ಹೊಸ ಜೀವನ ಶುರು ಮಾಡಿದ 'ಬಿಗ್ ಬಾಸ್' Niveditha Gowda; ಈಗ ಎಲ್ಲವೂ ಮೊದಲಿನಂತಿಲ್ಲ!
Actress Niveditha Gowda: ಬಿಗ್ ಬಾಸ್ ಕನ್ನಡ ಸೀಸನ್ 5 ಸ್ಪರ್ಧಿ ನಿವೇದಿತಾ ಗೌಡ ಅವರು ರಿಯಾಲಿಟಿ ಶೋ, ಸಿನಿಮಾದಲ್ಲಿ ನಟಿಸಿದ ಬಳಿಕ ಈಗ ಹೊಸ ಜೀವನ ಶುರು ಮಾಡುವ ನಿರ್ಧಾರ ಮಾಡಿದ್ದಾರೆ. ಹಾಗಿದ್ದರೆ ನಿವೇದಿತಾ ಗೌಡ ಏನು ನಿರ್ಧಾರ ಮಾಡಿದ್ದಾರೆ. ಏನದು?

ಯುಟ್ಯೂಬ್ ಚಾನೆಲ್ ಡಿಲಿಟ್
ನಿವೇದಿತಾ ಗೌಡ ಅವರಿಗೆ ಮುಂಚೆಯೇ ಒಂದು ಯುಟ್ಯೂಬ್ ಚಾನೆಲ್ ಇತ್ತು. 4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದರು. ಆ ಯುಟ್ಯೂಬ್ ಚಾನೆಲ್‌ನ್ನು ಅವರು ಡಿಲಿಟ್ ಮಾಡಿದ್ದಾರೆ. ಇದಕ್ಕೂ ಕಾರಣ ಇದೆಯಂತೆ.
ಹೊಸ ಚಾನೆಲ್ ಆರಂಭ
ನಿವೇದಿತಾ ಗೌಡ ಅವರಿಗೆ ಹಳೆಯ ಚಾನೆಲ್ ಇಷ್ಟ ಇರಲಿಲ್ಲವಂತೆ. ಮನಸ್ಸು ತುಂಬ ಭಾರವಾಗಿತ್ತಂತೆ. ಹೀಗಾಗಿ ಅವರು ಹೊಸ ಚಾನೆಲ್ ಶುರು ಮಾಡುವ ನಿರ್ಧಾರ ಮಾಡಿದ್ದರು.
ವಿಡಿಯೋ ಅಪ್‌ಲೋಡ್ ಮಾಡ್ತಿಲ್ಲ
ಹೊಸದಾಗಿ ಏನಾದರೂ ಮಾಡೋಣ ಎಂದು ಅವರೇ ಹೇಳಿದ್ದಾರೆ. ಸಾಕಷ್ಟು ಜನರು ಯುಟ್ಯೂಬ್ ವಿಡಿಯೋಗಳನ್ನು ಮಾಡಿ ಎಂದರೂ ಕೂಡ, ನಿವೇದಿತಾ ಅವರಿಗೆ ಆಗುತ್ತಿರಲಿಲ್ಲ. ಟ್ರಾವೆಲ್ ಮಾಡಿ, ಬ್ರೇಕ್ ತಗೊಂಡು ವಿಡಿಯೋ ಅಪ್‌ಲೋಡ್ ಮಾಡೋಣ ಎಂದುಕೊಂಡರೂ ಕೂಡ ಆಗುತ್ತಿರಲಿಲ್ಲವಂತೆ.
ಎಲ್ಲವೂ ನಾನೇ ಮಾಡಿದೆ
ಇಷ್ಟುದಿನಗಳ ಕಾಲ ವಿಡಿಯೋವನ್ನು, ಯುಟ್ಯೂಬ್ ಚಾನೆಲ್‌ನ್ನು ಬೇರೆ ಟೀಂ ನೋಡಿಕೊಳ್ಳುತ್ತಿತ್ತು. ಈಗ ನಾನೇ ಸ್ವಂತವಾಗಿ ಚಾನೆಲ್ ಲೋಗೋವನ್ನು ಮಾಡಿದ್ದೇನೆ, ಇದು ಖುಷಿಕೊಟ್ಟಿದೆ ಎಂದು ಹೇಳಿದ್ದಾರೆ.
ಹೊಸ ಚಾನೆಲ್‌ನಲ್ಲಿ ಏನಿರುತ್ತದೆ?
ಈ ಚಾನೆಲ್‌ನಲ್ಲಿ ಮೇಕಪ್, ಬ್ಯೂಟಿ ಪ್ರೊಡಕ್ಟ್ ಬಗ್ಗೆ ಹೇಳ್ತೀನಿ, ನಾನು ಅಡುಗೆ ವಿಡಿಯೋಗಳನ್ನು ಶೇರ್ ಮಾಡಿಕೊಳ್ತೀನಿ, ಅಡುಗೆ ತಿಂದರೆ ನಿಜಕ್ಕೂ ನೀವು ಖುಷಿಯಾಗ್ತೀರಾ, ನೀವು ಮನೆಯಲ್ಲಿ ಅಡುಗೆ ಟ್ರೈ ಮಾಡಬಹುದು ಎಂದು ನಿವೇದಿತಾ ಗೌಡ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

