- Home
- Entertainment
- Cine World
- ಮಕ್ಕಳಾಗದಿದ್ದಾಗಲೂ ಜೊತೆಗಿದ್ರು, ಮಗು ಆದ್ಮೇಲೆ ದೂರವಾದ್ರು: ಖ್ಯಾತ ನಟಿಯ 14 ವರ್ಷದ ಮದುವೆ ಅಂತ್ಯ!
ಮಕ್ಕಳಾಗದಿದ್ದಾಗಲೂ ಜೊತೆಗಿದ್ರು, ಮಗು ಆದ್ಮೇಲೆ ದೂರವಾದ್ರು: ಖ್ಯಾತ ನಟಿಯ 14 ವರ್ಷದ ಮದುವೆ ಅಂತ್ಯ!
Celebrity Divorce India: ವರ್ಷಗಳ ಹಿಂದೆ ಕಿರುತೆರೆಯ ನಟಿ ಮಾಹಿ ವಿಜ್ ಮತ್ತು ನಿರೂಪಕ ಜೈ ಭಾನುಶಾಲಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಇಬ್ಬರೂ ತಮ್ಮ 14 ವರ್ಷಗಳ ದಾಂಪತ್ಯವನ್ನು ಈಗ ಮುರಿದುಕೊಂಡಿದ್ದಾರೆ. ಈ ಜೋಡಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಧಿಕೃತ ಹೇಳಿಕೆ ಕೊಟ್ಟ ತಾರಾ ದಂಪತಿ
ನಟಿ ಮಾಹಿ ವಿಜ್ ಮತ್ತು ಜೈ ಭಾನುಶಾಲಿ ಅವರೇ ಈ ವಿಷಯವನ್ನು ಅಧಿಕೃತಪಡಿಸಿದ್ದಾರೆ. ಇಬ್ಬರ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಜೋಡಿ ಬೇರೆಯಾಗುವ ಬಗ್ಗೆ ಹೇಳಿದ್ದಾರೆ.
ಹೋದ ವರ್ಷದಿಂದಲೂ ಸುದ್ದಿ
ಮಾಹಿ ಮತ್ತು ಜೈ ತಮ್ಮ ಮದುವೆ ಬಗ್ಗೆ ಬಹಳ ದಿನಗಳಿಂದ ಸುದ್ದಿಯಲ್ಲಿದ್ದರು. ಕಳೆದ ವರ್ಷ ವಿಚ್ಛೇದನದ ವದಂತಿ ಬಂದಾಗ, ಮಾಹಿ ಅದನ್ನು ಸುಳ್ಳು ಎಂದು ಹೇಳಿದ್ದರು.
ಸ್ನೇಹಿತರಾಗಿ ಇರ್ತೀವಿ
ಮಾಹಿ ವಿಜ್ ಮತ್ತು ಜೈ ಭಾನುಶಾಲಿ ಈಗ ತಮ್ಮ ವಿಚ್ಛೇದನದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಇಬ್ಬರೂ ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡು ಬೇರೆಯಾಗುವುದಾಗಿ ಘೋಷಿಸಿದ್ದಾರೆ. ಸ್ನೇಹಿತರಾಗಿ ಇರುವುದಾಗಿಯೂ ಹೇಳಿದ್ದಾರೆ.
ನಮ್ಮ ದಾರಿ ಬೇರೆ ಬೇರೆ
ಮಾಹಿ ಮತ್ತು ಜೈ ದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. "ಇಂದು ನಾವು ಜೀವನದ ಪಯಣದಲ್ಲಿ ನಮ್ಮ ದಾರಿಗಳನ್ನು ಬೇರ್ಪಡಿಸುತ್ತಿದ್ದೇವೆ. ನಮ್ಮ ಮಕ್ಕಳಿಗಾಗಿ ನಾವು ಉತ್ತಮ ಪೋಷಕರಾಗುತ್ತೇವೆ" ಎಂದು ಬರೆದಿದ್ದಾರೆ.
ವಿಲನ್ ಇಲ್ಲ
"ನಾವು ಉತ್ತಮ ಸ್ನೇಹಿತರಾಗಿರುತ್ತೇವೆ ಮತ್ತು ಮಕ್ಕಳಿಗಾಗಿ ಸರಿಯಾದದ್ದನ್ನು ಮಾಡುತ್ತೇವೆ. ನಮ್ಮ ಈ ಕಥೆಯಲ್ಲಿ ಯಾವುದೇ ವಿಲನ್ ಇಲ್ಲ, ನಕಾರಾತ್ಮಕತೆಯೂ ಇಲ್ಲ. ನಮಗೆ ನಾಟಕ ಬೇಡ, ಶಾಂತಿ ಬೇಕು" ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಮಾಹಿ-ಜೈ 2011ರಲ್ಲಿ ಮದುವೆಯಾಗಿದ್ದರು. ಮಗು ಆಗಿಲ್ಲ ಎಂದು ಈ ಜೋಡಿ ಒಂದಿಷ್ಟು ಒದ್ದಾಡಿತ್ತು. ಇವರಿಗೆ ತಾರಾ ಎಂಬ 6 ವರ್ಷದ ಮಗಳಿದ್ದಾಳೆ. ದಂಪತಿ ರಾಜ್ವೀರ್ ಮತ್ತು ಖುಷಿ ಎಂಬ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

