LIVE NOW
Published : Sep 25, 2026, 07:34 AM ISTUpdated : Sep 25, 2026, 03:28 PM IST

India News Live: ಜನರ ನಂಬಿಕೆ ಉಳಿಸಿ, ತಪ್ಪು ನಡೆದಿಲ್ಲವೆಂದು ದೃಢಪಡಿಸಿ, ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಸಲಹೆ!

ಸಾರಾಂಶ

ನವದೆಹಲಿ: ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಸೇರಿ ವಿವಿಧ ವಿಚಾರಗಳಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಜಾ ಮತ್ತು ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗೆ ನಿರ್ಧರಿಸಿದೆ.

2 ಹಂತದಲ್ಲಿ ಪ್ರತಿಭಟನೆ ನಡೆಯಲಿದೆ. ಮೊದಲ ಹಂತದಲ್ಲಿ ಶುಕ್ರವಾರ ರಾಜ್ಯ ಚುನಾವಣಾ ಆಯೋಗದ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸುವಂತೆ ಎಲ್ಲಾ ಪ್ರದೇಶ ಕಾಂಗ್ರೆಸ್‌ ಸಮಿತಿಗಳಿಗೆ ಪಕ್ಷದ ಹೈಕಮಾಂಡ್‌ ನಿರ್ದೇಶನ ನೀಡಿದೆ. 2ನೇ ಹಂತದಲ್ಲಿ ಎಲ್ಲಾ ಜಿಲ್ಲಾ ಕಾಂಗ್ರೆಸ್‌ ಸಮಿತಿಗಳು ರಾಜ್ಯಮಟ್ಟದ ರೀತಿಯಲ್ಲೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಸೆ.28ರಂದು ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ‘ಆರಂಭದಿಂದಲೂ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಬಿಜೆಪಿ ಮತ್ತು ಜ್ಞಾನೇಶ್‌ ಕುಮಾರ್‌ ನಡೆಸುತ್ತಿರುವ ಭಾರೀ ಮತಚೋರಿ ಕುರಿತು ಬಹಿರಂಗಪಡಿಸುತ್ತಲೇ ಬಂದಿದ್ದಾರೆ. ಇದೀಗ ಜ್ಞಾನೇಶ್‌ ಕುಮಾರ್‌ ವಂಚನೆ ಜಗಜ್ಜಾಹೀರಾಗಿದೆ. ರಾಷ್ಟ್ರವಿರೋಧಿ ಕೃತ್ಯಗಳಿಗಾಗಿ ಜ್ಞಾನೇಶ್‌ರನ್ನು ತಕ್ಷಣ ಬಂಧಿಸಬೇಕು’ ಎಂದು ಆಗ್ರಹಿಸಿದರು.

03:28 PM (IST) Sep 25

ಜನರ ನಂಬಿಕೆ ಉಳಿಸಿ, ತಪ್ಪು ನಡೆದಿಲ್ಲವೆಂದು ದೃಢಪಡಿಸಿ, ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಸಲಹೆ!

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಆಯೋಗವು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಒತ್ತಾಯಿಸಿದ್ದಾರೆ. ಮತ್ತೊಂದೆಡೆ ರಾಹುಲ್ ಗಾಂಧಿ 'ಮತ ಕಳ್ಳತನ'ದ ಗಂಭೀರ ಆರೋಪ ಮಾಡಿದ್ದು, ಆಯೋಗವು ತನ್ನ ನಿರ್ಧಾರಗಳು ಸರ್ವಾನುಮತದಿಂದ ಕೂಡಿವೆ ಎಂದು ಸಮರ್ಥಿಸಿಕೊಂಡಿದೆ.
Read Full Story

03:17 PM (IST) Sep 25

ಶಾಕಿಂಗ್.. 83ನೇ ವಯಸ್ಸಿನಲ್ಲಿ ಶಾರುಖ್ ಖಾನ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಅಮಿತಾಭ್ ಬಚ್ಚನ್!

ಎಷ್ಟೇ ಹೊಸ ತಲೆಮಾರಿನ ಸ್ಟಾರ್‌ಗಳು ಬಂದರೂ, ದಶಕಗಳ ಹಿಂದೆ ಚಿತ್ರರಂಗಕ್ಕೆ ಕಾಲಿಟ್ಟ ಅಮಿತಾಭ್ ಬಚ್ಚನ್ ಅವರ ಜನಪ್ರಿಯತೆ ಇಂದಿಗೂ ಹೇಗೆ ಮುಂದುವರಿದಿದೆ ಎಂಬುದನ್ನು ಈ ಸೋಶಿಯಲ್ ಮೀಡಿಯಾ ಅಂಕಿಅಂಶಗಳು ಕುತೂಹಲಕರವಾಗಿ ತೋರಿಸುತ್ತವೆ. ಬಿಗ್ ಬಿ ಮತ್ತು ಕಿಂಗ್ ಖಾನ್ ನಡುವಿನ ಅಂತರವೇನು? ನೋಡಿ..

Read Full Story

03:07 PM (IST) Sep 25

2009ರಲ್ಲೇ 70 ಕೋಟಿ ದೋಚಿದ ಕನ್ನಡತಿಯ ಫ್ಯಾಂಟಸಿ ಹಾರರ್, ಥ್ರಿಲ್ಲರ್ ನಿಗೂಢ ಸಿನಿಮಾ

2009ರಲ್ಲಿ ಬಿಡುಗಡೆಯಾದ ಸೌಥ್ ಸಿನಿಮಾ ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿಸಿತ್ತು. 13.5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಮಹಿಳಾ ಪ್ರಧಾನ ಹಾರರ್ ಸಿನಿಮಾ 70 ಕೋಟಿ ಗಳಿಸಿ ಹಲವು ದಾಖಲೆಗಳನ್ನು ಬರೆದಿದೆ. ಯಾವುದು ಈ ಸಿನಿಮಾ ಎಂಬುದರ ಮಾಹಿತಿ ಇಲ್ಲಿದೆ.

Read Full Story

02:37 PM (IST) Sep 25

ಆಹಾರದಲ್ಲಿ ಪ್ರೋಟೀನ್‌ ಕಡಿಮೆಯಾದ್ರೆ ದೇಹ ಏನೆಲ್ಲಾ ಸೂಚನೆ ಕೊಡುತ್ತೆ? ಈ 8 ಲಕ್ಷಣ ಗೊತ್ತಿರಲಿ

ನಮ್ಮ ದೇಹದ ಆರೋಗ್ಯ ಮತ್ತು ಸ್ನಾಯುಗಳ ಬಲಕ್ಕೆ ಪ್ರೋಟೀನ್ ಅತ್ಯಗತ್ಯ. ದೇಹದಲ್ಲಿ ಪ್ರೋಟೀನ್ ಕಡಿಮೆಯಾದಾಗ ಸ್ನಾಯುಗಳ ಸವೆತ, ಕೂದಲು ಉದುರುವಿಕೆ, ಪದೇ ಪದೇ ಹಸಿವು ಮತ್ತು ಸುಸ್ತಿನಂತಹ 8 ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಮುನ್ಸೂಚನೆಗಳನ್ನು ನಿರ್ಲಕ್ಷಿಸದೆ ಸರಿಯಾದ ಸಮಯದಲ್ಲಿ ಗುರುತಿಸುವುದು ಮುಖ್ಯ.
Read Full Story

02:16 PM (IST) Sep 25

ಆಸ್ಟ್ರೇಲಿಯಾದಿಂದ ಅಮೆರಿಕಕ್ಕೆ ಸಾಗಿಸುತ್ತಿದ್ದಾಗ ಚೀನಾ ಪಾಲಾದ F-35 ಯುದ್ಧವಿಮಾನದ ಬಿಡಿಭಾಗ! ದಾರಿ ತಪ್ಪಿದ್ದೆಲ್ಲಿ?

ಆಸ್ಟ್ರೇಲಿಯಾದಿಂದ ಅಮೆರಿಕಕ್ಕೆ ರವಾನೆಯಾಗುತ್ತಿದ್ದ ಅತ್ಯಾಧುನಿಕ ಎಫ್-35 ಯುದ್ಧವಿಮಾನದ ಬಿಡಿಭಾಗಗಳು ಅನಿರೀಕ್ಷಿತವಾಗಿ ಚೀನಾದ ಹಾಂಗ್ ಕಾಂಗ್ ತಲುಪಿವೆ. ಈ ಭದ್ರತಾ ಲೋಪದ ಬಗ್ಗೆ ಅಮೆರಿಕದ ಪೆಂಟಗನ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಉನ್ನತ ಮಟ್ಟದ ತನಿಖೆ ಆರಂಭಿಸಿದೆ.
Read Full Story

01:59 PM (IST) Sep 25

ಕಾಫಿ-ಟೀ ಕಪ್‌ಗೂ ಎಕ್ಸ್‌ಪೈರಿ ಡೇಟ್ ಇದೆಯೇ.. ಬಹುತೇಕರಿಗೆ ಈ ಅತ್ಯಗತ್ಯ ಸತ್ಯ ತಿಳಿದಿಲ್ಲ!

ಕಪ್‌ನಲ್ಲಿ ಸಣ್ಣದಾದರೂ ಬಿರುಕು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬೇಡಿ. ಬಿಸಿ ಚಹಾ ಅಥವಾ ಕಾಫಿ ಸುರಿದಾಗ ಆ ಬಿರುಕು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇರುತ್ತದೆ. ಬಿರುಕು ಒಳಭಾಗದಲ್ಲಿರಲಿ, ಹೊರಭಾಗದಲ್ಲಿರಲಿ ಅಥವಾ ಕಪ್‌ನ ಅಂಚಿನಲ್ಲಿರಲಿ, ಅಂತಹ ಕಪ್‌ನ್ನು ಬಳಸದಿರುವುದು ಉತ್ತಮ. ಎಕ್ಸ್‌ಪೈರಿ ಡೇಟ್ ಕಥೆ ಏನು? ನೋಡಿ..

Read Full Story

01:44 PM (IST) Sep 25

Gold Rate Today - ಚಿನ್ನದ ದರದಲ್ಲಿ ಮತ್ತೆ ಏರಿಕೆ, ಇಂದಿನ ಬೆಲೆ ಕೇಳಿದ್ರೆ ಶಾಕ್!

ಭಾರತದಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,284 ತಲುಪಿದೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತು ಅಮೆರಿಕದ ಬಡ್ಡಿದರ ಏರಿಕೆಯಂತಹ ಜಾಗತಿಕ ಬೆಳವಣಿಗೆಗಳು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿವೆ.ಹಾಗಾದರೆ ಮುಂದೇನು?

Read Full Story

01:43 PM (IST) Sep 25

ಸೇನೆಯ ರೋಚಕ ಮಾಹಿತಿ - ನಡೆದ ಯುದ್ಧವೆಷ್ಟು? 17 ಶ್ರೇಣಿಗಳಲ್ಲಿ ಉನ್ನತ ಹುದ್ದೆ ಪಡೆದ ಇಬ್ಬರೇ ಇಬ್ಬರು ಯಾರು

ಭಾರತೀಯ ಸೇನೆಯು ರಾಷ್ಟ್ರದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರತಿ ವರ್ಷ ಜನವರಿ 15 ರಂದು ಸೇನಾ ದಿನವನ್ನು ಆಚರಿಸಲಾಗುತ್ತದೆ. ಸೇನೆಯಲ್ಲಿ ಒಟ್ಟು 17 ಶ್ರೇಣಿಗಳಿದ್ದು, ಅತ್ಯುನ್ನತ 'ಫೀಲ್ಡ್ ಮಾರ್ಷಲ್' ಹುದ್ದೆಯನ್ನು ಇತಿಹಾಸದಲ್ಲಿ ಕೇವಲ ಇಬ್ಬರು ಮಾತ್ರ ಅಲಂಕರಿಸಿದ್ದಾರೆ.
Read Full Story

12:38 PM (IST) Sep 25

ಹಬ್ಬಕ್ಕೂ ಮುನ್ನ ಗಿಫ್ಟ್ ಕೊಟ್ಟ ಕೇಂದ್ರ - ಖಾದ್ಯ ತೈಲ ಮೇಲಿನ ಸುಂಕ ಗಣನೀಯ ಇಳಿಕೆ, ಅಡುಗೆ ಎಣ್ಣೆ ದರ ಶೀಘ್ರ ಇಳಿಕೆ

ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಆಮದು ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಿದೆ. ಕಚ್ಚಾ ಸೂರ್ಯಕಾಂತಿ, ಪಾಮ್ ಮತ್ತು ಸೋಯಾಬೀನ್ ಎಣ್ಣೆಗಳ ಮೇಲಿನ ಸುಂಕವನ್ನು ಇಳಿಕೆ ಮಾಡಲಾಗಿದ್ದು, ಇದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ.
Read Full Story

12:06 PM (IST) Sep 25

ದಿನ ಆಫೀಸ್‌ಗೆ ಹೋಗಿ ಬರಲು ಯಾವ ಸ್ಕೂಟರ್ ಬೆಸ್ಟ್? ಬೆಲೆ ಮತ್ತು ಮೈಲೇಜ್ ವಿವರ

ನಗರದ ಟ್ರಾಫಿಕ್‌ನಲ್ಲಿ ದೈನಂದಿನ ಓಡಾಟಕ್ಕೆ ಸ್ಕೂಟರ್‌ಗಳು ಅತ್ಯುತ್ತಮ ಆಯ್ಕೆಯಾಗಿವೆ. ಹೊಂಡಾ ಆಕ್ಟಿವಾ, ಟಿವಿಎಸ್ ಜೂಪಿಟರ್, ಸುಜುಕಿ ಆಕ್ಸೆಸ್ 125 ಮತ್ತು ಎನ್‌ಟಾರ್ಕ್‌ನಂತಹ ಸ್ಕೂಟರ್‌ಗಳು ಉತ್ತಮ ಮೈಲೇಜ್ ಹಾಗೂ ಆರಾಮದಾಯಕ ಪ್ರಯಾಣ ನೀಡುತ್ತವೆ. ನಿಯಮಿತ ಸರ್ವಿಸ್ ಮಾಡಿಸುವುದರಿಂದ ಇವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.
Read Full Story

11:47 AM (IST) Sep 25

'ಹಾಯ್' ಎಂದಿದ್ದೇ ತಪ್ಪಾಯ್ತಾ? ಅರೇಂಜ್ಡ್‌ ಮ್ಯಾರೇಜ್ ಧಿಕ್ಕರಿಸಿ ಮನೆಬಿಟ್ಟು ಬಂದ ಈ ಜೋಡಿ.. ಅಂತಿಂಥ ಸ್ಟೋರಿ ಅಲ್ಲ ಇದು!

ಮನೆಯವರು ಮದುವೆ ಮಾಡಲು ಮುಂದಾದಾಗ ಅದನ್ನು ಒಪ್ಪಿಕೊಳ್ಳದೆ ಮನೆ ಬಿಟ್ಟು ಹೊರಡುವ ಹುಡುಗನ ಜೀವನದಲ್ಲಿ ಎದುರಾಗುವ ತಿರುವುಗಳು ಎಂಥದ್ದು? ಇದೇ ವೇಳೆ ಆ ಹುಡುಗಿ ಕೂಡ ತಾನು ಇಷ್ಟಪಡದ ಮದುವೆಯಿಂದ ದೂರವಿರಲು ಬಯಸುವ ಮಹಿಳೆ! ಈ ಇಬ್ಬರ ಬಾಳಿನಲ್ಲಿ ಎದುರಾದ ಗೋಳೇನು? ನೋಡಿ..

Read Full Story

11:21 AM (IST) Sep 25

ವಿಂಡೀಸ್ ಸರಣಿಗೂ ಮುನ್ನ ಬಿಸಿಸಿಐಗೆ ಬಂಪರ್, ಟೀಂ ಇಂಡಿಯಾಗೆ ಹೊಸ ಸ್ಪಾನ್ಸರ್..!

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮುನ್ನ ಬಿಸಿಸಿಐ ಮುತ್ತೂಟ್ ಫಿನ್‌ಕಾರ್ಪ್ ಅನ್ನು ಟೀಂ ಇಂಡಿಯಾದ ಹೊಸ ಟೈಟಲ್ ಸ್ಪಾನ್ಸರ್ ಆಗಿ ಪ್ರಕಟಿಸಿದೆ. ಮುಂಬರುವ ಏಕದಿನ ಸರಣಿಗೆ ಶುಭ್ಮನ್ ಗಿಲ್ ಮತ್ತು ಟಿ20 ಸರಣಿಗೆ ಶ್ರೇಯಸ್ ಅಯ್ಯರ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ರೋಹಿತ್, ಕೊಹ್ಲಿ ಕಂಬ್ಯಾಕ್ ಮಾಡಿದ್ದರೆ, ರಿಷಭ್ ಪಂತ್ ಅವರನ್ನು ಕೈಬಿಡಲಾಗಿದೆ.
Read Full Story

11:11 AM (IST) Sep 25

Volodymyr Zelenskyy ಭಾರತ ಸೇರಿ 47 ದೇಶಗಳ ಪ್ರಜೆಗಳನ್ನು ಯುದ್ಧಕ್ಕೆ ದಾಳವಾಗಿ ಬಳಸುತ್ತಿದೆ ರಷ್ಯಾ!

ರಷ್ಯಾ ತನ್ನ ಯುದ್ಧದಲ್ಲಿ ಭಾರತ ಸೇರಿದಂತೆ 47 ದೇಶಗಳ ಪ್ರಜೆಗಳನ್ನು ವಂಚನೆಯಿಂದ ಬಳಸಿಕೊಳ್ಳುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ವಿಶ್ವಸಂಸ್ಥೆಯಲ್ಲಿ ಆರೋಪಿಸಿದ್ದಾರೆ. ಈ ಅಮಾಯಕರನ್ನು ರಕ್ಷಿಸಲು ಮತ್ತು ರಷ್ಯಾದ ಆರ್ಥಿಕತೆಗೆ ದಿಗ್ಬಂಧನ ವಿಧಿಸಲು ಅವರು ಜಾಗತಿಕ ನಾಯಕರಿಗೆ ತುರ್ತು ಮನವಿ ಮಾಡಿದ್ದಾರೆ.
Read Full Story

11:07 AM (IST) Sep 25

ಭಾರಿ ಮಳೆ ಕಾರಣ ಶಾಲಾ ಕಾಲೇಜಿಗೆ ರಜೆ ಘೋಷಣೆ, ಹಲವು ರಾಜ್ಯಗಳಲ್ಲಿ ರೆಡ್ ಅಲರ್ಟ್

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಕೆಲ ಭಾಗದಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. 8000 ಮಂದಿಯನ್ನು ಸ್ಥಳಾಂತರಿಸಲಾಗಿದೆ, ಪ್ರವಾಹ, ಭೂಕುಸಿತ ಸೇರಿದಂತೆ ಹಲವು ಅವಘಡಗಳು ಸಂಭವಿಸಿದೆ.

Read Full Story

10:45 AM (IST) Sep 25

ಮಾಂಸ ಇಲ್ಲದೆ ಊಟ ಮಾಡ್ತಿರಲಿಲ್ಲ ಪವನ್ ಕಲ್ಯಾಣ್! ಅಣ್ಣ ಚಿರಂಜೀವಿ ಹೇಳಿದ ಆ ಒಂದು ಮಾತು ಲೈಫ್ ಬದಲಾಯಿಸ್ತು..!

ಪವನ್ ಕಲ್ಯಾಣ್ ಅವರಿಗೆ ಅಣ್ಣ ಚಿರಂಜೀವಿ ಅಂದ್ರೆ ಪಂಚಪ್ರಾಣ. ಮೆಗಾಸ್ಟಾರ್ ಪ್ರಭಾವ ಪವನ್ ಜೀವನದ ಮೇಲೆ ತುಂಬಾನೇ ಇದೆ. ಒಂದು ಕಾಲದಲ್ಲಿ ಊಟದ ವಿಚಾರಕ್ಕೆ ಸಿಕ್ಕಾಪಟ್ಟೆ ಹಠ ಮಾಡ್ತಿದ್ದ ಪವನ್‌ಗೆ ಚಿರಂಜೀವಿ ಬುದ್ಧಿವಾದ ಹೇಳಿದ್ರು. ಆ ಒಂದು ಮಾತು ಪವರ್ ಸ್ಟಾರ್ ಜೀವನವನ್ನೇ ಹೇಗೆ ಬದಲಾಯಿಸ್ತು ಗೊತ್ತಾ?

Read Full Story

10:21 AM (IST) Sep 25

ಪಾಕಿಸ್ತಾನದಲ್ಲಿ ಶೋಚನೀಯ ಸ್ಥಿತಿ - ಆಸ್ಪತ್ರೆಗೆ ಹೋಗಿ ಮರಳಿ ಬರುವ ಪುಟ್ಟ ಮಕ್ಕಳಲ್ಲಿ ಏಡ್ಸ್‌ ಪತ್ತೆ!

ಪಾಕಿಸ್ತಾನದ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳುವ ಮಕ್ಕಳಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗುತ್ತಿದ್ದು, ಪೋಷಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಸಿರಿಂಜ್‌ಗಳ ಮರುಬಳಕೆಯಿಂದ ಈ ಸೋಂಕು ಹರಡುತ್ತಿದೆ ಎಂದು ಶಂಕಿಸಲಾಗಿದ್ದು, ಈಗಾಗಲೇ ಹಲವು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪೋಷಕರು ಆಗ್ರಹಿಸಿದ್ದಾರೆ.
Read Full Story

09:03 AM (IST) Sep 25

Gold Astrology - ಗುರು ಗ್ರಹದ ಸಂಕೇತ ಚಿನ್ನ; ಈ 4 ನಕ್ಷತ್ರದವರು ಚಿನ್ನ ಧರಿಸಿದ್ರೆ ಅದೃಷ್ಟ ಬದಲಾಗುತ್ತಂತೆ!

ಜ್ಯೋತಿಷ್ಯದ ಪ್ರಕಾರ ಚಿನ್ನವು ಗುರು ಗ್ರಹದ ಸಂಕೇತ. ಚಿನ್ನ ಧರಿಸುವುದರಿಂದ ದೇಹದಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತೆ. ಜೊತೆಗೆ, ಕೆಲವು ನಿರ್ದಿಷ್ಟ ನಕ್ಷತ್ರದಲ್ಲಿ ಹುಟ್ಟಿದವರಿಗೆ ಇದು ಭಾರೀ ಅದೃಷ್ಟ ತಂದುಕೊಡುತ್ತೆ.

Read Full Story

08:08 AM (IST) Sep 25

₹2,500 ಕೋಟಿ ನಷ್ಟವಾದರೂ ನಂ.1 ಶ್ರೀಮಂತ ನಟ ಸ್ಥಾನ ಉಳಿಸಿಕೊಂಡ ಶಾರುಖ್ ಖಾನ್; ನಂ.2 ನಟನ ಬಳಿ ಅರ್ಧದಷ್ಟು ಹಣವಿಲ್ಲ!

ಕಳೆದೊಂದು ವರ್ಷದಲ್ಲಿ ಭರ್ಜರಿ 2,500 ಕೋಟಿ ರು. ಹಣವನ್ನುಯ ನಷ್ಟ ಮಾಡಿಕೊಂಡರೂ ಸಹ ಭಾರತದ ನಂಬರ್ 1 ಶ್ರೀಮಂತ ನಟರ ಸ್ಥಾನವನ್ನು ಬಾಲಿವುಡ್ ಬಾದ್‌ಶಾ ಖ್ಯಾತಿಯ ಶಾರುಖ್ ಖಾನ್ ಉಳಿಸಿಕೊಂಡಿದ್ದಾರೆ. ಅವರ ಆಸ್ತಿ ಮೌಲ್ಯವೆಷ್ಟು? ಉಳಿದಂತೆ ನಂಬರ್ 2,3 ಹಾಗೂ 4ನೇ ಸ್ಥಾನದಲ್ಲಿ ಯಾರಿದ್ದಾರೆ ನೋಡಿ.

Read Full Story

07:43 AM (IST) Sep 25

Asian Games 2026 - 17 ಪದಕ ಗೆದ್ದರೂ 15ನೇ ಸ್ಥಾನಕ್ಕೆ ಕುಸಿದ ಭಾರತ..! ಶೂಟಿಂಗ್‌ನಲ್ಲಿ 5ನೇ ದಿನವೂ ಸಿಗಲಿಲ್ಲ ಬಂಗಾರ!

ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಮತ್ತೆ 5 ಪದಕಗಳನ್ನು ಗೆದ್ದಿದ್ದು, ಒಟ್ಟು 17 ಪದಕಗಳೊಂದಿಗೆ 15ನೇ ಸ್ಥಾನಕ್ಕೆ ಕುಸಿದಿದೆ. ಮಹಿಳೆಯರ ವುಶು ಕ್ರೀಡೆಯಲ್ಲಿ ರೋಶಿಬಿನಾ ದೇವಿ ಬೆಳ್ಳಿ ಪದಕ ಗೆದ್ದಿದ್ದಾರೆ. ಚೀನಾ 125ಕ್ಕೂ ಹೆಚ್ಚು ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
Read Full Story

More Trending News