ನಟ ಆಮಿರ್ ಖಾನ್ ಅವರ ಮೂರನೇ ಮದುವೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದನ್ನು 'ಲವ್ ಜಿಹಾದ್' ಎಂದು ಕರೆದ ಬಿಜೆಪಿ ನಾಯಕ ನಿತೇಶ್ ರಾಣೆಗೆ, ಎಐಎಂಐಎಂ ನಾಯಕ ವಾರಿಸ್ ಪಠಾಣ್ ತಿರುಗೇಟು. ಆಮಿರ್ ಕುಟುಂಬಕ್ಕಿಲ್ಲದ ಸಮಸ್ಯೆ ನಿಮಗೇಕೆ, ಬೇಕಿದ್ದರೆ ನೀವು ನಾಲ್ಕು ಮದುವೆಯಾಗಿ ಎಂದು ಪಠಾಣ್ ವ್ಯಂಗ್ಯ

ಬಾಲಿವುಡ್ ನಟ, ಮಿ.ಪರ್ಫೆಕ್ಟ್ ಆಮಿರ್ ಖಾನ್ ಇತ್ತೀಚೆಗೆ ಗೌರಿ ಸ್ಪ್ರಾಟ್ ಅವರೊಂದಿಗೆ ಮೂರನೇ ಮದುವೆಯಾದರು. ಆಮಿರ್‌ ಖಾನ್‌ರ ಈ ವಿವಾಹವು ಮಹಾರಾಷ್ಟ್ರದ ರಾಜಕೀಯದಲ್ಲಿ ವಿವಾದ, ಉದ್ವಿಗ್ನತೆಗೆ ಕಾರಣವಾಗಿದೆ. 'ಆಮಿರ್ ಖಾನ್ ಮೂರು ಮದುವೆಯಾದ್ರು, ನೀವು ನಾಲ್ಕು ಮದುವೆ ಆಗಿ ತೋರಿಸಿ' ಎಂದು ಹಿಂದುತ್ವವಾದಿ ರಾಜಕಾರಣಿ ನಿತೇಶ್ ರಾಣೆ ವಿರುದ್ಧ ಎಐಎಂಐ ನಾಯಕ ವಾರಿಸ್ ಪಠಾಣ್ ವ್ಯಂಗ್ಯವಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಮಿರ್ ಖಾನ್ 'ಲವ್ ಜಿಹಾದ್'ನ ಬ್ರಾಂಡ್ ರಾಯಭಾರಿ'

ಬಾಲಿವುಡ್ ನಟ ಮುಸ್ಲಿಂಮಾಗಿದ್ದರೂ ಮೂವರು ಹಿಂದೂ ಮಹಿಳೆಯರನ್ನ ಮದುವೆಯಾದ್ದಾರೆ. ಆ ಮೂಲಕ ಲವ್ ಜಿಹಾದ್‌ನ ಬ್ರಾಂಡ್ ರಾಯಭಾರಿ ಆಗಿದ್ದಾರೆ ಎಂದು ನಿತೇಶ್ ರಾಣೆ ಅವರು ಕಿಡಿಕಾರಿದ್ದರು. ಅಲ್ಲದೇ ಹಿಂದೂಗಳು ಆಮಿರ್‌ ಖಾನ್ ಅವರ ಸಿನಿಮಾಗಳನ್ನ ನೋಡದಂತೆ ಕರೆ ನೀಡಿದ್ದರು. ರಾಣೆ ಹೇಳಿಕೆಗೆ ವಾರಿಸ್ ಪಠಾಣ್ ವ್ಯಂಗ್ಯವಾಡಿದ್ದಾರೆ.

ಆಮಿರ್ ಖಾನ್ ಬಗ್ಗೆ ನಿತೇಶ್ ರಾಣೆಗೆ ಹೊಟ್ಟೆ ಉರಿ

ಆಮಿರ್ ಖಾನ್ ಬಗ್ಗೆ ಹಿಂದೂತ್ವವಾದಿ ನಿತೇಶ್ ರಾಣೆಗೆ ಅಸೂಯೆ ಹೆಚ್ಚಾಗಿದೆ. ಅದಕ್ಕಾಗಿಯೇ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆಮಿರ್ ಖಾನ್ ಮೂರು ಬಾರಿ ಮದುವೆಯಾದರೆ ಏನಾಯ್ತು, ನೀವು ನಾಲ್ಕು ಮದುವೆಯಾಗಬಹುದು. ನಿಮ್ಮನ್ನು ತಡೆಯುವವರು ಯಾರು? ನೀವು ಯಾಕೆ ಅಸೂಯೆ ಪಡುತ್ತಿದ್ದೀರಿ? ಎಂದು ವಾರಿಸ್ ಪಠಾಣ್ ಪ್ರಶ್ನಿಸಿದ್ದಾರೆ.

ಕುಟುಂಬದವರಿಗಿಲ್ಲದ ಸಿಟ್ಟು ನಿಮಗ್ಯಾಕೆ?

ಆಮಿರ್ ಖಾನ್ ಅವರ ಕುಟುಂಬದವರು, ಸ್ನೇಹಿತರು ಮೂರನೇ ಮದುವೆ ಬಗ್ಗೆ ಯಾವುದೇ ಅಸಮಾಧಾನ ಆಕ್ಷೇಪಣೆ ಇಲ್ಲ. ಆಮೀರ್ ಖಾನ್ ಅವರ ಮೊದಲ ಮತ್ತು ಎರಡನೇ ಪತ್ನಿ ಕೂಡ ಮದುವೆಗೆ ಬಂದಿದ್ರು. ಅವರ ಮಗ ಮಗಳು ಕೂಡ ಬಂದಿದ್ರು. ಅಷ್ಟೇ ಅಲ್ಲ, ಈ ಮದುವೆಗೆ ಅಳಿಯ ಕೂಡ ಬಂದಿದ್ರು. ಅವರ ಸ್ನೇಹಿತರು ಮತ್ತು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ಕೂಡ ಬಂದಿದ್ರು. ಇವರಾರು ಆಮಿರ್ ಖಾನ್ ಮೂರನೇ ಮದುವೆ ಆಗ್ತಿದ್ದಾರೆ, ಲವ್ ಜಿಹಾದ್ ಮಾಡ್ತಿದ್ದಾರೆ ಅಂತಾ ಅನ್ನಿಸಲಿಲ್ಲ. ಆದ್ರೆ ನೀವು ಮಾತ್ರ. ನೀವು ಮಾತ್ರ ಯಾಕೆ ಅಸೂಯೆ ಮಾಡ್ತೀರಾ ಎಂದು ವಾರಿಸ್ ಪಠಾಣ್ ಪ್ರಶ್ನಿಸಿದ್ದಾರೆ.

ನಿತೇಶ್ ರಾಣೆಗೆ ಜಿಹಾದ್‌ನ ಅರ್ಥವೇ ಗೊತ್ತಿಲ್ಲ

ಅಮಿರ್‌ ಖಾನ್‌ಗೆ ನೇಮ್ ಫೇಮು, ಹಣ ಎಲ್ಲ ಇದೆ ಆದ್ದರಿಂದ ಅವರು ಮೂರನೇ ಬಾರಿಗೆ ವಿವಾಹವಾದರು. ನಿಮಗೂ ಹಣ ಅಧಿಕಾರಿ ಇದೆ, ನೀವೂ ಹಾಗೆ ಮಾಡಿ. ಕಾನೂನಿನ ಚೌಕಟ್ಟಿನೊಳಗೆ ಯಾರಾದರೂ ಮದುವೆಯಾಗಲು ಬಯಸಿದ್ರೆ ಮದುವೆ ಆಗಬಹುದು. ಬೇಕಿದ್ರೆ ನೀವು ನಾಲ್ಕು ಮದುವೆಯಾಗಿ ಅದುಬಿಟ್ಟು ಲವ್ ಜಿಹಾದ್ ಅಂತಾ ಅಸಂಬದ್ಧ ಹೇಳಿಕೆ ನೀಡಬಾರದು. ಅಷ್ಟಕ್ಕೂ ನಿಮಗೆ(ನಿತೇಶ್ ರಾಣೆ) ಲವ್ ಜಿಹಾದ್ ಅರ್ಥವೇ ತಿಳಿದಿಲ್ಲ ಎಂದು ವಾರಿಸ್ ಪಠಾಣ್ ಲೇವಡಿ ಮಾಡಿದ್ದಾರೆ.

ಮುಸ್ಲಿಂ ಬಗೆಗಿನ ದ್ವೇಷವೇ ನಿತೇಶ್ ರಾಣೆಯವರ ಮಾತುಗಳಿಗೆ ಕಾರಣ. ಅವರ ಗುರಿ ಅಮಿರ್ ಖಾನ್ ಅಲ್ಲ, ಬದಲಾಗಿ ಮುಸ್ಲಿಮರು. ನಾನು ಇಂಹ ಜನರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಇಷ್ಟಪಡೋಲ್ಲ ಅವರು ಮುಸ್ಲಿಮರ ಮೇಲಿನ ದ್ವೇಷ ಹೊರಹಾಕಲು, ದ್ವೇಷವನ್ನು ಹರಡಲು ಒಗ್ಗಿಕೊಂಡಿದ್ದಾರೆ ಪಠಾಣ್ ಹೇಳಿದ್ದಾರೆ.