ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗೆ ತಯಾರಿ ನಡೆಸುತ್ತಿರುವ ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ನೋಟಿಸ್ ನೀಡಿದೆ. ಪ್ರಧಾನಿ ಮೋದಿ ಜೊತೆ ಮಹಿಳೆ ಫೋಟೋ ಮಾರ್ಫ್ ಮಾಡಿ ಹರಿಬಿಟ್ಟ ಸಂಬಂಧ ನೊಟಿಸ್ ನೀಡಿದೆ.
ದೆಹಲಿ (ಸೆ.25) ಮತದಾರರ ಪಟ್ಟಿ ಪರಿಷ್ಕರಣೆ, ಮತದಾರರ ಪಟ್ಟಿ ಡಿಲೀಟ್ ಸೇರಿದಂತೆ ಕೆಲ ಗಂಭೀರ ಆರೋಪಗಳು ತೀವ್ರಗೊಳ್ಳುತ್ತಿದೆ. ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳು ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇತ್ತ ಕಾಕ್ರೋಚ್ ಜನತಾ ಪಾರ್ಟಿ ನಾಯಕರು ರಾಜೀನಾಮೆಗೆ ಆಗ್ರಹಿಸಿದ್ದಾರೆ. ರಾಜೀನಾಮೆ ನೀಡದಿದ್ದರೆ ಅಕ್ಟೋಬರ್ 2 ರಿಂದ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ತಯಾರಿ ನಡುವೆ ಅಭಿಜಿತ್ ದೀಪ್ಕೆ ಸೇರಿದಂತೆ ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ನೋಟಿಸ್ ನೀಡಿದೆ.
ದೆಹಲಿ ಹೈಕೋರ್ಟ್ ನೋಟಿಸ್ ಯಾಕೆ?
ಇತ್ತೀಚೆಗೆ ನೀಟ್ ಪ್ರತಿಭಟನೆ ಸಂಬಂಧ ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ವಿದ್ಯಾರ್ಥಿ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಫೋಟೋ ಜೊತೆಗೆ ಡೀಪ್ ಫೇಕ್ ಫೋಟೋ ಸೃಷ್ಟಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಇದು ಮಹಿಳೆಯೊಬ್ಬರ ಮಾತ್ರ ಪ್ರಕರಣವಲ್ಲ, ಇದು ದೇಶದ ಪ್ರಧಾನ ಮಂತ್ರಿಗೂ ಸಂಬಂಧಿಸಿದೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದೆ. ಈ ಸಂಬಂಧ ಸಿಜೆಪಿ ನಾಯಕರಿಗೆ ನೋಟಿಸ್ ನೀಡಿದೆ.
24 ಗಂಟೆಯೊಳಗೆ ಡಿಲೀಟ್ ಆದೇಶ
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಸೇರಿದಂತೆ ಇತರ ವೇದಿಕೆಗಳಲ್ಲಿರುವ ಪ್ರಧಾನಿ ಮೋದಿ ಹಾಗೂ ಮಹಿಳೆಯ ಡೀಪ್ ಫೇಕ್ ಫೋಟೋ ಹಾಗೂ ಪೋಸ್ಟರ್ 24 ಗಂಟೆಯೊಳಗೆ ಡಿಲೀಟ್ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ.
ಸಿಜೆಪಿ ಪ್ರತಿಭಟನೆ ವೇಳೆ ಈ ವಿವಾದಿತ ಪೋಸ್ಟರ್ ಪ್ರದರ್ಶಿಸಲಾಗಿತ್ತು. ಬಳಿಕ ಇದೇ ಪೋಸ್ಟರನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲಾಗಿತ್ತು ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಹೈಕೋರ್ಟ್ ಕಾಕ್ರೋಚ್ ಜನತಾ ಪಾರ್ಟಿ ಅಭಿಜಿತ್ ದೀಪ್ಕೆ, ಅಶುತೋಶ್ ರಾಂಕ ಹಾಗೂ ರತನ್ ಸಿಂಗ್‌ಗೆ ದೆಹಲಿ ಹೈಕೋರ್ಟ್ ಉತ್ತರಿಸುವಂತೆ ನೋಟಿಸ್ ನೀಡಿದೆ.
ಮಹಿಳೆಗೆ ರಕ್ಷಣೆ ನೀಡುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ. ಇದೇ ವೇಳೆ ಅರ್ಜಿ ಸಲ್ಲಿಸಿದ ಮಹಿಳೆಗೆ ರಕ್ಷಣೆ ಒದಗಿಸಲು ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ. ಈ ಪ್ರಕರಣ ಸಂಬಂಎಧ 2 ವಾರದಲ್ಲಿ ಸಂಪೂರ್ಣ ವರದಿ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇದೇ ವೇಳೆ ಅರ್ಜಿ ಸಲ್ಲಿಸಿದ ಮಹಿಳೆ ಪ್ರತಿಭಟನಾ ಆಯೋಜಕರಿಗೆ ಪರಿಹಾರ ಕೋರಲು ಅರ್ಹ ಎಂದಿದೆ.


