MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಮಾಂಸ ಇಲ್ಲದೆ ಊಟ ಮಾಡ್ತಿರಲಿಲ್ಲ ಪವನ್ ಕಲ್ಯಾಣ್! ಅಣ್ಣ ಚಿರಂಜೀವಿ ಹೇಳಿದ ಆ ಒಂದು ಮಾತು ಲೈಫ್ ಬದಲಾಯಿಸ್ತು..!

ಮಾಂಸ ಇಲ್ಲದೆ ಊಟ ಮಾಡ್ತಿರಲಿಲ್ಲ ಪವನ್ ಕಲ್ಯಾಣ್! ಅಣ್ಣ ಚಿರಂಜೀವಿ ಹೇಳಿದ ಆ ಒಂದು ಮಾತು ಲೈಫ್ ಬದಲಾಯಿಸ್ತು..!

ಪವನ್ ಕಲ್ಯಾಣ್ ಅವರಿಗೆ ಅಣ್ಣ ಚಿರಂಜೀವಿ ಅಂದ್ರೆ ಪಂಚಪ್ರಾಣ. ಮೆಗಾಸ್ಟಾರ್ ಪ್ರಭಾವ ಪವನ್ ಜೀವನದ ಮೇಲೆ ತುಂಬಾನೇ ಇದೆ. ಒಂದು ಕಾಲದಲ್ಲಿ ಊಟದ ವಿಚಾರಕ್ಕೆ ಸಿಕ್ಕಾಪಟ್ಟೆ ಹಠ ಮಾಡ್ತಿದ್ದ ಪವನ್‌ಗೆ ಚಿರಂಜೀವಿ ಬುದ್ಧಿವಾದ ಹೇಳಿದ್ರು. ಆ ಒಂದು ಮಾತು ಪವರ್ ಸ್ಟಾರ್ ಜೀವನವನ್ನೇ ಹೇಗೆ ಬದಲಾಯಿಸ್ತು ಗೊತ್ತಾ?

1 Min read
Author : Naveen Kodase
Published : Sep 25 2026, 10:45 AM IST
Share this Photo Gallery
  • FB
  • TW
  • Linkdin
  • Whatsapp
15
ಪವನ್ ಮೇಲೆ ಅಣ್ಣನ ಪ್ರಭಾವ
Image Credit : Asianet News

ಪವನ್ ಮೇಲೆ ಅಣ್ಣನ ಪ್ರಭಾವ

ಜನಸೇನಾ ನಾಯಕ ಹಾಗೂ ನಟ ಪವನ್ ಕಲ್ಯಾಣ್ ಜೀವನದಲ್ಲಿ ಅಣ್ಣ ಚಿರಂಜೀವಿ ಪ್ರಭಾವ ತುಂಬಾನೇ ಇದೆ. ಬರೀ ಸಿನಿಮಾದಲ್ಲಿ ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲೂ ಪವನ್‌ಗೆ ಮೆಗಾಸ್ಟಾರ್ ದಾರಿದೀಪ ಆಗಿದ್ದಾರೆ. ತಮ್ಮ ಹದಿಹರೆಯದ ದಿನಗಳಲ್ಲಿ ನಡೆದ ಒಂದು ಎಮೋಷನಲ್ ಘಟನೆಯನ್ನು ಪವನ್ ಕಲ್ಯಾಣ್ ಹಳೆಯ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮಾಂಸ ಇಲ್ಲದೆ ಊಟ ಮಾಡ್ತಿರಲಿಲ್ಲ
Image Credit : Asianet News

ಮಾಂಸ ಇಲ್ಲದೆ ಊಟ ಮಾಡ್ತಿರಲಿಲ್ಲ

ಪವನ್ ಕಲ್ಯಾಣ್ ತಮ್ಮ 16-17ನೇ ವಯಸ್ಸಿನಲ್ಲಿ ಊಟದ ವಿಚಾರಕ್ಕೆ ಸಿಕ್ಕಾಪಟ್ಟೆ ಹಠ ಮಾಡ್ತಿದ್ರು. ಊಟದಲ್ಲಿ ನಾನ್-ವೆಜ್ ಇಲ್ಲ ಅಂದ್ರೆ ಅವರು ತುತ್ತು ಅನ್ನ ಕೂಡ ತಿನ್ನುತ್ತಿರಲಿಲ್ಲ. ಮನೆಯಲ್ಲಿ ಮಾಂಸದ ಅಡುಗೆ ಮಾಡಿಲ್ಲ ಅಂದ್ರೆ ಪವನ್‌ಗೆ ವಿಪರೀತ ಕೋಪ ಬರುತ್ತಿತ್ತು. ಅಣ್ಣ ಚಿರಂಜೀವಿ ಮನೆಯಲ್ಲಿ ಇಲ್ಲದಾಗ, ಇದೇ ಕೋಪದಲ್ಲಿ ಮನೆಯವರ ಮೇಲೆ ಪವನ್ ರೇಗಾಡುತ್ತಿದ್ದರು.

Related Articles

Related image1
ಕಾರಿನಡಿ ಕೈಯಿಟ್ಟಿದ್ದ ಪವನ್ ಕಲ್ಯಾಣ್: ಕೈ ಮುಟ್ಟಿ ಲೆಜೆಂಡರಿ ಸಿಂಗರ್ ಎಸ್‌ಪಿಬಿ ಹೀಗಾ ಹೇಳೋದು?
Related image2
Chiru Leaks: ಸಮಂತಾ 'ಗುಡ್ ನ್ಯೂಸ್' ಲೀಕ್ ಮಾಡಿದ್ರಾ ಮೆಗಾಸ್ಟಾರ್ ಚಿರಂಜೀವಿ? 'ಹೊಸ ಅಧ್ಯಾಯ'ದ ಗುಟ್ಟೇನು?
35
ಪವನ್‌ಗೆ ಬುದ್ಧಿವಾದ ಹೇಳಿದ ಚಿರು
Image Credit : Asianet News

ಪವನ್‌ಗೆ ಬುದ್ಧಿವಾದ ಹೇಳಿದ ಚಿರು

ತಮ್ಮನ ಈ ವರ್ತನೆಯನ್ನು ಚಿರಂಜೀವಿ ಗಮನಿಸಿದ್ದರು. ಆದರೆ ಅವರು ಪವನ್ ಮೇಲೆ ಕೋಪಗೊಳ್ಳಲಿಲ್ಲ ಅಥವಾ ಬೈಯಲಿಲ್ಲ. ಬದಲಾಗಿ, ಪವನ್ ಅವರನ್ನು ಹತ್ತಿರ ಕರೆದು ಪ್ರೀತಿಯಿಂದ ಒಂದು ಮಾತು ಹೇಳಿದರು. "ನಮಗೆ ಇವತ್ತು ಹೊಟ್ಟೆತುಂಬಾ ಊಟ ಸಿಗ್ತಿದೆ. ಆದರೆ ಸಮಾಜದಲ್ಲಿ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ಜನ ಬಹಳಷ್ಟಿದ್ದಾರೆ. ಒಮ್ಮೆ ಹೊರಗಿನ ಪ್ರಪಂಚ ನೋಡು" ಎಂದು ಬುದ್ಧಿವಾದ ಹೇಳಿದರು.

45
ಪವರ್ ಸ್ಟಾರ್ ಲೈಫ್ ಬದಲಾಯಿಸಿದ ಮಾತು
Image Credit : our own

ಪವರ್ ಸ್ಟಾರ್ ಲೈಫ್ ಬದಲಾಯಿಸಿದ ಮಾತು

ಅಣ್ಣ ಹೇಳಿದ ಆ ಒಂದು ಮಾತು 16-17 ವರ್ಷದ ಪವನ್ ಕಲ್ಯಾಣ್ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿತು. ಸಮಾಜದ ಬಡತನ ಹಾಗೂ ಕಷ್ಟಗಳನ್ನು ಅರ್ಥಮಾಡಿಕೊಳ್ಳುವಂತೆ ಆ ಮಾತುಗಳು ಅವರ ಆಲೋಚನೆಯನ್ನೇ ಬದಲಾಯಿಸಿದವು. ಊಟದ ಮೇಲಿದ್ದ ಹಠ ಬಿಟ್ಟ ಪವನ್, ಇತರರ ಕಷ್ಟಗಳಿಗೆ ಸ್ಪಂದಿಸುವ ಸೂಕ್ಷ್ಮ ಸ್ವಭಾವವನ್ನು ಬೆಳೆಸಿಕೊಂಡರು.

55
ಸ್ಟಾರ್ ನಟ, ಜನನಾಯಕ ಪವನ್ ಕಲ್ಯಾಣ್
Image Credit : facebook.com/KChiranjeeviFans

ಸ್ಟಾರ್ ನಟ, ಜನನಾಯಕ ಪವನ್ ಕಲ್ಯಾಣ್

ಬಾಲ್ಯದಿಂದಲೂ ಅಣ್ಣ ಚಿರಂಜೀವಿ ಕಲಿಸಿದ ಇಂಥ ಅನೇಕ ಜೀವನಪಾಠಗಳು ಪವನ್ ಕಲ್ಯಾಣ್ ಅವರನ್ನು ಬೆಳೆಸಿದವು. ಇದೇ ಕಾರಣಕ್ಕೆ ಪವನ್ ಇಂದು ಸ್ಟಾರ್ ನಟನಾಗಿ, ಪ್ರಜಾನಾಯಕನಾಗಿ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಿ ರೂಪುಗೊಂಡಿದ್ದಾರೆ. ಸದ್ಯ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಬ್ಯುಸಿಯಾಗಿರುವ ಪವನ್ ಕಲ್ಯಾಣ್, ಬಿಡುವಿನ ವೇಳೆಯಲ್ಲಿ ತಮ್ಮ ಸಿನಿಮಾಗಳನ್ನು ಪೂರ್ಣಗೊಳಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಪವನ್ ಕಲ್ಯಾಣ್
ಚಿರಂಜೀವಿ
ಮಾಂಸಾಹಾರ
ಟಾಲಿವುಡ್
 

Latest Videos
Recommended Stories
Recommended image1
ಲೇಡಿ ಓರಿಯೆಂಟೆಡ್ ಸಿನಿಮಾಗಳಿಗೆ ಹೊಸ ಟ್ರೆಂಡ್? ರಶ್ಮಿಕಾ 'ಮೈಸಾ' ಮೇಲೆ ಭಾರೀ ನಿರೀಕ್ಷೆ
Recommended image2
OTTಗೆ ಬರ್ತಿದೆ ನಟಿ ನಯನತಾರಾ-ಕವಿನ್ ನಟನೆಯ 'ಹಾಯ್' ಸಿನಿಮಾ: ಈ ದಿನದಿಂದ ನೋಡಬಹುದು!
Recommended image3
'ನನ್ನ ಬಳಿ ಸಾಕಷ್ಟು ಹಣವಿದೆ': ಕ್ಯಾಮೆರಾದಿಂದ ದೂರವಿದ್ದ ಡೈಸಿ ಬೋಪಣ್ಣ ಮತ್ತೆ ಬಂದಿದ್ದು ಯಾಕೆ?
Related Stories
Recommended image1
ಕಾರಿನಡಿ ಕೈಯಿಟ್ಟಿದ್ದ ಪವನ್ ಕಲ್ಯಾಣ್: ಕೈ ಮುಟ್ಟಿ ಲೆಜೆಂಡರಿ ಸಿಂಗರ್ ಎಸ್‌ಪಿಬಿ ಹೀಗಾ ಹೇಳೋದು?
Recommended image2
Chiru Leaks: ಸಮಂತಾ 'ಗುಡ್ ನ್ಯೂಸ್' ಲೀಕ್ ಮಾಡಿದ್ರಾ ಮೆಗಾಸ್ಟಾರ್ ಚಿರಂಜೀವಿ? 'ಹೊಸ ಅಧ್ಯಾಯ'ದ ಗುಟ್ಟೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved