ಬೆಲೆ ಏರಿಕೆ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆ ಆರೋಗ್ಯ ಆತಂಕ ಹೆಚ್ಚಾಗಿದೆ. ಕಾಂಗೋದಲ್ಲಿ ಎಬೋಲಾ ವೈರಸ್ ಸ್ಫೋಟಗೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ಘೋಷಿಸಿದೆ. 

ಜಿನೆವಾ (ಮೇ.17) ಮಧ್ಯಪ್ರಾಚ್ಯದಲ್ಲಿನ ಯುದ್ಧ ಸಂಕಷ್ಟದಿಂದ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಇದರ ನಡುವೆ ಆರೋಗ್ಯ ಆತಂಕ ಹೆಚ್ಚಾಗಿದೆ. ಕಾಂಗೋದಲ್ಲಿ ಎಬೋಲಾ ವೈರಸ್ ಸ್ಫೋಟಗೊಂಡಿದೆ. ಎಬೋಲಾ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದೆ. ಸದ್ಯ ಕಾಂಗೋದಲ್ಲಿ 246 ಎಬೋಲಾ ಅನುಮಾನಸ್ಪದ ಪ್ರಕರಣಗಳು ವರದಿಯಾಗಿದೆ. ದುರಂತ ಅಂದರೆ 80 ಸಾವು ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಈಘ ಎಬೋಲಾ ವೈರಸ್ ಎಲ್ಲೆಡೆ ಹರಡುತ್ತಿದೆ.ಅತ್ಯಂತ ವೇಗವಾಗಿ ವೈರಸ್ ಹರಡುತ್ತಿದ್ದು, ಜನಸಾಮಾನ್ಯರು ಅಸ್ವಸ್ಥಗೊಳ್ಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಎಬೋಲಾ ಕೇಸ್‌ಗಳೇ ಹೆಚ್ಚಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ವೈದ್ಯರ ತಂಡ, ಔಷಧಿ ಸೇರಿದಂತೆ ಎಲ್ಲಾ ನೆರವು ನೀಡಿದೆ. ಇತ್ತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲೂ ನಿರತವಾಗಿದೆ.

ಎಬೋಲಾಗೆ ಯಾವುದೇ ಲಸಿಕೆ ಇಲ್ಲ

ಎಬೋಲಾ ವೈರಸ್‌ಗೆ ಯಾವುದೇ ಲಸಿಕೆಯಾಗಲಿ, ಔಷಧಿಯಾಗಲಿ ಇಲ್ಲ. ಹೀಗಾಗಿ ಎಬೋಲಾ ವೈರಸ್ ಪತ್ತೆಯಾದಲ್ಲಿ ಚಿಕಿತ್ಸೆ ಸುಲಭವಲ್ಲ. ರೋಗನಿರೋಧಕ ಶಕ್ತಿ ಇದ್ದರೆ ಮಾತ್ರ ಗುಣಮುಖರಾಗಲು ಸಾಧ್ಯ. ಹೀಗಾಗಿ ಹಿರಿಯರು, ಮಕ್ಕಳಲ್ಲಿ ತೀವ್ರ ಅಪಾಯ ತರುವ ಸಾಧ್ಯತೆ ಇದೆ.

8 ಲ್ಯಾಬ್‌ಗಳಲ್ಲಿ ಎಬೋಲಾ ವೈರಸ್ ಪ್ರಕರಣಗಳು ಹಾಗೂ ಸಾವುಗಳನ್ನು ಖಚಿತಪಡಿಸಿದೆ. ಅತೀ ವೇಗವಾಗಿ ಈ ವೈರಸ್ ಹರಡುವ ಕಾರಣ ಕಾಂಗೋದಿಂದ ಹತ್ತಿರದ ದೇಶಗಳಿಗೆ ಹರಡುವ ಭೀತಿ ಎದುರಾಗಿದೆ. ಕಾಂಗೋದಿಂದ ಮತ್ತೊಂದು ದೇಶಕ್ಕೆ ಹರಡಿದರೆ ಕೊರೋನಾ ರೀತಿ ಎಲ್ಲೆಡೆ ಕಾಣಿಸಿಕೊಳ್ಳಲಿದೆ. ಇದು ಮತ್ತಷ್ಟು ಅಪಾಯ ತರಲಿದೆ. ಎಬೋಲಾ ಕೊರೋನಾಗಿಂತ ಅತ್ಯಂತ ಅಪಾಯಾಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಕಾಂಗೋದಲ್ಲಿ ಅನುಮಾನಸ್ಪದ ಪ್ರಕರಣ, ಪಾಸಿಟೀವ್ ಪ್ರಕರಣಗಳನ್ನು ತಕ್ಷಣವೇ ಕ್ವಾರಂಟೈನ್ ಮಾಡಲಾಗುತ್ತಿದೆ. ಕಾಂಗೋದ ಮೊಂಗವಾಲು, ರ್ವಾಂಪರದಲ್ಲೂ ಪ್ರಕರಣ ಪತ್ತೆಯಾಗಿದೆ. ಇದು ನೆರೆಯ ದೇಶಗಳಾದ ತಾಂಜನಿಯಾ, ದಕ್ಷಿಣ ಸುಡಾನ್, ಅಂಗೋಲಾ ದೇಶಗಳಲ್ಲಿ ಎಬೋಲಾ ಆತಂಕ ಹೆಚ್ಚಿಸಿದೆ.