ನಗರದ ಟ್ರಾಫಿಕ್‌ನಲ್ಲಿ ದೈನಂದಿನ ಓಡಾಟಕ್ಕೆ ಸ್ಕೂಟರ್‌ಗಳು ಅತ್ಯುತ್ತಮ ಆಯ್ಕೆಯಾಗಿವೆ. ಹೊಂಡಾ ಆಕ್ಟಿವಾ, ಟಿವಿಎಸ್ ಜೂಪಿಟರ್, ಸುಜುಕಿ ಆಕ್ಸೆಸ್ 125 ಮತ್ತು ಎನ್‌ಟಾರ್ಕ್‌ನಂತಹ ಸ್ಕೂಟರ್‌ಗಳು ಉತ್ತಮ ಮೈಲೇಜ್ ಹಾಗೂ ಆರಾಮದಾಯಕ ಪ್ರಯಾಣ ನೀಡುತ್ತವೆ. ನಿಯಮಿತ ಸರ್ವಿಸ್ ಮಾಡಿಸುವುದರಿಂದ ಇವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.
ಸಿಟಿ ಸುತ್ತಾಡೋಕೆ ಸ್ಕೂಟರ್ ಬೆಸ್ಟ್ ಆಯ್ಕೆ. ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನೆಗೆ.. ತರಕಾರಿ ತರೋಕೆ, ಹಾಲು ತರೋಕೆ ಹೀಗೆ.. ಸಣ್ಣಪುಟ್ಟ ತಿರುಗಾಟಕ್ಕೆ ಸ್ಕೂಟರ್ ಒಳ್ಳೆಯದು.
ಯಾವುದೇ ಟ್ರಾಫಿಕ್ ಕಿರಿಕಿರಿ ಇರಲ್ಲ. ಕಾರುಗಳಂತೆ ಪೆಟ್ರೋಲ್ ಕೂಡ ಹೆಚ್ಚು ಬೇಕಾಗಲ್ಲ. ಸರಿಯಾದ ಸಮಯಕ್ಕೆ ನಿಗಧಿತ ಸ್ಥಳಕ್ಕೆ ತಲುಪಲು ಸ್ಕೂಟರ್ ಒಳ್ಳೆಯ ಆಯ್ಕೆ. ಒಂದು ವೇಳೆ ನೀವು ಕೂಡ ಇದೇ ರೀತಿಯ ಅಗತ್ಯತೆಗಳಿಗಾಗಿ ಸ್ಕೂಟರ್ ಖರೀದಿ ಬಗ್ಗೆ ಯೋಚನೆ ಮಾಡುತ್ತಿದ್ದರೆ ಅದರ ವಿವರ ಇಲ್ಲಿದೆ..
ಹೊಂಡಾ ಆಕ್ಟಿವಾ
ಭಾರತದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ನಂಬಿಕಸ್ಥ ಸ್ಕೂಟರ್ ಎಂದರೆ ಅದು ಹೊಂಡಾ ಆಕ್ಟಿವಾ.
- ಸುಮಾರು 110cc ಎಂಜಿನ್ ಹೊಂದಿದೆ
- ಆರಂಭಿಕ ಬೆಲೆ ಸುಮಾರು ₹80,000 ದಿಂದ ಶುರುವಾಗುತ್ತದೆ.
- ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚ
- Resale Value
- ದೀರ್ಘಕಾಲಿಕ ಬಾಳಿಕೆಗೆ ಇದು ಪ್ರಸಿದ್ಧ
- ನಗರ ಸಂಚಾರಕ್ಕೆ ಇದು ಜನರ ಮೊದಲ ಆಯ್ಕೆ
ಟಿವಿಎಸ್ ಜೂಪಿಟರ್
ಆಕ್ಟಿವಾಗೆ ನೇರ ಪೈಪೋಟಿ ನೀಡುವ ಟಿವಿಎಸ್ ಜೂಪಿಟರ್, ಆರಾಮದಾಯಕ ಪ್ರಯಾಣಕ್ಕೆ ಹೇಳಿಮಾಡಿಸಿದ ಸ್ಕೂಟರ್.
- 110cc ಪವರ್‌ಫುಲ್ ಎಂಜಿನ್
- ಸುಮಾರು ₹75,000 ದಿಂದ ಆರಂಭ
- ಅತ್ಯುತ್ತಮ ಲೆಗ್ ಸ್ಪೇಸ್
- ದೊಡ್ಡ ಬೂಟ್ ಸ್ಪೇಸ್
- ಆರಾಮದಾಯಕ ಸೀಟ್
- ದಿನನಿತ್ಯದ ಕಚೇರಿ ಓಡಾಟಕ್ಕೆ ಹೆಚ್ಚು ಕಂಫರ್ಟ್
ಸುಜುಕಿ ಆಕ್ಸೆಸ್ 125
ಸ್ವಲ್ಪ ಹೆಚ್ಚು ಪವರ್ ಮತ್ತು ಕ್ಲಾಸಿಕ್ ಲುಕ್ ಬಯಸುವವರಿಗೆ ಸುಜುಕಿ ಆಕ್ಸೆಸ್ 125 ಬೆಸ್ಟ್ ಆಯ್ಕೆ.
- 125cc ಪವರ್‌ಫುಲ್ ಎಂಜಿನ್
- ಆರಂಭಿಕ ಬೆಲೆ ಸುಮಾರು ₹80,000 ರಿಂದ ಶುರು
- ಲಾಂಗ್ ರೈಡ್ ಮಾಡುವವರಿಗೆ ಪರ್ಫೆಕ್ಟ್
- ಪಿಕಪ್ ಜೊತೆಗೆ ಉತ್ತಮ ಮೈಲೇಜ್
- ಮೆಟಲ್ ಬಾಡಿ ಮತ್ತು ರೆಟ್ರೋ ಲುಕ್
ಟಿವಿಎಸ್ ಎನ್‌ಟಾರ್ಕ್ 125
- ಸ್ಪೋರ್ಟಿ ಲುಕ್
- ಆಧುನಿಕ ಫೀಚರ್ಸ್
- 125cc ಸ್ಪೋರ್ಟಿ ಎಂಜಿನ್
- ಆರಂಭಿಕ ಬೆಲೆ ಸುಮಾರು ₹85,000 ದಿಂದ ಲಭ್ಯ
- ಬ್ಲೂಟೂತ್ ಕನೆಕ್ಟಿವಿಟಿ
- ನ್ಯಾವಿಗೇಷನ್ ಅಸಿಸ್ಟ್
- ಡಿಜಿಟಲ್ ಡಿಸ್ಪ್ಲೇ
- ಅತ್ಯಾಕರ್ಷಕ ವಿನ್ಯಾಸ
ಹೊಂಡಾ ಆಕ್ಟಿವಾ ಇ
ಬ್ಯಾಟರಿ ಚಾರ್ಜಿಂಗ್ ಮೂಲಕ ಕಾರ್ಯನಿರ್ವಹಿಸುತ್ತದೆ. ದಿನನಿತ್ಯದ ಇಂಧನ ವೆಚ್ಚ ಗಣನೀಯವಾಗಿ ಉಳಿತಾಯ ಆಗಲಿದೆ. ಇವಿ ಸ್ಕೂಟರ್ ಖರೀದಿಸುವ ಮುನ್ನ ಬ್ಯಾಟರಿ ಚಾರ್ಜ್ ಮಾಡಲು ಸೂಕ್ತ ಪ್ಲಗ್ ಪಾಯಿಂಟ್ ಸೌಲಭ್ಯದ ಬಗ್ಗೆ ಖಚಿತಪಡಿಸಿಕೊಳ್ಳಿ. ಸಿಟಿಗಳಲ್ಲಿ ಬೈಕ್‌ಗಳಿಗೆ ಹೋಲಿಸಿದರೆ ಸ್ಕೂಟರ್‍ಗಳು ಬೆಸ್ಟ್ ಆಯ್ಕೆ. ಯಾಕೆಂದರೆ ವಿಪರೀತ ಟ್ರಾಫಿಕ್ ನಡುವೆ ಸ್ಕೂಟರ್‍ಗಳು ಸಿಟಿ ಬದುಕನ್ನು ತುಂಬಾನೇ ಸರಳಗೊಳಿಸುತ್ತವೆ. ಆದರೆ ನಾವು ಬೈಕ್‌ಗಳನ್ನ ಹೇಗೆ ಬಳಸಿಕೊಳ್ತೀವಿ ಅನ್ನೋದು ಕೂಡ ಮುಖ್ಯ. ಗುಂಡಿಬಿದ್ದ ರಸ್ತೆಗಳು, ಹಾಳಾದ ಮಾರ್ಗಗಳ ನಡುವೆ ಜಾಗರೂಕತೆಯಿಂದ ಬೈಕ್ ಓಡಿಸಬೇಕು. ಜೊತೆಗೆ ನಿಯಮಿತವಾಗಿ ಸವೀಸ್ ಸೆಂಟರ್‍ಗೆ ಬಿಡಬೇಕು. ಗಾಡಿಯನ್ನ ಸರ್ವಿಸ್ ಮಾಡಿಸಿದಾಗ ಮಾತ್ರ ಅದು ನೀವು ಅಂದುಕೊಂಡಷ್ಟು ಹಾಗು ಕಂಪನಿ ತಿಳಿಸಿದಷ್ಟು ಮೈಲೇಜ್ ನೀಡುತ್ತವೆ..


