- Home
- Entertainment
- Sandalwood
- Producer Pushpa Arunkumar ಹಾಸನ ಮನೆ ಕಾಂಪೌಂಡ್ ನಾಶ; ಆರೋಪಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಲಾಯರ್
Producer Pushpa Arunkumar ಹಾಸನ ಮನೆ ಕಾಂಪೌಂಡ್ ನಾಶ; ಆರೋಪಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಲಾಯರ್
Producer Pushpa Arunkumar: ಹಾಸನದಲ್ಲಿ ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ, ವಿತರಕಿ ಪುಷ್ಪ ಅರುಣ್‌ಕುಮಾರ್ ಮನೆಯಿದೆ. ಆ ಮನೆ ಸಮೀಪವಿರುವ 5 ಗುಂಟೆ ಜಾಗವನ್ನು ಪುಷ್ಪ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಕಟ್ಟಿದ್ದಾರೆ ಎಂದು ಜೆಸಿಬಿ ತಂದು ಕೆಡವಲಾಗಿದೆ. ಈ ಬಗ್ಗೆ ಪುಷ್ಪ ವಕೀಲರು ಮಾತನಾಡಿದ್ದಾರೆ.

ಕಾಂಪೌಂಡ್ ಒಡೆದವರು ಏನಂದ್ರು?
ಲಕ್ಷ್ಮಮ್ಮ ಅವರು ಈ ಆಸ್ತಿಯ ಮಾಲೀಕರು. ಅವರಿಗೆ ವಯಸ್ಸಾಗಿರೋದರಿಂದ ನನ್ನನ್ನು ಜೆಪಿಎ ಹೋಲ್ಡರ್ ಮಾಡಿದ್ದರು. ಈ ಕಾಂಪೌಂಡ್ ಮಾಡುವಾಗಲೂ ನಾನು ತಡೆದಿದ್ದೆ. ಕೋರ್ಟ್ ಆದೇಶ ತಗೊಂಡು ಬನ್ನಿ ಎಂದು ಪುಷ್ಪ ಅವರು ಹೇಳಿದ್ದರು. 2020ರಿಂದ ನಾನು ಕೋರ್ಟ್‌ನಲ್ಲಿ ಪ್ರತಿ ಬಾರಿ ಎಲ್ಲ ವಾದ-ಪ್ರತಿವಾದಕ್ಕೆ ಹೋಗಿದ್ದೇನೆ, ಆದರೆ ಪುಷ್ಪ ಅವರು ಬರಲಿಲ್ಲ. ಪುಷ್ಪ ಅವರಿಗೆ ವಾಟ್ಸಪ್‌ನಲ್ಲಿ ಎಲ್ಲ ದಾಖಲಾತಿ ಕಳಿಸಿದರೂ ಕೂಡ ಯಾವುದೇ ಉತ್ತರ ಕೊಡಲಿಲ್ಲ ಎಂದು ದೇವರಾಜು ಎನ್ನುವವರು ಹೇಳಿದ್ದಾರೆ.
ಕೂತು ಬಗೆಹರಿಸಿಕೊಳ್ಳಲಿಲ್ಲ
ಮಾನವೀಯತೆ ದೃಷ್ಟಿಯಿಂದ ಕೂತು ಬಗೆಹರಿಸಿಕೊಳ್ಳೋಣ ಎಂದು ವಕೀಲರ ಆಫೀಸ್‌ಗೆ ಕರೆದರೂ ಕೂಡ ಪುಷ್ಪ ಅವರು ಬರಲಿಲ್ಲ. ನಮಗೆ ಸೇರಬೇಕಾದ ಜಾಗ, ನಮಗೆ ಸಿಗಬೇಕು ಎಂದು ದೇವರಾಜು ಹೇಳಿದ್ದಾರೆ.
ಪುಷ್ಪ ಪರ ವಕೀಲರು ಏನಂದ್ರು?
ಹಾಸನದಲ್ಲಿ ಪುಷ್ಪ ಅರುಣ್‌ಕುಮಾರ್ ಅವರ ಮನೆ ಇದೆ. ಮನೆಯ ಸಮೀಪವಿರುವ ಐದು ಗಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪ ಮಾಡಿದ್ದಲ್ಲದೆ, ಕೋರ್ಟ್ ಆದೇಶವಿದೆ ಎಂದು ಹೇಳಿ ಜೆಸಿಬಿ ತಂದು ಕಾಂಪೌಂಡ್ ಒಡೆಯಲಾಗಿದೆ. ಪುಷ್ಪ ಹಾಗೂ ಅರುಣ್ ಕುಮಾರ್ ದಂಪತಿ ಇಲ್ಲಿಯೇ ವಾಸ ಮಾಡುತ್ತಾರೆ ಪುಷ್ಪ ಪರ ವಕೀಲರು ಹೇಳಿದ್ದಾರೆ.
ನೋಟೀಸ್ ನೀಡಿಲ್ಲ
“ಸಂಪೂರ್ಣ ದಾಖಲಾತಿಗಳನ್ನು ಪರಿಶೀಲನೆ ಮಾಡಿದ ಬಳಿಕ ಪುಷ್ಪ ಅರುಣ್‌ಕುಮಾರ್ ಅವರು ಆಸ್ತಿಯನ್ನು ಖರೀದಿ ಮಾಡಿದ್ದಾರೆ. ಪುಷ್ಪ ಅವರಿಗೆ ಆಸ್ತಿ ಸ್ವಾಧೀನದಲ್ಲಿದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ, ಅವರು ವಕಾಲತ್ತು ಹಾಕಿದ್ದಾರೆ. ಯಾವುದೆ ನೋಟಿಸ್ ನೀಡದೆ, ಜೆಸಿಬಿ ತಂದು ಕಾಂಪೌಂಡ್ ತೆರವು ಮಾಡಿದ್ದಾರೆ” ಎಂದು ಪುಷ್ಪ ಪರ ವಕೀಲರು ಹೇಳಿದ್ದಾರೆ.
ಸುಳ್ಳು ಮಾಹಿತಿ ಕೊಟ್ಟರು
“ದಾಖಲಾತಿಗಳನ್ನು ಪರಿಶೀಲನೆ ಮಾಡಿದಾಗ ಎಲ್ಲವೂ ಸರಿಯಾಗಿದೆ. ಕಾನೂನು ಆದೇಶವಿಲ್ಲದೆ ಕಾಂಪೌಂಡ್ ಒಡೆದಿದ್ದಾರೆ. ಈ ಆಸ್ತಿ ಲಕ್ಷ್ಮಮ್ಮ ಅವರಿಗೆ ಸೇರಿದ್ದು, ನಾನು ಜೆಪಿಎ ಹೋಲ್ಡರ್ ಆಗಿದ್ದೇನೆ. ಸುಳ್ಳು ಮಾಹಿತಿ ನೀಡಿ, ಕಾಂಪೌಂಡ್ ಒಡೆಯಲಾಗಿದೆ ಎಂದು ಪುಷ್ಪ ಪರ ವಕೀಲರು ಹೇಳಿದ್ದಾರೆ.
ಆ ಜಾಗ ಬೇರೆ
1965ನೇ ಇಸವಿಯಲ್ಲಿ ಯಾವುದೋ ಜಾಗವನ್ನು ಪಡೆದುಕೊಂಡಿದ್ದಾರೆ, ನಮ್ಮ ಜಾಗಕ್ಕೆ ಯಾವುದೇ ತೊಂದರೆ ಆಗಬಾರದು ಎಂದು ಕೋರ್ಟ್‌ನಲ್ಲಿ ಹೇಳಿದ್ದಾರೆ. ಆ ಆದೇಶ ಇಟ್ಟುಕೊಂಡು ಇದು ನಮ್ಮ ಜಾಗ ಎಂದು ಹೇಳುತ್ತಿದ್ದಾರೆ. ನಮ್ಮ ಜಾಗದಲ್ಲಿ ಬೇರೆಯವರ ಅಧಿಕಾರ ಸ್ವಾಧೀನ ಇದ್ದರೆ, ಕಾನೂನಿನ ಗಮನಕ್ಕೆ ತಂದು ನೋಟೀಸ್ ನೀಡಬೇಕು. ಆ ಜಾಗವೇ ಬೇರೆ, ಈ ಜಾಗವೇ ಬೇರೆ ಪುಷ್ಪ ಪರ ವಕೀಲರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

