- Home
- Entertainment
- TV Talk
- Bigg Boss ಮನೆಯಿಂದ ಕಾವ್ಯ ಶೈವರನ್ನು ಹೊರಗಡೆ ಕಳಿಸಿಲ್ಲ, ಅದೇ ನಂಗೆ ಆಶ್ಚರ್ಯ: Kiccha Sudeep
Bigg Boss ಮನೆಯಿಂದ ಕಾವ್ಯ ಶೈವರನ್ನು ಹೊರಗಡೆ ಕಳಿಸಿಲ್ಲ, ಅದೇ ನಂಗೆ ಆಶ್ಚರ್ಯ: Kiccha Sudeep
BBK 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಪೇರೆಂಟ್ಸ್ ರೌಂಡ್ ಇತ್ತು. ಆಗ ಕಾವ್ಯ ಶೈವ ಮನೆಯವರು ಬಂದು ಮಾತನಾಡಿದ್ದು ದೊಡ್ಡ ಎಡವಟ್ಟಾಗಿತ್ತು. ಹೊರಗಡೆ ಏನಾಗ್ತಿದೆ ಎಂದು ಅವರು ಹೇಳಿದ್ದರು. ಈ ಬಗ್ಗೆ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ.

ಕಾರ್ತಿಕ್ ಏನು ಹೇಳಿದ್ರು?
ಕಾವ್ಯ ಶೈವ ಅವರೇ ಯಾರು ಸೋಶಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಕೇಳಿದ್ದರು. ಆಗ ಅವರ ತಮ್ಮ ಕಾರ್ತಿಕ್ ಅವರು, “ನಾನೇ ಮಾಡ್ತಿದೀನಿ” ಎಂದಿದ್ದಾನೆ. ಗಿಲ್ಲಿ ನಟ, ಕಾವ್ಯ ಶೈವ ಸ್ನೇಹ ಹೊರಗಡೆ ಹೇಗೆ ಕಾಣಿಸ್ತಿದೆ? ಗಿಲ್ಲಿ ಅವರನ್ನು ನಾಮಿನೇಟ್ ಮಾಡಿದ್ದು, ಜನರು ಹೇಗೆ ಸ್ವೀಕಾರ ಮಾಡಿದ್ದಾರೆ ಎನ್ನೋದರ ಬಗೆ ಕಾರ್ತಿಕ್ ಮಾತನಾಡಿದ್ದಾರೆ.
ಕಾವ್ಯ ಪಾಲಕರು ಔಟ್
ಗಿಲ್ಲಿ ಕಾವ್ಯ ಶೈವ ಸ್ನೇಹ ಹೇಗಿದೆ? ಗಿಲ್ಲಿಯನ್ನು ಅಣ್ಣಾ ಅಂತ ಕರೆಯೋದು ಯಾಕೆ ಎಂದು ಕೂಡ ಅವರು ಮಾತನಾಡಿಕೊಂಡಿದ್ದಾರೆ. ಬಿಗ್ ಬಾಸ್ ಎಚ್ಚರಿಕೆ ಕೊಟ್ಟರೂ ಕೂಡ ಇವರು ಮಾತನಾಡುತ್ತಲೇ ಇದ್ದರು. ಹೀಗಾಗಿ ಕಾವ್ಯ ಪಾಲಕರನ್ನು ತಕ್ಷಣ ಹೊರಗಡೆ ಕಳಿಸಲಾಗಿತ್ತು.
ಕಿಚ್ಚ ಸುದೀಪ್ ತರಾಟೆ
ಕಾವ್ಯ ಶೈವ ಅವರು ಕಿಚ್ಚ ಸುದೀಪ್ ಮುಂದೆ, “ನಾರ್ಮಲ್ ಆಗಿ ಪಿಆರ್ ಯಾರಿಗೆ ಕೊಟ್ಟಿದ್ದಾರೆ ಎಂದು ಕೇಳಿದೆ” ಎಂದಿದ್ದಾರೆ. “ನಿಮಗೆ ಬಿಗ್ ಬಾಸ್ ನಿಯಮ ಗೊತ್ತಿಲ್ವಾ? ಇಡೀ ಸೀಸನ್‌ನಲ್ಲಿ ಬ್ಯಾಲೆನ್ಸ್ ಆಗಿ ಮಾತಾಡ್ತೀರಿ. ಈ ಸೀಸನ್ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಆಗಿದೆ, ಎಲ್ಲರಿಗೂ ಹಿಂಟ್ ಸಿಕ್ಕಿದರೆ ಈ ಸೀಸನ್ ಎಲ್ಲೋಗತ್ತೆ?” ಎಂದು ಹೇಳಿದ್ದಾರೆ.
ನಿಮ್ಮನ್ನು ಹೊರಗಡೆ ಕರೆಸಿಲ್ಲ?
“ಒಂದು ನಿಮಿಷದಲ್ಲಿ ಇಡೀ ಸೀಸನ್ ಹೇಗಿದೆ ಎಂದು ಹೇಳಿದ್ದಾರೆ, ನಿಮ್ಮ ಮನಸ್ಸಿನಿಂದ ಅದನ್ನು ಡಿಲಿಟ್ ಮಾಡೋಕೆ ಆಗೋದಿಲ್ಲ, ನಡೆದು ಹೋಗಿದೆ. ಮನೆಯವರು ಬಂದು ಈ ರೀತಿ ಆಡಿದರೆ ಎಲ್ಲರ ಆಟ ಹಾಳಾಗುತ್ತದೆ. ಫ್ಯಾಮಿಲಿಯವರನ್ನು ಒಳಗಡೆ ಕರೆಸಿ, ಹೊರಗಡೆ ಕಳಿಸೋದು ಸರಿಯೇ? ನಿಮ್ಮನ್ನು ಹೊರಗಡೆ ಕರೆಸಿಲ್ಲ ಎನ್ನೋದು ನನಗೆ ಆಶ್ಚರ್ಯವಾಗಿದೆ” ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಗಿಲ್ಲಿ ನಟ ಹೇಳಿದ್ದಾರೆ?
“ಈ ಬಾರಿ ಮೈಲ್ಡ್ ಆಗಿ ತಗೊಂಡರು. ಎರಡೇ ಮಾತಿನಿಂದ ಹೊರಗಡೆ ಹೋಗ್ತಿದ್ದಿರಿ. ಸ್ಪರ್ಧಿಯಾಗಿ ಈ ರೀತಿ ಮಾತಾಡಬಾರದು” ಎಂದು ಸುದೀಪ್ ಹೇಳಿದ್ದಾರೆ. ಗಿಲ್ಲಿ ನಟ ಅವರು, “ಕಾವ್ಯ ಕ್ಯಾಪ್ಟನ್ ಆಗಿ ಹೀಗೆ ಮಾತಾಡಬಾರದಿತ್ತು” ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

