11:39 PM (IST) Apr 14

ನೀಲಿ ಕಣ್ಣಿನಿಂದ ಖ್ಯಾತಿ ಗಳಿಸಿದ ಪಾಕಿಸ್ತಾನಿ ಚಾಯ್‌ವಾಲಾಗೆ ಗಡೀಪಾರು ಭೀತಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಫೋಟೋ ಮೂಲಕ ಭಾರಿ ಖ್ಯಾತಿ ಗಳಿಸಿದ ಪಾಕಿಸ್ತಾನದ ಚಾಯ್‌ವಾಲ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ. ಲಂಡನ್‌ನಲ್ಲೂ ಚಾಯ್‌ವಾಲ ಶಾಪ್ ಶಾಖೆ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಆದರೆ ಶ್ರೀಮಂತ ಉದ್ಯಮಿಯಾಗಿರುವ ಈ ಚಾಯ್‌‌ವಾಲಾನ ಗಡೀಪಾರು ಮಾಡಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.

ಪೂರ್ತಿ ಓದಿ
11:36 PM (IST) Apr 14

ಮದುವೆಯಾದ್ರೋ ಫಸ್ಟ್ ಲವ್ ಮರೆಯೋಕಾಗ್ತಿಲ್ಲ ಅನ್ನೋರಿಗೆ 5 ಸಲಹೆ!

ಹಳೆಯ ಪ್ರೀತಿಯ ನೆನಪುಗಳು ಮದುವೆಯ ನಂತರವೂ ಕಾಡುತ್ತಿದ್ದರೆ, ಅದರಿಂದ ಹೊರಬರಲು ಕೆಲವು ಸಲಹೆಗಳಿವೆ. ಸತ್ಯವನ್ನು ಒಪ್ಪಿಕೊಳ್ಳುವುದು, ವರ್ತಮಾನದಲ್ಲಿ ಬದುಕುವುದು ಮತ್ತು ನಂಬಿಕೆಯನ್ನು ಬೆಳೆಸಿಕೊಳ್ಳುವುದು ಮುಖ್ಯ.

ಪೂರ್ತಿ ಓದಿ
11:11 PM (IST) Apr 14

ಹಿರಿಯ ಪತ್ರಕರ್ತ, ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ಮಾಜಿ ಸಂಪಾದಕ ಶ್ಯಾಮ ಸುಂದರ್ ಇನ್ನಿಲ್ಲ

ಹಿರಿಯ ಪತ್ರಕರ್ತ, ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ಮಾಜಿ ಸಂಪಾದಕ, ಡಿಜಿಟಲ್ ಸುದಿ ಮಾಧ್ಯಮದ ದಿಗ್ಗಜ ಎಂದೇ ಗುರುತಿಸಿಕೊಂಡಿದ್ದ ಎಸ್‌ಕೆ ಶ್ಯಾಮ ಸುಂದರ್ ನಿಧನರಾಗಿದ್ದಾರೆ. 

ಪೂರ್ತಿ ಓದಿ
10:50 PM (IST) Apr 14

ಮೆಟ್ರೋದಲ್ಲಿ ನಿದ್ದೆ ಮಾಡುವ ಯುವಕನಿಗೆ ಸೊಂಟದ ಆಸರೆ ಕೊಟ್ಟ ಯುವತಿ!

ದೆಹಲಿ ಮೆಟ್ರೋದಲ್ಲಿ ನಿದ್ದೆ ಮಾಡುತ್ತಿದ್ದ ಯುವಕನಿಗೆ ಮಹಿಳೆಯೊಬ್ಬರು ಆಸರೆಯಾಗಿದ್ದು, ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಸಮ್ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಪೂರ್ತಿ ಓದಿ
09:43 PM (IST) Apr 14

ಬಂಗಾರ ದರ ಭವಿಷ್ಯ: 10 ಗ್ರಾಂ ಗೋಲ್ಡ್ ರೇಟ್ ₹1.30 ಲಕ್ಷಕ್ಕೆ ಏರಿಕೆ!

ಬಂಗಾರದ ಬೆಲೆ ಭವಿಷ್ಯ: ಅಮೆರಿಕ-ಚೀನಾ ನಡುವಿನ ವ್ಯಾಪಾರ ಸಮರದಿಂದ ಬಂಗಾರದ ಬೆಲೆ ಏರಬಹುದು. ಗೋಲ್ಡ್‌ಮನ್ ಸ್ಯಾಕ್ಸ್ ಈ ರೀತಿ ಅಂದಾಜಿಸಿದೆ. ಪರಿಸ್ಥಿತಿ ಕೈಮೀರಿದ್ರೆ, ಬಂಗಾರದ ಬೆಲೆ 10 ಗ್ರಾಂಗೆ 1.30 ಲಕ್ಷ ರೂಪಾಯಿ ತಲುಪಬಹುದು.

ಪೂರ್ತಿ ಓದಿ
09:21 PM (IST) Apr 14

ಪುಣೆಯಲ್ಲಿ ಐಷಾರಾಮಿ ಬಂಗಲೆ ಖರೀದಿಸಿದ ಸಿಂಗರ್ ಶಾನ್, ಬೆಲೆ ಎಷ್ಟು?

ಖ್ಯಾತ ಗಾಯಕ ಶಾನ್, ಪುಣೆಯ ಪ್ರಭಾಚಿವಾಡಿಯಲ್ಲಿ ಪತ್ನಿ ರಾಧಿಕಾ ಮುಖರ್ಜಿ ಜೊತೆಗೂಡಿ ₹ 10 ಕೋಟಿಗೆ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ. ಈ ಆಸ್ತಿಯು 0.4 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, 5,500 ಚದರ ಅಡಿ ನಿರ್ಮಾಣ ಪ್ರದೇಶವನ್ನು ಒಳಗೊಂಡಿದೆ.

ಪೂರ್ತಿ ಓದಿ
09:12 PM (IST) Apr 14

ಜಯಂತನ ಕೈಗೆ ಮತ್ತೆ ಸಿಕ್ಕಿಬಿದ್ದ ಜಾಹ್ನವಿ; ವಿಶ್ವನಿಗೆ ಮತ್ತೆ ಮೋಸ!

ಸೈಕೋ ಗಂಡನಿಂದ ತಪ್ಪಿಸಿಕೊಳ್ಳಲು ಹೋದ ಜಾಹ್ನವಿ ಮತ್ತೆ ಅವನ ಕೈಗೆ ಸಿಕ್ಕಿಬಿದ್ದಿದ್ದಾಳೆ. ತವರುಮನೆಗೆ ಬಂದರೂ ಜಯಂತ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದೆ ಆಕೆಯ ಜೀವನ ಹೇಗಿರಲಿದೆ?

ಪೂರ್ತಿ ಓದಿ
08:54 PM (IST) Apr 14

ನಟ ಗೋವಿಂದ ಬಗ್ಗೆ ಕೇಳಿದ್ದಕ್ಕೆ ಹಲವು ಅನುಮಾನ ಹುಟ್ಟುಹಾಕಿದ ಸುನೀತಾ!

ನಟಿ ಸುನೀತಾ ಅಹುಜಾ ಫ್ಯಾಷನ್ ಶೋನಲ್ಲಿ ಗೋವಿಂದ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ. ವಿಚ್ಛೇದನದ ವದಂತಿಗಳ ನಡುವೆ, ಸುನಿತಾ ಅವರ ಪ್ರತಿಕ್ರಿಯೆ ಕುತೂಹಲ ಮೂಡಿಸಿದೆ.

ಪೂರ್ತಿ ಓದಿ
08:49 PM (IST) Apr 14

ಮತ್ತೊಂದು ದಾಖಲೆ ಬರೆದ ಶ್ರೀನಗರದ ತುಲಿಪ್ ಗಾರ್ಡನ್, ಅರಳಿತು 17 ಲಕ್ಷ ಹೂವು

ಶ್ರೀಗನರದ ತುಲಿಪ್ ಗಾರ್ಡನ್ ಏಷ್ಯಾದ ಅತೀ ದೊಡ್ಡ ತುಲಿಪ್ ಹೂವುಗಳ ಗಾರ್ಡನ್ ಅನ್ನೋ ಖ್ಯಾತಿಗೆ ಪಾತ್ರವಾಗಿದೆ. ಇದೀಗ ಇದೇ ಗಾರ್ಡನ್‌ನಲ್ಲಿ 17 ಲಕ್ಷ ತುಲಿಪ್ ಹೂವು ಅರಳುವ ಮೂಲಕ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ.

ಪೂರ್ತಿ ಓದಿ
07:48 PM (IST) Apr 14

ಪಕ್ಕದ ಮನೆ ವ್ಯಕ್ತಿ ಜೊತೆ ಪತ್ನಿ ಮಂಚದಲ್ಲಿರುವಾಗ ಪತಿ ಎಂಟ್ರಿ,ಚಕ್ಕಂದ ಆಡಿದವನಿಗೆ ಇದೀಗ ಅದೇ ಇಲ್ಲ

ಪಕ್ಕದ ಮನೆಯವನ ಜೊತೆ ಹಾಸಿಗೆಯಲ್ಲಿರುವಾಗಲೇ ಗಂಡ ಮನೆಗೆ ಎಂಟ್ರಿಕೊಟ್ಟಿದ್ದಾನೆ. ಈ ದೃಶ್ಯ ನೋಡಿ ಪತಿಯ ಪಿತ್ತ ನೆತ್ತಿಗೇರಿದೆ. ಪತಿಯ ಆಕ್ರೋಶಕ್ಕೆ ಇದೀಗ ಪಕ್ಕದ ಮನೆಯವನಿಗೆ ಅದೇ ಇಲ್ಲದಂತಾಗಿದೆ.

ಪೂರ್ತಿ ಓದಿ
07:47 PM (IST) Apr 14

ಹಾರ್ದಿಕ್ ಪಾಂಡ್ಯ ಹುಡುಕಿಕೊಂಡು ಇಂಡಿಯಾ ಗೇಟಿಗೆ ಬಂದ ಹೊಸ ಹುಡುಗಿ!

ಹಾರ್ದಿಕ್ ಪಾಂಡ್ಯ ಅವರ ಗೆಳತಿ ಜಾಸ್ಮಿನ್ ವಾಲಿಯಾ ದೆಹಲಿಯಲ್ಲಿ ಕಾಣಿಸಿಕೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಚೀಯರ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಜಾಸ್ಮಿನ್ ಹಾರ್ದಿಕ್‌ಗೆ ಸಪೋರ್ಟ್ ಮಾಡುತ್ತಿದ್ದರು.

ಪೂರ್ತಿ ಓದಿ
07:02 PM (IST) Apr 14

ಹಿರಿಯ ಕಲಾವಿದರಿಗೆ ಧಾರವಾಹಿಯಲ್ಲಿ ಚಾನ್ಸ್ ಕೊಡಿ; ಟೆನ್ನಿಸ್ ಕೃಷ್ಣ

ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರ ಅಂತಿಮ ದರ್ಶನದಲ್ಲಿ ಮಾತನಾಡಿದ ಟೆನ್ನಿಸ್ ಕೃಷ್ಣ, ಹಿರಿಯ ಕಲಾವಿದರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಬ್ಯಾಂಕ್ ಜನಾರ್ಧನ್ ಅವರ ನಿಧನಕ್ಕೆ ಅನೇಕ ಕಲಾವಿದರು ಸಂತಾಪ ಸೂಚಿಸಿದರು.

ಪೂರ್ತಿ ಓದಿ
06:09 PM (IST) Apr 14

2 ಕಾರಣಕ್ಕೆ ಭಾರತೀಯ ಉದ್ಯೋಗಿಗಳನ್ನು ತೆಗೆದು ಹಾಕಲು ರೆಡಿಯಾದ ಸಾಲು ಸಾಲು MNC ಕಂಪೆನಿಗಳು!

IT layoff 2025: ಮತ್ತೊಂದು ಹಂತದ ಲೇಆಫ್‌ ಶುರುವಾಗಿದೆ. ಈಗಾಗಲೇ ಸಾಕಷ್ಟು ಕಂಪೆನಿಗಳು ಉದ್ಯೋಗಿಗಳನ್ನು ಹೊರಗಡೆ ಕಳಿಸಿದ್ದು, ಈಗ ಇನ್ನೊಂದು ಹಂತ ಶುರುವಾಗಿದೆ. 

ಪೂರ್ತಿ ಓದಿ
06:09 PM (IST) Apr 14

ಬೆಂಗಳೂರು ಮೆಟ್ರೋ ನೀಲಿ ಮಾರ್ಗ ಮೊದಲ ಹಂತ ಯಾವಾಗ ಓಪನ್?

ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಕ್ಕೆ ಸಂಪರ್ಕಿಸುವ ನಮ್ಮ ಮೆಟ್ರೋದ ನೀಲಿ ಮಾರ್ಗದ ಮೊದಲ ಹಂತವು 2026 ರ ಮಧ್ಯಭಾಗದಲ್ಲಿ ಉದ್ಘಾಟನೆಯಾಗಲಿದೆ. 18 ಕಿಲೋಮೀಟರ್ ಉದ್ದದ ಈ ಮಾರ್ಗವು ಹೊರ ವರ್ತುಲ ರಸ್ತೆ ಮತ್ತು ಪ್ರಮುಖ ಐಟಿ ಕಾರಿಡಾರ್‌ಗಳಲ್ಲಿ ಹಾದುಹೋಗುತ್ತದೆ.

ಪೂರ್ತಿ ಓದಿ
06:07 PM (IST) Apr 14

ಪ್ರಧಾನಿ ಮೋದಿ ಕೈಯಾರೆ ಕೊಟ್ಟ ಶೂ ಧರಿಸಿ ಶಪಥ ಅಂತ್ಯಗೊಳಿಸಿದ ರಾಂಪಾಲ್ ಕಶ್ಯಪ್

ಪ್ರಧಾನಿ ಮೋದಿಗಾಗಿ ರಾಂಪಾಲ್ ಕಶ್ಯಪ್ ಶಪಥ ಮಾಡಿದ್ದರು. ಇದರಂತೆ ಕಳೆದ 14 ವರ್ಷದಿಂದ ಚಪ್ಪಲಿ ಧರಿಸದೆ ಬರಿಗಾಲಲ್ಲೇ ಓಡಾಡುತ್ತಿದ್ದ ಕಶ್ಯಪ್ ಭೇಟಿಯಾದ ಮೋದಿ ಹೊಸ ಶೂ ಕೊಡಿಸಿದ್ದಾರೆ. ಈ ಮೂಲಕ ಕಶ್ಯಪ್ ಶಪಥ ಅಂತ್ಯಗೊಳಿಸಿದ್ದಾರೆ. ಪ್ರಧಾನಿಯೊಬ್ಬರು ಸಾಮಾನ್ಯ ವ್ಯಕ್ತಿಗೆ ಶೂ ಕೊಟ್ಟ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಪೂರ್ತಿ ಓದಿ
06:04 PM (IST) Apr 14

ಎಸ್‌ಬಿಐನಲ್ಲಿ ಎಫ್‌ಡಿ ಇರಿಸಿದ ಗ್ರಾಹಕರಿಗೆ ನಷ್ಟ, ಬಡ್ಡಿ ದರ ಇಳಿಸಿದ ಬ್ಯಾಂಕ್‌!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿ ದರಗಳನ್ನು ಕಡಿಮೆ ಮಾಡಿದೆ. ಪರಿಷ್ಕರಿಸಿದ ದರಗಳು ಏಪ್ರಿಲ್ 15 ರಿಂದ ಜಾರಿಗೆ ಬರಲಿದ್ದು, ಒಂದು ವರ್ಷದಿಂದ ಮೂರು ವರ್ಷಗಳವರೆಗಿನ ಆಯ್ದ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಲಾಗಿದೆ.

ಪೂರ್ತಿ ಓದಿ
05:44 PM (IST) Apr 14

ಬ್ರಾಹ್ಮಣರನ್ನು ಬಿಟ್ಟು ಉಳಿದವರೆಲ್ಲಾ ಶೂದ್ರರು; ಕೆ.ಎನ್. ರಾಜಣ್ಣ

ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದವರೆಲ್ಲಾ ಶೂದ್ರರು. ಶೂದ್ರರು ಓಂ ನಮಃ ಶಿವಾಯ ಎಂದು ಹೇಳಿದರೆ ನಾಲಿಗೆ ಕತ್ತರಿಸುತ್ತಿದ್ದರು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.

ಪೂರ್ತಿ ಓದಿ
05:29 PM (IST) Apr 14

ವಕ್ಫ್‌ ಸರಿಯಾಗಿ ಬಳಸಿದ್ದರೆ, ಮುಸ್ಲಿಂ ಹುಡುಗರು ಪಂಚರ್‌ ಹಾಕುವ ಸ್ಥಿತಿ ಬರುತ್ತಿರಲಿಲ್ಲ!

ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಕ್ಫ್ ಆಸ್ತಿ ದುರುಪಯೋಗದ ಆರೋಪ ಮಾಡಿದ್ದಾರೆ. ಇದರಿಂದ ಮುಸ್ಲಿಂ ಯುವಕರು ಸಣ್ಣ ಕೆಲಸಗಳಿಗೆ ಸೀಮಿತವಾಗುವಂತಾಗಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸಿದ್ದಾರೆ.

ಪೂರ್ತಿ ಓದಿ
05:24 PM (IST) Apr 14

ಬಿಗ್ ಬಾಸ್ ರಿಯಾಲಿಟಿ ಶೋಗೆ ಮತ್ತೊಂದು ಸಂಕಷ್ಟ, ಈ ಬಾರಿ ನಡೆಯೋದೆ ಡೌಟ್

ಜನಪ್ರಿಯ ಬಿಗ್ ಬಾಗ್ ಶೋಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 2025ರ ಶೋ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಭಾರತದಲ್ಲಿ ಮೊದಲು ಹಿಂದಿಯಲ್ಲೇ ಆರಂಭಗೊಂಡ ಬಿಗ್ ಬಾಸ್ ಇದೀಗ ಹಿಂದಿಯಿಂದಲೇ ಅಂತ್ಯಗೊಳ್ಳುತ್ತಾ.

ಪೂರ್ತಿ ಓದಿ
05:17 PM (IST) Apr 14

ಥೂ ಪಾಪಿ... ಹೆಣ್ಣು ಮಗು ಹೆತ್ತಳೆಂದು ಸ್ಕ್ರೂ ಡ್ರೈವರ್‌ನಿಂದ ಹಲ್ಲೆ ಮಾಡಿದ ಗಂಡ

ಉತ್ತರಾಖಂಡ್‌ನಲ್ಲಿ ಹೆಣ್ಣು ಮಗು ಜನಿಸಿದ ಕಾರಣಕ್ಕೆ ಪತ್ನಿಯ ಮೇಲೆ ಗಂಡ ಸ್ಕ್ರೂಡ್ರೈವರ್‌ನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಕ್ಷಿಣೆ ಕಿರುಕುಳದ ಆರೋಪವೂ ಕೇಳಿಬಂದಿದೆ.

ಪೂರ್ತಿ ಓದಿ