ್ರತಿವರ್ಷ 35.20% ರಿಟರ್ನ್ಸ್ ನೀಡಿದ್ದು, 1 ಲಕ್ಷ ರೂಪಾಯಿ ಹೂಡಿಕೆಯನ್ನು 2.47 ಲಕ್ಷ ರೂಪಾಯಿಯಾಗಿ ಬೆಳೆಸಿದೆ.
HSBC ಮಿಡ್‌ಕ್ಯಾಪ್ ಫಂಡ್ (HSBC Midcap Fund):
ಇದು ಗೋಲ್ಡ್ ಫಂಡ್ ಅಲ್ಲದಿದ್ದರೂ ಈಕ್ವಿಟಿ ಮಿಡ್‌ಕ್ಯಾಪ್ ರಂಗದಲ್ಲಿ ಕಳೆದ 3 ವರ್ಷಗಳಲ್ಲಿ 25.11% ಸಿಎಜಿಆರ್ (CAGR) ನೀಡಿದೆ. ಇದರಲ್ಲಿನ 1 ಲಕ್ಷ ರೂಪಾಯಿ ಹೂಡಿಕೆಯು ಇಂದು 1.95 ಲಕ್ಷ ರೂಪಾಯಿ ಆಗಿದೆ.


