ಬಳ್ಳಾರಿ SP ಪವನ್ ನಜ್ಜೂರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿಯೇ ಸುಳ್ಳಾಗಿದ್ದು ಅವರು ಸಂಪೂರ್ಣವಾಗಿ ಆರೋಗ್ಯದಿಂದ ಇದ್ದಾರೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದರು. ನನಗೆ ಗೊತ್ತಿರುವ ಹಾಗೆ ಅವರು ಆರಾಮಾಗಿದ್ದಾರೆ. ನಾನು ಅವರ ಜೊತೆ ಮಾತನಾಡಿಲ್ಲ. ಆದರೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರ ಪ್ರಕಾರ ಅಮಾನತು ಆಗಿರುವುದಕ್ಕೆ ಸಹಜವಾಗಿ ಸ್ವಲ್ಪ ಮಾನಸಿಕವಾಗಿ ಕುಗ್ಗಿದ್ದಾರಷ್ಟೇ ಎಂಬ ಮಾಹಿತಿಯಿದೆ. ಇದು ಸಹಜವಾಗಿ ನಡೆಯುವಂತದ್ದು. ಅದರಲ್ಲಿ ವಿಶೇಷ ಏನು ಇಲ್ಲ ಎಂದರು.
ಆತ್ಮ*ಹತ್ಯೆ ಯತ್ನ ವದಂತಿ:
ಈ ಮಧ್ಯೆ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಪವನ್ ನಜ್ಜೂರ್ ಅವರು ಅಮಾನತುಗೊಂಡ ಹಿನ್ನೆಲೆಯಲ್ಲಿ ಶಿರಾ ತಾಲೂಕು ಬರಗೂರಿನ ಸ್ನೇಹಿತರ ಫಾರಂ ಹೌಸ್‌ನಲ್ಲಿ ಮಾತ್ರೆ ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿದ್ದರು ಎಂಬ ವದಂತಿ ಹಬ್ಬಿತ್ತು. ಆದರೆ ಪೊಲೀಸರು ಈ ವಿಷಯವನ್ನು ದೃಢಪಡಿಸಿಲ್ಲ. ಪವನ್ ನಜ್ಜೂರ್ ಅವರ ತಂದೆ ತುಮಕೂರಿನಲ್ಲಿ ಆಹಾರ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕೆಲಸ ನಿರ್ವಹಿಸಿ ನಿವೃತ್ತಿಯಾಗಿದ್ದರು. ಹೀಗಾಗಿ ಅವರ ಕುಟುಂಬ ತುಮಕೂರಿನಲ್ಲಿ ನೆಲೆಸಿತ್ತು
11:38 PM (IST) Jan 04
ಅಮೆರಿಕ ಸೇನೆಯಿಂದ ಬಂಧಿತರಾಗಿರುವ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬದುಕಿನ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಬಸ್ ಡ್ರೈವರ್ ಆಗಿದ್ದ ಮಡುರೊ, ಆ.ಪ್ರ ಪುಟ್ಟಪರ್ತಿ ಸತ್ಯ ಸಾಯಿಬಾಬಾ ಅವರ ಕಟ್ಟಾ ಭಕ್ತರಾಗಿದ್ದರು ಮತ್ತು ತಮ್ಮ ಗುರುವಿನ ನಿಧನಕ್ಕೆ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದರು.
10:17 PM (IST) Jan 04
'ಲಕ್ಷ್ಮೀನಿವಾಸ' ಸೀರಿಯಲ್ ಖ್ಯಾತಿಯ ನಟಿ ದಿಶಾ ಮದನ್ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶಶಾಂಕ್ ವಾಸುಕಿ ಗೋಪಾಲ್ ಜೊತೆ ಶುರುವಾದ ಪ್ರೀತಿ, ಸುಲಭವಾಗಿ ಮದುವೆಯಾದ ಕಥೆಯನ್ನು ಹಂಚಿಕೊಂಡಿದ್ದಾರೆ.
10:14 PM (IST) Jan 04
ಜೆಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲೆಸೆತ, ಠಾಣೆ ಮುಂಭಾಗ ಜಮಾಯಿಸಿದ ಜನ, ಕಲ್ಲೆಸೆತ ಘಟನೆಯಲ್ಲಿ ಓಂ ಶಕ್ತಿ ಮಾಲಾಧಾರಿ ಮಗುವಿಗೆ ಗಾಯವಾಗಿದೆ. ಅನ್ಯಕೋಮಿನ ಗುಂಪಿನಿಂದ ಕಲ್ಲೆಸತವಾಗಿದೆ ಎಂಬ ಆರೋಪ ಕೇಳಿಬಂದದಿದೆ.
09:07 PM (IST) Jan 04
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಕುಟುಂಬದ ರಂಪಾಟಕ್ಕೆ 29ರ ಯುವಕ ಬಲಿಯಾಗಿದ್ದಾನೆ. ಅಪ್ಪ ಮಗ ಪದೇ ಪದೇ ಜಗಳವಾಡುತ್ತಿದ್ದ ಕಾರಣ ಕುಟುಂಬ ಮೂರು ದಿಕ್ಕಾಗಿತ್ತು. ಒಬ್ಬನೇ ಮಗ ಇದೀಗ ದುರಂತ ಅಂತ್ಯಕಂಡಿದ್ದಾನೆ.
08:05 PM (IST) Jan 04
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಸೇನೆ ಸೆರೆಹಿಡಿದಿದ್ದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ಲಾಘಿಸಿದ್ದಾರೆ. ಈ ಕ್ರಮವು ಇರಾನ್‌ಗೆ ಬಲವಾದ ಎಚ್ಚರಿಕೆ ಎಂದು ಅವರು ಬಣ್ಣಿಸಿದ್ದಾರೆ.
07:39 PM (IST) Jan 04
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು, ನರೇಗಾ ಯೋಜನೆ 'ವಿಬಿಜಿ ರಾಮ್ ಜಿ' ಎಂದು ಪರಿವರ್ತಿಸಿರುವುದರ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಹೇಳಿ ದಾರಿತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹೊಸ ಯೋಜನೆಯಡಿ ಉದ್ಯೋಗದ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
07:37 PM (IST) Jan 04
ಮದುವೆ ದೇಶದ ಒಳಗೆ ಅಥವಾ ಹೊರಗೆ ನಡೆದರೂ, ಅಥವಾ ವಧು-ವರರಲ್ಲಿ ಒಬ್ಬರು ವಿದೇಶಿಗರಾಗಿದ್ದರೂ, ಮದುವೆ ಒಪ್ಪಂದಕ್ಕೆ ಈ ವೈದ್ಯಕೀಯ ಪರೀಕ್ಷೆ ಮೂಲಭೂತ ನಿಯಮವಾಗಿರುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ವ್ಯವಸ್ಥೆಯನ್ನು ಮಾಡಿದೆ.
07:15 PM (IST) Jan 04
07:10 PM (IST) Jan 04
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ದುಷ್ಕರ್ಮಿಗಳು ರೈತರೊಬ್ಬರ ದನದ ಕೊಟ್ಟಿಗೆಗೆ ಬೆಂಕಿ ಹಚ್ಚಿದ್ದಾರೆ. ಈ ಅಮಾನವೀಯ ಘಟನೆಯಲ್ಲಿ ಕೊಟ್ಟಿಗೆ, ಮೇವು ಸಂಪೂರ್ಣ ಸುಟ್ಟುಹೋಗಿದ್ದು, ಒಂದು ಎತ್ತು ಗಂಭೀರವಾಗಿ ಗಾಯಗೊಂಡಿದೆ.
06:51 PM (IST) Jan 04
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕಾವಲವಾಡ ಬಳಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ 28 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟ್ರ್ಯಾಕ್ಟರ್ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ದುರ್ಘಟನೆಗೆ ಕಾರಣ ಎನ್ನಲಾಗಿದೆ.
06:36 PM (IST) Jan 04
ಉತ್ತರ ಕನ್ನಡದಲ್ಲಿ ವಿವಾಹ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಹತ್ಯೆಯಾದ ಮಹಿಳೆ ರಂಜಿತಾ ಬನ್ಸೋಡೆ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ, 5 ಲಕ್ಷ ರೂ. ಪರಿಹಾರ ನೀಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದರು,.
06:32 PM (IST) Jan 04
ನಟ ಝೈದ್ ಖಾನ್ ಕನ್ನಡ ಚಿತ್ರರಂಗದಲ್ಲಿನ 'ಥಿಯೇಟರ್ ಮಾಫಿಯಾ' ಪೈರಸಿಗಿಂತಲೂ ಅಪಾಯಕಾರಿ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೊದಲ ಚಿತ್ರಕ್ಕೆ ಸ್ಕ್ರೀನ್‌ಗಳ ಸಂಖ್ಯೆ ಕಡಿಮೆ ಮಾಡಿದ್ದನ್ನು ಉಲ್ಲೇಖಿಸಿ, ಹಣ ಮತ್ತು ಪ್ರಭಾವವಿದ್ದ ತಮಗೇ ಅನ್ಯಾಯವಾದರೆ ಹೊಸಬರ ಗತಿಯೇನು ಎಂದು ಪ್ರಶ್ನಿಸಿದ್ದಾರೆ.
06:00 PM (IST) Jan 04
05:46 PM (IST) Jan 04
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಳ್ಳಾರಿ ಕೊಲೆ ಪ್ರಕರಣದ ತನಿಖೆ, ಜನಾರ್ದನ ರೆಡ್ಡಿ ಭದ್ರತೆ, ವಾಲ್ಮೀಕಿ ಪ್ರತಿಮೆ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ. ರೆಡ್ಡಿ ಭದ್ರತೆ ಬಗ್ಗೆ ವ್ಯಂಗ್ಯವಾಡಿದ ಅವರು, ಬಳ್ಳಾರಿ ಪ್ರಕರಣದ ತನಿಖೆ ಅಂತಿಮ ತೀರ್ಮಾನ ಸಿಎಂ, ಗೃಹ ಸಚಿವರು ನೋಡ್ಕೊಳ್ತಾರೆ ಎಂದರು.
05:22 PM (IST) Jan 04
05:13 PM (IST) Jan 04
ದಕ್ಷಿಣ ಕನ್ನಡದ ಸುಳ್ಯದ 14 ವರ್ಷದ ಬಾಲಕ ಜಸ್ವಿತ್, ತನ್ನ ನಿರರ್ಗಳ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಕ್ರಿಕೆಟ್ ಕಾಮೆಂಟರಿಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾನೆ. ಸ್ಥಳೀಯ ಟೂರ್ನಿಯೊಂದರಲ್ಲಿ ಆತ ವೀಕ್ಷಕ ವಿವರಣೆ ನೀಡುತ್ತಿರುವ ವೀಡಿಯೋ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
05:02 PM (IST) Jan 04
ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು, ಕಾಂಗ್ರೆಸ್ ಸರ್ಕಾರವು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ, ಚಿಕ್ಕಲ್ಲೂರು ಸಿದ್ದಪ್ಪಾಜಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
04:48 PM (IST) Jan 04
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಮತ್ತು ಗುಂಡಿನ ಚಕಮಕಿಯು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಮುಗಿಸಲು ನಡೆದ ಸಂಚು ಎಂದು ವಿಪಕ್ಷ ನಾಯಕ ಆರ್. ಅಶೋಕ ಗಂಭೀರವಾಗಿ ಆರೋಪಿಸಿದ್ದಾರೆ. ಸರ್ಕಾರದ ವೈಫಲ್ಯ, ಪೊಲೀಸ್ ಇಲಾಖೆಯ ದುರ್ಬಳಕೆ ಮತ್ತು ಎಸ್‌ಪಿ ಅಮಾನತನ್ನು ಖಂಡಿಸಿದರು.
04:31 PM (IST) Jan 04
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಕ್ಯಾಪ್ಟನ್ ಆಗಿದ್ದರು. ಆಗ ಅವರು ಕಾವ್ಯ ಶೈವ ಪರವಾಗಿ ನಿರ್ಧಾರಗಳನ್ನು ತಗೊಂಡಿದ್ದಾರೆ. ಈಗ ಸ್ಪರ್ಧಿಗಳ ಆರೋಪ ನಿಜ ಎಂಬಂತಾಗಿದೆ. ಹಾಗಾದರೆ ಏನಾಯ್ತು?
04:31 PM (IST) Jan 04
04:14 PM (IST) Jan 04
Love Mocktail Kannada Movie Release Date: ನಟನಾಗಿದ್ದ ಡಾರ್ಲಿಂಗ್ ಕೃಷ್ಣ ‘ಲವ್ ಮಾಕ್ಟೇಲ್ʼ ಸಿನಿಮಾ ನಿರ್ದೇಶನ ಮಾಡುವ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದರು. ಅದಾದ ನಂತರ ಬಂದಿದ್ದ ಸೀಕ್ವೆಲ್ ಕೂಡ ಬಂದಿತ್ತು.
03:55 PM (IST) Jan 04
Celebrity Divorce India: ವರ್ಷಗಳ ಹಿಂದೆ ಕಿರುತೆರೆಯ ನಟಿ ಮಾಹಿ ವಿಜ್ ಮತ್ತು ನಿರೂಪಕ ಜೈ ಭಾನುಶಾಲಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಇಬ್ಬರೂ ತಮ್ಮ 15 ವರ್ಷಗಳ ದಾಂಪತ್ಯವನ್ನು ಈಗ ಮುರಿದುಕೊಂಡಿದ್ದಾರೆ. ಈ ಜೋಡಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
03:39 PM (IST) Jan 04
ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ, ನಿಧಿಯ ಆಸೆಗಾಗಿ ದತ್ತು ಪಡೆದ ಎಂಟು ತಿಂಗಳ ಹಸುಗೂಸನ್ನು ಬಲಿ ಕೊಡಲು ಯತ್ನಿಸಿದ ಘಟನೆ ವರದಿಯಾಗಿದೆ. ಮಕ್ಕಳ ಸಹಾಯವಾಣಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
03:28 PM (IST) Jan 04
Bigg Boss Kannada Season 12: ವೀಕೆಂಡ್ ಎಪಿಸೋಡ್‌ನ ಸೂಪರ್ ಸಂಡೇ ವಿಥ್ ಸುದೀಪ ಶೋನಲ್ಲಿ ಏನು ಹೇಳಬೇಕೋ ಅದನ್ನು ಮುಖಕ್ಕೆ ಹೊಡೆದಂತೆ ಹೇಳಬೇಕು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಆಗ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಅವರು ಕೆರಳಿದ್ದಾರೆ. ಹಾಗಾದರೆ ಏನು ಕಾರಣ ಕೊಟ್ಟರು?
03:11 PM (IST) Jan 04
ನನ್ನ ಬಳಿ ಎಲ್ಲಾ ದಾಖಲೆ ಇದೆ , ಅಕ್ರಮ ಒತ್ತುವರಿ ಪ್ರಕರಣ ಕುರಿತು ಯಶ್ ತಾಯಿ ಪುಷ್ಪಾ ತಿರುಗೇಟು ನೀಡಿದ್ದಾರೆ. ಪುಷ್ಪಾ ಹಾಸನದಲ್ಲಿ ಅಕ್ರಮ ಜಾಗ ಒತ್ತುವರಿ ಮಾಡಿ ಕೌಂಪೌಂಡ್ ಕಟ್ಟಿದ್ದಾರೆ ಎಂದು ಆರೋಪಿಸಿ ಕೌಂಪೌಂಡ್ ಧ್ವಂಸಗೊಳಿಸಿದ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ.
02:36 PM (IST) Jan 04
BBK 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಪೇರೆಂಟ್ಸ್ ರೌಂಡ್ ಇತ್ತು. ಆಗ ಕಾವ್ಯ ಶೈವ ಮನೆಯವರು ಬಂದು ಮಾತನಾಡಿದ್ದು ದೊಡ್ಡ ಎಡವಟ್ಟಾಗಿತ್ತು. ಹೊರಗಡೆ ಏನಾಗ್ತಿದೆ ಎಂದು ಅವರು ಹೇಳಿದ್ದರು. ಈ ಬಗ್ಗೆ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ.
02:32 PM (IST) Jan 04
ದೆಹಲಿಯ ಭಕ್ತರೊಬ್ಬರು 2 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿದ, 700 ಶ್ಲೋಕಗಳಿರುವ ಚಿನ್ನದ ಭಗವದ್ಗೀತೆಯನ್ನು ಉಡುಪಿ ಶ್ರೀಕೃಷ್ಣನಿಗೆ ಅರ್ಪಿಸಲಿದ್ದಾರೆ. ಪಲಿಮಾರು ಮಠದ ವಿಶ್ವಗೀತಾ ಪರ್ಯಾಯದ ಸಮಾರೋಪ ಅಂಗವಾಗಿ ಜನವರಿ 8 ರಂದು ಈ ಸ್ವರ್ಣ ಗೀತೆಯನ್ನು ಚಿನ್ನದ ರಥದಲ್ಲಿ ಮೆರವಣಿಗೆ ಮಾಡಿ ಸಮರ್ಪಿಸಲಾಗುವುದು.
01:21 PM (IST) Jan 04
ಬಿಗ್‌ಬಾಸ್ 12 ಫಿನಾಲೆ ಸಮೀಪಿಸುತ್ತಿದ್ದಂತೆ, ಸ್ಪರ್ಧಿಗಳ ಪರ ಪ್ರಚಾರ ಜೋರಾಗಿದೆ. ಈ ನಡುವೆ, ನಾಲ್ವರು ಯುವಕರು ತಮ್ಮ ನೆಚ್ಚಿನ ಸ್ಪರ್ಧಿಗಳಾದ ಅಶ್ವಿನಿ, ರಕ್ಷಿತಾ, ಕಾವ್ಯಾ ಮತ್ತು ಗಿಲ್ಲಿ ಗೆಲ್ಲಬೇಕೆಂದು ಕೊಳಕ್ಕೆ ಹಾರುವ ಮೂಲಕ ವಿಭಿನ್ನವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
01:12 PM (IST) Jan 04
ಭಕ್ತಿ ಪರವಶತೆಯಿದ್ದಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ಆಗುವುದು. ಅಂತೆಯೇ ಕಿರುತೆರೆ ನಟಿಯೋರ್ವರಿಗೆ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಆವೇಶ ಬಂದಿದೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
12:54 PM (IST) Jan 04
ಬಿಗ್‌ಬಾಸ್ ಸೀಸನ್ 12ರ ಪ್ರೋಮೋದಲ್ಲಿ ನಿರೂಪಕ ಸುದೀಪ್, ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಒಂದು ಪದ ಬಳಸಿದ್ದಾರೆ. ಈ ಪದ ಬಳಕೆಯು ವೀಕ್ಷಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಸುದೀಪ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
12:45 PM (IST) Jan 04
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪವನ್ ನೆಜ್ಜೂರು ಆತ್ಮ*ಹತ್ಯೆ ಯತ್ನ ಮಾಡಿಲ್ಲವೆಂದು ಅವರ ತಂದೆ ಉದಯಶಂಕರ್ ನೆಜ್ಜೂರು ಸ್ಪಷ್ಟಪಡಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ನಡೆದ ಗಲಭೆ ಮತ್ತು ಅನಿರೀಕ್ಷಿತ ಅಮಾನತಿನಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.
12:34 PM (IST) Jan 04
Producer Pushpa Arunkumar: ಹಾಸನದಲ್ಲಿ ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ, ವಿತರಕಿ ಪುಷ್ಪ ಅರುಣ್‌ಕುಮಾರ್ ಮನೆಯಿದೆ. ಆ ಮನೆ ಸಮೀಪವಿರುವ 5 ಗುಂಟೆ ಜಾಗವನ್ನು ಪುಷ್ಪ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಕಟ್ಟಿದ್ದಾರೆ ಎಂದು ಜೆಸಿಬಿ ತಂದು ಕೆಡವಲಾಗಿದೆ. ಈ ಬಗ್ಗೆ ಪುಷ್ಪ ವಕೀಲರು ಮಾತನಾಡಿದ್ದಾರೆ.
12:18 PM (IST) Jan 04
ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಎದುರು ನಡೆದ ಗುಂಡಿನ ಚಕಮಕಿ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಸತೀಶ್ ರೆಡ್ಡಿ ಜೊತೆಗಿದ್ದ ಪಂಜಾಬ್ ಮೂಲದ ಇಬ್ಬರು ಗನ್‌ಮ್ಯಾನ್‌ಗಳೇ ಗುಂಡು ಹಾರಿಸಿದ್ದು, ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
12:08 PM (IST) Jan 04
12:02 PM (IST) Jan 04
11:50 AM (IST) Jan 04
11:09 AM (IST) Jan 04
11:06 AM (IST) Jan 04
Actress Niveditha Gowda: ಬಿಗ್ ಬಾಸ್ ಕನ್ನಡ ಸೀಸನ್ 5 ಸ್ಪರ್ಧಿ ನಿವೇದಿತಾ ಗೌಡ ಅವರು ರಿಯಾಲಿಟಿ ಶೋ, ಸಿನಿಮಾದಲ್ಲಿ ನಟಿಸಿದ ಬಳಿಕ ಈಗ ಹೊಸ ಜೀವನ ಶುರು ಮಾಡುವ ನಿರ್ಧಾರ ಮಾಡಿದ್ದಾರೆ. ಹಾಗಿದ್ದರೆ ನಿವೇದಿತಾ ಗೌಡ ಏನು ನಿರ್ಧಾರ ಮಾಡಿದ್ದಾರೆ. ಏನದು?
10:43 AM (IST) Jan 04
Bigg Boss: ಬಿಗ್ ಬಾಸ್ ಶೋನಲ್ಲಿ ಇಬ್ಬರು ಸ್ಪರ್ಧಿಗಳಿಗೆ ಏಕಕಾಲಕ್ಕೆ ರೆಡ್ ಕಾರ್ಡ್ ನೀಡಲಾಗಿದೆ. ಐಪಿಎಲ್ ಗೆದ್ದಷ್ಟು ವೀಕ್ಷಕರು ಖುಷಿಪಟ್ಟಿದ್ದಾರೆ. ಹಾಗಾದರೆ ಆ ರೆಡ್ ಕಾರ್ಡ್ ಅರ್ಥ ಏನು? ಇದು ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ಘಟನೆ ಆಗಿದೆ.
10:31 AM (IST) Jan 04
ಉಡುಪಿ ಪರ್ಯಾಯೋತ್ಸವಕ್ಕೆ ಮುಸ್ಲಿಂ ಸೌಹಾರ್ದ ಸಮಿತಿಯು ಹೊರೆಕಾಣಿಕೆ ನೀಡುವುದಾಗಿ ಪ್ರಕಟಿಸಿದೆ. ಆದರೆ, ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಯಶ್ಪಾಲ್ ಸುವರ್ಣ ಇದಕ್ಕೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.