Published : Jul 13, 2026, 07:37 AM ISTUpdated : Jul 13, 2026, 11:39 PM IST

National News Live: ಸಮಂತಾ ಅಭಿಮಾನಿಗಳಿಗೆ ಗುಡ್ ನ್ಯೂಸ್ - 'ಮಾ ಇಂಟಿ ಬಂಗಾರಂ' OTT ರಿಲೀಸ್ ಡೇಟ್ ಫಿಕ್ಸ್! ಯಾವಾಗ?

ಸಾರಾಂಶ

ನವದೆಹಲಿ (ಜು.13): ಉತ್ತರಾಖಂಡದ ಪ್ರಸಿದ್ದಬದರೀನಾಥ ದೇವಾಲಯದಲ್ಲೂ ಹುಂಡಿ ಕಳವು ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್ ಐಟಿ), ಅಕ್ರಮ ನಡೆದಿ ರುವುದು ನಿಜ ಎಂದು ಬಹಿರಂಗಪಡಿಸಿದೆ. ಇದಕ್ಕೆ ಸಂಬಂಧಿಸಿದ 18 ಪುಟಗಳ ವರದಿ ಯನ್ನು ಬದರೀನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಸಿಇಒಗೆ ಸಲ್ಲಿಸಿದೆ. ಉತ್ತರಾಖಂಡ ಸರ್ಕಾರವು ಬಿಕೆಟಿಸಿಯ ಸಿಇಒಗೆ ತನಿಖಾ ವರದಿಯಲ್ಲಿ ಹೆಸರಿಸಲಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

Samantha

11:39 PM (IST) Jul 13

ಸಮಂತಾ ಅಭಿಮಾನಿಗಳಿಗೆ ಗುಡ್ ನ್ಯೂಸ್ - 'ಮಾ ಇಂಟಿ ಬಂಗಾರಂ' OTT ರಿಲೀಸ್ ಡೇಟ್ ಫಿಕ್ಸ್! ಯಾವಾಗ?

Maa Inti Bangaram OTT: ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಮಾ ಇಂಟಿ ಬಂಗಾರಂ' ಚಿತ್ರ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಕೆಯ ಮೈಲಿಗಲ್ಲು ತಲುಪಿದೆ.

Read Full Story

10:56 PM (IST) Jul 13

Trump Tax - ಹೊರ್ಮುಜ್ ಜಲಸಂಧಿ ಮೇಲೆ ಶೇ. 20 ತೆರಿಗೆ; ಭಾರತದ ಎಲ್‌ಪಿಜಿ ಪೂರೈಕೆಗೆ ಕುತ್ತು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳ ಮೇಲೆ ಶೇ. 20ರಷ್ಟು ಭದ್ರತಾ ಶುಲ್ಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇರಾನ್‌ಗೆ ಪಾಠ ಕಲಿಸುವ ಈ ಕ್ರಮದಿಂದ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.

Read Full Story

10:43 PM (IST) Jul 13

Rohit Chandel Arrest - ಕಿರುತೆರೆ ನಟ ರೋಹಿತ್ ಚಂದೆಲ್ ಅರೆಸ್ಟ್; ಮುಂಬೈನಲ್ಲಿ ಆ ಆರೋಪದಲ್ಲಿ ಸಿಕ್ಕಬಿದ್ದ ಈ ನಟ!

ಆರೋಪಿ ರೋಹಿತ್ ಚಂದೆಲ್ ನಿವಾಸದ ಮೇಲೆ ದಾಳಿ ನಡೆಸಿ, ಪೊಲೀಸರು ಜುಲೈ 10ರ ಶುಕ್ರವಾರದಂದು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78 ಮತ್ತು 115(2) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

Read Full Story

09:55 PM (IST) Jul 13

ಖತಾರ್‌ನ ಮಾಜಿ ಅಮೀರ್ ಶೇಖ್ ಹಮದ್ ನಿಧನಕ್ಕೆ ಭಾರತದಲ್ಲಿ ರಾಷ್ಟ್ರೀಯ ಶೋಕಾಚರಣೆ

ಖತಾರ್ ದೇಶದ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿ ಅವರ ನಿಧನದ ಹಿನ್ನೆಲೆಯಲ್ಲಿ, ಗೌರವಸೂಚಕವಾಗಿ ಭಾರತ ಒಂದು ದಿನ ರಾಷ್ಟ್ರೀಯ ಶೋಕಾಚರಣೆ ನಡೆಸಿದೆ. ಎಲ್ಲಾ ಸರ್ಕಾರಿ ಹಾಗೂ ಪ್ರಮುಖ ಕಟ್ಟಡಗಳ ಮೇಲೆ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗಿದೆ.

Read Full Story

09:13 PM (IST) Jul 13

ಆನೆ ಏರಿ, ಕೈಯಲ್ಲಿ ವೇಲ್ ಹಿಡಿದು ಬಂದ 'ತಮಿಳ್ ಮುರುಗನ್' - ಅಷ್ಟಕ್ಕೂ ಯಾರು ಈ ಸ್ಟಾರ್ ನಟ?

ನಟ ಧನುಷ್ ಅವರ ಬಹುನಿರೀಕ್ಷಿತ 'ತಮಿಳ್ ಮುರುಗನ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಇದು ನಿರ್ದೇಶಕ ವೆಟ್ರಿಮಾರನ್ ಜೊತೆಗಿನ ಧನುಷ್ ಅವರ ಐದನೇ ಸಿನಿಮಾ. ಪೋಸ್ಟರ್‌ನಲ್ಲಿ ಧನುಷ್ ಆನೆ ಮೇಲೆ ಕುಳಿತು, ಕೈಯಲ್ಲಿ ಭರ್ಜಿ ಹಿಡಿದು, ದೊಡ್ಡ ಸೈನ್ಯದ ಮುಂದೆ ನಿಂತಿದ್ದಾರೆ.

Read Full Story

09:08 PM (IST) Jul 13

ಮಹಿಳೆಯರ ಲಾರ್ಡ್ಸ್ ಟೆಸ್ಟ್ ಗೆಲುವಿನ ಹಿಂದಿದೆ ಸಟಿನ್ ಟಿಪ್ಸ್, ಪಂದ್ಯಕ್ಕೂ ಮೊದಲು ನೀಡಿದ್ರು ಪೆಪ್ ಟಾಕ್

ಭಾರತ ಮಹಿಳಾ ತಂಡ ಲಾರ್ಡ್ಸ್ ಟೆಸ್ಟ್ ಗೆದ್ದುಇತಿಹಾಸ ರಚಿಸಿದೆ. ವಿಶೇಷ ಅಂದರೆ ನಾಲ್ಕನೇ ದಿನ ಸಚಿನ್ ತೆಂಡೂಲ್ಕರ್ ಮಹಿಳಾ ತಂಡಕ್ಕೆ ಪೆಪ್ ಟಾಕ್ ನೀಡಿದ್ದರು. ಅದೇ ದಿನ ಮಹಿಳೆಯರು ಟೆಸ್ಟ್ ಗೆದ್ದು ಇತಿಹಾಸ ರಚಿಸಿದ್ದಾರೆ.

Read Full Story

08:46 PM (IST) Jul 13

'ನಾನೇ ಅವಳನ್ನು ಬಿಟ್ಟಿದ್ದು' - ದೀಪಿಕಾ ಬಗ್ಗೆ ಮೊದಲ ಮಾಜಿ ಬಾಯ್‌ಫ್ರೆಂಡ್ ಸ್ಫೋಟಕ ಹೇಳಿಕೆ!

ದೀಪಿಕಾ ಪಡುಕೋಣೆ ಅವರ ಮೊದಲ ಬಾಯ್‌ಫ್ರೆಂಡ್ ಎನ್ನಲಾದ ಮುಝಮ್ಮಿಲ್ ಇಬ್ರಾಹಿಂ, ಹಲವು ವರ್ಷಗಳ ನಂತರ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಸಂಬಂಧ ಶುರುವಾಗಿದ್ದು ಹೇಗೆ ಮತ್ತು ಬ್ರೇಕಪ್ ಮಾಡಿದ್ದು ಯಾರು ಎಂಬ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ.

Read Full Story

08:35 PM (IST) Jul 13

ಬಿಲಾಸಪುರದಲ್ಲಿ ರೈಲು ಅಪಘಾತ, ಹಳಿ ತಪ್ಪಿದ ಮೂರು ಬೋಗಿಗಳಿಂದ ಸಂಚಾರದಲ್ಲಿ ವ್ಯತ್ಯಯ

ಬಿಲಾಸಪುರದಲ್ಲಿ ರೈಲು ಅಪಘಾತ ಸಂಭವಿಸಿದೆ. ಮೂರು ಬೋಗಿಗಳು ಹಳಿ ತಪ್ಪಿದ ಪರಿಣಾಮ ಇತರ ರೈಲು ಸಂಚಾರ ವಿಳಂಬವಾಗಿದೆ. ಈ ಮಾರ್ಗದಲ್ಲಿ ಚಲಿಸಬೇಕಿದ್ದ ಹಲವು ಪ್ರಯಾಣಿಕರ ರೈಲುಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.

Read Full Story

07:35 PM (IST) Jul 13

ದೆಹಲಿ ಗಲಭೆಯಲ್ಲಿ ಇಂಟಲಿಜೆನ್ಸ್ ಅಧಿಕಾರಿ ಹತ್ಯೆ ಕೇಸ್ ತೀರ್ಪು, ಆಪ್ ಮಾಜಿ ನಾಯಕ ತಾಹೀರ್ ಹುಸೇನ್ ದೋಷಿ

ದೆಹಲಿ ಗಲಭೆ ವೇಳೆ ಇಂಟಲಿಜೆನ್ಸ್ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದ ತೀರ್ಪು ಹೊರಬಿದ್ದಿದೆ. ಆಪ್ ಮಾಜಿ ನಾಯಕ ತಾಹೀರ್ ಹುಸೇನ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ಜಾವೇದ್ ಸೇರಿದಂತೆ ನಾಲ್ವರು ದೋಷಿ ಎಂದಿದೆ.

Read Full Story

07:23 PM (IST) Jul 13

Shocking - Celina Jaitly - ಮದುವೆ-ಮಕ್ಕಳು-ಡಿವೋರ್ಸ್‌.. 'ಪ್ರಿನಪ್ ಒಪ್ಪಂದ'ದ ಬಗ್ಗೆ ಒತ್ತಿ ಹೇಳಿದ ಸೆಲಿನಾ ಜೇಟ್ಲಿ, ಕಾವೇರಿದ ಪರ-ವಿರೋಧ ಚರ್ಚೆ!

2010ರಲ್ಲಿ ಆಸ್ಟ್ರಿಯಾದ ಉದ್ಯಮಿ ಪೀಟರ್ ಹಾಗ್ ಕೈ ಹಿಡಿದಾಗ ಸೆಲಿನಾ ಬದುಕು ಹೂವಿನ ಹಾಸಿಗೆಯಂತೆ ಕಾಣುತ್ತಿತ್ತು. ಮೂವರು ಗಂಡು ಮಕ್ಕಳೊಂದಿಗೆ ಸಂಸಾರ ಸುಂದರವಾಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ಸುಂದರ ದಾಂಪತ್ಯದ ಪರದೆಯ ಹಿಂದೆ 'ನರಕ' ಸದೃಶ್ಯ ಅನುಭವ ಏನಿತ್ತು? ಈ ಸ್ಟೋರಿ ನೋಡಿ..

Read Full Story

07:18 PM (IST) Jul 13

ಬೇಬಿ ಬಂಪ್‌ನಲ್ಲಿ ಮಿಂಚಿದ ದೀಪಿಕಾ - ರಣವೀರ್ ಜೊತೆ ಕೈ ಕೈ ಹಿಡಿದು ಕ್ಯಾಮರಾಗೆ ಪೋಸ್

ಬಾಲಿವುಡ್‌ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ, ಸದ್ಯ ಗರ್ಭಾವಸ್ಥೆಯ ಮೂರನೇ ಹಂತದಲ್ಲಿದ್ದಾರೆ (third trimester).

Read Full Story

06:58 PM (IST) Jul 13

12ನೇ ವಯಸ್ಸಲ್ಲೇ ಕಂಪೆನಿ ​CEO - 3 ದೇಶಗಳ ವಹಿವಾಟು; ವಿಶ್ವವನ್ನೇ ಬೆರಗುಗೊಳಿಸಿದ ಭಾರತದ ಬಾಲೆ

ಕೆನಡಾದಲ್ಲಿರುವ 12 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿ ಮನಾ ಜಂಪಾಲಾ, 'ವೋಕ್ಸಾ' ಎಂಬ AI-ಚಾಲಿತ ಸ್ಟಾರ್ಟ್‌ಅಪ್ ಅನ್ನು ಸ್ಥಾಪಿಸಿ ಜಗತ್ತಿನ ಗಮನ ಸೆಳೆದಿದ್ದಾಳೆ. ಈಕೆಯ ಕಂಪನಿಯು ಸಣ್ಣ ವ್ಯಾಪಾರಗಳಿಗೆ 24/7 ಗ್ರಾಹಕರ ಕರೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ತನ್ನ ತಂದೆಯ ಕಚೇರಿಯ ಸಮಸ್ಯೆಯಿಂದ ಸ್ಫೂರ್ತಿ ಪಡೆದು, ಚಿಕ್ಕ ವಯಸ್ಸಿನಲ್ಲೇ ಕೋಡಿಂಗ್ ಕಲಿತು ಈಕೆ ಈ ಸಾಧನೆ ಮಾಡಿದ್ದಾಳೆ.
Read Full Story

06:21 PM (IST) Jul 13

ಇ20 ಪೆಟ್ರೋಲ್‌ನಿಂದ ಮೈಲೇಜ್ ಕುಸಿತ, ಯೂಟ್ಯೂಬರ್ ಆರೋಪಕ್ಕೆ ಮರ್ಸಿಡೀಸ್ ಬೆಂಜ್ ಕೊಟ್ಟ ಉತ್ತರವೇನು?

ಇ20 ಪೆಟ್ರೋಲ್ ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರ ನಡುವೆ ಯೂಟ್ಯೂಬರ್ ತನ್ನ ಬೆಂಜ್ ಕಾರಿನ ಮೈಲೇಜ್ ಕುಸಿತವಾಗಿದ್ದು ಮಾತ್ರವಲ್ಲ ಎಂಜಿನ್ ಕೂಡ ಶೀಗ್ರದಲ್ಲೇ ಹಾಳಾಗಲಿದೆ ಎಂದು ಆರೋಪಿಸಿದ ವಿಡಿಯೋಗೆ ಖುದ್ದು ಮರ್ಸಿಡೀಸ್ ಬೆಂಜ್ ಉತ್ತರ ನೀಡಿದೆ.

Read Full Story

06:03 PM (IST) Jul 13

ಜಗಳದ ಭರದಲ್ಲಿ ಕೋಪದಿಂದ ಮೊಬೈಲ್​ ಫೋನ್​ ಎಸೆದ ಪತ್ನಿ - ತಲೆಗೆ ಬಿದ್ದು ಪತಿಯ ಸಾವು- ಆಗಿದ್ದೇನು

ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ, ಗಂಡ-ಹೆಂಡತಿಯ ಜಗಳದ ವೇಳೆ ಪತ್ನಿ ಎಸೆದ ಮೊಬೈಲ್ ಫೋನ್ ತಲೆಗೆ ಬಡಿದು ಪತಿ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ಬಳಿಕ ಆತ ಮೃತಪಟ್ಟಿದ್ದು, ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
Read Full Story

04:53 PM (IST) Jul 13

900ರೂ ಸ್ಕಾಲರ್‌ಶಿಪ್ ಡ್ರಾ ಮಾಡಲು ಹೋದ 7ನೇ ತರಗತಿ ಬಾಲಕಿಗೆ ಕಾದಿತ್ತು ಅಚ್ಚರಿ, 759 ಕೋಟಿ ರೂ ಜಾಕ್‌ಪಾಟ್

ಕಡು ಬಡತನದ ಕುಟುಂಬ. 7ನೇ ತರಗತಿ ಬಾಲಕಿ ಶೂ ಹರಿದಿತ್ತು. ಹೊಸ ಶೂ ಖರೀದಿಸಲು ಸ್ಕಾಲರ್‌ಶಿಪ್ ಹಣ ಡ್ರಾ ಮಾಡಲು ಅಣ್ಣನ ಜೊತೆ ಎಟಿಎಂ ಬಳಿ ತೆರಳಿದ್ದಾಳೆ. ಆದರೆ ಸ್ಕಾಲರ್‌ಶಿಪ್ ಚೆಕ್ ಮಾಡಿದಾಗ ಅಚ್ಚರಿ ಕಾದಿದೆ. ಕಾರಣ ಖಾತೆಯಲ್ಲಿದ್ದಿದ್ದು ಬರೋಬ್ಬರಿ 759 ಕೋಟಿ ರೂಪಾಯಿ.

Read Full Story

02:29 PM (IST) Jul 13

ಐಪಿಎಲ್‌ನಲ್ಲಿ ನೆಲಕಚ್ಚಿದ ಚೆನ್ನೈ - ಹಳೆ ಕುದುರೆಗಳಿಗೆ ಗೇಟ್‌ಪಾಸ್ ನೀಡಲು ಶುರು ಮಾಡಿದ ಸಿಎಸ್‌ಕೆ ಫ್ರಾಂಚೈಸಿ!

ಕಳೆದ 17 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಡ್‌ಕೋಚ್ ಆಗಿದ್ದ ಸ್ಟಿಫನ್ ಫ್ಲೆಮಿಂಗ್ ತಂಡಕ್ಕೆ ವಿದಾಯ ಹೇಳಿದ್ದಾರೆ. ಕಳೆದ ಮೂರು ಸೀಸನ್‌ಗಳಲ್ಲಿ ತಂಡದ ನೀರಸ ಪ್ರದರ್ಶನದ ನಂತರ, ಫ್ಲೆಮಿಂಗ್ ಮತ್ತು ಸಿಎಸ್‌ಕೆ ಆಡಳಿತ ಮಂಡಳಿ ಪರಸ್ಪರ ಸಮ್ಮತಿಯೊಂದಿಗೆ ಈ ನಿರ್ಧಾರಕ್ಕೆ ಬಂದಿವೆ ಎಂದು ಫ್ರಾಂಚೈಸಿ ಖಚಿತಪಡಿಸಿದೆ.
Read Full Story

02:19 PM (IST) Jul 13

ಮೀನುಗಾರನ ಬಲೆಗೆ ಬಿದ್ದ ಅಪರೂಪದ ಕಡಲ ಹಸು, ಆತ್ಮೀಯವಾಗಿ ಮರಳಿ ಸಮುದ್ರಕ್ಕೆ ಬಿಟ್ಟು ಮಾನವೀಯತೆ

ತಮಿಳುನಾಡಿನ ಪುದುಕ್ಕೊಟ್ಟೈ ಕರಾವಳಿಯಲ್ಲಿ, ಮೀನುಗಾರನೊಬ್ಬ ತನ್ನ ಬಲೆಗೆ ಸಿಕ್ಕ ಅಪರೂಪದ ಕಡಲ ಹಸುವನ್ನು (ಡುಗಾಂಗ್) ಪ್ರೀತಿಯಿಂದ ಮರಳಿ ಸಮುದ್ರಕ್ಕೆ ಬಿಟ್ಟಿದ್ದಾನೆ. ಈ ಮಾನವೀಯ ಘಟನೆಯು, ವನ್ಯಜೀವಿ ಸಂರಕ್ಷಣಾ ಇಲಾಖೆಯು ವರ್ಷಗಳಿಂದ ನಡೆಸಿದ ಜಾಗೃತಿ ಕಾರ್ಯಕ್ರಮಗಳ ಯಶಸ್ಸಿಗೆ ಸಾಕ್ಷಿಯಾಗಿದೆ.

Read Full Story

01:32 PM (IST) Jul 13

S Janaki - ದಕ್ಷಿಣ ಭಾರತದ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಅನ್ಯಾಯ, ಸಿಡಿದೆದ್ದ ಎಸ್ ಜಾನಕಿ; ಮುಂದೆ ಆಗಿದ್ದು ಇತಿಹಾಸ!

2013ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಗಾಯಕಿ ಎಸ್ ಜಾನಕಿಯವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಲಾಯ್ತು. ಆದರೆ, ಗಾಯಕಿ ಎಸ್ ಜಾನಕಿಯವರು ಅದನ್ನು ನಿರಾಕರಿಸಿ, ಪ್ರಶಸ್ತಿ ಸ್ವೀಕರಿಸಲು ದೆಹಲಿ ಸಮಾರಂಭಕ್ಕೆ ಹೋಗಲೇ ಇಲ್ಲ. ಆ ಮೂಲಕ ಈ ಮೇರು ಗಾಯಕಿ ಇತಿಹಾಸ ಸೃಷ್ಟಿಸಿದ್ದಾರೆ.

Read Full Story

12:59 PM (IST) Jul 13

ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೈಕೋರ್ಟ್ ಆದೇಶವು ಚಾಲ್ತಿಯಲ್ಲಿರುವ 'ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958'ಕ್ಕೆ ವಿರುದ್ಧವಾಗಿದೆ ಎಂದಿದೆ.

Read Full Story

12:51 PM (IST) Jul 13

Cancer Risk - ಕ್ಯಾನ್ಸರ್ ಬರಲು ಕಾರಣವಾಗುವ ನಿಮ್ಮ 5 ಕೆಟ್ಟ ಹವ್ಯಾಸಗಳನ್ನು ಇಂದೇ ಬಿಟ್ಟುಬಿಡಿ! ಇದು WHO ವಾರ್ನಿಂಗ್

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 75 ವರ್ಷಕ್ಕಿಂತ ಮುಂಚೆ ಪ್ರತಿ 10 ಭಾರತೀಯರಲ್ಲಿ ಒಬ್ಬರು ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಯಿತ್ತು. ಬದಲಾಗುತ್ತಿರುವ ಜೀವನಶೈಲಿ ಮತ್ತು ತಡವಾದ ರೋಗನಿರ್ಣಯದಿಂದಾಗಿ 2050ರ ವೇಳೆಗೆ ವಾರ್ಷಿಕವಾಗಿ 2.8 ದಶಲಕ್ಷ ಹೊಸ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.

Read Full Story

12:27 PM (IST) Jul 13

ಚಲಿಸುವ ರೈಲಿನಲ್ಲಿ ಹೋಮ-ಹವನ, ಪೂಜೆ! ಭುಗಿಲೆದ್ದ ವಿವಾದ.. ಅಸಲಿಗೆ ಆಗಿದ್ದೇನು?

ಚಲಿಸುವ ರೈಲಿನಲ್ಲಿ ಅರ್ಚಕರು ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿ ಚರ್ಚೆಗೆ ಕಾರಣವಾಗಿತ್ತು. ಇದು ಸಾಮಾನ್ಯ ಕೋಚ್ ಅಲ್ಲ, ಬದಲಿಗೆ ಐಆರ್‌ಸಿಟಿಸಿ ಮೂಲಕ 3 ಲಕ್ಷಕ್ಕೂ ಹೆಚ್ಚು ಹಣ ಪಾವತಿಸಿ ಬುಕ್ ಮಾಡಲಾಗಿದ್ದ ಖಾಸಗಿ 'ಸಲೂನ್ ಕಾರ್' ಎಂದು ಉತ್ತರ ರೈಲ್ವೆ ಸ್ಪಷ್ಟಪಡಿಸಿದೆ.
Read Full Story

12:24 PM (IST) Jul 13

ಭಿಕ್ಷುಕರಿಗೆ ಬಿರಿಯಾನಿ ಕೊಟ್ಟು ಅಕ್ರಮ ವೀರ್ಯ ಸಂಗ್ರಹ - ಆಘಾತಕಾರಿ ಮಾನವ ಕಳ್ಳಸಾಗಾಣಿಕೆ ಜಾಲ ಬಯಲು

ಪೊಲೀಸರು ಖಾಸಗಿ ವೀರ್ಯ ಬ್ಯಾಂಕ್ ಮೇಲೆ ದಾಳಿ ನಡೆಸಿ, ಭಿಕ್ಷುಕರಿಗೆ ಬಿರಿಯಾನಿ ಮತ್ತು ಹಣದ ಆಮಿಷವೊಡ್ಡಿ ವೀರ್ಯ ಸಂಗ್ರಹಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಅಕ್ರಮವು ಬಾಡಿಗೆ ತಾಯ್ತನ ಮತ್ತು ಮಕ್ಕಳ ಕಳ್ಳಸಾಗಾಣಿಕೆಯ ದೊಡ್ಡ ದಂಧೆಯ ಭಾಗವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿನ ಅನೈತಿಕ ಶೋಷಣೆಯನ್ನು ಇದು ಎತ್ತಿ ತೋರಿಸುತ್ತದೆ.

Read Full Story

12:10 PM (IST) Jul 13

Actor Arya Case - ತಮಿಳು ನಟ ಆರ್ಯ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ ದಾಖಲು!

ವಿವಾದಗಳು ನಡೆಯುತ್ತಿದ್ದರೂ, ಆರ್ಯ ತಮ್ಮ ಚಲನಚಿತ್ರದ ಯೋಜನೆ ಹಾಗೂ ಕೆಲಸಗಳಲ್ಲಿ ನಿರತರಾಗಿದ್ದಾರೆ. ಸಂತೋಷ್ ಶ್ರೀವತ್ಸನ್ ನಿರ್ದೇಶನದ ಮತ್ತು ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಸಹ-ನಿರ್ಮಿಸಿದ 'ಸೀ ಯು' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ಇತ್ತೀಚೆಗೆ ಅನಾವರಣಗೊಳಿಸಿದರು.

Read Full Story

11:43 AM (IST) Jul 13

ಬಂಗಾರದ ಬೆಲೆಯಲ್ಲಿಂದು ಮಹಾ ಪತನ; ಬೆಂಗಳೂರಿನಲ್ಲಿಂದು ಗೋಲ್ಡ್ ರೇಟ್ ಎಷ್ಟು?

ಬೆಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯು ಇಳಿಮುಖ ಮಾಡಿದೆ. ಇದು ಸಾಮಾನ್ಯ ಹಾಗೂ ಮಧ್ಯಮ ವರ್ಗದ ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಅಷ್ಟಕ್ಕೂ ಜೂನ್ 13ರಂದು ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ? ನೋಡೋಣ ಬನ್ನಿ.

Read Full Story

11:42 AM (IST) Jul 13

ಹತ್ತನೇ ತರಗತಿ ಪಾಸಾದ್ರೆ ಸಾಕು.. ಬುಲೆಟ್ ಟ್ರೈನ್ ಪ್ರಾಜೆಕ್ಟ್‌ನಲ್ಲಿ ಜಾಬ್, ಲಕ್ಷದವರೆಗೆ ಸಂಬಳ..!

ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಗಾಗಿ NHSRCL 237 ಟೆಕ್ನಿಷಿಯನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಐಟಿಐ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿದ, ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Read Full Story

11:24 AM (IST) Jul 13

'ಆಮಿರ್ ಖಾನ್ 3 ಮದುವೆಯಾದ್ರು, ನೀವು ನಾಲ್ಕು ಆಗಿ..' ಬಿಜೆಪಿ ನಾಯಕ ನಿತೇಶ್ ರಾಣೆ ವಿರುದ್ಧ ವಾರಿಸ್ ಪಠಾಣ್ ವ್ಯಂಗ್ಯ

ನಟ ಆಮಿರ್ ಖಾನ್ ಅವರ ಮೂರನೇ ಮದುವೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದನ್ನು 'ಲವ್ ಜಿಹಾದ್' ಎಂದು ಕರೆದ ಬಿಜೆಪಿ ನಾಯಕ ನಿತೇಶ್ ರಾಣೆಗೆ, ಎಐಎಂಐಎಂ ನಾಯಕ ವಾರಿಸ್ ಪಠಾಣ್ ತಿರುಗೇಟು. ಆಮಿರ್ ಕುಟುಂಬಕ್ಕಿಲ್ಲದ ಸಮಸ್ಯೆ ನಿಮಗೇಕೆ, ಬೇಕಿದ್ದರೆ ನೀವು ನಾಲ್ಕು ಮದುವೆಯಾಗಿ ಎಂದು ಪಠಾಣ್ ವ್ಯಂಗ್ಯ

Read Full Story

11:13 AM (IST) Jul 13

ದಂಗು ಬಡಿಸೋ ಸೂರ್ಯವಂಶಿ ಈ ಲುಕ್‌ನ ಹಿಂದೆ ಒಬ್ಬರ ಕೈವಾಡ.. ವೈಭವ್ ನೆಚ್ಚಿನ ತಾರೆ ಯಾರು..?

15 ವರ್ಷದ ಯುವ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ, ಯುವರಾಜ್ ಸಿಂಗ್, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರೊಂದಿಗೆ ಲಂಡನ್‌ನ ವಿಂಬಲ್ಡನ್ ಫೈನಲ್ ಪಂದ್ಯ ವೀಕ್ಷಿಸಿದರು. ಈ ವೇಳೆ ತಮ್ಮ ಮೊದಲ ವಿಂಬಲ್ಡನ್ ಅನುಭವ, ಟೆನಿಸ್ ಮೇಲಿನ ಆಸಕ್ತಿ ಮತ್ತು ಅಭಿಷೇಕ್ ಶರ್ಮಾ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಟೆನಿಸ್ ಡಬಲ್ಸ್ ಆಡುವುದಾದರೆ ಅಭಿಷೇಕ್ ಅವರನ್ನೇ ಪಾರ್ಟ್ನರ್ ಆಗಿ ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ.
Read Full Story

10:55 AM (IST) Jul 13

ವಿಂಬಲ್ಡನ್‌ನಲ್ಲಿ ಈ ಸಲವೂ ಯಾನ್ನಿಕ್‌ ಸಿನ್ನರ್‌ ವಿನ್ನರ್!

ವಿಶ್ವದ ನಂ.1 ಆಟಗಾರ ಯಾನ್ನಿಕ್‌ ಸಿನ್ನರ್‌, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ರನ್ನು ಮಣಿಸಿ ಸತತ ಎರಡನೇ ಬಾರಿಗೆ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ರೋಚಕ ಗೆಲುವಿನೊಂದಿಗೆ, ಸಿನ್ನರ್‌ ತಮ್ಮ ವೃತ್ತಿಜೀವನದ ಐದನೇ ಗ್ರ್ಯಾನ್‌ಸ್ಲಾಂ ಕಿರೀಟವನ್ನು ಮುಡಿಗೇರಿಸಿಕೊಂಡರು.
Read Full Story

10:43 AM (IST) Jul 13

ರಾಜ್ಯಕ್ಕೆ ಶಿವಮೊಗ್ಗ ‘ಮಹಾರಾಜ’; ಬೆಂಗಳೂರು ಪರ ಸಮಿತ್ ದ್ರಾವಿಡ್ ಹೋರಾಟ ವ್ಯರ್ಥ

ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಫೈನಲ್‌ನಲ್ಲಿ ಶಿವಮೊಗ್ಗ ಯೋಧಾಸ್‌ ತಂಡವು ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಚಾಂಪಿಯನ್‌ ಪಟ್ಟಕ್ಕೇರಿತು. ನಾಯಕ ಲವ್‌ನಿತ್‌ ಸಿಸೋಡಿಯಾ ಅವರ ಸ್ಫೋಟಕ 87 ರನ್‌ಗಳ ನೆರವಿನಿಂದ ಶಿವಮೊಗ್ಗ ಗೆಲುವಿನ ನಗೆ ಬೀರಿದರೆ, ಬೆಂಗಳೂರು ಪರ ಸಮಿತ್ ದ್ರಾವಿಡ್ ಅವರ ಆಲ್‌ರೌಂಡ್ ಪ್ರದರ್ಶನ ವ್ಯರ್ಥವಾಯಿತು.
Read Full Story

10:35 AM (IST) Jul 13

35 ವರ್ಷದ ಹಿಂದೆ ಪಡೆದ ₹1000ಕ್ಕೆ ಬಡ್ಡಿ ಸೇರಿಸಿ ಈಗ ₹35,000 ಪಾವತಿ

35 ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಸಹೋದ್ಯೋಗಿ ಲಚ್ಚಣ್ಣನಿಂದ 1000 ರೂ. ಸಾಲ ಪಡೆದಿದ್ದ ಇಸ್ಮಾಯಿಲ್, ಸಂಪರ್ಕ ಕಳೆದುಕೊಂಡರೂ ಅವರನ್ನು ಮರೆತಿರಲಿಲ್ಲ. ಇತ್ತೀಚೆಗೆ, ಕೇವಲ ಅಲ್ಪ ಮಾಹಿತಿಯಿಂದ ಲಚ್ಚಣ್ಣನ ವಿಳಾಸ ಪತ್ತೆಹಚ್ಚಿ, ಅವರ ಕುಟುಂಬಕ್ಕೆ ಬಡ್ಡಿ ಸಮೇತ 25,000 ರೂ. ಮರಳಿಸಿದ್ದಾರೆ.

Read Full Story

10:20 AM (IST) Jul 13

ಇಸ್ರೋದಿಂದ ಗಗನಯಾನದ 3 ಸಿದ್ಧತಾ ಪರೀಕ್ಷೆ ಯಶಸ್ವಿ

ಇಸ್ರೋ ತನ್ನ ಮಹತ್ವಾಕಾಂಕ್ಷಿ ‘ಗಗನಯಾನ’ ಯೋಜನೆಗಾಗಿ ಕ್ರೂ ಮಾಡ್ಯೂಲ್‌ನ ಮೂರು ಪ್ರಮುಖ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಪರೀಕ್ಷೆಗಳು ಬಾಹ್ಯಾಕಾಶದಿಂದ ಮರಳುವಾಗ ಮಾಡ್ಯೂಲ್ ನೀರಿನಲ್ಲಿ ತೇಲುವ ಪರೀಕ್ಷೆಯನ್ನು ಒಳಗೊಂಡಿದೆ.

Read Full Story

10:13 AM (IST) Jul 13

FIFA World Cup 2026 - ವಿಶ್ವಚಾಂಪಿಯನ್‌ ಅರ್ಜೆಂಟೀನಾ ಸೆಮಿಫೈನಲ್‌ಗೆ

ಹಾಲಿ ಚಾಂಪಿಯನ್‌ ಅರ್ಜೆಂಟೀನಾ, ಸ್ವಿಜರ್‌ಲೆಂಡ್‌ ವಿರುದ್ಧದ ಫಿಫಾ ವಿಶ್ವಕಪ್ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಜಯಗಳಿಸಿ ಸೆಮಿಫೈನಲ್‌ ಪ್ರವೇಶಿಸಿದೆ. ನಿಗದಿತ ಅವಧಿಯಲ್ಲಿ 1-1 ಗೋಲುಗಳಿಂದ ಸಮಬಲಗೊಂಡ ಪಂದ್ಯವು ಹೆಚ್ಚುವರಿ ಅವಧಿಗೆ ಸಾಗಿತು, ಅಲ್ಲಿ ಜೂಲಿಯನ್‌ ಆಲ್ವರೆಜ್‌ ಮತ್ತು ಲಾಟರೊ ಮಾರ್ಟಿನೆಜ್‌ ಗೋಲು ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
Read Full Story

10:05 AM (IST) Jul 13

ಮನೆಯಲ್ಲಿ ಹಿಂದು, ಹೊರಗೆ ಜಾತ್ಯಾತೀತ; ಧರ್ಮ ಪ್ರದರ್ಶನದ ಅಗತ್ಯ ನನಗಿಲ್ಲ ಎಂದ ಅಣ್ಣಾಮಲೈ

ಇತ್ತೀಚೆಗೆ ಬಿಜೆಪಿ ತೊರೆದ ಕೆ. ಅಣ್ಣಾಮಲೈ, ನಿಜವಾದ ಹಿಂದೂ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಪೊಲ್ಲಾಚಿಯಲ್ಲಿ ನಡೆದ ಸಮಾವೇಶದಲ್ಲಿ, ಯುವಕರ ಮೂಲಕ ರಾಜಕೀಯ ಬದಲಾವಣೆ ತಂದು ಅಧಿಕಾರಕ್ಕೇರುವ ಪರೋಕ್ಷ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
Read Full Story

09:48 AM (IST) Jul 13

ದಾಖಲೆಗಾಗಿ 6 ವರ್ಷದ ಮೊಮ್ಮಗಳಿಗೆ ಕಾರ್‌ ಕೊಟ್ಟ ಪೊಲೀಸ್‌, ಭಾರೀ ಜನಾಕ್ರೋಶ!

ಗಿನ್ನೆಸ್‌ ದಾಖಲೆ ನಿರ್ಮಿಸುವ ಉದ್ದೇಶದಿಂದ ಹೈದರಾಬಾದ್‌ನ ಪೊಲೀಸ್ ಉಪ-ನಿರೀಕ್ಷಕರೊಬ್ಬರು ತಮ್ಮ 6 ವರ್ಷದ ಮೊಮ್ಮಗಳಿಗೆ ವಾಹನದಟ್ಟಣೆಯ ರಸ್ತೆಯಲ್ಲಿ ಕಾರು ಚಲಾಯಿಸಲು ಬಿಟ್ಟಿದ್ದಾರೆ. ಈ ಹುಚ್ಚಾಟಕ್ಕಾಗಿ ಅವರ ವಿರುದ್ಧ ಇತರರ ಜೀವಕ್ಕೆ ಅಪಾಯವನ್ನುಂಟುಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
Read Full Story

09:33 AM (IST) Jul 13

ಲಾರ್ಡ್ಸ್‌ನಲ್ಲಿ ಗೆಲುವಿನ ಹೊಸ್ತಿಲಲ್ಲಿ ಭಾರತ ಮಹಿಳಾ ತಂಡ; ಯಸ್ತಿಕಾ ಭಾಟಿಯಾ ಚೊಚ್ಚಲ ಶತಕ

ಪ್ರತಿಷ್ಠಿತ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್‌ಗೆ 457 ರನ್‌ಗಳ ಬೃಹತ್ ಗುರಿ ನೀಡಿದೆ. ಯಸ್ತಿಕಾ ಭಾಟಿಯಾ ಅವರ ಚೊಚ್ಚಲ ಶತಕದ ನೆರವಿನಿಂದ ಭಾರತ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದೆ.
Read Full Story

09:25 AM (IST) Jul 13

ಕ್ಷಿಪಣಿ ನಿರ್ಮಾಣಕ್ಕೆ ಶೀಘ್ರ ಖಾಸಗಿ ಕಂಪನಿಗಳಿಗೂ ಅವಕಾಶ?

ಭಾರತ ಸರ್ಕಾರವು ತನ್ನ ರಕ್ಷಣಾ ಉತ್ಪಾದನಾ ನೀತಿಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಖಾಸಗಿ ಕಂಪನಿಗಳಿಗೂ ಕ್ಷಿಪಣಿಗಳನ್ನು ನಿರ್ಮಿಸಲು ಮತ್ತು ಅಭಿವೃದ್ಧಿಪಡಿಸಲು ಅವಕಾಶ ನೀಡಲು ಸಿದ್ಧತೆ ನಡೆಸಿದೆ.

Read Full Story

08:43 AM (IST) Jul 13

ರಾಹುಲ್ ದ್ರಾವಿಡ್‌ಗೆ ಇಂಗ್ಲೆಂಡ್ ಕ್ರಿಕೆಟ್ ಬಿಗ್ ಆಫರ್.. ಟೆಸ್ಟ್ ಕ್ರಿಕೆಟ್ ಉಳಿಸಲು ಕನ್ನಡಿಗನ ಆಸರೆ ಬಯಸಿದ ECB

ಕನ್ನಡಿಗ ರಾಹುಲ್ ದ್ರಾವಿಡ್‌ಗೆ ಬೇಡಿಕೆ ಹೆಚ್ಚಾಗಿದೆ. ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಕೋಚ್ ಆಗಿ ನೇಮಿಸಲು ಇಸಿಬಿ ಬಯಸಿದ್ದು, ಅದಕ್ಕೆ ದ್ರಾವಿಡ್ ಅವರ ಸಮ್ಮತಿಗಾಗಿ ಕಾಯ್ತಿದೆ ಎಂದು ವರದಿಯಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

Read Full Story

08:02 AM (IST) Jul 13

ಅಮೆರಿಕ-ಇರಾನ್‌ ನಡುವೆ ಮತ್ತೊಂದು ಸುತ್ತಿನ ಭೀಕರ ಕದನ, ಹೋರ್ಮುಜ್‌ ಮತ್ತೆ ಬಂದ್‌

ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಇರಾನ್ ದಾಳಿ ಮಾಡಿ ಜಲಸಂಧಿಯನ್ನು ಮುಚ್ಚಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್‌ನ 140 ನೆಲೆಗಳ ಮೇಲೆ ದಾಳಿ ನಡೆಸಿದ್ದು, ನಂತರ ಇರಾನ್ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿದೆ.

Read Full Story

07:47 AM (IST) Jul 13

ಬದರೀನಾಥ ದೇಗುಲದಲ್ಲೂ ಹುಂಡಿ ಕಳವು ನಿಜ - ಎಸ್‌ಐಟಿ

ಉತ್ತರಾಖಂಡದ ಬದರೀನಾಥ ದೇವಾಲಯದಲ್ಲಿ ನಡೆದಿದೆ ಎನ್ನಲಾದ ಹುಂಡಿ ಕಳವು ಪ್ರಕರಣವನ್ನು ವಿಶೇಷ ತನಿಖಾ ತಂಡ (SIT) ದೃಢಪಡಿಸಿದೆ. ತನಿಖಾ ವರದಿಯನ್ನು ದೇವಾಲಯ ಸಮಿತಿಗೆ ಸಲ್ಲಿಸಲಾಗಿದ್ದು, ಆರೋಪಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚಿಸಿದೆ.

Read Full Story

07:38 AM (IST) Jul 13

Operation entebbe: ಎಂಟೆದೆಯ ಎಂಟೆಬ್ಬೆಗೆ ಈಗ 50! ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಇಸ್ರೇಲ್‌ ಕಾರ್ಯಾಚರಣೆ!

1976ರಲ್ಲಿ ಪ್ಯಾಲೆಸ್ತೀನ್‌ ಮತ್ತು ಜರ್ಮನ್‌ ಉಗ್ರರು ಏರ್‌ ಫ್ರಾನ್ಸ್‌ ವಿಮಾನವನ್ನು ಅಪಹರಿಸಿ, ಇಸ್ರೇಲಿ ಪ್ರಯಾಣಿಕರನ್ನು ಉಗಾಂಡದ ಎಂಟೆಬ್ಬೆಯಲ್ಲಿ ಒತ್ತೆಯಾಳಾಗಿರಿಸಿಸಿದರು ಇಸ್ರೇಲ್‌ ಸೇನೆ 'ಆಪರೇಷನ್‌ ಎಂಟೆಬ್ಬೆ' ಎಂಬ ರಣರೋಚಕ ಕಾರ್ಯಾಚರಣೆ ನಡೆಸಿ, ಎಲ್ಲಾ ಸವಾಲುಗಳನ್ನು ರಕ್ಷಿಸಿದ ರಣರೋಚಕ ಕತೆಯಿದು.

 

Read Full Story

More Trending News