- Home
- Karnataka Districts
- Bengaluru Urban
- ಬ್ರೋ ನಾನು ಹೋಮ್‌ಲೆಸ್ ಆಗಿದ್ದೀನಿ; ಮಮ್ಮಿ ಬೈತಾರೆ ಅಂದಿದ್ದ ನ್ಯೂ ಇಯರ್‌ನ ವೈರಲ್ ಸರಕು ಬಾಯ್
ಬ್ರೋ ನಾನು ಹೋಮ್‌ಲೆಸ್ ಆಗಿದ್ದೀನಿ; ಮಮ್ಮಿ ಬೈತಾರೆ ಅಂದಿದ್ದ ನ್ಯೂ ಇಯರ್‌ನ ವೈರಲ್ ಸರಕು ಬಾಯ್
ಹೊಸ ವರ್ಷದಂದು 'ಮಮ್ಮಿ ಬೈತಾರೆ ಬ್ರೋ' ಎಂದು ಹೇಳಿ ವೈರಲ್ ಆಗಿದ್ದ 'ಸರಕು ಬಾಯ್' ಯಶವಂತ್, ಇದೀಗ ತಾನು ಮನೆಯಿಂದ ಹೊರಬಿದ್ದಿರುವುದಾಗಿ ಹೇಳಿಕೊಂಡಿದ್ದಾರೆ. ವೈರಲ್ ವಿಡಿಯೋದಿಂದಾಗಿ ಅಮ್ಮ ಮನೆಯಿಂದ ಹೊರಹಾಕಿದ್ದಾರೆ ಎಂದು ಹೇಳಿದ್ದು, ಆತನ ಮುಂದಿನ ಪರಿಸ್ಥಿತಿ ಏನಾಯಿತು ಎಂಬುದನ್ನು ಈ ಲೇಖನ ವಿವರಿಸುತ್ತದೆ.

ನ್ಯೂ ಇಯರ್‌ನ ವೈರಲ್ ಸರಕು ಬಾಯ್
ಹೊಸ ವರ್ಷದ ಮೊದಲ ದಿನ ಅಂದ್ರೆ ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್ ಯುವ ಸಮುದಾಯದಿಂದ ತುಂಬಿ ತುಳುಕಿರುತ್ತದೆ. ಮಧ್ಯರಾತ್ರಿಯೇ ಹೊಸ ವರ್ಷವನ್ನು ಸ್ವಾಗತಿಸಲು ಒಂದೆಡೆ ಲಕ್ಷಾಂತರ ಜನರು ಸೇರಿರುತ್ತಾರೆ. ಈ ಸಂದರ್ಭದಲ್ಲಿನ ಕೆಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಈ ಬಾರಿ ಸರಕು ಬಾಯ್ ಹೆಸರಿನಲ್ಲಿ ಯುವಕನೋರ್ವನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಮಮ್ಮಿ ಬೈತಾರೆ ಬ್ರೋ
ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಯುವಕ, ವಿಡಿಯೋ ನೋಡಿದ್ರೆ ಮಮ್ಮಿ ಬೈತಾರೆ ಬ್ರೋ ಎಂದು ಹೇಳಿ ತಾನು ತೆಗೆದುಕೊಂಡು ಬಂದಿರುವ ಮದ್ಯದ ಬಾಟೆಲ್ ಕ್ಯಾಮೆರಾಗೆ ತೋರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಹುತೇಕರು ಇದು ವರ್ಷದ ಮೊದಲ ಕ್ಯೂಟ್ ವಿಡಿಯೋ ಎಂದು ಕಮೆಂಟ್ ಮಾಡಿದ್ದಾರೆ. ಹಾಗೆಯೇ ಅಮ್ಮನ ಮುದ್ದಿನ ಮಗ ಎಂದು ನೆಟ್ಟಿಗರು ಯುವಕನನ್ನು ಮೆಚ್ಚಿಕೊಂಡಿದ್ದರು.
ಸರಕು ವೈರಲ್ ಬಾಯ್ ಹೆಸರು ಯಶವಂತ್
ಇದೀಗ ಈ ವಿಡಿಯೋ ವೈರಲ್ ಬಳಿಕ ಮನೆಯಲ್ಲಿ ತನ್ನ ಪರಿಸ್ಥಿತಿ ಏನಾಗಿದೆ ಎಂದು ಸರಕು ವೈರಲ್ ಬಾಯ್ ಯಶವಂತ್ ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಯಶವಂತ್ ನಂತರ ಏನಾಯ್ತು ಎಂದು ವಿವರಿಸಿದ್ದಾರೆ. ಹಾಗೆಯೇ ವೈರಲ್ ಆಗಿರುವ ವಿಡಿಯೋಗಳನ್ನು ತಮ್ಮ ಖಾತೆಯಲ್ಲಿ ರೀ-ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬಾಯ್ಫ್ರೆಂಡ್ ಎದುರೇ ಮಾಜಿ ಹುಡುಗನಿಗೆ ಲೊಚ ಲೊಚ ಕಿಸ್ ಕೊಟ್ಟ ಸ್ಟಾರ್ ನಟಿ! ಕಕ್ಕಾಬಿಕ್ಕಿ ಗೆಳೆಯ- ವಿಡಿಯೋ ವೈರಲ್
ನಾನು ಹೋಮ್‌ಲೆಸ್ ಆಗಿದ್ದೇನೆ ಗಾಯ್ಸ್
ಹೆಲೋ ಗಾಯ್ಸ್, ನೀವು ಯಾರಾದ್ರು ಯಾರು ಆ ಸರಕು ಬಾಯ್ ಅಂತ ಹುಡುಕುತ್ತಿದ್ರೆ ಅದು ನಾನೇ. ಈಗ ನಾನು ಹೋಮ್‌ಲೆಸ್ ಆಗಿದ್ದೇನೆ ಗಾಯ್ಸ್ ಎಂದು ಯಶವಂತ್ ಹೇಳಿಕೊಂಡಿದ್ದಾರೆ. ಎಣ್ಣೆ ಬಾಟೆಲ್ ತೋರಿಸಿ ತಗ್ಲಾಕೊಂಡ ಯಶವಂತ್ ಅವರನ್ನು ಅಮ್ಮ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಹಾಗಾದ್ರೆ ನ್ಯೂ ಇಯರ್ ದಿನ ಯಶವಂತ್ ಹೇಳಿದ್ದೇನು ಗೊತ್ತಾ?
ಇದನ್ನೂ ಓದಿ: ಇನ್‌ಸ್ಟಾಗ್ರಾಂಗೆ ಗುಡ್‌ಬೈ ಹೇಳಿದ ಮಲ್ಲಮ್ಮ; ಕಾರಣ ಕೇಳಿದ್ರೆ ನಿಮಗೂ ಅಯ್ಯೋ ಅನ್ನಿಸುತ್ತೆ!
ಎಣ್ಣೆ ಮತ್ತಲ್ಲಿ ಹೇಳಿದ್ದೇನು?
ಬ್ರೋ ನಮ್ಮ ಮಮ್ಮಿ ನೋಡಲ್ಲ ಅಂದ್ರೆ ನಾನು ನೋಡಬೇಕು. ಈ ರೋಡ್ ಹೆಸರೇನು ಹೇಳಿ ಬ್ರೋ? ಮಹಾತ್ಮ ಗಾಂಧಿ ರೋಡ್ ಅಲ್ಲವಾ ಇದು. ಗಾಂಧಿ ಸತ್ಯಾಗ್ರಹ ಮಾಡಿದ್ದು ನಮ್ಮ ಸ್ವಾತಂತ್ರ್ಯಕ್ಕೆ ಅಲ್ಲವಾ? ಮಿಲಿಟಿರಿಯಿಂದ ಸರಕು ತಂದಿದ್ದೀನಿ ಬ್ರೋ. ನಡೆದುಕೊಂಡು ಹೋಗುವುದು ಫ್ರೀಡಂನಾ ಎಂದು ಯಶವಂತ್ ಹೇಳಿದ್ದರು.
ಇದನ್ನೂ ಓದಿ: ಓಯೋ ರೂಮ್ ಬಾಗಿಲು ಹಾಕೊಳ್ಳೋದನ್ನ ಮರೆತ ಜೋಡಿ; ಮೆಟ್ರೋ ನಿಲ್ದಾಣದಿಂದ ಕೂಗಿ ಹೇಳಿದ ವ್ಯಕ್ತಿ

