ಬೆಂಗಳೂರು ಮೆಟ್ರೋ ನೀಲಿ ಮಾರ್ಗ ಮೊದಲ ಹಂತ ಯಾವಾಗ ಓಪನ್?
ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಕ್ಕೆ ಸಂಪರ್ಕಿಸುವ ನಮ್ಮ ಮೆಟ್ರೋದ ನೀಲಿ ಮಾರ್ಗದ ಮೊದಲ ಹಂತವು 2026 ರ ಮಧ್ಯಭಾಗದಲ್ಲಿ ಉದ್ಘಾಟನೆಯಾಗಲಿದೆ. 18 ಕಿಲೋಮೀಟರ್ ಉದ್ದದ ಈ ಮಾರ್ಗವು ಹೊರ ವರ್ತುಲ ರಸ್ತೆ ಮತ್ತು ಪ್ರಮುಖ ಐಟಿ ಕಾರಿಡಾರ್‌ಗಳಲ್ಲಿ ಹಾದುಹೋಗುತ್ತದೆ.

ಬೆಂಗಳೂರು (ಏ.14): ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಕ್ಕೆ ಹೊರ ವರ್ತುಲ ರಸ್ತೆಯ ಮೂಲಕ ಸಂಪರ್ಕಿಸುವ ನಮ್ಮ ಮೆಟ್ರೋದ ನೀಲಿ ಮಾರ್ಗದ ಮೊದಲ ಹಂತವು 2026 ರ ಮಧ್ಯಭಾಗದಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. 18 ಕಿಲೋಮೀಟರ್ ಉದ್ದದ ಈ ಮಾರ್ಗವು ಜನದಟ್ಟಣೆ ಹೆಚ್ಚಿರುವ ಪ್ರದೇಶದಲ್ಲಿ ಹಾದು ಹೋಗಲಿದೆ. ಹೊರ ವರ್ತುಲ ರಸ್ತೆ(ORR) ಮತ್ತು ನಗರದ ಅತ್ಯಂತ ಪ್ರಮುಖ ಐಟಿ ಕಾರಿಡಾರ್‌ಗಳಲ್ಲಿ ಇದು ಸಾಗಲಿದೆ.
ಶುಕ್ರವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, BMRCL ಈ ಯೋಜನೆಯು 2026 ರ ಮಧ್ಯಭಾಗದ ಗುರಿಯನ್ನು ತಲುಪುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ವರ್ಷ ಜೂನ್ ವೇಳೆಗೆ ಕೆಆರ್‌ಪುರಂ ಸಿಲ್ಕ್‌ಬೋರ್ಡ್ ನಡುವಿನ ಮಾರ್ಗ ಆರಂಭಿಸಲು ಮುಂದಾಗಿದ್ದೇವೆ. ಇದು 2-3 ತಿಂಗಳುಗಳವರೆಗೆ ವಿಳಂಬವಾಗಬಹುದು. ರೈಲುಗಳು ಶೀಘ್ರವೇ ಬರಲಿದೆ. ಕಾರ್ಮಿಕರ ಲಭ್ಯತೆಯನ್ನು ಅವಲಂಬಿಸಿ, ನಾವು ಕೆಲಸವನ್ನು ವೇಗಗೊಳಿಸುತ್ತೇವೆ. ಜೂನ್-ಸೆಪ್ಟೆಂಬರ್ ಸಮಯದಲ್ಲಿ ಮಾರ್ಗವನ್ನು ತೆರೆಯುವ ಭರವಸೆ ಇದೆ.
ಬೆಂಗಳೂರು ಮೆಟ್ರೋದಲ್ಲಿ ಮಿತಿ ಮೀರಿದ ಪ್ರಯಾಣಿಕರು; 4 ರೈಲು ಹೆಚ್ಚಳ
ಇನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗ ಆರಂಭದ ಬಗ್ಗೆಯೇ ಪ್ರಯಾಣಿಕರು ಹೆಚ್ಚು ಕುತೂಹಲರಾಗಿದ್ದಾರೆ. ಕೆಐಎ ಸಂಪರ್ಕಿಸುವ ನಮ್ಮ ಮೆಟ್ರೋದ 58.19 ಕಿ.ಮೀ ವಿಸ್ತೀರ್ಣದ ನೀಲಿ ಮಾರ್ಗವನ್ನು 2 ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮೊದಲನೇ ಹಂತ 2 ಎ ಇದು ಸಿಲ್ಕ್‌ಬೋರ್ಡ್‌ನಿಂದ ಕೆಆರ್ ಪುರಂಗೆ ಮತ್ತು 2 ಬಿ ಕೆಆರ್ ಪುರಂನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುತ್ತದೆ. ಒಟ್ಟು 31 ನಿಲ್ದಾಣ ಇದೆ. ಕೆಐಎ ನಿಲ್ದಾಣ ಸುರಂಗ ಮಾರ್ಗದಲ್ಲಿ ಇರಲಿದೆ.
Bengaluru: ಜನರಿಗೆ ದರ ಏರಿಕೆ ಬರೆ, ವಿದೇಶ ಪ್ರವಾಸಕ್ಕೆ ಮೆಟ್ರೋ ಅಧಿಕಾರಿಗಳಿಂದ 26 ಲಕ್ಷ ಖರ್ಚು!
ಕೆ.ಆರ್.ಪುರಂ - ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ 2ನೇ ಹಂತದ (ನೀಲಿ ಮಾರ್ಗ) ಮಾರ್ಗಕ್ಕೆ ರೈಲು ವಿದ್ಯುದೀಕರಣ ತಂತ್ರಜ್ಞಾನ ಒದಗಿಸುವ ಆದೇಶವನ್ನು ಈಗಾಗಲೇ ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್) ಮುಂಬೈ ಮೂಲದ ಸೀಮೆನ್ಸ್ ಲಿಮಿಟೆಡ್ ಒಕ್ಕೂಟಕ್ಕೆ ನೀಡಿದೆ. ಕಾಮಗಾರಿ ಒಟ್ಟೂ ₹766 ಕೋಟಿ ಅಂದಾಜು ವೆಚ್ಚದಲ್ಲಿ ನಡೆಯಲಿದೆ. ಸೀಮೆನ್ಸ್ ಲಿಮಿಟೆಟ್ ಅಂದಾಜು ₹558 ಕೋಟಿಯ ಕಾಮಗಾರಿ ನಿರ್ವಹಿಸಲಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ - ಕೆ.ಆರ್.ಪುರ ಮೂಲಕ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಕಾರಿಡಾರ್ 58 ಕಿ.ಮೀ. ಮಾರ್ಗ ಇದಾಗಿದೆ. ಸಿವಿಲ್ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ಯೋಜನೆಯಲ್ಲಿ 31ನಿಲ್ದಾಣಗಳಿವೆ. ನೀಲಿ ಮಾರ್ಗದ ಎರಡೂ ಹಂತದ ಕಾಮಗಾರಿಯನ್ನು ಒಟ್ಟಾರೆ 10,584 ಕೋಟಿ ರೂಪಾಯಿ ವೆಚ್ಚದಲ್ಲಿ ನೀಲಿ ಮಾರ್ಗದ ಮೆಟ್ರೋ ನಿರ್ಮಾಣವಾಗುತ್ತಿದೆ.
ಸದ್ಯ ನಮ್ಮ ಮೆಟ್ರೋ ಬೆಂಗಳೂರಿನಲ್ಲಿ ಉತ್ತರ ಭಾಗದಿಂದ ದಕ್ಷಿಣಕ್ಕೆ ಹಸಿರು ಮಾರ್ಗ, ಪೂರ್ವದಿಂದ ಪಶ್ಚಿಮಕ್ಕೆ ನೇರಳೆ ಮಾರ್ಗವು ಸೇವೆ ಮಾಡುತ್ತಿದೆ. ದಕ್ಷಿಣ ಬೆಂಗಳೂರಿನಲ್ಲಿ ಹಳದಿ ಮಾರ್ಗ, ಬನ್ನೇರುಘಟ್ಟದಿಂದ ನಾಗಾವರ ನಡುವೆ ಗುಲಾಬಿ ಮಾರ್ಗ ಶೀಘ್ರದಲ್ಲಿಯೇ ಆರಂಭವಾಗಲಿದೆ. ಈ ನಡುವೆ ಎಲೆಕ್ಟ್ರಾನಿಕ್ಸ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗವು ಮೇ 2025 ರ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ.
ನೀಲಿ ಮಾರ್ಗದಲ್ಲಿ ಯಾವೆಲ್ಲಾ ನಿಲ್ದಾಣ?
ಕೆ.ಆರ್. ಪುರ,ಕಸ್ತೂರಿ ನಗರ,ಹೊರಮಾವು,ಎಚ್.ಆರ್.ಬಿ.ಆರ್ ಲೇಔಟ್,ಕಲ್ಯಾಣ್ ನಗರ,ಎಚ್.ಬಿ.ಆರ್ ಲೇಔಟ್,ನಾಗವಾರ,ವೀರಣ್ಣ ಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು ಕ್ರಾಸ್,ಯಲಹಂಕ,ಬಾಗಲೂರು ಕ್ರಾಸ್,ಬೆಟ್ಟಹಲಸೂರು,ದೊಡ್ಡಜಾಲ, ವಿಮಾನ ನಿಲ್ದಾಣ ನಗರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ತನಕ ಇದೆ.
ನೀಲಿ ಮಾರ್ಗ 2ಎ ನಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್,ಎಚ್.ಎಸ್.ಆರ್ ಲೇಔಟ್, ಅಗರ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ, ಕೋಡಿಬೀಸನಹಳ್ಳಿ,ಮಾರತಹಳ್ಳಿ, ಇಸ್ರೋ, ದೊಡ್ಡನೆಕುಂದಿ, ಡಿ.ಆರ್.ಡಿ.ಓ ಕ್ರೀಡಾ ಸಂಕೀರ್ಣ, ಸರಸ್ವತಿ ನಗರ, ಕೆ.ಆರ್. ಪುರ