ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಸೈಕೋ ಗಂಡ ಜಯಂತ್‌ನಿಂದ ತಪ್ಪಿಸಿಕೊಳ್ಳಲು ಶ್ರೀಲಂಕಾದಲ್ಲಿ ಸಮುದ್ರಕ್ಕೆ ಬಿದ್ದು ಬದುಕಿ, ವಿಶ್ವನ ಮನೆಗೆ ಹೋಗಿ ತಪ್ಪಿಸಿಕೊಂಡು ತವರುಮನೆಗೆ ಬಂದಿದ್ದಾಳೆ. ಅಲ್ಲಿ ಜಯಂತ್ ಸಿಕ್ಕಿಬಿದ್ದಿದ್ದು, ಅಜ್ಜಿಯ ಕೋಣೆಯಲ್ಲಿ ಅವಿತುಕೊಂಡಿದ್ದಾಳೆ. ವೀಕ್ಷಕರು ವಿಶ್ವ ಮತ್ತು ಜಾಹ್ನವಿ ಒಂದಾಗಬೇಕೆಂದು ಬಯಸಿದ್ದರು, ಆದರೆ ನಿರ್ದೇಶಕರು ಜಯಂತ್ ಜೊತೆ ಮದುವೆ ಮಾಡಿಸಿದರು. ಜಯಂತ್‌ನ ಕ್ರೌರ್ಯದಿಂದ ಬೇಸತ್ತ ಜಾಹ್ನವಿ ಅವನಿಂದ ಹೇಗೆ ಪಾರಾಗುತ್ತಾಳೆ ಎಂಬುದು ಕುತೂಹಲಕಾರಿಯಾಗಿದೆ.
ಸೈಕೋ ಗಂಡ ಜಯಂತ್‌ನಿಂದ ಹೇಗಾದರೂ ಮಾಡಿ ಪಾರಾಗಬೇಕು ಎಂಬ ಉದ್ದೇಶದಿಂದ ಶ್ರೀಲಂಕಾದ ಪ್ರವಾಸದಲ್ಲಿ ಸಮುದ್ರಕ್ಕೆ ಬಿದ್ದು, ಚಿನ್ನುಮರಿ ಜಾಹ್ನವಿ ಬದುಕಿ ಬಂದಿದ್ದಾಳೆ. ಸ್ವತಃ ಸೋದರ ಮಾವ ನರಸಿಂಹನ ಮಗನೇ ಆಗಿರುವ ತನ್ನ ಮೊದಲ ಪ್ರೇಮಿ ವಿಶ್ವನ ಮನೆಗೆ ಹೋದರೂ ಅವನ ಕೈಗೆ ಸಿಗದಂತೆ ತಪ್ಪಿಸಿಕೊಂಡು ತನ್ನ ತವರು ಮನೆಗೆ ಹೋಗಿದ್ದಾಳೆ. ಅಲ್ಲಿಯೇ ಇದ್ದ ಸೈಕೋ ಗಂಡನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಅಜ್ಜಿಯ ಕೋಣೆಯಲ್ಲಿರುವಾಗಲೇ ಅಲ್ಲಿಗೆ ಜಯಂತ್ ನುಗ್ಗಿದ್ದು, ಮತ್ತದೇ ಸೈಕೋನೊಂದಿಗೆ ಹೇಗೆ ಜೀವನ ಮಾಡುತ್ತಾಳೆ ಎಂಬುದು ವೀಕ್ಷಕರ ಯಕ್ಷ ಪ್ರಶ್ನೆಯಾಗಿದೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವೀಕ್ಷಕರು ಜಾಹ್ನವಿಯನ್ನು ಕಾಲೇಜಿನ ಗೆಳೆಯ ವಿಶ್ವನಿಗೆ ಸಿಗುವಂತೆ ಮಾಡಬೇಕು, ಇಲ್ಲದಿದ್ದರೆ ನಾವು ಧಾರಾವಾಹಿ ವೀಕ್ಷಿಸುವುದನ್ನೇ ಬಿಟ್ಟುಬಿಡುತ್ತೇವೆ ಎಂದು ಸ್ವತಃ ವೀಕ್ಷಕರೇ ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಕಥೆಯನ್ನು ಬರೆದ ನಿರ್ದೇಶಕರು ಅದು ಹೇಗೆ ಜನರಿಗೆ ಕುತೂಹಲ ಬರುವಂತೆ ಮಾಡಬೇಕೋ ಹಾಗೆ ಧಾರಾವಾಹಿ ಬರೆದುಕೊಂಡು ಪ್ರದರ್ಶನ ಮಾಡುತ್ತಾ ಹೋಗಿದ್ದಾರೆ. ವೀಕ್ಷಕರ ಅಭಿಲಾಷೆಗೆ ವಿರುದ್ಧವಾಗಿ ಜಾಹ್ನವಿಯನ್ನು ಬ್ಯೂಸಿನೆಸ್‌ಮ್ಯಾನ್ ಸೈಕೋ ಜಯಂತ್ ಜೊತೆಗೆ ಮದುವೆ ಮಾಡಿಸಿದ್ದಾರೆ. ಇದಾದ ನಂತರ ಬಹುದಿನಗಳ ಕಾಲ ಕಷ್ಟವನ್ನೇ ಅನುಭವಿಸಿ ಕೊನೆಗೆ ತಾನು ಪಂಜರದಲ್ಲಿರುವ ಗಿಳಿ ಎಂದು ತಿಳಿದಾಗ ಇದರಿಂದ ಬಿಡಿಸಿಕೊಳ್ಳಲು ಜಾಹ್ನವಿ ಹೆಣಗಾಡಿದ್ದಾಳೆ.
ಇದನ್ನೂ ಓದಿ: ಅಮ್ಮನ ಕಣ್ಣಿಗೆ ಕಾಣಿಸಿಕೊಂಡ ಜಾನು; ಚಿನ್ನುಮರಿ ಆತ್ಮದೊಂದಿಗೆ ಮಾತನಾಡಲು ಹೊರಟ ಜಯಂತ್!
ಸೈಕೋ ಗಂಡ ಜಯಂತನ ಅತಿಯಾದ ಪ್ರೀತಿಯಿಂದ ತಪ್ಪಿಸಿಕೊಳ್ಳದೇ ತೊಳಲಾಡುತ್ತಿದ್ದ ಜಾಹ್ನವಿಗೆ ವಿಶ್ವನೂ ಸಾಥ್ ನೀಡಲು ಮುಂದಾಗಿದ್ದಾನೆ. ಆದರೆ, ವಿಶ್ವನ ಸಹಾಯ ಹಸ್ತ ಜಾಹ್ನವಿಗೆ ಮುಟ್ಟಲೇ ಇಲ್ಲ. ಗಂಡನ ಜೊತೆಗೆ ಶ್ರೀಲಂಕಾ ಪ್ರವಾಸಕ್ಕೆ ಹೋದ ವೇಳೆ ವೆಂಕಿ ಅಣ್ಣನಿಗೆ ಅನ್ಯಾಯ ಮಾಡಿದ ವ್ಯಕ್ತಿ ತನ್ನ ಗಂಡನೇ ಎಂಬ ಸತ್ಯವೂ ಗೊತ್ತಾಗಿದೆ. ಇದರಿಂದ ಗಂಡ ಜಯಂತನ ಮಾನಸಿಕ ಕ್ರೌರ್ಯದಿಂದ ಮತ್ತಷ್ಟು ಬೇಸತ್ತ ಜಾಹ್ನವಿ ಗಂಡನಿಂದ ದೂರಾಗಲು ಸಮುದ್ರಕ್ಕೆ ಬಿದ್ದಿದ್ದಾಳೆ. ಆದರೆ, ಶ್ರೀಲಂಕಾ ಸಮುದ್ರದಲ್ಲಿ ಬಿದ್ದು, ಚೆನ್ನೈ ಸಮುದ್ರ ತೀರಕ್ಕೆ ತೇಲಿಕೊಂಡು ಬಂದಿದ್ದಾಳೆ. ಅಲ್ಲಿನ ಸ್ಥಳೀಯರು ಜಾಹ್ನವಿಯನ್ನು ಬದುಕಿಸಿದ್ದಾರೆ. ಅಲ್ಲಿ ವಿಶ್ವನ ಅಪ್ಪ ನರಸಿಂಹನ ಕಾರು ಹತ್ತಿಕೊಂಡು ವಿಶ್ವನ ಮನೆಗೆ ಬಂದಿದ್ದಾಳೆ.
ಇನ್ನು ನರಸಿಂಹ ಅವರು ಚೆನ್ನೈನಿಂದ ವಾಪಸ್ ಬರುವಾಗ ಲಾರಿ ಅಪಘಾತದಲ್ಲಿ ಸಾವಿಗೀಡಾಗಬೇಕಾದವರನ್ನು ರಕ್ಷಣೆ ಮಾಡಿದ್ದಾಳೆ. ಈ ಸೌಜನ್ಯಕ್ಕಾದರೂ ತನ್ನ ತಂದೆಯನ್ನು ಬದುಕಿಸಿದ ಯುವತಿ ಯಾರೆಂದು ನೋಡಲು ವಿಶ್ವ ಹಪ-ಹಪಿಸುತ್ತಿರುವಾಗ ಜಾಹ್ನವಿ ಅಲ್ಲಿಂದ ತಪ್ಪಿಸಿಕೊಂಡು ತನ್ನ ತವರುಮನೆಗೆ ಬಂದಿದ್ದಾಳೆ. ರಾತ್ರಿ ವೇಳೆ ಮನೆಗೆ ಬಂದು ಅಮ್ಮನ ಕೋಣೆಗೆ ಹೋಗಿ ಮಾತನಾಡಿಸಿದರೂ, ಅವರ ಅಮ್ಮ ಜಾಹ್ನವಿ ಬಂದಿರುವುದನ್ನು ಕನಸು ಹಾಗೂ ಭ್ರಮೆ ಎಂದು ಭಾವಿಸಿದ್ದಾರೆ. ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದ ಜಾಹ್ನವಿ ತನ್ನದೇ ತಿಥಿ ಕಾರ್ಯಕ್ಕೆ ಇಟ್ಟಿದ್ದ ಊಟವನ್ನು ತಿಂದು ಹಸಿವು ನೀಗಿಸಿಕೊಂಡಿದ್ದಾಳೆ. ಇದೀಗ ಹೆಂಡತಿ ಜಾಹ್ನವಿ ಸತ್ತಿದ್ದಾಳೆಂದು ಗೋಳಾಡುತ್ತಿದ್ದ ಗಂಡ ಸೈಕೋ ಜಯಂತ್, ಪುನಃ ಮಾವನ ಮನೆಗೆ ಬಂದಿದ್ದಾನೆ. ಈಗಲೂ ಜಾಹ್ನವಿ ಬದುಕಿದ್ದು, ತವರು ಮನೆಗೆ ಬಂದೇ ಬರುತ್ತಾಳೆ ಎಂಬ ನಿರೀಕ್ಷೆಯಿಂದ ಇಲ್ಲಿಗೆ ಬರುತ್ತಿದ್ದಾನೆ. ಮಾವನ ಮುಂದೆ ಕಣ್ಣೀರು ಹಾಕಿದ್ದು, ಮಾವ ಸಮಾಧಾನ ಮಾಡಿದ್ದಾರೆ.
ಇದನ್ನೂ ಓದಿ: ವಿಶ್ವನ ಜಗತ್ತಿಗೆ ಜಾನು ಪ್ರವೇಶ; ಹುಚ್ಚನಾದ ಸೈಕೋ ಜಯಂತ್ ಬದುಕಿಗೆ ಶಾಂತಮ್ಮನ ಎಂಟ್ರಿ? ಏನಿದು ಬಿಗ್ ಟ್ವಿಸ್ಟ್
ಜಾಹ್ನವಿ ತಿಥಿ ಮಾಡಿದ ಫೋಟೋ ಮುಂದೆ ಇಟ್ಟಿದ್ದ ಊಟವನ್ನು ಮನೆಯಲ್ಲಿರುವ ಯಾರೂ ತಿನ್ನಲು ಸಾಧ್ಯವಿಲ್ಲ, ಇಲ್ಲಿಗೆ ಜಾಹ್ನವಿ ಬಂದಿದ್ದಾಳೆ ಎಂಬ ಸುಳಿವು ಜಯಂತ್‌ಗೆ ಸಿಕ್ಕಿದೆ. ಮಾನ ಸಮಾಧಾನ ಮಾಡಿ, ಕೋಣೆಯಲ್ಲಿ ಮಲಗುವಂತೆ ಹೇಳಿದರೂ ಕೇಳದೇ ಹೆಂಡತಿ ಬಂದಿದ್ದಾಳೆಂಬ ಅನುಮಾನದಿಂದ ಆಕೆಯನ್ನು ಹಿಡಿಯಲು ಹಾಲ್‌ನಲ್ಲಿ ಮಲಗುವುದಾಗಿ ಹೇಳಿದ್ದಾನೆ. ಅವರ ಮಾವ ಮಲಗಲು ಕೋಣೆಗೆ ಹೋಗುತ್ತಿದ್ದಂತೆ ಅಜ್ಜಿಯ ಕೋಣೆಯಲ್ಲಿ ಅವಿತುಕೊಂಡಿದ್ದ ಜಾಹ್ನವಿ ಕೋಣೆಗೆ ಬಂದದ್ದಾಳೆ. ಆಲ್ಲಿಯೇ ಬಾಗಿಲ ಹಿಂದೆ ಜಾಹ್ನವಿ ಅವಿತುಕೊಂಡಿದ್ದು, ಆಕೆಯನ್ನು ನೋಡಿದರೆ ಪುನಃ ಸೈಕೋ ಗಂಡನ ಜೊತೆಗೆ ಜೀವನ ಮಾಡಬೇಕಾದ ಸ್ಥಿತಿ ಬರುತ್ತದೆ. ಇನ್ನು ಗಂಡನ ಮಾನಸಿಕ ಕ್ರೌರ್ಯ ಹಾಗೂ ಮೋಸದ ಬಗ್ಗೆ ತಿಳಿದಿರುವ ಜಾಹ್ನವಿ ಆತನೊಂದಿಗೆ ಹೋದರೂ ಹಿಂಸೆ ಬಿಟ್ಟು ಬೇರೇನೂ ಸಿಗುವುದಿಲ್ಲ ಎಂಬುದು ಖಚಿತವಾಗಿದೆ.
