ಹವಾಮಾನ ಇಲಾಖೆ ಎಚ್ಚರಿಕೆ, ಮುಂಗಾರು ಪ್ರವೇಶದ ಜೊತೆಗೆ ದೇಶದೆ ಕೆಲವೆಡೆ ವಿಪರೀತ ಬಿಸಿಗಾಳಿ
ಮೇ.26ಕ್ಕೆ ಮುಂಗಾರು ಕೇರಳ ಪ್ರವೇಶ ಮಾಡಲಿದೆ. ಈ ಬಾರಿ ಮಳೆ ಪ್ರಮಾಣ ಕೊಂಚ ಕಡಿಮೆಯಾಗಲಿದೆ. ಇದರ ಜೊತೆಗೆ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ದೇಶದ ಕೆಲ ಭಾಗದಲ್ಲಿ ವಿಪರೀತ ಬಿಸಿ ಗಾಳಿ ಜನರನ್ನು ಕಂಗಾಲು ಮಾಡಲಿದೆ ಎಂದಿದೆ.

ತಾಪಮಾನ 44 ಡಿಗ್ರಿ ಎಚ್ಚರಿಕೆ
ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆ ಆರಂಭಗೊಂಡಿದೆ. ಉತ್ತರ ಪ್ರದೇಶದಲ್ಲಿ ಸುಂಟರಗಾಳಿಗೆ 100ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಮೇ.26ಕ್ಕೆ ನೈಋತ್ಯ ಮಾನ್ಸೂನ್ ಕೇರಳ ಪ್ರವೇಶ ಮಾಡಲಿದೆ. ಮುಂಗಾರು ಪ್ರವೇಶದಿಂದ ದಕ್ಷಿಣ ಭಾರತದಲ್ಲಿ ಮಳೆ ಆರಂಭಗೊಳ್ಳಲಿದೆ. ಬಳಿಕ ಇದೇ ನೈಋತ್ಯ ಮಾನ್ಸೂನ್ ಉತ್ತರದತ್ತ ಚಲಿಸಲಿದೆ. ಪರಿಣಾಮ ದೇಶದೆಲ್ಲೆಡೆ ಮಳೆಗಾಲ ತೀವ್ರಗೊಳ್ಳಲಿದೆ. ಇದು ಸಾಮಾನ್ಯ ಪದ್ಧತಿ. ಆದರೆ ಈಬಾರಿ ಕೊಂಚ ಭಿನ್ನ. ಬಿಸಿ ಗಾಳಿ, ತಾಪಮಾನ 44 ಡಿಗ್ರಿಗೆ ತಲುಪಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಎಲ್ ನಿನೊ ಜೊತಗೆ ತಾಪಮಾನ ಭೀತಿ
ಎನ್ ನಿನೊ ರೂಪುಗೊಳ್ಳುವ ಕಾರಣ ಭಾರತದಲ್ಲಿ ಹಲವು ಪ್ರದೇಶಗಳಲ್ಲಿ ವಿಪರೀತ ಮಳೆ ಹಾಗೂ ಮತ್ತೆ ಕೆಲ ಪ್ರದೇಶಗಳಲ್ಲಿ ಬರಗಾಲ ಸೃಷ್ಟಿಯಾಗಲಿದೆ ಅನ್ನೋ ಎಚ್ಚರಿಕೆ ನೀಡಲಾಗಿದೆ.ಇದೀಗ ದೆಹಲಿ ಸೇರಿದಂತೆ ಕೆಲ ಭಾಗದಲ್ಲಿ ಬಿಸಿ ಗಾಳಿ ಜನರನ್ನು ಕಂಗಾಲು ಮಾಡಲಿದೆ ಎಂದಿದೆ.
ಕಾದ ಕಾವಲಿಯಂತಾದ ದೆಹಲಿ
ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾತಾವರಣ ಬಿಸಿಯಾಗುತ್ತಿದೆ. ನಿನ್ನೆ (ಮೇ.16) ದೆಹಲಿಯಲ್ಲಿ 40.8°C ದಾಖಲಾಗಿತ್ತು. ರಿಡ್ಜ್ ಸ್ಟೇಶನ್ ಬಳಿ 42.4C ದಾಖಲಾಗಿದೆ. ಕೆಲವೇ ದಿನಗಳಲ್ಲಿ ದೆಹಲಿ ವಾತಾವರಣ 44 ಡಿಗ್ರಿ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಮುಂದಿನ ಮೂರು ದಿನ ಬಿಸಿ ಗಾಳಿ ಆತಂಕ
ದೆಹಲಿ, ರಾಷ್ಟ್ರ ರಾಜಧಾನಿ ವ್ಯಾಪ್ತಿ ಸೇರಿದಂತೆ ಉತ್ತರ ಭಾರತದ ಕೆಲೆವೆಡೆ ತೀವ್ರ ಬಿಸಿಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅದರಲ್ಲೂ ಮುಂದಿನ ಮೂರು ದಿನ ತೀವ್ರ ಬಿಸಿಗಾಳಿ ಬೀಸಲಿದೆ. ಹೀಗಾಗಿ ದೆಹಲಿ ಜನತೆ ತೀವ್ರ ಎಚ್ಚರಿಕೆಯಿಂದ ಇರಲು ಸೂಚಿಸಿದೆ.
ಕರ್ನಾಟಕ ಸೇರಿ ದಕ್ಷಿಣದಲ್ಲಿ ಭಾರಿ ಮಳೆ
ಕರ್ನಾಟಕ, ಕೇರಳ, ಆಂಧ್ರ ಪ್ರದೇಶಗಳಲ್ಲಿ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ. ಮುಂಗಾರು ಪ್ರವೇಶಕ್ಕೂ ಮೊದಲೇ ವಾಯುಭಾರ ಕುಸಿತ ಪರಿಣಾಮ ತೀವ್ರ ಮಳೆಯಾಗಲಿದೆ ಎಂದಿದೆ. ಈಗಾಗಲೇ ಕರ್ನಾಟಕದ ಹಲೆವೆಡೆ ಭಾರಿ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿದೆ.
ಕರ್ನಾಟಕ ಸೇರಿ ದಕ್ಷಿಣದಲ್ಲಿ ಭಾರಿ ಮಳೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

