MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Jobs
  • ಹತ್ತನೇ ತರಗತಿ ಪಾಸಾದ್ರೆ ಸಾಕು.. ಬುಲೆಟ್ ಟ್ರೈನ್ ಪ್ರಾಜೆಕ್ಟ್‌ನಲ್ಲಿ ಜಾಬ್, ಲಕ್ಷದವರೆಗೆ ಸಂಬಳ..!

ಹತ್ತನೇ ತರಗತಿ ಪಾಸಾದ್ರೆ ಸಾಕು.. ಬುಲೆಟ್ ಟ್ರೈನ್ ಪ್ರಾಜೆಕ್ಟ್‌ನಲ್ಲಿ ಜಾಬ್, ಲಕ್ಷದವರೆಗೆ ಸಂಬಳ..!

ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಗಾಗಿ NHSRCL 237 ಟೆಕ್ನಿಷಿಯನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಐಟಿಐ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿದ, ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

1 Min read
Author : Ganesh Mabla Gowda
Published : Jul 13 2026, 11:42 AM IST
Share this Photo Gallery
  • FB
  • TW
  • Linkdin
  • Whatsapp
14
ಬುಲೆಟ್ ಟ್ರೈನ್ ಪ್ರಾಜೆಕ್ಟ್‌ನಲ್ಲಿ ಕೆಲಸ
Image Credit : Gemini AI

ಬುಲೆಟ್ ಟ್ರೈನ್ ಪ್ರಾಜೆಕ್ಟ್‌ನಲ್ಲಿ ಕೆಲಸ

ನವದೆಹಲಿ: ದೇಶದ ಮೊದಲ ಬುಲೆಟ್ ಟ್ರೈನ್ ಪ್ರಾಜೆಕ್ಟ್ ಆಗಿರುವ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲ್ ಕಾರಿಡಾರ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 237 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಯಾವೆಲ್ಲಾ ಹುದ್ದೆಗಳಿವೆ? (ಒಟ್ಟು 237 ಹುದ್ದೆಗಳು)
Image Credit : X

ಯಾವೆಲ್ಲಾ ಹುದ್ದೆಗಳಿವೆ? (ಒಟ್ಟು 237 ಹುದ್ದೆಗಳು)

  • ಎಲೆಕ್ಟ್ರಿಕಲ್ ಟೆಕ್ನಿಷಿಯನ್: 77 ಹುದ್ದೆಗಳು
  • ಸಿಗ್ನಲಿಂಗ್ ಮತ್ತು ಟೆಲಿಕಾಂ ಟೆಕ್ನಿಷಿಯನ್: 63 ಹುದ್ದೆಗಳು
  • ಸಿವಿಲ್/ಟ್ರಾಕ್ ಫಿಟ್ಟರ್: 18 ಹುದ್ದೆಗಳು
  • ಸಿವಿಲ್/ಟ್ರಾಕ್ ಮೆಕಾನಿಕ್: 16 ಹುದ್ದೆಗಳು
  • ರೋಲಿಂಗ್ ಸ್ಟಾಕ್ ಎಲೆಕ್ಟ್ರೀಷಿಯನ್: 13 ಹುದ್ದೆಗಳು
  • ರೋಲಿಂಗ್ ಸ್ಟಾಕ್ ಫಿಟ್ಟರ್: 10 ಹುದ್ದೆಗಳು
  • ಇದಲ್ಲದೆ ಡ್ರಾಫ್ಟ್ಸ್‌ಮ್ಯಾನ್, ಸರ್ವೇಯರ್, ವೆಲ್ಡರ್, ಪ್ಲಂಬರ್ ಮತ್ತು ಪೇಂಟರ್ ವಿಭಾಗಗಳಲ್ಲೂ ಹುದ್ದೆಗಳಿವೆ

Related Articles

Related image1
ಒಂದು ಪಾನಿಪುರಿಗಾಗಿ 12 ವರ್ಷಗಳಿಂದ ಕೋರ್ಟ್‌ ಅಲೆದಾಟ.. ರೋಚಕ ಕಾನೂನು ಸಮರ..!
Related image2
ಕೆಲಸ ಹುಡುಕುತ್ತಿರೋರಿಗೆ ಭರ್ಜರಿ ಗುಡ್‌ನ್ಯೂಸ್.. ಕನಸು ನನಸು ಮಾಡಿಕೊಳ್ಳಲು ಇಲ್ಲಿದೆ ಸುವರ್ಣ ಅವಕಾಶ
34
ಶೈಕ್ಷಣಿಕ ಅರ್ಹತೆ ಏನು?
Image Credit : AI

ಶೈಕ್ಷಣಿಕ ಅರ್ಹತೆ ಏನು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಇದರೊಂದಿಗೆ ಸಂಬಂಧಪಟ್ಟ ಟ್ರೇಡ್‌ನಲ್ಲಿ ITI ಸರ್ಟಿಫಿಕೇಟ್ ಅಥವಾ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿರಬೇಕು. ಅಥವಾ ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗದಲ್ಲಿ 3 ವರ್ಷಗಳ ಡಿಪ್ಲೊಮಾ ಹೊಂದಿರಬೇಕು. ಅಭ್ಯರ್ಥಿಗಳಿಗೆ ಭಾರತೀಯ ರೈಲ್ವೆ, ಮೆಟ್ರೋ ರೈಲ್ ಅಥವಾ ರೀಜನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (RRTS) ನಂತಹ ಸರ್ಕಾರಿ ರೈಲ್ವೆ ಸಂಸ್ಥೆಗಳಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆ (O&M) ವಿಭಾಗದಲ್ಲಿ ಕನಿಷ್ಠ 2 ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ.

44
ವಯೋಮಿತಿ
Image Credit : Gemini AI

ವಯೋಮಿತಿ

ಗರಿಷ್ಠ ವಯೋಮಿತಿ 35 ವರ್ಷ ಎಂದು ನಿಗದಿಪಡಿಸಲಾಗಿದೆ

ಸಂಬಳದ ವಿವರ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 35,000 ರೂ. ನಿಂದ 1,10,000 ರೂ. ವರೆಗೆ ಆಕರ್ಷಕ ವೇತನ ಶ್ರೇಣಿ (NE-2 ಪೇ ಸ್ಕೇಲ್) ಸಿಗಲಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ದಾಖಲೆಗಳ ಪರಿಶೀಲನೆ (Document Verification)
  • ವೈದ್ಯಕೀಯ ಪರೀಕ್ಷೆ (Medical Examination)
  • ಅರ್ಜಿ ಶುಲ್ಕ: ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: 400 ರೂ., ಎಸ್ಸಿ, ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಸಕ್ತರು ಆಗಸ್ಟ್ 5, 2026 ರೊಳಗೆ NHSRCL ನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಗಾಗಿ ಅಭ್ಯರ್ಥಿಗಳು www.nhsrcl.in ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ.

About the Author

GM
Ganesh Mabla Gowda
ಉದ್ಯೋಗಗಳು
ವ್ಯವಹಾರ
ರೈಲು
ಸುದ್ದಿ
ನ್ಯೂಸ್‌ ರೌಂಡ್‌ಅಪ್

Latest Videos
Recommended Stories
Recommended image1
Zepto Delivery Boy Earning: ಅಬ್ಬಬ್ಬಾ.. ಏನ್ರೀ ಇದು.. 1 ವಾರದ ಆದಾಯ ರಿವೀಲ್‌ ಮಾಡಿದ ಜೆಪ್ಟೊ ಡೆಲಿವರಿ ಬಾಯ್‌
Recommended image2
Viral News: ಆಫರ್ ಲೆಟರ್‌ನಲ್ಲಿ ₹10 ಸಾವಿರ, ಖಾತೆಗೆ ₹5 ಸಾವಿರ! ಕಂಪನಿಗೆ ಪ್ರಶ್ನೆಗಳ ಸುರಿಮಳೆ
Recommended image3
ಕೋಟೆನಾಡಿನಿಂದ ಕ್ಯಾಲಿಫೋರ್ನಿಯಾ: 2.6 ಕೋಟಿ ಸಂಬಳಕ್ಕೆ Nvidia ಕೇಂದ್ರ ಕಚೇರಿಯಲ್ಲಿ ಕೆಲಸ ಗಿಟ್ಟಿಸಿದ ಚಿತ್ರದುರ್ಗದ ಹುಡುಗ
Related Stories
Recommended image1
ಒಂದು ಪಾನಿಪುರಿಗಾಗಿ 12 ವರ್ಷಗಳಿಂದ ಕೋರ್ಟ್‌ ಅಲೆದಾಟ.. ರೋಚಕ ಕಾನೂನು ಸಮರ..!
Recommended image2
ಕೆಲಸ ಹುಡುಕುತ್ತಿರೋರಿಗೆ ಭರ್ಜರಿ ಗುಡ್‌ನ್ಯೂಸ್.. ಕನಸು ನನಸು ಮಾಡಿಕೊಳ್ಳಲು ಇಲ್ಲಿದೆ ಸುವರ್ಣ ಅವಕಾಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved