MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಟ್ರಂಪ್ ಪ್ರವಾಸ ಮುಗಿಯುತ್ತಿದ್ದಂತೆಯೇ, ಚೀನಾ ಕೊಟ್ಟ ಉಡುಗೊರೆಯನ್ನು ಕಸದಬುಟ್ಟಿಗೆ ಎಸೆದ ಅಮೆರಿಕ ಅಧಿಕಾರಿಗಳು!

ಟ್ರಂಪ್ ಪ್ರವಾಸ ಮುಗಿಯುತ್ತಿದ್ದಂತೆಯೇ, ಚೀನಾ ಕೊಟ್ಟ ಉಡುಗೊರೆಯನ್ನು ಕಸದಬುಟ್ಟಿಗೆ ಎಸೆದ ಅಮೆರಿಕ ಅಧಿಕಾರಿಗಳು!

3 ದಿನಗಳ ಚೀನಾ ಪ್ರವಾಸ ಮುಗಿಸಿದ ಡೊನಾಲ್ಡ್ ಟ್ರಂಪ್ ಅವರ ತಂಡ, ಭದ್ರತಾ ಮತ್ತು ಹ್ಯಾಕಿಂಗ್ ಭೀತಿಯಿಂದಾಗಿ ತಮಗೆ ನೀಡಿದ್ದ ಮೊಬೈಲ್ ಸೇರಿದಂತೆ ಎಲ್ಲಾ ಚೀನಿ ವಸ್ತುಗಳನ್ನು ಕಸದಬುಟ್ಟಿಗೆ ಎಸೆದಿದೆ. ಇದೇ ವೇಳೆ, ನಿರ್ಬಂಧವಿದ್ದ ಅಮೆರಿಕದ ಸಚಿವ ಮಾರ್ಕೋ ರುಬಿಯೊ ಅವರ ಹೆಸರನ್ನು ಬದಲಿಸಿ ಪ್ರವೇಶ ನೀಡಲಾಗಿದೆ.

2 Min read
Author : Gowthami K
Published : May 17 2026, 08:02 PM IST
Share this Photo Gallery
  • FB
  • TW
  • Linkdin
  • Whatsapp
15
3 ದಿನಗಳ ಚೀನಾ ಭೇಟಿ ಅಂತ್ಯ
Image Credit : AFP

3 ದಿನಗಳ ಚೀನಾ ಭೇಟಿ ಅಂತ್ಯ

ವಾಷಿಂಗ್ಟನ್‌: 3 ದಿನಗಳ ಚೀನಾ ಭೇಟಿ ಮುಗಿಸಿ ಅಮೆರಿಕಕ್ಕೆ ಮರಳುವ ಮುನ್ನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಂಗಡ ಬಂದಿದ್ದ ಸಚಿವರು ಮತ್ತು ಅಧಿಕಾರಿ ಬಳಗ ತಮಗೆ ನೀಡಲಾಗಿದ್ದ ಚೀನಿ ವಸ್ತುಗಳನ್ನು ಅಲ್ಲೇ ಕಸದಬುಟ್ಟಿಗೆ ಎಸೆದು ಹೋಗಿದ್ದಾರೆ ಎಂದು ವರದಿಯಾಗಿದೆ. ಭದ್ರತೆಯ ದೃಷ್ಟಿಯಿಂದ ಹೀಗೆ ಮಾಡಲಾಗಿದೆ ಎನ್ನಲಾಗಿದೆ.

Add Asianetnews Kannada as a Preferred SourcegooglePreferred
25
ಮೊಬೈಲ್‌ಗಳನ್ನೂ ತಂದಿರದ ಅಮೆರಿಕನ್‌ ಅಧಿಕಾರಿಗಳು!
Image Credit : ANI

ಮೊಬೈಲ್‌ಗಳನ್ನೂ ತಂದಿರದ ಅಮೆರಿಕನ್‌ ಅಧಿಕಾರಿಗಳು!

ಹ್ಯಾಕಿಂಗ್‌ ಭೀತಿಯಿಂದ ವೈಯಕ್ತಿಕ ಮೊಬೈಲ್‌ಗಳನ್ನೂ ತಂದಿರದ ಅಮೆರಿಕನ್‌ ಅಧಿಕಾರಿಗಳು, ತಾತ್ಕಾಲಿಕ ಬಳಕೆಗೆ ನೆಚ್ಚಿಕೊಂಡಿದ್ದ ಫೋನ್‌ಗಳನ್ನೂ ಬಿಟ್ಟು ಬಂದಿದ್ದಾರೆ. ಜತೆಗೆ, ಚೀನಾದಲ್ಲಿ ತಮಗೆ ನೀಡಲಾಗಿದ್ದ ಬ್ಯಾಡ್ಜ್‌, ಲೇಪಲ್‌ ಪಿನ್‌, ಕಾಣಿಕೆ ಇತ್ಯಾದಿಗಳನ್ನು ವಿಮಾನ ಏರುವ ಮುನ್ನ ಕದಸ ಬುಟ್ಟಿಗೆ ಹಾಕಿದರು. ಚೀನಾದ ಯಾವುದೇ ವಸ್ತು ವಿಮಾನವನ್ನು ಏರಬಾರದು ಹಾಗೂ ಅಮೆರಿಕಕ್ಕೆ ಬರಬಾರದು ಎಂಬ ಉದ್ದೇಶದಿಂದ ಹೀಗೆ ಮಾಡಲಾಯಿತು ಎಂದು ಅಮೆರಿಕದ ಪತ್ರಕರ್ತರೊಬ್ಬರು ಹೇಳಿದ್ದಾರೆ.

Related Articles

Related image1
China warn Trump: ತೈವಾನ್‌ ವಿಷಯಕ್ಕೆ ಬಂದ್ರೆ ಸರಿ ಇಲ್ಲ..; ಟ್ರಂಪ್‌ಗೆ ಚೀನಾ ನೇರ ವಾರ್ನಿಂಗ್‌!
Related image2
ಚೀನಾ ಹ್ಯಾಕ್ ಮಾಡಬಹುದೆಂಬ ಭೀತಿಗೆ ಸ್ವದೇಶದಲ್ಲೇ ಫೋನ್‌ ಬಿಟ್ಟು ಬಂದ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ನಿಯೋಗ!
35
ಹೀಗ್ಯಾಕೆ ಮಾಡಿದ್ರು?
Image Credit : Asianet News

ಹೀಗ್ಯಾಕೆ ಮಾಡಿದ್ರು?

ಮೇಲ್ನೋಟಕ್ಕೆ ಚೀನಾಗೆ ತೋರಿದ ಅವಮರ್ಯಾದೆಯಂತೆ ಕಂಡರೂ ಈ ಕ್ರಮವು ಅಧ್ಯಕ್ಷ ಹಾಗೂ ಅಧಿಕಾರಿಗಳ ಸುರಕ್ಷತೆಯ ದೃಷ್ಟಿಯಿಂದ ತೆಗೆದುಕೊಂಡದ್ದಾಗಿತ್ತು. ಚೀನಾ ತಮಗೆ ಕೊಟ್ಟ ವಸ್ತುಗಳ ಮೂಲಕ ತಮ್ಮ ಮೇಲೆ ಕಣ್ಗಾವಲು ಇಡಬಹುದು. ತಮ್ಮ ನಡೆಗಳನ್ನು ಕದ್ದು ನೋಡಿ, ನುಡಿಗಳನ್ನು ಕೇಳಬಹುದು ಅಥವಾ ಹೋದಲ್ಲೆಲ್ಲಾ ಟ್ರ್ಯಾಕ್‌ ಮಾಡಬಹುದು ಎಂಬುದು ಅಮೆರಿಕನ್ನರ ಆತಂಕ. ಜತೆಗೆ, ಚೀನಿ ವಸ್ತುಗಳಲ್ಲಿ ಯಾವುದಾದರೂ ಸ್ಫೋಟಕದಂತಹ ಅಪಾಯಕಾರಿ ವಸ್ತುವಿದ್ದು, ಟ್ರಂಪ್‌ ಪ್ರಯಾಣಿಸುವ ಏರ್‌ಫೋರ್ಸ್ ಒನ್‌ ವಿಮಾನ ಆಗಸದಲ್ಲಿದ್ದಾಗ ಅದು ತನ್ನ ನಿಜಬಣ್ಣ ತೋರುವ ಸಾಧ್ಯತೆಯೂ ಇರುತ್ತದೆ. ಇದನ್ನು ತಪ್ಪಿಸಲು ಚೀನಿ ವಸ್ತುಗಳನ್ನು ಚೀನಾದಲ್ಲೇ ಬಿಟ್ಟು ಬರಲಾಗಿದೆ.

45
 ನಿರ್ಬಂಧದಿಂದ ಪಾರಾಗಲು ಅಮೆರಿಕದ ಸಚಿವರ ರುಬಿಯೋ ಹೆಸರೇ ಬದಲು!
Image Credit : ANI

ನಿರ್ಬಂಧದಿಂದ ಪಾರಾಗಲು ಅಮೆರಿಕದ ಸಚಿವರ ರುಬಿಯೋ ಹೆಸರೇ ಬದಲು!

ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೊ ಅವರಿಗೆ ಚೀನಾ ಪ್ರವೇಶಕ್ಕೆ ನಿರ್ಬಂಧವಿರುವುದರಿಂದ, ಅವರ ಹೆಸರಿನ ಮೊದಲಕ್ಷರವನ್ನೇ ಬದಲಿಸಿ ಪ್ರವೇಶಕ್ಕೆ ಅನುಮತಿಸಿದ ವಿಚಿತ್ರ ಘಟನೆ ಗುರುವಾರ ನಡೆದಿದೆ. ಚೀನಾದ ಕ್ಸಿನ್‌ಜಿಯಾಂಗ್‌ ಹಾಗೂ ಹಾಂಕಾಂಗ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ರುಬಿಯೋ ಟೀಕಿಸಿದ್ದರು. ಹೀಗಾಗಿ ಅವರ ವಿರುದ್ಧ 2020ರಲ್ಲಿ 2 ಬಾರಿ ಚೀನಾ ನಿರ್ಬಂಧ ಹೇರಿತ್ತು. ಈ ನಿಯಮದ ಪ್ರಕಾರ ಅವರು ಚೀನಾ ಪ್ರವೇಶಿಸುವಂತಿಲ್ಲ. ಹಾಗಾಗಿ ಅವರ ಉಪನಾಮ ‘ರುಬಿಯೋ’ದಲ್ಲಿ ‘ರು’ ಬದಲು ‘ಲು’ ಎಂದು ಸೇರಿಸಿದೆ. ಬಳಿಕ ಚೀನಾ ಪ್ರವೇಶಿಸಲು ಅನುಮತಿ ನೀಡಿದೆ.

55
ಟ್ರಂಪ್‌ 3 ದಿನದ ಭೇಟಿ ಬಳಿಕ ಚೀನಾಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ ಪ್ರವಾಸ
Image Credit : Getty

ಟ್ರಂಪ್‌ 3 ದಿನದ ಭೇಟಿ ಬಳಿಕ ಚೀನಾಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ ಪ್ರವಾಸ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೂರು ದಿನ ಚೀನಾ ಪ್ರವಾಸ ಮುಗಿದ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕೂಡ ಡ್ರ್ಯಾಗನ್‌ ರಾಷ್ಟ್ರದ ಪ್ರವಾಸ ಆಯೋಜಿಸಿದ್ದಾರೆ. ಪುಟಿನ್‌ ಮೇ 19, 20ಕ್ಕೆ 2 ದಿನಗಳ ಚೀನಾ ಪ್ರವಾಸ ಕೈಗೊಳ್ಳಲಿದ್ದು, ಅಧ್ಯಕ್ಷ ಕ್ಸಿಜಿನ್‌ ಪಿಂಗ್‌ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಕ್ರೆಮ್ಲಿನ್‌ ಖಚಿತಪಡಿಸಿದೆ. ಈ ವೇಳೆ ಉಭಯ ರಾಷ್ಟ್ರಗಳ ನಡುವೆ ಪ್ರಮುಖ ಅಂತಾರಾಷ್ಟ್ರೀಯ, ಪ್ರಾದೇಶಿಕ ಸಮಸ್ಯೆ ಮತ್ತು ಆರ್ಥಿಕ ಸಹಕಾರದ ಬಗ್ಗೆ ಚರ್ಚೆ ನಡೆಯಲಿದೆ ಎಂದು ಕ್ರೆಮ್ಲಿನ್‌ ಹೇಳಿಕೊಂಡಿದೆ. ಟ್ರಂಪ್‌ ಮೇ 13 ರಿಂದ 3 ದಿನ ಚೀನಾ ಪ್ರವಾಸದಲ್ಲಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಡೊನಾಲ್ಡ್ ಟ್ರಂಪ್
ಚೀನಾ
ಅಮೇರಿಕಾ
ಕ್ಸಿ ಜಿನ್‌ಪಿಂಗ್

Latest Videos
Recommended Stories
Recommended image1
Urvashi Troll: 'ಆ ಸೀರೆಯ First Copy ಉಟ್ಟ ವಿಶ್ವದ ಮೊದಲ ಭಾರತೀಯ ಮಹಿಳೆ'.. ಊರ್ವಶಿ ಭಾರೀ ಟ್ರೋಲ್!
Recommended image2
ವರ್ಜಿನ್ ಹೆಣ್ಣುಮಗಳ ಮೌನವೇ ಮದುವೆಗೆ ಸಮ್ಮತಿ, ಅಫ್ಘಾನ್‌ನಲ್ಲಿ ಬಾಲ್ಯ ವಿವಾಹಕ್ಕೆ ಕಾನೂನು ಜಾರಿ
Recommended image3
ಬೆಲೆ ಏರಿಕೆ ನಡುವೆ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದ WHO, ಕಾಂಗೋದಲ್ಲಿ ಎಬೋಲಾ ಸ್ಫೋಟ
Related Stories
Recommended image1
China warn Trump: ತೈವಾನ್‌ ವಿಷಯಕ್ಕೆ ಬಂದ್ರೆ ಸರಿ ಇಲ್ಲ..; ಟ್ರಂಪ್‌ಗೆ ಚೀನಾ ನೇರ ವಾರ್ನಿಂಗ್‌!
Recommended image2
ಚೀನಾ ಹ್ಯಾಕ್ ಮಾಡಬಹುದೆಂಬ ಭೀತಿಗೆ ಸ್ವದೇಶದಲ್ಲೇ ಫೋನ್‌ ಬಿಟ್ಟು ಬಂದ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ನಿಯೋಗ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved