MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಅಮಿತಾಭ್​-ರಿಷಿ ಕಪೂರ್​: ಬಾಲಿವುಡ್​ ದಂತಕಥೆಗಳ ಶಾಲಾ ದಿನದ ಕುತೂಹಲದ ಐ-ಕಾರ್ಡ್​ಗಳು ವೈರಲ್​

ಅಮಿತಾಭ್​-ರಿಷಿ ಕಪೂರ್​: ಬಾಲಿವುಡ್​ ದಂತಕಥೆಗಳ ಶಾಲಾ ದಿನದ ಕುತೂಹಲದ ಐ-ಕಾರ್ಡ್​ಗಳು ವೈರಲ್​

ಬಾಲಿವುಡ್ ದಂತಕಥೆಗಳಾದ ಅಮಿತಾಭ್ ಬಚ್ಚನ್ ಮತ್ತು ರಿಷಿ ಕಪೂರ್ ಅವರ ಸ್ನೇಹ ಮತ್ತು ಸಿನಿಮಾಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅವರ ಶಾಲಾ ದಿನಗಳ ಐಡೆಂಟಿಟಿ ಕಾರ್ಡ್‌ಗಳ ಕುರಿತು ಇದು ಬೆಳಕು ಚೆಲ್ಲುತ್ತದೆ.

2 Min read
Author : Suchethana D
Published : May 17 2026, 12:22 PM IST
Share this Photo Gallery
  • FB
  • TW
  • Linkdin
  • Whatsapp
16
ಬಾಲಿವುಡ್​ ದಂತಕಥೆ ಜೋಡಿ
Image Credit : Social Media

ಬಾಲಿವುಡ್​ ದಂತಕಥೆ ಜೋಡಿ

ಅಮಿತಾಭ್​ ಬಚ್ಚನ್ ಮತ್ತು ರಿಷಿ ಕಪೂರ್ ಭಾರತೀಯ ಚಿತ್ರರಂಗದ ಇಬ್ಬರು ದಂತಕಥೆಗಳು, ರಿಷಿ ಕಪೂರ್​ ಅವರು ಅಮಿತಾಭ್​ಕ್ಕಿಂತ 10 ವರ್ಷ ಚಿಕ್ಕವರಾದರೂ ಇವರಿಬ್ಬರೂ ಆಪ್ತ ಸ್ನೇಹಿತರಾಗಿದ್ದರು. ಈ ಜೋಡಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ತೆರೆಯ ಮೇಲಿನ ಜೋಡಿ ದಶಕಗಳಿಂದ ಪ್ರೇಕ್ಷಕರನ್ನು ರಂಜಿಸಿತು. ರಿಷಿ ಕಪೂರ್ ತಮ್ಮ ಪ್ರಣಯ ಮತ್ತು ತಮಾಷೆಯ ಚಿತ್ರಣಕ್ಕೆ ಹೆಸರುವಾಸಿಯಾಗಿದ್ದರೆ, ಅಮಿತಾಬ್ ಬಚ್ಚನ್ 'ಆಂಗ್ರಿ ಯಂಗ್ ಮ್ಯಾನ್' ಎಂದೇ ಪ್ರಸಿದ್ಧರಾಗಿದ್ದರು. ಹಿಂದಿ ಚಿತ್ರರಂಗಕ್ಕೆ ಅವರಿಬ್ಬರ ಕೊಡುಗೆಯನ್ನು ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಬರೆಯಲಾಗುವುದು.

Add Asianetnews Kannada as a Preferred SourcegooglePreferred
26
ಹಿಟ್​ ಚಿತ್ರಗಳು
Image Credit : Social Media

ಹಿಟ್​ ಚಿತ್ರಗಳು

ಕಭಿ ಕಭಿ (1976) ಅಮರ್ ಅಕ್ಬರ್ ಆಂಥೋನಿ (1977) ನಸೀಬ್ (1981) ಕೂಲಿ (1983) ಕೊನೆಯ ಚಿತ್ರ: 102 ನಾಟ್ ಔಟ್ (2018) ಸೇರಿದಂತೆ ವಿವಿಧ ಚಿತ್ರಗಳಲ್ಲಿ ಈ ಜೋಡಿ ಕಾಣಿಸಿಕೊಂಡಿದೆ. ಇಬ್ಬರೂ ಕೊನೆಯ ಬಾರಿಗೆ 2018 ರ '102 ನಾಟ್ ಔಟ್' ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈ ಚಿತ್ರದಲ್ಲಿ, ಅಮಿತಾಭ್​ ಬಚ್ಚನ್ 102 ವರ್ಷದ ತಂದೆಯ ವಿಶಿಷ್ಟ ಪಾತ್ರವನ್ನು ನಿರ್ವಹಿಸಿದರು ಮತ್ತು ರಿಷಿ ಕಪೂರ್ ಅವರ 75 ವರ್ಷದ ಮಗನ ಪಾತ್ರವನ್ನು ನಿರ್ವಹಿಸಿದರು.

Related Articles

Related image1
ಶಾರುಖ್​ ಖಾನ್​ Vs ಸೆ*ಕ್ಸ್: ಬಾಲಿವುಡ್​ ಹಸಿಬಿಸಿ ರಾಣಿ ನೇಹಾ ಧೂಪಿಯಾ ಮಾತಿಗೆ ಬಿ-ಟೌನ್​ ಕಿಡಿ
Related image2
ಪಾರ್ಟಿಗಳಲ್ಲಿ ಒಂದೆರಡು ಗಂಟೆ ಕುಣಿದು ಕೋಟಿ ಕೋಟಿ ಗಳಿಸ್ತಾರೆ ಈ ಸ್ಟಾರ್​ ನಟರು: ಇವರ ಸಂಭಾವನೆ ಹೀಗಿದೆ
36
ಕ್ಯಾನ್ಸರ್​ನಿಂದ ನಿಧನ
Image Credit : Social Media

ಕ್ಯಾನ್ಸರ್​ನಿಂದ ನಿಧನ

ರಿಷಿ ಕಪೂರ್ ಏಪ್ರಿಲ್ 30, 2020 ರಂದು ಲ್ಯುಕೇಮಿಯಾ (ರಕ್ತ ಕ್ಯಾನ್ಸರ್) ನಿಂದ ನಿಧನರಾದರು. ಇವರಿಬ್ಬರೂ ತೆರೆಯ ಮೇಲಿನ ಸ್ನೇಹಿತರಾಗಿರದೇ ಎರಡೂ ಕುಟುಂಬಗಳು ದಶಕಗಳ ಹಿಂದಿನ ಆಳವಾದ ಬಾಂಧವ್ಯವನ್ನು ಹೊಂದಿದ್ದವು. ಅಮಿತಾಭ್​ ಬಚ್ಚನ್ ಅವರು ರಿಷಿ ಕಪೂರ್ ಅವರನ್ನು ತಮ್ಮನಂತೆ ನೋಡುತ್ತಿದ್ದರು.

46
ಐಡೆಂಟಿಟಿ ಕಾರ್ಡ್​ಗಳು ವೈರಲ್​
Image Credit : Social Media

ಐಡೆಂಟಿಟಿ ಕಾರ್ಡ್​ಗಳು ವೈರಲ್​

ಈ ಜೋಡಿಯ ಶಾಲೆಯ ಐಡೆಂಟಿಟಿ ಕಾರ್ಡ್​ಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ರಿಷಿ ಕಪೂರ್​ ಅವರು 8ನೇ ಕ್ಲಾಸ್​ನಲ್ಲಿ ಇದ್ದಾಗಿನ ಐಡೆಂಟಿಟಿ ಕಾರ್ಡ್​ ಹಾಗೂ ಅಮಿತಾಭ್​ ಬಚ್ಚನ್​ ಅವರು 6ನೇ ಕ್ಲಾಸ್​​ನಲ್ಲಿ ಇರುವಾಗಿನ ಐ ಕಾರ್ಡ್​ ಇದಾಗಿದೆ.

56
ಬಾಂಬೆ ಸ್ಕೂಲ್​ನಲ್ಲಿ ರಿಷಿ ಕಪೂರ್​
Image Credit : Social Media

ಬಾಂಬೆ ಸ್ಕೂಲ್​ನಲ್ಲಿ ರಿಷಿ ಕಪೂರ್​

ರಿಷಿ ಕಪೂರ್​ ಅವರು ಬಾಂಬೆ ಸ್ಕಾಟಿಷ್​ ಸ್ಕೂಲ್​ನಲ್ಲಿ ಕಲಿಯುತ್ತಿದ್ದರು ಎನ್ನುವುದನ್ನು ಇದು ತೋರಿಸುತ್ತದೆ. 04-09-1952ರಲ್ಲಿ ಹುಟ್ಟಿರುವ ಇವರು 1970-71ರಲ್ಲಿ 8ನೇ ಕ್ಲಾಸ್​ನಲ್ಲಿ ಕಲಿಯುತ್ತಿದ್ದು, ಅವರ ರೋಲ್​ ನಂಬರ್​ 23 ಎನ್ನುವುದನ್ನು ಐ ಕಾರ್ಡ್​ನಲ್ಲಿ ನೋಡಬಹುದು.

66
ನೈನಿತಾಲ್​ನಲ್ಲಿ ಅಮಿತಾಭ್​
Image Credit : Social Media

ನೈನಿತಾಲ್​ನಲ್ಲಿ ಅಮಿತಾಭ್​

ಅದೇ ರೀತಿ, ಅಮಿತಾಭ್​ ಬಚ್ಚನ್​ ಅವರು 6ನೇ ಕ್ಲಾಸ್​ನ ಐ ಕಾರ್ಡ್​ನಲ್ಲಿ ಅವರು ನೈನಿತಾಲ್​ನ ಶೇರ್​ವುಡ್​ ಕಾಲೇಜಿನಲ್ಲಿಲ ಕಲಿಯುತ್ತಿದ್ದುದು ಇದರಿಂದ ತಿಳಿಯುತ್ತದೆ. 1965-66ನೇ ಇಸ್ವಿಯ ಕಾರ್ಡ್​ ಇದಾಗಿದ್ದು 6ನೇ ಕ್ಲಾಸ್​ನಲ್ಲಿ ರೋಲ್​ ನಂಬರ್​ 7 ಇವರದ್ದಾಗಿತ್ತು ಎನ್ನುವುದು ತಿಳಿಯುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮಿತಾಭ್ ಬಚ್ಚನ್
ಬಾಲಿವುಡ್
ಮನರಂಜನಾ ಸುದ್ದಿ
ಸಂಬಂಧಗಳು
ಸ್ನೇಹ

Latest Videos
Recommended Stories
Recommended image1
ದಿಶಾ ಪಟಾನಿ+ಮೌನಿ ರಾಯ್ 'ಅಪರೂಪ'ದ BFF ಸಂಬಂಧಕ್ಕೆ ಬೇಸತ್ತು Mouni Roy ದೂರ ಮಾಡಿದ್ರಾ ಸೂರಜ್?
Recommended image2
ಡಿವೋರ್ಸ್​ ಬೆನ್ನಲ್ಲೇ ನಟಿ ದಿಶಾ ಪಟಾನಿ ಜೊತೆ ಮೌನಿ ರಾಯ್ ಈ ಫೋಟೋ- ಜಾಲತಾಣದಲ್ಲಿ ಹಲ್​ಚಲ್​; ಅಸಲಿಯತ್ತೇನು
Recommended image3
ದರ್ಶನ್​ ಸಿಎಂ, ನಾನು ಡಿಸಿಎಂ: ರೈಲು, ವಿಮಾನ ಹಿಡಿದು ಎಲ್ಲಾ ಫ್ರೀ: ಪವಿತ್ರಾ ಗೌಡ ಲಾಯರ್​ ಭರ್ಜರಿ ಆಫರ್ಸ್​
Related Stories
Recommended image1
ಶಾರುಖ್​ ಖಾನ್​ Vs ಸೆ*ಕ್ಸ್: ಬಾಲಿವುಡ್​ ಹಸಿಬಿಸಿ ರಾಣಿ ನೇಹಾ ಧೂಪಿಯಾ ಮಾತಿಗೆ ಬಿ-ಟೌನ್​ ಕಿಡಿ
Recommended image2
ಪಾರ್ಟಿಗಳಲ್ಲಿ ಒಂದೆರಡು ಗಂಟೆ ಕುಣಿದು ಕೋಟಿ ಕೋಟಿ ಗಳಿಸ್ತಾರೆ ಈ ಸ್ಟಾರ್​ ನಟರು: ಇವರ ಸಂಭಾವನೆ ಹೀಗಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved