Published : May 17, 2026, 06:43 AM ISTUpdated : May 17, 2026, 10:56 PM IST

India Latest News Live: ಚಾಹಲ್‌ನ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ ಆರ್‌ಜೆ ಮಹ್ವಶ್, ನೀಡಿದ್ರು ಕಾರಣ

ಸಾರಾಂಶ

 

ಹೇಗ್‌: ಸದ್ಯ ನೆದರ್ಲೆಂಡ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರ 11ನೇ ಶತಮಾನದ ಚೋಳರ ಕಾಲದ ಅನ್ನೈಮಂಗಲಂ ತಾಮ್ರದ ಫಲಕಗಳನ್ನು ಹಸ್ತಾಂತರಿಸಿದೆ.

ನೆದರ್ಲೆಂಡ್ಸ್‌ನಲ್ಲಿ ಲೈಡೆನ್ ಫಲಕಗಳು ಎಂದು ಕರೆಯಲ್ಪಡುವ ಅನ್ನೈಮಂಗಲಂ ಅನ್ನು ಭಾರತಕ್ಕೆ ಮರಳಿ ತರಲು 2012ರಿಂದಲೂ ಸರ್ಕಾರ ಪ್ರಯತ್ನಿಸುತ್ತಲೇ ಇತ್ತು. ಕೊನೆಗೂ ಫಲಪ್ರದವಾಗಿದೆ. ರಾಜೇಂದ್ರ ಚೋಳ I ಕಾಲದ ಈ ತಾಮ್ರ ಫಲಕದಲ್ಲಿನ ಕೆತ್ತನೆಗಳು ತಮಿಳು ಭಾಷೆಯಲ್ಲಿದೆ. ಇದು 21 ದೊಡ್ಡ ಫಲಕ ಮತ್ತು 3 ಸಣ್ಣ ಫಲಕಗಳನ್ನು ಹೊಂದಿದ್ದು, 30 ಕೇಜಿ ತೂಕ ಹೊಂದಿದ್ದು ಉಂಗುರದಿಂದ ಬಂಧಿಸಲ್ಪಟ್ಟಿದೆ.

ನೆದರ್ಲೆಂಡ್ಸ್‌ ತಲುಪಿದ್ದು ಹೇಗೆ?

ತಮಿಳುನಾಡಿನ ನಾಗಪಟ್ಟಣಂ ಡಚ್‌ ಈಸ್ಟ್‌ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ ಡಚ್‌ ಅಧಿಕಾರಿ ಫ್ಲೋರೆಂಟಿಯಸ್ ಕ್ಯಾಂಪರ್ ಎಂಬಾತ 1703-1712ರ ಅವಧಿಯಲ್ಲಿ ಈ ಶಾಸನಗಳನ್ನು ವಶಪಡಿಸಿಕೊಂಡಿದ್ದ. ಆ ಬಳಿಕ ಕಾಲಾಂತರದಲ್ಲಿ ಅದು ಲೈಡೆನ್ ವಿವಿ ಸೇರಿತ್ತು. ಅಲ್ಲಿ ನಿಬಂಧನೆಗಳೊಂದಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು.

10:56 PM (IST) May 17

ಚಾಹಲ್‌ನ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ ಆರ್‌ಜೆ ಮಹ್ವಶ್, ನೀಡಿದ್ರು ಕಾರಣ

ಯುಜುವೇಂದ್ರ ಚಾಹಲ್ ಜೊತೆಗಿನ ವದಂತಿಗಳ ಬಗ್ಗೆ ಆರ್‌ಜೆ ಮಹ್ವಶ್ ಮೌನ ಮುರಿದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದು ಸ್ನೇಹಿತರ ನಡುವಿನ ಸಣ್ಣ ಜಗಳವಷ್ಟೇ ಎಂದಿರುವ ಅವರು, ಚಾಹಲ್ ಅವರ ಕಷ್ಟದ ಸಮಯದಲ್ಲಿ ತಾನು ಕೇವಲ ಉತ್ತಮ ಸ್ನೇಹಿತೆಯಾಗಿ ಬೆಂಬಲ ನೀಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

10:25 PM (IST) May 17

'ಯಾವಾಗಲೂ ಪುರುಷನೇ ತಪ್ಪಿತಸ್ಥನಲ್ಲ' - ನಟ ಜಯಂ ರವಿ ಪರ ಬ್ಯಾಟ್ ಬೀಸಿದ ಪ್ರಿಯಾಂಕಾ ಚೋಪ್ರಾ ಸಂಬಂಧಿ ಮೀರಾ ಚೋಪ್ರಾ

ನಟ ಜಯಂ ರವಿ ಮತ್ತು ಪತ್ನಿ ಆರತಿ ರವಿ ವಿಚ್ಛೇದನ ಪ್ರಕರಣ ಹೊಸ ತಿರುವು ಪಡೆದಿದೆ. ತಮಗೆ ಮಾಟಮಂತ್ರ ಮಾಡಲಾಗಿತ್ತು ಎಂದು ರವಿ ಆರೋಪಿಸಿದ್ದು, ಇತ್ತ ನಟಿ ಮೀರಾ ಚೋಪ್ರಾ ಜಯಂ ರವಿ ಬೆಂಬಲಕ್ಕೆ ನಿಂತಿದ್ದಾರೆ. ರವಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಪತ್ನಿ ಮತ್ತು 'ಇಡ್ಲಿ ನಟಿ'ಯ ವಿರುದ್ಧ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.
Read Full Story

09:24 PM (IST) May 17

ದೇಶದ ಮಹಾರತ್ನ ಕಂಪನಿಯ ಕರಾಳ ಸತ್ಯ - ವರ್ಷಕ್ಕೆ 20 ಲಕ್ಷ ಸಂಬಳದ ಸರ್ಕಾರಿ ಕೆಲಸಕ್ಕೆ 2 ವರ್ಷದಲ್ಲೇ ಗೂಡ್‌ಬೈ ಹೇಳಿದ 25ರ ಯುವಕ

25 ವರ್ಷದ ಎಂಜಿನಿಯರ್ ಸೌರಭ್ ಮಿತ್ತಲ್, ವಾರ್ಷಿಕ 20 ಲಕ್ಷ ರೂ. ಪ್ಯಾಕೇಜ್‌ನ ಬಿಪಿಸಿಎಲ್ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಕಚೇರಿಯಲ್ಲಿ ಶೌಚಾಲಯದಂತಹ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ತೀವ್ರ ಕೆಲಸದ ಒತ್ತಡದಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದು, ಇದೀಗ ಎಂಬಿಎ ಕಡೆಗೆ ಮುಖ ಮಾಡಿದ್ದಾರೆ.
Read Full Story

08:47 PM (IST) May 17

ತಮ್ಮ ಕೆರಿಯರ್‌ನ ಅತ್ಯಂತ ಕೆಟ್ಟ ಸಿನಿಮಾ ಯಾವುದು? ನಟಿ ನಯನತಾರಾ ಉತ್ತರ ವೈರಲ್!

ಸಾಮಾನ್ಯವಾಗಿ ತಮ್ಮ ಕೆರಿಯರ್‌ನ ಕೆಟ್ಟ ಸಿನಿಮಾ ಯಾವುದು ಎಂದು ಕೇಳಿದರೆ ಎಲ್ಲರೂ ಫ್ಲಾಪ್ ಸಿನಿಮಾದ ಹೆಸರು ಹೇಳುತ್ತಾರೆ. ಆದರೆ ನಯನತಾರಾ ಒಂದು ಬ್ಲಾಕ್‌ಬಸ್ಟರ್ ಚಿತ್ರವನ್ನೇ ತಮ್ಮ ಕೆರಿಯರ್‌ನ ಅತ್ಯಂತ ಕೆಟ್ಟ ಸಿನಿಮಾ ಎಂದಿದ್ದಾರೆ.

Read Full Story

08:28 PM (IST) May 17

ಮಧ್ಯಪ್ರದೇಶದಲ್ಲಿ ತಪ್ಪಿದ ಭೀಕರ ರೈಲು ದುರಂತ - ಚಲಿಸುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ ಬೋಗಿಯಲ್ಲಿ ಬೆಂಕಿ!

ಮಧ್ಯಪ್ರದೇಶದ ರತ್ಲಾಮ್ ಬಳಿ ಚಲಿಸುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ, ಬೋಗಿಯಲ್ಲಿದ್ದ ಎಲ್ಲಾ 68 ಪ್ರಯಾಣಿಕರನ್ನು 15 ನಿಮಿಷಗಳಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

Read Full Story

08:15 PM (IST) May 17

Shocking Video - ಎವರೆಸ್ಟ್ ಬೇಸ್ ಕ್ಯಾಂಪ್‌ನ ಭಯಾನಕ ವಿಡಿಯೋ ವೈರಲ್, ಅಬ್ಬಬ್ಬಾ, ಏನೆಲ್ಲಾ ಆಗೋಯ್ತು!

ಇಡೀ ಪ್ರದೇಶದಲ್ಲಿ ಹಿಮ ಮತ್ತು ಐಸ್‌ನ ಒಂದು ದೊಡ್ಡ ಗೋಡೆಯೇ ನಿರ್ಮಾಣವಾಯಿತು. ಆಕಾಶ ಇದ್ದಕ್ಕಿದ್ದಂತೆ ಕತ್ತಲಾದಂತೆ ಭಾಸವಾಯಿತು. ದಟ್ಟವಾದ ಹಿಮದ ಮೋಡಗಳು ಇಡೀ ಪ್ರದೇಶವನ್ನು ಆವರಿಸಿದವು. ಕೆಲವೇ ಕ್ಷಣಗಳಲ್ಲಿ ದೃಷ್ಟಿ ಸಂಪೂರ್ಣವಾಗಿ ಮಂಜಾಯಿತು. ಇದರ ಬೆನ್ನಲ್ಲೇ, ಪರ್ವತಾರೋಹಿಗಳ ಕ್ಯಾಂಪ್ ಮೇಲೆ ಹಿಮಪಾತ ರಭಸದಿಂದ ಅಪ್ಪಳಿಸಿತು.

Read Full Story

08:15 PM (IST) May 17

ರಾಮ್ ಚರಣ್‌ಗೆ ಕ್ರೆಡಿಟ್ ಇಲ್ಲ ಎಂದ ಖ್ಯಾತ ನಿರ್ದೇಶಕ - ಒಂದೇ ಮಾತಲ್ಲಿ ಬಾಯಿ ಮುಚ್ಚಿಸಿದ ರಾಜಮೌಳಿ

ಮೆಗಾ ಪವರ್ ಸ್ಟಾರ್ ರಾಮ್ ಚರಣ್‌ ಬಗ್ಗೆ ಖ್ಯಾತ ನಿರ್ದೇಶಕರೊಬ್ಬರು ಕೀಳಾಗಿ ಮಾತನಾಡಿದ್ದರು. 'ಮಗಧೀರ' ಚಿತ್ರದ ಯಶಸ್ಸಿನ ಕ್ರೆಡಿಟ್ ಚರಣ್‌ಗೆ ಸಲ್ಲುವುದಿಲ್ಲ ಎಂದಿದ್ದರು. ಈ ಮಾತಿಗೆ ಖಡಕ್ ಉತ್ತರ ಕೊಟ್ಟ ರಾಜಮೌಳಿ ಹೇಳಿದ್ದೇನು? ಇಲ್ಲಿದೆ ವಿವರ.

Read Full Story

08:11 PM (IST) May 17

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ, ಪಂಜಾಬ್ ಕಿಂಗ್ಸ್‌ ಮಣಿಸಿ ಅಗ್ರಸ್ಥಾನಕ್ಕೇರಿದ ಡಿಫೆಂಡಿಂಗ್ ಚಾಂಪಿಯನ್ಸ್

ಐಪಿಎಲ್ 2026ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್‌ಗಳ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು. ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಉತ್ತಮ ಬ್ಯಾಟಿಂಗ್‌ನಿಂದ ಆರ್‌ಸಿಬಿ 222 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

Read Full Story

08:02 PM (IST) May 17

ಟ್ರಂಪ್ ಪ್ರವಾಸ ಮುಗಿಯುತ್ತಿದ್ದಂತೆಯೇ, ಚೀನಾ ಕೊಟ್ಟ ಉಡುಗೊರೆಯನ್ನು ಕಸದಬುಟ್ಟಿಗೆ ಎಸೆದ ಅಮೆರಿಕ ಅಧಿಕಾರಿಗಳು!

3 ದಿನಗಳ ಚೀನಾ ಪ್ರವಾಸ ಮುಗಿಸಿದ ಡೊನಾಲ್ಡ್ ಟ್ರಂಪ್ ಅವರ ತಂಡ, ಭದ್ರತಾ ಮತ್ತು ಹ್ಯಾಕಿಂಗ್ ಭೀತಿಯಿಂದಾಗಿ ತಮಗೆ ನೀಡಿದ್ದ ಮೊಬೈಲ್ ಸೇರಿದಂತೆ ಎಲ್ಲಾ ಚೀನಿ ವಸ್ತುಗಳನ್ನು ಕಸದಬುಟ್ಟಿಗೆ ಎಸೆದಿದೆ. ಇದೇ ವೇಳೆ, ನಿರ್ಬಂಧವಿದ್ದ ಅಮೆರಿಕದ ಸಚಿವ ಮಾರ್ಕೋ ರುಬಿಯೊ ಅವರ ಹೆಸರನ್ನು ಬದಲಿಸಿ ಪ್ರವೇಶ ನೀಡಲಾಗಿದೆ.

Read Full Story

07:49 PM (IST) May 17

ಮೊದಲ ಚಿತ್ರಕ್ಕೆ 1 ಲಕ್ಷ ಸಂಭಾವನೆ, ಈಗ 10 ಸಾವಿರ ಕೋಟಿಯ ಒಡತಿ - ಈ ನಟಿ ಯಾರು ಗೊತ್ತಾ?

ತಮಿಳು ಚಿತ್ರರಂಗದಲ್ಲಿ ಕಡಿಮೆ ಸಮಯದಲ್ಲಿಯೇ ಬಹುತೇಕ ಎಲ್ಲಾ ಟಾಪ್ ನಟರೊಂದಿಗೆ ನಟಿಸಿದ್ದ ನಟಿಯೊಬ್ಬರು, ಇಂದು 10 ಸಾವಿರ ಕೋಟಿ ರೂಪಾಯಿ ಆಸ್ತಿಗೆ ಒಡತಿಯಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಈ ನಟಿ ಕಾಲಿಟ್ಟರು.

Read Full Story

07:38 PM (IST) May 17

Trisha Magic - ವಿಜಯ್ ಮಾತ್ರವಲ್ಲ, ನಟ ಸೂರ್ಯನ ಗೆಲುವಿನಲ್ಲೂ ಪಾಲು ಪಡೆದ ನಟಿ ತ್ರಿಷಾ ಕೃಷ್ಣನ್; ಈ ಮ್ಯಾಜಿಕ್ ಸೀಕ್ರೆಟ್ ಏನು?

ನಟಿ ತ್ರಿಷಾ ಕೃಷ್ಣನ್ ಕಾಲಿಟ್ಟಲ್ಲೆಲ್ಲಾ ಗೆಲವು ಎಂಬ ಮಾತು ಕೇಳಿ ಬರುತ್ತಿದೆ. ಇತ್ತೀಚೆಗೆ ದಳಪತಿ ವಿಜಯ್ ಅವರು ತಮಿಳುನಾಡಿನ ಅಸೆಂಬ್ಲಿ ಚುನಾವಣೆಯಲ್ಲಿ ಗೆಲವು ಸಾಧಿಸಿ ಮುಖ್ಯಮಂತ್ರಿ ಆಗಿದ್ದರ ಹಿಂದೆ ತ್ರಿಷಾ ಕಾಲ್ಗುಣ ಇದೆ ಎನ್ನಲಾಗುತ್ತದೆ. ಜೊತೆಗೆ, ಈಗ ತ್ರಿಷಾ ಜೊತೆ ಸೂರ್ಯ ನಟಿಸಿದ ಸಿನಿಮಾ ‘ಕರುಪ್ಪು’ ಸೂಪರ್ ಹಿಟ್ ಆಗಿದೆ. 

Read Full Story

07:15 PM (IST) May 17

7ನೇ ವಯಸ್ಸಲ್ಲೇ ಟೀಚರ್‌ನಿಂದ ಲೈಂಗಿಕ ಕಿರುಕುಳ, 10 ವರ್ಷ ನರಕ ಅನುಭವಿಸಿದ್ದೆ - ನಟಿ ಮೀರಾ ಶಾಕಿಂಗ್ ಹೇಳಿಕೆ

ನಟಿ ಮೀರಾ ವಾಸುದೇವನ್ ಅವರು ತಮ್ಮ ಬಾಲ್ಯದಲ್ಲಿ ಎದುರಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಏಳನೇ ವಯಸ್ಸಿನಲ್ಲಿ ಟ್ಯೂಷನ್ ಟೀಚರ್‌ನಿಂದ ಶುರುವಾದ ಈ ದೌರ್ಜನ್ಯ ಹದಿನೇಳನೇ ವಯಸ್ಸಿನವರೆಗೂ ಮುಂದುವರಿದಿತ್ತು ಎಂದು ಮೀರಾ ಹೇಳಿದ್ದಾರೆ.

Read Full Story

06:47 PM (IST) May 17

ಪುಷ್ಪಾ ಇಂಪಾಸಿಬಲ್‌ನ ಮುಗ್ಧೆ ಮನ್ವಾಳ ರಿಯಲ್ ಅವತಾರ ನೋಡಿದ್ರೆ ದಂಗಾಗ್ತೀರಾ - ಫೋಟೋಸ್ ನೋಡಿ

ಸಬ್ ಟಿವಿಯ ಜನಪ್ರಿಯ ಶೋ 'ಪುಷ್ಪಾ ಇಂಪಾಸಿಬಲ್' ದಿನಕ್ಕೊಂದು ಹೊಸ ತಿರುವುಗಳೊಂದಿಗೆ ಸದ್ದು ಮಾಡುತ್ತಿದೆ. ಸದ್ಯ ಶೋನಲ್ಲಿ ಮನ್ವಾ ತ್ರಿವೇದಿ ಪಾತ್ರ ಎಲ್ಲರ ಗಮನ ಸೆಳೆಯುತ್ತಿದೆ. ಈ ಪಾತ್ರ ಮಾಡುತ್ತಿರುವ ನಟಿ ಯಾರು, ಅವರ ಹಿನ್ನೆಲೆ ಏನು? ಇಲ್ಲಿದೆ ವಿವರ.

Read Full Story

06:18 PM (IST) May 17

ಸಲ್ಮಾನ್ ಖಾನ್‌ಗೆ ಶೂಟಿಂಗ್ ವೇಳೆ ಭೀಕರ ಅಪಘಾತ - ಒಂದೂವರೆ ನಿಮಿಷ ಉಸಿರಾಟ ನಿಂತಿತ್ತಂತೆ!

ಸಲ್ಮಾನ್ ಖಾನ್‌ ಕೇವಲ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ, ತಮ್ಮ ಅದ್ಭುತ ಫಿಸಿಕ್ ಮತ್ತು ಆಕ್ಷನ್ ಸ್ಟೈಲ್‌ಗೂ ಫೇಮಸ್ ಆಗಿದ್ದರು. ಹೃತಿಕ್ ರೋಷನ್ ಸೇರಿದಂತೆ ಹಲವು ನಟರಿಗೆ ಅವರು ಫಿಟ್‌ನೆಸ್ ಟ್ರೈನಿಂಗ್ ಕೂಡ ಕೊಟ್ಟಿದ್ದರು.

Read Full Story

06:04 PM (IST) May 17

Be Careful - ಫ್ಯಾಮಿಲಿ ಜೊತೆ ಈ ಸಿನಿಮಾ ನೋಡ್ಬೇಡಿ, ಒಬ್ಬರೇ ನೋಡೋದು ಕೂಡ ಡೇಂಜರ್.. ಹುಶಾರ್!

ಕ್ಯಾಮೆರಾ ಕೆಲಸವಂತೂ ಅದ್ಭುತವಾಗಿದ್ದು, ಕತ್ತಲೆಯಲ್ಲೇ ನಡೆಯುವ ದೃಶ್ಯಗಳನ್ನು ಅತ್ಯಂತ ರೋಚಕವಾಗಿ ಸೆರೆಹಿಡಿಯಲಾಗಿದೆ. ಯಾವುದೇ ದೊಡ್ಡ ತಾರಾಗಣವಿಲ್ಲದೆ, ಅದ್ದೂರಿ ಸೆಟ್‌ಗಳಿಲ್ಲದೆ ಕೇವಲ ಒಂದು ಮನೆಯೊಳಗೆ ಇಷ್ಟೊಂದು ಅದ್ಭುತವಾಗಿ ಸಿನಿಮಾ ಮಾಡಬಹುದು ಎಂಬುದಕ್ಕೆ ಈ ಸಿನಿಮಾ ಸಾಕ್ಷಿ..!

Read Full Story

05:55 PM (IST) May 17

Cannes 2026 - ಪತ್ನಿ ಅದಿತಿ ಹೈ-ಫ್ಯಾಷನ್ ಲುಕ್‌ಗೆ ಸಿದ್ಧಾರ್ಥ್ ಫಿದಾ - ಒಂದೇ ಪದದಲ್ಲಿ ಹೇಳಿದ್ದೇನು ನೋಡಿ!

ನಟ ಸಿದ್ಧಾರ್ಥ್, ತಮ್ಮ ಪತ್ನಿ ಅದಿತಿ ರಾವ್ ಹೈದರಿ ಅವರ ಕಾನ್ 2026 ರೆಡ್ ಕಾರ್ಪೆಟ್ ಲುಕ್‌ಗೆ 'W.O.W.' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ಧರಿಸಿದ್ದ ಕಸ್ಟಮ್ ಲೈಮ್-ಗ್ರೀನ್ ಟೋನಿ ವಾರ್ಡ್ ಕೌಚರ್ ಗೌನ್, ತನ್ನ ವಿಶಿಷ್ಟ ವಿನ್ಯಾಸ..

Read Full Story

05:37 PM (IST) May 17

ಮಗಳಿಗೆ 'ಮಿಯೂ' ಎಂದು ಹೆಸರಿಟ್ಟ ನಿರ್ದೇಶಕ ಅಟ್ಲಿ-ಪ್ರಿಯಾ ದಂಪತಿ - ಏನಿದರ ಅರ್ಥ?

ಖ್ಯಾತ ತಮಿಳು ನಿರ್ದೇಶಕ ಅಟ್ಲಿ ಕುಮಾರ್ ಮತ್ತು ಅವರ ಪತ್ನಿ ಪ್ರಿಯಾ ಮೋಹನ್ ತಮ್ಮ ಮುದ್ದಿನ ಮಗಳಿಗೆ 'ಮಿಯೂ' ಎಂದು ಹೆಸರಿಟ್ಟಿದ್ದಾರೆ. ಈ ಖುಷಿಯ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story

05:14 PM (IST) May 17

Aarti Fierce Response - ಜಯಂ ರವಿ ಕಣ್ಣೀರಿಗೆ ಆರತಿಯ ಖಾರವಾದ ಪೊಸ್ಟ್.. ಸೋಷಿಯಲ್ ಮೀಡಿಯಾದಲ್ಲಿ ಖಡಕ್ ವಾರ್ನಿಂಗ್!

ಜಯಂ ರವಿ ಅವರ ಭಾವನಾತ್ಮಕ ಅಳಲು ಮತ್ತು ಆರತಿ ಅವರ 'ಸಿಂಹಿಣಿ'ಯಂತಹ ಎಚ್ಚರಿಕೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಒಂದು ಕಾಲದ ಈ ಸುಂದರ ಜೋಡಿ ಈಗ ಪರಸ್ಪರ ವೈರಿಗಳಂತೆ ನಿಂತಿರುವುದು ಸಿನಿ ಪ್ರೇಮಿಗಳಿಗೆ ನೋವು ತಂದಿದೆ. ಈ 'ದಾಂಪತ್ಯ ದಹನ' ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಕಾದು ನೋಡಬೇಕಿದೆ.

 

Read Full Story

05:12 PM (IST) May 17

'ಪುಷ್ಪ'ದಲ್ಲಿ ಆದ ತಪ್ಪು 'ರಾಕ'ದಲ್ಲಿ ಆಗಬಾರದು - ಅಲ್ಲು ಅರ್ಜುನ್ ಟೀಂನಿಂದ ಹೊಸ ಪ್ಲ್ಯಾನ್!

ಅಟ್ಲಿ ನಿರ್ದೇಶನದ, ಅಲ್ಲು ಅರ್ಜುನ್ ನಟನೆಯ 'ರಾಕ' ಸಿನಿಮಾದ ನಿರ್ಮಾಪಕರು ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ. 'ಪುಷ್ಪ' ಸಿನಿಮಾದ ಡೈಲಾಗ್, ಡ್ಯಾನ್ಸ್ ಎಲ್ಲೆಡೆ ಬಳಕೆಯಾದಂತೆ ಆಗಬಾರದೆಂದು ಈ ನಿರ್ಧಾರ ಕೈಗೊಂಡಿದ್ದಾರೆ.

Read Full Story

04:55 PM (IST) May 17

ನವವಿವಾಹಿತ ಕೊಲೆ ಕೇಸ್ ಹಿಂದೆ ಹಲವು ಅನುಮಾನ, ಎಸ್ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆಯ ಆರೋಪದ ನಂತರ ಮಧ್ಯಪ್ರದೇಶದ ಮನೆಯಲ್ಲಿ  ಶವವಾಗಿ ಪತ್ತೆಯಾದ ತ್ವಿಶಾ ಶರ್ಮಾ ಸಾವಿನ ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. ಆಕೆಯ ಪತಿ ವಕೀಲ ಸಮರ್ಥ್ ಸಿಂಗ್ ಮತ್ತು ಮಾವನ ವಿರುದ್ಧ ವರದಕ್ಷಿಣೆ ಕಿರುಕಳ ಸೇರಿದಂತೆ ಕೆ ಪ್ರಕರಣ ದಾಖಲಾಗಿದೆ, 

Read Full Story

04:26 PM (IST) May 17

ಪ್ರಮುಖ ತಾಣಗಳ ಭೇಟಿಗೆ ಭಾರತ ನೇಪಾಳ ಹೊಸ ರೈಲು ಘೋಷಣೆ, ಇಲ್ಲಿದೆ ಟಿಕೆಟ್ ದರ,ಮಾರ್ಗ ವಿವರ

ಪ್ರವಾಸಿ ತಾಣ ದೇವಸ್ಥಾನ ಸೇರಿದಂತೆ ಪ್ರಮುಖ ತಾಣಗಳ ಭೇಟಿ, ಸಂದರ್ಶನಕ್ಕಾಗಿ ಭಾರತೀಯ ರೈಲ್ವೇ ಹೊಸ ಭಾರತ ನೇಪಾಳ ಗೌರವ್ ರೈಲು ಘೋಷಣೆ ಮಾಡಿದೆ. ರೈಲು ಟಿಕೆಟ್ ದರ, ಮಾರ್ಗ, ಸಮಯದ ವಿವರ ಇಲ್ಲಿದೆ.

Read Full Story

04:22 PM (IST) May 17

ರವಿ ಮೋಹನ್ ‘ಇಡ್ಲಿ ನಟಿ’ ಹೇಳಿಕೆಗೆ ಖುಷ್ಬೂ ಪ್ರತಿಕ್ರಿಯೆ - ವೈರಲ್ ಆಯ್ತು ಪೋಸ್ಟ್

ನಟ ರವಿ ಮೋಹನ್ ತನ್ನನ್ನು 'ಇಡ್ಲಿ ನಟಿ' ಎಂದು ಕರೆದು ಮಾಡಿದ ಆರೋಪಗಳಿಗೆ ನಟಿ ಖುಷ್ಬೂ ಸೋಷಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

Read Full Story

03:24 PM (IST) May 17

Urvashi Troll - 'ಆ ಸೀರೆಯ First Copy ಉಟ್ಟ ವಿಶ್ವದ ಮೊದಲ ಭಾರತೀಯ ಮಹಿಳೆ'.. ಊರ್ವಶಿ ಭಾರೀ ಟ್ರೋಲ್!

ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಊರ್ವಶಿ ವಿರುದ್ಧ ಕಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ. "ಇದೊಂದು ಕೇವಲ ಪಬ್ಲಿಸಿಟಿ ಸ್ಟಂಟ್, ಗಮನ ಸೆಳೆಯಲು ಇವರು ಹೀಗೆ ಮಾಡುತ್ತಾರೆ" ಎಂದು ಒಬ್ಬರು ಬರೆದರೆ, ಮತ್ತೊಬ್ಬರು "ನಿಮ್ಮ ಸ್ವಂತಿಕೆ ಎಲ್ಲಿ ಹೋಯಿತು?" ಎಂದು ಪ್ರಶ್ನಿಸಿದ್ದಾರೆ.

Read Full Story

03:14 PM (IST) May 17

ಟಾಸ್ ಗೆದ್ದ ಪಂಜಾಬ್, ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅಲಭ್ಯ, ಜಿತೇಶ್ ಶರ್ಮಾಗೆ ಜವಾಬ್ದಾರಿ

ಪಂಜಾಬ್ ವಿರುದ್ದದ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿಯಲ್ಲಿ ಭಾರಿ ಬದಲಾವಣೆಯಾಗಿದೆ. ನಾಯಕ ರಜತ್ ಪಾಟೀದಾರ್ ಅಲಭ್ಯರಾಗಿದ್ದಾರೆ. ಹೀಗಾಗಿ ಇಂದು ತಂಡವನ್ನು ಜಿತೇಶ್ ಶರ್ಮಾ ತಂಡ ಮುನ್ನಡೆಸುತ್ತಿದ್ದಾರೆ.

 

Read Full Story

03:09 PM (IST) May 17

ಬ್ರಾಹ್ಮಣರ ಬಗ್ಗೆ ಆಡಿದ ಆ ಮಾತು ತಂದ ಸಂಕಷ್ಟ; ಬಾಲಿವುಡ್ ನಿರ್ದೇಶಕನ ವಿರುದ್ಧ ಕೋರ್ಟ್‌ನಿಂದ ಮಹತ್ವದ ಆದೇಶ!

ಸದ್ಯಕ್ಕೆ ಈ ವಿವಾದದ ಬಗ್ಗೆ ಅನುರಾಗ್ ಕಶ್ಯಪ್ ಆಗಲಿ ಅಥವಾ ಅವರ ತಂಡವಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಕಾನೂನು ಹೋರಾಟದ ಮೂಲಕ ಈ ಸಂಕಷ್ಟದಿಂದ ಅವರು ಹೇಗೆ ಪಾರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಈ ನಿರ್ದೇಶಕನಿಗೆ ಈಗ ಗುಜರಾತ್ ನ್ಯಾಯಾಲಯ 'ಬಿಗ್ ಶಾಕ್' ನೀಡಿರುವುದಂತೂ ನಿಜ!

Read Full Story

01:38 PM (IST) May 17

ಮಿಳುನಾಡಿನ ದೊರೆ ಆಗಿದ್ದಕ್ಕೆ ನಟ ವಿಜಯ್ ಜೋಸೆಫ್‌ಗೆ ನಟಿ ರಂಭಾ ಮಾಡಿರೋ ಪೋಸ್ಟ್ ಏನ್ ಗೊತ್ತಾ?

ಕನ್ನಡ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ರಂಭಾ ಮತ್ತು ವಿಜಯ್ ಜೋಡಿ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಿದ್ದ ಕಾಲವೊಂದಿತ್ತು. ಇವರಿಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದರು. ವಿಜಯ್ ಸಿಎಂ ಆಗಿದ್ದಕ್ಕೆ ರಂಭಾ ಏನ್ ಪೋಸ್ಟ್ ಮಾಡಿದ್ದಾರೆ ನೋಡಿ..

Read Full Story

01:29 PM (IST) May 17

Yogi Adityanath - 22 ರಾಜ್ಯಗಳಲ್ಲಿ ಬಿಜೆಪಿಯದ್ದೇ ಪಾರುಪತ್ಯ; 'ರಾಷ್ಟ್ರ ಮೊದಲು' ಎಂದ ಯೋಗಿ, ಬೆಂಕಿ ಭಾಷಣ ವೈರಲ್

ಕೇಂದ್ರದಲ್ಲಿ ಅಧಿಕಾರದಲ್ಲಿರುವುದರ ಜೊತೆಗೆ 22 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸಿದೆ. ಕಡಿಮೆ ಸಮಯದಲ್ಲಿ ನಮ್ಮ ಪಕ್ಷ ದೇಶದ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.  'ರಾಷ್ಟ್ರ ಮೊದಲು' ಎಂಬುದು ನಮ್ಮ ಸಿದ್ಧಾಂತ ಎಂದರು.

Read Full Story

12:47 PM (IST) May 17

Thalapathy Vijay ಸಿಎಂ ಆಗಿದ್ದಕ್ಕೆ ನಂಗೇನು ಸಮಸ್ಯೆ ಇಲ್ಲ; ಅಷ್ಟು ಕೆಳಮಟ್ಟದವನಲ್ಲ - Actor Rajinikanth

Actor rajinikanth on Thalapathy Vijay: ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ನಾನು ಡಿಎಂಕೆ ಮತ್ತು ಎಡಿಎಂಕೆ ಮೈತ್ರಿಗಾಗಿ ಮಾತುಕತೆ ನಡೆಸಿದ್ದೇನೆ ಎಂದು ಹಬ್ಬಿರುವ ಸುದ್ದಿ ಸುಳ್ಳು ಎಂದು ನಟ ರಜನಿಕಾಂತ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

12:25 PM (IST) May 17

ಬೆಲೆ ಏರಿಕೆ ನಡುವೆ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದ WHO, ಕಾಂಗೋದಲ್ಲಿ ಎಬೋಲಾ ಸ್ಫೋಟ

ಬೆಲೆ ಏರಿಕೆ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆ ಆರೋಗ್ಯ ಆತಂಕ ಹೆಚ್ಚಾಗಿದೆ. ಕಾಂಗೋದಲ್ಲಿ ಎಬೋಲಾ ವೈರಸ್ ಸ್ಫೋಟಗೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ಘೋಷಿಸಿದೆ. 

Read Full Story

12:22 PM (IST) May 17

ಅಮಿತಾಭ್​-ರಿಷಿ ಕಪೂರ್​ - ಬಾಲಿವುಡ್​ ದಂತಕಥೆಗಳ ಶಾಲಾ ದಿನದ ಕುತೂಹಲದ ಐ-ಕಾರ್ಡ್​ಗಳು ವೈರಲ್​

ಬಾಲಿವುಡ್ ದಂತಕಥೆಗಳಾದ ಅಮಿತಾಭ್ ಬಚ್ಚನ್ ಮತ್ತು ರಿಷಿ ಕಪೂರ್ ಅವರ ಸ್ನೇಹ ಮತ್ತು ಸಿನಿಮಾಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅವರ ಶಾಲಾ ದಿನಗಳ ಐಡೆಂಟಿಟಿ ಕಾರ್ಡ್‌ಗಳ ಕುರಿತು ಇದು ಬೆಳಕು ಚೆಲ್ಲುತ್ತದೆ.
Read Full Story

12:16 PM (IST) May 17

ದಿಶಾ ಪಟಾನಿ+ಮೌನಿ ರಾಯ್ 'ಅಪರೂಪ'ದ BFF ಸಂಬಂಧಕ್ಕೆ ಬೇಸತ್ತು Mouni Roy ದೂರ ಮಾಡಿದ್ರಾ ಸೂರಜ್?

ನಟಿ ದಿಶಾ ಪಟಾಣಿ ಹಾಗು ಮೌನಿ ರಾಯ್ ಬಾಲಿವುಡ್ ಬೆಸ್ಟ್ ಫ್ರೆಂಡ್ಸ್ ..ಇಬ್ಬರ ಜೀವನಲ್ಲಿ ಯಾರ್​ ಬರಲಿ ಹೋಗಲಿ, ಇವರಿಬ್ಬರು ಮಾತ್ರ ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಒಟ್ಟಿಗೆ ಊಟ, ಆಟ ಪಾಠ ಅನ್ನೋ ಹಾಗೆ ಇವಾಗ್ಲೂ ಮೌನಿ ರಾಯ್ ನೆರಳಂತೆ ಇರ್ತಾರೆ ದಿಶಾ ಪಟಾನಿ.. ಇದೇನು BFF ಸ್ನೇಹಿತೆಯರ ಕಥೆ ನೋಡಿ..

Read Full Story

11:56 AM (IST) May 17

ಡಿವೋರ್ಸ್​ ಬೆನ್ನಲ್ಲೇ ನಟಿ ದಿಶಾ ಪಟಾನಿ ಜೊತೆ ಮೌನಿ ರಾಯ್ ಈ ಫೋಟೋ- ಜಾಲತಾಣದಲ್ಲಿ ಹಲ್​ಚಲ್​; ಅಸಲಿಯತ್ತೇನು

ನಟಿ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ತಮ್ಮ ಪ್ರತ್ಯೇಕತೆಯನ್ನು ಖಚಿತಪಡಿಸಿದ್ದಾರೆ. ಇದೇ ಸಮಯದಲ್ಲಿ, ದಿಶಾ ಪಟಾನಿ ಜೊತೆ ಮೌನಿ ಮದುವೆಯಾಗುತ್ತಿದ್ದಾರೆ ಎಂಬ ನಕಲಿ ಸುದ್ದಿ ವೈರಲ್ ಆಗಿದ್ದು, ಆ ಫೋಟೋದ ಹಿಂದಿನ ಅಸಲಿಯತ್ತನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story

11:35 AM (IST) May 17

ವಿಜಯ್‌ಗೆ ಸೆಡ್ಡು ಹೊಡೆಯಲು ರಾಜಕೀಯಕ್ಕೆ ಜಯಲಲಿತಾ ಮಾನಸಪುತ್ರ, ಖ್ಯಾತ ನಟನ ಎಂಟ್ರಿ?

ತಮಿಳುನಾಡಿನಲ್ಲಿ ದಳಪತಿ ವಿಜಯ್ ಮುಖ್ಯಮಂತ್ರಿಯಾಗುತ್ತಿದ್ದಂತೆ, ಸಿನಿಮಾದಲ್ಲಿ ಅವರ ಕಡು ಪ್ರತಿಸ್ಪರ್ಧಿ ನಟರೊಬ್ಬರು ರಾಜಕೀಯಕ್ಕೆ ಬರುತ್ತಾರೆ ಎಂಬ ಊಹಾಪೋಹಗಳು ಶುರುವಾಗಿವೆ. ಈ ನಟ ಜಯಲಲಿತಾ ಮಾನಸಪುತ್ರ ಎಂದೇ ಖ್ಯಾತರಾಗಿದ್ದಾರೆ.

Read Full Story

11:20 AM (IST) May 17

Nagpur Metro - ವಾವ್ ಇಂಡಿಯಾ! ನಾಗ್ಪುರ ಮೆಟ್ರೋ ಪ್ರಯಾಣಿಸಿದ ಆಸ್ಟ್ರೇಲಿಯಾ ರಾಯಭಾರಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು ಗೊತ್ತಾ?

ಪ್ರಧಾನಿ ಮೋದಿ ಅವರ ಇಂಧನ ಉಳಿತಾಯದ ಸಲಹೆಯನ್ನು ಪಾಲಿಸಿದ ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಪಾಲ್ ಮರ್ಫಿ, ನಾಗ್ಪುರ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಇದೊಂದು 'ವಿಶ್ವದರ್ಜೆಯ' ಅನುಭವ ಎಂದ ಎಂದಿದ್ದಾರೆ. ಮತ್ತು ಯುಪಿಐ ಪಾವತಿ ವ್ಯವಸ್ಥೆ ಹಾಡಿ ಹೊಗಳಿದ್ದಾರೆ. ಅವರ ಈ ಪೋಸ್ಟ್  ವೈರಲ್ ಆಗಿದೆ.

Read Full Story

09:41 AM (IST) May 17

ಸಿಎಸ್‌ಕೆ ಫ್ಯಾನ್ಸ್‌ನಿಂದ ಆರ್‌ಸಿಬಿ ಗೆಲ್ಲಲು ಪ್ರಾರ್ಥನೆ, RCB-PBKS ನಿರ್ಧರಿಸುತ್ತೆ ಚೆನ್ನೈ ಪ್ಲೇಆಫ್ ಹಣೆಬರಹ

ಸಿಎಸ್‌ಕೆ ಅಭಿಮಾನಿಗಳು ಇದೀಗ ಆರ್‌ಸಿಬಿ ತಂಡ ಗೆಲ್ಲಲು ಪ್ರಾರ್ಥಿಸುತ್ತಿದ್ದಾರೆ. ಇಂದು ನಡೆಯಲಿರುವ ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದ ಫಲಿತಾಂಶ ಮೇಲೆ ಸಿಎಸ್‌ಕೆ ತಂಡದ ಪ್ಲೇಆಫ್ ಅವಕಾಶ, ಎಲಿಮಿನೇಶನ್ ನಿರ್ಧಾರವಾಗಲಿದೆ.

Read Full Story

08:47 AM (IST) May 17

ಸಿಬಿಎಸ್ಇ 9ನೇ ಕ್ಲಾಸ್‌ಗೆ ಜು.1ರಿಂದ್ಲೇ ತ್ರಿಭಾಷೆ ಸೂತ್ರ; 3ರಲ್ಲಿ 2 ಸ್ಥಳೀಯ ಭಾಷೆ ಕಡ್ಡಾಯ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 9ನೇ ತರಗತಿಗೆ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿದೆ. ಈ ನಿಯಮದ ಪ್ರಕಾರ, ವಿದ್ಯಾರ್ಥಿಗಳು ಕನಿಷ್ಠ ಎರಡು ಸ್ಥಳೀಯ ಭಾಷೆಗಳನ್ನು ಕಲಿಯಬೇಕಿದ್ದು, 10ನೇ ತರಗತಿಯಲ್ಲಿ ಮೂರನೇ ಭಾಷೆಗೆ ಬೋರ್ಡ್ ಪರೀಕ್ಷೆ ಇರುವುದಿಲ್ಲ.
Read Full Story

08:37 AM (IST) May 17

ಹಾವಾಮಾನ ಇಲಾಖೆ ಎಚ್ಚರಿಕೆ, ಮುಂಗಾರು ಪ್ರವೇಶದ ಜೊತೆಗೆ ದೇಶದೆ ಕೆಲವೆಡೆ ವಿಪರೀತ ಬಿಸಿಗಾಳಿ

ಮೇ.26ಕ್ಕೆ ಮುಂಗಾರು ಕೇರಳ ಪ್ರವೇಶ ಮಾಡಲಿದೆ. ಈ ಬಾರಿ ಮಳೆ ಪ್ರಮಾಣ ಕೊಂಚ ಕಡಿಮೆಯಾಗಲಿದೆ. ಇದರ ಜೊತೆಗೆ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ದೇಶದ ಕೆಲ ಭಾಗದಲ್ಲಿ ವಿಪರೀತ ಬಿಸಿ ಗಾಳಿ ಜನರನ್ನು ಕಂಗಾಲು ಮಾಡಲಿದೆ ಎಂದಿದೆ.

Read Full Story

08:37 AM (IST) May 17

ಪೋಕ್ಸೋ ಪ್ರಕರಣದಲ್ಲಿ ಕೇಂದ್ರ ಸಚಿವ ಸಂಜಯ್ ಕುಮಾರ್‌ ಬಂಡಿ ಪುತ್ರ ಭಗೀರಥ ಅರೆಸ್ಟ್‌

ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಕೇಂದ್ರ ಸಚಿವ ಬಂಡಿ ಸಂಜಯ್ ಅವರ ಪುತ್ರ ಭಗೀರಥನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ತಂದೆಯ ಸೂಚನೆಯಂತೆ ಪೊಲೀಸರಿಗೆ ಶರಣಾದ ನಂತರ ಈ ಬಂಧನ ನಡೆದಿದ್ದು, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಚಿವರು ಹೇಳಿದ್ದಾರೆ.
Read Full Story

08:25 AM (IST) May 17

Supreme Court ಸುಪ್ರೀಂ ಕೋರ್ಟ್‌ಗೆ ಬಲ - ನ್ಯಾಯಾಧೀಶರ ಸಂಖ್ಯೆ 38ಕ್ಕೆ ಏರಿಕೆ, ರಾಷ್ಟ್ರಪತಿ ಅಂಕಿತ

ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆಯನ್ನು 34 ರಿಂದ 38ಕ್ಕೆ ಹೆಚ್ಚಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಪ್ರಕರಣಗಳ ವಿಲೇವಾರಿಗೆ ಇದು ಸಹಕಾರಿಯಾಗಲಿದೆ ಎಂದು ಕಾನೂನು ತಜ್ಞರು ಸ್ವಾಗತಿಸಿದ್ದಾರೆ.
Read Full Story

08:00 AM (IST) May 17

ರನ್‌ ಮಷೀನ್‌ ಕೊಹ್ಲಿಗೆ ಆ ಆಟಗಾರನ ಸಾಥ್ ಸಿಕ್ರೆ ಪಂಜಾಬ್ ಉಡೀಸ್; ಪ್ಲೇ-ಆಫ್‌ಗೆ RCB

ಪ್ಲೇ-ಆಫ್ ಪ್ರವೇಶದ ಗುರಿಯೊಂದಿಗೆ ಆರ್‌ಸಿಬಿ ತಂಡವು ಧರ್ಮಶಾಲಾದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಮತ್ತೊಂದು ಮಹತ್ವದ ಪಂದ್ಯದಲ್ಲಿ, ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು ರಾಜಸ್ಥಾನ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟ ನಡೆಸಲಿದೆ.
Read Full Story

More Trending News