MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಉದ್ಯೋಗ ಚಿಂತೆ ಬೇಡ, 20 ರಿಂದ 30 ಸಾವಿರದಲ್ಲಿ ಆರಂಭಿಸಬಹುದಾದ ಸ್ವಂತ ಬಿಸ್ನೆಸ್ ಪ್ಲಾನ್

ಉದ್ಯೋಗ ಚಿಂತೆ ಬೇಡ, 20 ರಿಂದ 30 ಸಾವಿರದಲ್ಲಿ ಆರಂಭಿಸಬಹುದಾದ ಸ್ವಂತ ಬಿಸ್ನೆಸ್ ಪ್ಲಾನ್

ಪ್ರತಿದಿನ ಬೆಳಗ್ಗೆ ಆಫೀಸಿಗೆ ಓಡಾಟ, ಬಾಸ್ ಮೂಡ್ ಪ್ರಕಾರ ದಿನದ ಲೆಕ್ಕಾಚಾರ, ತಿಂಗಳ ಕೊನೆಯಲ್ಲಿ ಸಂಬಳದ ಕಾಯುವಿಕೆ... ಇವೆಲ್ಲವನ್ನೂ ಬಿಟ್ಟುಬಿಡಿ. ಈಗ ನೀವು ಸ್ವಂತ ಬ್ಯೂಸಿನೆಸ್  ಮಾಡುವ ಸಮಯ. ಕಡಿಮೆ ಹಣದಲ್ಲಿ ಪ್ರಾರಂಭವಾಗಿ ದೊಡ್ಡದಾಗಿ ಬೆಳೆಯುವ ಸಣ್ಣ ಬಿಸಿನೆಸ್ ಪ್ಲಾನ್ ಇಲ್ಲಿದೆ.   

2 Min read
Author : Chethan Kumar
| Updated : Apr 14 2025, 03:50 PM IST
Share this Photo Gallery
  • FB
  • TW
  • Linkdin
  • Whatsapp
15
1. ಮನೆಯಲ್ಲೇ ತಯಾರಿಸಿದ ಉತ್ಪನ್ನಗಳ ಬಿಸಿನೆಸ್

1. ಮನೆಯಲ್ಲೇ ತಯಾರಿಸಿದ ಉತ್ಪನ್ನಗಳ ಬಿಸಿನೆಸ್

ಕ್ಯಾಂಡಲ್ಸ್, ಅಗರಬತ್ತಿ, ಗಿಡಮೂಲಿಕೆ ಸೋಪು, ಬ್ಯಾಗ್​ಗಳಂತಹ ಮನೆಯಲ್ಲೇ ತಯಾರಿಸಿದ ಉತ್ಪನ್ನಗಳಿಗೆ ಇಂದು ಭಾರಿ ಬೇಡಿಕೆ ಇದೆ. ಏಕೆಂದರೆ, ಈಗ ಹೆಚ್ಚಿನ ಜನರು ರಾಸಾಯನಿಕ ಉತ್ಪನ್ನಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಮನೆಯಲ್ಲಿ ತಯಾರಿಸಿದ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಆರಂಭಿಕ ವೆಚ್ಚ 10,000 ದಿಂದ 25,000 ರೂಪಾಯಿ ಆಗಬಹುದು. ಈ ಕೆಲಸವನ್ನು ಇನ್‌ಸ್ಟಾಗ್ರಾಂ ಅಥವಾ ವ್ಯಾಟ್ಸಾಪ್‌ನಲ್ಲಿ ಪ್ರಚಾರ ಮಾಡಬಹುದು. ಇದರ ಮಾಸಿಕ ಆದಾಯ 50,000 ರೂಪಾಯಿಗಳಿಗಿಂತ ಹೆಚ್ಚಿರಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
2. ಥರ್ಡ್ ಪಾರ್ಟಿ Amazon ಅಥವಾ Flipkart ಸೆಲ್ಲರ್ ಆಗುವುದು

2. ಥರ್ಡ್ ಪಾರ್ಟಿ Amazon ಅಥವಾ Flipkart ಸೆಲ್ಲರ್ ಆಗುವುದು

ಅಂಗಡಿ ತೆರೆಯದೆಯೇ ಆನ್​ಲೈನ್ ಸ್ಟೋರ್ ತೆರೆಯಬಹುದು. ಲೋಕಲ್ ಮಾರ್ಕೆಟ್​ನಿಂದ ವಸ್ತುಗಳನ್ನು ಖರೀದಿಸಿ ಅಮೇಜಾನ್ ಅಥವಾ ಫ್ಲಿಪ್‌ಕಾರ್ಟ್  ನಲ್ಲಿ ಮಾರಾಟ ಮಾಡಿ. ಮನೆಯಲ್ಲಿ ಕುಳಿತು ಆರ್ಡರ್​ಗಳನ್ನು ಪಡೆಯಿರಿ ಮತ್ತು ಅವರೇ ಡೆಲಿವರಿ ಮಾಡುತ್ತಾರೆ. ಇದರ ಆರಂಭಿಕ ವೆಚ್ಚ 15,000-30,000 ರೂಪಾಯಿ ಆಗಬಹುದು. ಸ್ಕೇಲ್ ಪ್ರಕಾರ ಇದರ ಆದಾಯ 70,000 ರೂಪಾಯಿಗಳಿಗಿಂತ ಹೆಚ್ಚಿರಬಹುದು.

35
3. YouTube ಚಾನೆಲ್ ಮತ್ತು ರೀಲ್ಸ್ ಕಂಟೆಂಟ್ ಕ್ರಿಯೇಷನ್

3. YouTube ಚಾನೆಲ್ ಮತ್ತು ರೀಲ್ಸ್ ಕಂಟೆಂಟ್ ಕ್ರಿಯೇಷನ್

ನಿಮ್ಮಲ್ಲಿ ಅಡುಗೆ, DIY, ಟೆಕ್, ಮೋಟಿವೇಷನ್ ಅಥವಾ ನ್ಯೂಸ್​ನಂತಹ ಯಾವುದೇ ವಿಶೇಷ ಕೌಶಲ್ಯವಿದ್ದರೆ, ನೀವು ಕೇವಲ ಸ್ಮಾರ್ಟ್​ಫೋನ್​ನಿಂದ ಯೂಟ್ಯೂಬ್ ಚಾನೆಲ್ ಮತ್ತು ರೀಲ್ಸ್ ಕಂಟೆಂಟ್ ಕ್ರಿಯೇಟ್ ಮಾಡಬಹುದು. ಕಂಟೆಂಟ್ ಇಂದು ಅತಿದೊಡ್ಡ ಬಿಸಿನೆಸ್ ಆಗಿದೆ. ಇದನ್ನು ಪ್ರಾರಂಭಿಸಲು ಕೇವಲ 10,000 ರೂಪಾಯಿ ಖರ್ಚಾಗುತ್ತದೆ. ಇದರ ಆದಾಯ ವೀಕ್ಷಣೆಗಳು ಮತ್ತು ಬ್ರ್ಯಾಂಡಿಂಗ್​ಗೆ ಅನುಗುಣವಾಗಿ ಇರುತ್ತದೆ. ಇದು 10,000 ದಿಂದ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚೂ ಆಗಬಹುದು.

45
4. ಸಾವಯವ ಕೃಷಿ ಮತ್ತು ತರಕಾರಿ ಸರಬರಾಜು

4. ಸಾವಯವ ಕೃಷಿ ಮತ್ತು ತರಕಾರಿ ಸರಬರಾಜು

ದೊಡ್ಡ ನಗರಗಳಲ್ಲಿ ಜನರು ಸಾವಯವ ತರಕಾರಿ ಮತ್ತು ಧಾನ್ಯಗಳನ್ನು ಖರೀದಿಸುತ್ತಾರೆ. ನೀವು ಲೋಕಲ್ ಫಾರ್ಮಿಂಗ್ ಮಾಡಬಹುದು ಅಥವಾ ರೈತರಿಂದ ಖರೀದಿಸಿ ನಗರ ಪ್ರದೇಶಗಳಲ್ಲಿ ಮನೆಗೆ ತಲುಪಿಸುವ ಮೂಲಕ ಮಾರಾಟ ಮಾಡಬಹುದು. ಇದನ್ನು ಪ್ರಾರಂಭಿಸಲು 20,000-50,000 ರೂಪಾಯಿ ಬೇಕಾಗುತ್ತದೆ. ಇದರ ಆದಾಯ ಬೇಡಿಕೆಯನ್ನು ಅವಲಂಬಿಸಿರುತ್ತದೆ. ಇದು 1 ಲಕ್ಷ ರೂಪಾಯಿಗಳಿಗಿಂತ ಹೆಚ್ಚೂ ಆಗಬಹುದು.

55
5. ಆದಾಯ ಬರುವ ಬ್ಲಾಗ್ ಅಥವಾ ನ್ಯೂಸ್ ವೆಬ್​ಸೈಟ್

5. ಆದಾಯ ಬರುವ ಬ್ಲಾಗ್ ಅಥವಾ ನ್ಯೂಸ್ ವೆಬ್​ಸೈಟ್

ನೀವು ಬರೆಯಲು ತಿಳಿದಿದ್ದರೆ, ನ್ಯೂಸ್, ಕರೆಂಟ್ ಅಫೇರ್ಸ್, ಟ್ರೆಂಡಿಂಗ್ ಟಾಪಿಕ್ಸ್, ಹೆಲ್ತ್ ಅಥವಾ ಯುಟಿಲಿಟಿ ಬಗ್ಗೆ ವೆಬ್​ಸೈಟ್ ಪ್ರಾರಂಭಿಸಿ ಗೂಗಲ್ ಆ್ಯಡ್‌ಸೆನ್ಸ್  ಹಾಗೂ ಬ್ರ್ಯಾಂಡ್ ಪಾರ್ಟ್ನರ್​ಶಿಪ್​ನಿಂದ ಹಣ ಗಳಿಸಬಹುದು. ಇದರ ಆರಂಭಿಕ ವೆಚ್ಚ 5,000 ರೂಪಾಯಿಯಿಂದ 15,000 ರೂಪಾಯಿ ಆಗಬಹುದು. ಇದರ ಆದಾಯ ನಿಮ್ಮ ಟ್ರಾಫಿಕ್ ಅನ್ನು ಅವಲಂಬಿಸಿರುತ್ತದೆ. ಇದು 20,000 ರೂಪಾಯಿಯಿಂದ 2 ಲಕ್ಷ ರೂಪಾಯಿ ತಿಂಗಳಿಗೆ ಅಥವಾ ಅದಕ್ಕಿಂತ ಹೆಚ್ಚೂ ಆಗಬಹುದು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ವ್ಯಾಪಾರ ಕಲ್ಪನೆ
 
3rd TEST • SA vs AUS
Stumps
SASA
329
AUSAUS
(90.0 ov)330/4
Day 2
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Recommended Stories
Recommended image1
'ಇಂದೇ ಟ್ರೀಟ್‌ಮೆಂಟ್‌ ಕೊಡಿಸಿ, ಇದರಲ್ಲಿ ತಡ ಮಾಡ್ಬೇಡಿ': ದೇವಸ್ಥಾನದ ಮುಂದೆ ಬಡ ಮಹಿಳೆಯ ಸಂಕಷ್ಟಕ್ಕೆ ತಕ್ಷಣ ಮಿಡಿದ ಅನಂತ್‌ ಅಂಬಾನಿ!
Recommended image2
ಜಿಯೋ ದಾಖಲೆ ಐಪಿಒ ಸಂಭ್ರಮ; ನೀಲಿ ಬೆಳಕಲ್ಲಿ ಮಿಂದೆದ್ದ ಮುಖೇಶ್ ಅಂಬಾನಿಯ 'ಆಂಟಿಲಿಯಾ' ಬಂಗಲೆ!
Recommended image3
ಭಾರತೀಯರ ನೆಚ್ಚಿನ ಬ್ರ್ಯಾಂಡ್ ಕಾರ್ಲ್ಸ್‌ಬರ್ಗ್ IPO, 8.64 ಕೋಟಿ ಷೇರು ಮಾರಾಟಕ್ಕೆ ತಯಾರಿ, ಆಫರ್ ಡೀಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved