Karnataka News Live: ನೀಲಿ ಕಣ್ಣಿನಿಂದ ಖ್ಯಾತಿ ಗಳಿಸಿದ ಪಾಕಿಸ್ತಾನಿ ಚಾಯ್ವಾಲಾಗೆ ಗಡೀಪಾರು ಭೀತಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಜಾತಿಗಣತಿ ತೀವ್ರ ಸಂಚಲನವನ್ನು ಸೃಷ್ಟಿಸಿದೆ. ‘ಜಾತಿವಾರು ಸಮೀಕ್ಷಾ ವರದಿಯನ್ನು ನಾನು ಇನ್ನೂ ನೋಡಿಲ್ಲ. ಈ ವಿಚಾರದಲ್ಲಿ ಆತುರದ ನಿರ್ಧಾರ ಮಾಡುವುದಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಕೇವಲ ಒಂದು ಸಮುದಾಯಕ್ಕೆ ಅಲ್ಲ, ಎಲ್ಲರಿಗೂ ನ್ಯಾಯ ಕೊಡಿಸಬೇಕಿರುವುದು ನನ್ನ ಹೊಣೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ‘ರಾಜ್ಯದಲ್ಲಿ ಮುಸ್ಲಿಮರೇ ಅತಿದೊಡ್ಡ ಜಾತಿ ಎಂದು ಜಾತಿಗಣತಿ ವರದಿ ನೀಡುವ ಹಿಂದೆ ಕುತಂತ್ರ ಅಡಗಿದೆ. ಮುಸ್ಲಿಂ ಎಂಬುದು ಒಂದು ಧರ್ಮ. ಆ ಧರ್ಮದಲ್ಲಿ ಬೇರೆ ಬೇರೆ ಜಾತಿ ಇದ್ದರೂ ಅವರನ್ನು ಯಾಕೆ ವಿಭಜಿಸಿಲ್ಲ?’ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹರಿಹಾಯ್ದಿದ್ದಾರೆ. ಜಾತಿಗಣತಿ ಬಗ್ಗೆ ಆತುರದಲ್ಲಿ ಏನನ್ನೂ ಹೇಳಲ್ಲ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ, ಮುಖ್ಯಮಂತ್ರಿಗೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದು ಕಾಂಗ್ರೆಸ್ ನ ಲಿಂಗಾಯತ ಸಚಿವರು, ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ.