- Home
- Entertainment
- TV Talk
- Bigg Bossನಲ್ಲಿ ಇವರೇ ಗೆಲ್ಲಬೇಕೆಂದು ನೀರಿಗೆ ಹಾರಿದ ಯುವ ಅಭಿಮಾನಿಗಳು! ಮುಂದೇನಾಯ್ತು ನೋಡಿ
Bigg Bossನಲ್ಲಿ ಇವರೇ ಗೆಲ್ಲಬೇಕೆಂದು ನೀರಿಗೆ ಹಾರಿದ ಯುವ ಅಭಿಮಾನಿಗಳು! ಮುಂದೇನಾಯ್ತು ನೋಡಿ
ಬಿಗ್‌ಬಾಸ್ 12 ಫಿನಾಲೆ ಸಮೀಪಿಸುತ್ತಿದ್ದಂತೆ, ಸ್ಪರ್ಧಿಗಳ ಪರ ಪ್ರಚಾರ ಜೋರಾಗಿದೆ. ಈ ನಡುವೆ, ನಾಲ್ವರು ಯುವಕರು ತಮ್ಮ ನೆಚ್ಚಿನ ಸ್ಪರ್ಧಿಗಳಾದ ಅಶ್ವಿನಿ, ರಕ್ಷಿತಾ, ಕಾವ್ಯಾ ಮತ್ತು ಗಿಲ್ಲಿ ಗೆಲ್ಲಬೇಕೆಂದು ಕೊಳಕ್ಕೆ ಹಾರುವ ಮೂಲಕ ವಿಭಿನ್ನವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಫಿನಾಲೆಗೆ ದಿನ ಗಣನೆ...
ಬಿಗ್‌ಬಾಸ್ 12 (Bigg Boss 12)ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇದಾಗಲೇ ತಾವು ಬಿಗ್‌ಬಾಸ್ ವಿನ್ ಆಗಬೇಕು ಎನ್ನುವ ಕಾರಣಕ್ಕೆ ಒಳಗಿರುವ ಸ್ಪರ್ಧಿಗಳು ಭಾರಿ ಪೈಪೋಟಿ ನಡೆಸುತ್ತಿದ್ದರೆ, ಹೊರಗಿರುವ ಅವರ ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ಸ್ಪರ್ಧಿ ಗೆಲ್ಲಬೇಕು ಎನ್ನುವ ಕಾರಣಕ್ಕೆ ಅವರ ಪರವಾಗಿ ಪ್ರಮೋಷನ್ ಮಾಡುತ್ತಲೇ ಇದ್ದಾರೆ.
ಪ್ರಚಾರದ ಸುರಿಮಳೆ
ಸ್ಪರ್ಧಿಗಳ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ನಿರ್ವಹಿಸುತ್ತಿರುವವರು ಆ ಸ್ಪರ್ಧಿಗಳ ಬಗ್ಗೆ ಪ್ರಚಾರ ಮಾಡ್ತಿರೋದು ಒಂದೆಡೆಯಾದರೆ, ಪಿಆರ್ ಟೀಮ್ಗಳೂ ಮತ್ತೊಂದೆಡೆ ಬಹು ಜೋಶ್ನಿಂದ ಕಾರ್ಯಾಚರಣೆ ನಡೆಸುತ್ತಿವೆ.
ಅಭಿಮಾನಿಗಳ ಹಾರೈಕೆ
ಇವೆಲ್ಲಕ್ಕೂ ಹೊರತಾಗಿ ಹಲವು ವೀಕ್ಷಕರು ತಮ್ಮ ಊರಿನವರು ಎಂತಲೋ, ತಮ್ಮ ಜಾತಿಯವರು ಎಂತಲೂ ಅಥವಾ ಆಟ ಚೆನ್ನಾಗಿ ಆಡುತ್ತಿದ್ದಾರೆ ಎಂತಲೋ, ಅವರು ಒಳ್ಳೆಯ ಸ್ವಭಾವದವರು ಎಂತಲೋ, ಅವರ ಹಿನ್ನೆಲೆ ನೋಡಿಯೋ... ಹೀಗೆ ಇಂಥವರೇ ಗೆಲ್ಲಬೇಕು ಎಂದು ತಮಗೆ ಅನ್ನಿಸಿದ ರೀತಿಯಲ್ಲಿ ಪ್ರಚಾರ ಮಾಡ್ತಿದ್ದಾರೆ.
ವಿಭಿನ್ನ ಪ್ರಚಾರ
ಆದರೆ ಇವೆಲ್ಲಕ್ಕೂ ವಿಭಿನ್ನವಾಗಿ ನಾಲ್ವರು ಯುವಕರು, ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳು ಗೆಲ್ಲಬೇಕು ಎಂದು ಕೊಳಕ್ಕೆ ಹಾರಿದ್ದಾರೆ! ಹಾಗೆಂದು ಇವರೇನು ಸೀರಿಯಸ್ ಆಗಿ ನೀರಿಗೆ ಬೀಳಲಿಲ್ಲ. ಬದಲಿಗೆ ಅಲ್ಲಿರುವ ಕೊಳಕ್ಕೆ ಜಿಗಿದು ತಮಾಷೆಯ ವಿಡಿಯೋ ಮಾಡಿದ್ದಾರೆ ಅಷ್ಟೇ.
ನಾಲ್ವರ ಫ್ಯಾನ್ಸ್
ಆ್ಯಂಕರ್ ದರ್ಶ್ಶೆಟ್ಟಿ ಎನ್ನುವವರು ಈ ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ನಾಲ್ವರು ಅಭಿಮಾನಿಗಳನ್ನು ನೋಡಬಹುದಾಗಿದೆ. ಹಾಗೆಂದು ಇವರು ನಾಲ್ವರೂ ಒಬ್ಬರದ್ದೇ ಪರವಾಗಿ ಪ್ರಚಾರ ಮಾಡ್ತಿಲ್ಲ. ಬದಲಾಗಿ ನಾಲ್ವರೂ ತಮ್ಮ ನೆಚ್ಚಿನ ನಾಲ್ಕು ಸ್ಪರ್ಧಿಗಳ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ.
ಅವರಿಗಾಗಿ ನೀರಿಗೆ ಹಾರ್ತೇವೆ
ಮೊದಲ ಯುವಕ, ಅಶ್ವಿನಿ ಮೇಡಂ ಈ ಬಾರಿ ಗೆಲ್ಲಬೇಕು, ಅವರಿಗಾಗಿ ನೀರಿಗೆ ಹಾರುತ್ತಿದ್ದೇವೆ ಎಂದರೆ, ಎರಡನೆಯ ಯುವಕ ನಮ್ಮ ತುಳುನಾಡಿನ ಕುವರಿ ರಕ್ಷಿತಾ ಶೆಟ್ಟಿ ಗೆದ್ದು ಬರಲಿ ಜೈ ರಕ್ಷಿತಾ ಶೆಟ್ಟಿ ಎಂದು ನೀರಿಗೆ ಹಾರಿದ್ದಾರೆ!
ಕಾವ್ಯಾ, ಗಿಲ್ಲಿಗೆ ಸಪೋರ್ಟ್
ಈ ಸಲ ಇವರು ಯಾರೂ ಗೆಲ್ಲಲ್ಲ. ಗೆಲ್ಲುವುದು ಕಾವ್ಯಾ ಎಂದು ಮೂರನೆಯ ಯುವಕ ಕಾವ್ಯಾ ಶೈವ (Bigg Boss Kavya Shaiva) ಅವರಿಗೆ ಸಪೋರ್ಟ್ ಮಾಡಿ ಎಂದು ಕೊಳಕ್ಕೆ ಹಾರಿದರೆ, ನಾಲ್ಕನೆಯ ಯುವಕ ಮಂಡ್ಯದ ಗತ್ತು, ಎಲ್ಲರಿಗೂ ಗೊತ್ತು ಎನ್ನೋ ಹಾಗೆ ಈ ಬಾರಿ ಬಿಗ್‌ಬಾಸ್ ವಿನ್ ಆಗುವುದು ಗಿಲ್ಲಿನೇ ಎಂದು ಕೊಳಕ್ಕೆ ಜಿಗಿದಿದ್ದಾರೆ! ಬಳಿಕ ನಾಲ್ವರೂ ಅಲ್ಲಿಂದ ಎದ್ದುಬಂದು ಬಿಗ್‌ಬಾಸ್ ಸ್ಪರ್ಧಿಗಳಿಗೆ ವಿಷ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

