ನಟಿ ದಿಶಾ ಪಟಾಣಿ ಹಾಗು ಮೌನಿ ರಾಯ್ ಬಾಲಿವುಡ್ ಬೆಸ್ಟ್ ಫ್ರೆಂಡ್ಸ್ ..ಇಬ್ಬರ ಜೀವನಲ್ಲಿ ಯಾರ್​ ಬರಲಿ ಹೋಗಲಿ, ಇವರಿಬ್ಬರು ಮಾತ್ರ ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಒಟ್ಟಿಗೆ ಊಟ, ಆಟ ಪಾಠ ಅನ್ನೋ ಹಾಗೆ ಇವಾಗ್ಲೂ ಮೌನಿ ರಾಯ್ ನೆರಳಂತೆ ಇರ್ತಾರೆ ದಿಶಾ ಪಟಾನಿ.. ಇದೇನು BFF ಸ್ನೇಹಿತೆಯರ ಕಥೆ ನೋಡಿ..

ಅವಳೇ ನನ್ನ ಗೆಳತಿ.. ದಿಶಾ ಪಟಾನಿ ಗೆಳೆತನದ ಬಲೆಯಲ್ಲಿ ಬಿದ್ರಾ ಮೌನಿ ರಾಯ್?

Add Asianetnews Kannada as a Preferred SourcegooglePreferred

ನಟಿ ದಿಶಾ ಪಟಾಣಿ (Disha Patani) ಹಾಗು ಮೌನಿ ರಾಯ್ (Mouni Roy) ಈಗ ಬಾಲಿವುಡ್​ನ ಹಾಟ್ ಟಾಪಿಕ್ ಆಗಿದ್ದಾರೆ. ಹೇಳಿ ಕೇಳಿ ಮೌನಿ ರಾಯ್ ಮೊದ್ಲೇ ಹಾಟ್​ ಬಾಂಬ್... ಅದಕ್ಕು ಒಂದು ಹೆಜ್ಜೆ ಮುಂದೆ ದಿಶಾ ಪಟಾನಿ ಅಂದ್ರೆ ತಪ್ಪೇನು ಇಲ್ಲ. ಇದೀಗ ಇವರಿಬ್ಬರ ಬಗ್ಗೆ ಇಡೀ ಬಾಲಿವುಡ್ ಜಗತ್ತೇ ಮಾತಾಡುತ್ತಿದೆ. ಅದಕ್ಕೆ ಕಾರಣ ಏನು ಅಂತ ನೋಡೋಣ ಬನ್ನಿ..

ಬಾಲಿವುಡ್​ಪಡಸಾಲೆಯಲ್ಲಿ ಮೌನಿರಾಯ್-ದಿಶಾ ಬಗ್ಗೆ ಚರ್ಚೆ; ಮೌನಿ ಬದುಕಿಗೆ ಬೆಳಕಾಗಿ ಬಂದ್ಲಾ ಜೀವದ ಗೆಳತಿ ದಿಶಾ..?

ಬಣ್ಣದ ಲೋಕದಲ್ಲಿ ಯಾವುದೂ ಶಾಶ್ವತವಲ್ಲ. ಇಲ್ಲಿ ಪ್ರೀತಿ ಅರಳಲು ಎಷ್ಟು ಸಮಯ ಬೇಕೋ, ಅಷ್ಟೇ ವೇಗವಾಗಿ ಬಿರುಕುಗಳು ಕೂಡ ಮೂಡುತ್ತೆ. ನಟಿ ಮೌನಿ ರಾಯ್​ಜೀನದಲ್ಲೂ ಇದೇ ಆಗ್ತಿದೆ ಅಂತ ಹೇಳಲಾಗ್ತಿದೆ. ಮೌನಿ ರಾಯ್ ಗಂಡನಿಂದ ದೂರಾಗಿದ್ದಾರಂತೆ. ಆದ್ರೆ ಅದರ ಹಿಂದಿರೋ ಕಾಣದ ಕೈ ದಿಶಾ ಪಟಾನಿ ಅನ್ನೊದು ಈಗಿರೋ ಇಂಟ್ರೆಸ್ಟಿಂಗ್ ವಿಚಾರ..

ಬಾಲಿವುಡ್​ಬಿಎಫ್​ಎಫ್ ಮೌನಿ ರಾಯ್-ದಿಶಾ; ನಟಿ ಮೌನಿ ರಾಯ್ ನೆರಳಂತೆ ಹಾಟಿ ದಿಶಾ ಪಟಾನಿ..!

ಯೆಸ್, ನಟಿ ದಿಶಾ ಪಟಾಣಿ ಹಾಗು ಮೌನಿ ರಾಯ್ ಬಾಲಿವುಡ್ ಬೆಸ್ಟ್ ಫ್ರೆಂಡ್ಸ್ ಫಾರ್ ಎವರ್ ಅಂತೆ. ಇಬ್ಬರ ಜೀವನಲ್ಲಿ ಯಾರ್​ ಬರಲಿ ಹೋಗಲಿ, ಇವರಿಬ್ಬರು ಮಾತ್ರ ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಒಟ್ಟಿಗೆ ಊಟ, ಆಟ ಪಾಠ ಅನ್ನೋ ಹಾಗೆ ಇವಾಗ್ಲೂ ಮೌನಿ ರಾಯ್ ನೆರಳಂತೆ ಇರ್ತಾರೆ ದಿಶಾ ಪಟಾನಿ.. ಇದಕ್ಕೆ ಹಲವು ಉದಹಾರಣೆಗಳು ಇವೆ..

ಜೊತೆಯಾಗಿ ಹಿತವಾದ ಜೋಡಿ ಮೌನಿ-ದಿಶಾ..!

ಮೌನಿ ರಾಯ್ ಬಾಲಿವುಡ್ ಮಂದಿಯ ಯಾವ್ದಾದ್ರು ಫಕ್ಷನ್​ಗೆ ಹೋದ್ರೆ ಅಲ್ಲಿ ದಿಶಾ ಮೌನಿ ಬೆನ್ನ ಹಿಂದೆಯೇ ಹಾಜರಿರುತ್ತಾರೆ. ಗಣೇಶ್ ಹಬ್ಬ ಬಂದ್ರೆ ಇಬ್ಬರು ಒಟ್ಟಿಗೆ ಸೇರಿ ಹಬ್ಬ ಮಾಡುತ್ತಾರೆ. ಟ್ರಿಪ್​ ಹೋದ್ರೆ ಇಬ್ಬರೇ ಒಟ್ಟಿಗೆ ಹೋಗಿ ಬರ್ತಾರೆ. ಕಷ್ಟ ಸುಖದಲ್ಲಿ ಭಾಗಿ ಆಗಿ ಜೊತೆಯಾಗಿ ಹಿತವಾಗಿ ಇರ್ತಾರೆ.

ಒಂದ್ ರೀತಿ ಜೀವದ ಗೆಳತಿಯರ ಹಾಗೆ ಮೌನಿ ರಾಯ್​ದಿಶಾ ಪಟಾಣಿ ತಮ್ಮನ್ನ ತಾವು ಹೊರ ಜಗತ್ತಿಗೆ ತೋರಿಸಿಕೊಂಡಿದ್ದಾರೆ. ಸೋ ಇಷ್ಟೆಲ್ಲಾ ಇದ್ಮೇಲೆ ಮೌನಿ ರಾಯ್ ಪರ್ಸನಲ್ ಲೈಪ್ ನಲ್ಲಿ ದಿಶಾ ಇಲ್ಲದೇ ಇರ್ತಾರಾ.? ಕಂಡಿತ ಇದ್ದೇ ಇರುತ್ತಾರೆ. ಮೌನಿ ರಾಯ್ ತನ್ನ ಪತಿ ಸೂರಜ್ ನಂಬಿಯಾರ್​ಜೊತೆಗಿನ ಸಂಬಂಧ ಕಡಿಕೊಂಡಿದ್ದಾರೆ ಅಂತ ಟಾಕ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸೂರಜ್ ನಂಬಿಯಾರ್​ರನ್ನ ಮೌನಿ ಅನ್​​ಫಾಲೋ ಮಾಡಿದ್ದಾರೆ. ಇದೀಗ ಮೌನಿಯ ಮತ್ತೊಂದು ಹೃದಯ ದಿಶಾ ಪಟಾನಿ ಕೂಡ ಸೂರಜ್​​​​ ನಂಬಿಯಾರ್​ರನ್ನ ಅನ್​ಫಾಲೋ ಮಾಡಿದ್ದಾರೆ.

ದಿಷಾ ಪಟಾನಿ ಮೌನಿ ರಾಯ್​ ಪತಿನ್ನ ಅನ್​ ಫಾಲೋ ಮಾಡಿದ್ದೇ ತಡ.. ಈ ಬೆಫ್ಟ್​ ಫ್ರೆಂಡ್ಸ್ ಫರೆವರ್​​​ ಜೋಡಿ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಯೊಂದು ಶುರುವಾಗಿದೆ. ಇವರಿಬ್ಬರು ಬರೀ ಸ್ನೇಹಿತೆಯರು ಮಾತ್ರನಾ. ಬೇರೆ ಇನ್ನೇನಾದ್ರು ಇದೆಯಾ ಅಂತ ಅನುಮಾನದ ದೃಷ್ಟಿಯಿಂದ ಕೆಲವರು ನೋಡುತ್ತಿದ್ದಾರೆ.

ಅಂಬಾನಿ ಮನೆ ಹಬ್ಬದಲ್ಲಿ ಒಟ್ಟೊಟ್ಟಿಗೆ ಓಡಾಡಿಕೊಂಡಿದ್ದ ಮೌನಿ ಹಾಗು ದಿಶಾ!

ಅಮೇರಿಕಾಕ್ಕೆ ಒಟ್ಟಿಗೆ ಹೋಗಿದ್ರು, ಇಬ್ಬರು ಒಟ್ಟಿಗೆ ಒಂದೇ ಕಡೆ ವಾಸ್ತವ್ಯ ಹೂಡಿದ್ದು, ಮೌನಿ ರೋನ್​​​ನಲ್ಲಿ ದಿಷಾ ಫೊಟೋ ಕ್ಲಿಕ್ಕಿಸಿಕೊಂಡಿದ್ರು. ಇದು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೆ ಅಲ್ಲ ಮುಂಬೈನಲ್ಲಿ ಮೌನಿ ಅವರ ಹೊಸ ರೆಸ್ಟೋರೆಂಟ್ ಉದ್ಘಾಟನೆಯಲ್ಲಿಯೂ ದಿಶಾ ಇದ್ರು. ರೆಸ್ಟೋರೆಂಟ್ ಉದ್ಘಾಟನೆಯ ಫೋಟೋದಲ್ಲಿ, ಮೌನಿರಾಯ್‌ ದಿಶಾ ಪಟಾನಿ ಅವರ ಕೆನ್ನೆಗೆ ಚುಂಬಿಸಿದ್ರು. ಅಷ್ಟೆ ಅಲ್ಲ ಮೌನಿ ರಾಯ್ ಫೋಟೋಗೆ ದಿಶಾ ಸೂಪರ್‌ ಹಾಟ್‌ ಎಂದು ಕಮೆಂಟ್ ಮಾಡಿದ್ದೂ ಇದೆ. ಈಗ ಮೌನಿ ರಾಯ್ ಮದುವೆ ಆಗಿ ಎರಡೇ ವರಷಕ್ಕೆ ಗಂಡನಿಂದ ದೂರಾದ ಸುದ್ದಿ ಬರ್ತಾ ಇದ್ದು, ಇದರ ಹಿಂದೆ ದಿಷಾ ಕೈವಾಡ ಇರಬಹುದಾ.? ಇವರಿಬ್ಬರು ಬಿಟೌನ್‌ನ BFF ಅಥವ ಬೇರೆ ಇನ್ನೇನಾದ್ರು ಇದೆಯಾ ಅಂತ ಚರ್ಚೆ ಶುರು ಮಾಡಿದ್ದಾರೆ.

ಮೌನಿ ಬದುಕಿಗೆ ಬೆಳಕಾಗಿ ಬಂದ್ಲಾ ಜೀವದ ಗೆಳತಿ ದಿಶಾ..?

ಬಾಲಿವುಡ್​​ ಬಿಎಫ್​ಎಫ್​ಮೌನಿ ರಾಯ್​-ದಿಶಾ..!

ನಟಿ ಮೌನಿ ರಾಯ್ ನೆರಳಂತೆ ಹಾಟಿ ದಿಶಾ ಪಟಾನಿ..!

ಜೊತೆಯಾಗಿ ಹಿತವಾಗಿ ಓಡುತ್ತಿರೋ ಜೋಡಿ ಮೌನಿ-ದಿಶಾ..!

ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಾದ್ರೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..