ಪಂಜಾಬ್ ವಿರುದ್ದದ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿಯಲ್ಲಿ ಭಾರಿ ಬದಲಾವಣೆಯಾಗಿದೆ. ನಾಯಕ ರಜತ್ ಪಾಟೀದಾರ್ ಅಲಭ್ಯರಾಗಿದ್ದಾರೆ. ಹೀಗಾಗಿ ಇಂದು ತಂಡವನ್ನು ಜಿತೇಶ್ ಶರ್ಮಾ ತಂಡ ಮುನ್ನಡೆಸುತ್ತಿದ್ದಾರೆ. 

ಧರ್ಮಶಾಲಾ (ಮೇ.17) ಪಂಜಾಬ್ ಕಿಂಗ್ಸ್ ವಿರುದ್ಧ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ಹಿನ್ನಡೆಯಾಗಿದೆ. ತಂಡದ ನಾಯಕ ರಜತ್ ಪಾಟೀದಾರ್ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಆರ್‌ಸಿಬಿ ತಂಡವನ್ನು ಜಿತೇಶ್ ಶರ್ಮಾ ಮುನ್ನಡೆಸುತ್ತಿದ್ದಾರೆ. ಇತ್ತ ಪ್ಲೇ ಆಫ್ ಪ್ರವೇಶ ಪಡೆಯಲು ಈ ಪಂದ್ಯದ ಗೆಲುವು ಉಭಯ ತಂಡಕ್ಕೂ ಮುಖ್ಯವಾಗಿದೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರ್‌ಸಿಬಿ ತಂಡದಲ್ಲಿನ ಮಹತ್ವದ ಬದಲಾವಣೆ ಜೊತೆಗೆ ಮೊದಲು ಬ್ಯಾಟಿಂಗ್ ತಂಡಕ್ಕೆ ಅಗ್ನಿಪರೀಕ್ಷೆಯಾಗಿದೆ. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಾಟೀದಾರ್ ಉತ್ತಮ ಬಲ ನೀಡಿದ್ದರು. ಇತ ಚೇಸಿಂಗ್‌ನಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿದೆ. ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ರಜತ್ ಪಾಟೀದಾರ್ ಬದಲು ಸುಯೇಶ್ ತಂಡ ಸೇರಿಕೊಂಡಿದ್ದಾರೆ. ಇನ್ನು ಜೇಕಬ್ ಡಫಿ ಬದಲು ರೊಮಾರಿಯೋ ಶೆಫರ್ಡ್ ತಂಡ ಸೇರಿಕೊಂಡಿದ್ದಾರೆ. ಇತ್ತ ಪಂಜಾಬ್ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದೆ. 

ಆರ್‌ಸಿಬಿ ಪ್ಲೇಯಿಂಗ್ 11

ಜೇಕಬ್ ಬೆತೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ಜಿತೇಶ್ ಶರ್ಮಾ (ನಾಯಕ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕ್ರುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಸೂಯಾಶ್ ಶರ್ಮಾ,

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11

ಪ್ರಿಯಾಂಶ್ ಆಱ್ಯ, ಪ್ರಭಸಿಮ್ರನ್ ಸಿಂಗ್, ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್(ನಾಯಕ), ಸೂಯಾಂಶ್ ಶೆಡ್ಗೆ, ಶಶಾಂಕ್ ಸಿಂಗ್, ಅಜಮ್ಮತುಲ್ಹಾ ಒಮ್ರಝೈ, ಹರ್ಪ್ರೀತ್ ಬ್ರಾರ್, ಲೂಕಿ ಫರ್ಗ್ಯೂಸನ್, ಅರ್ಶದೀಪ್ ಸಿಂಗ್, ಯುಜುವೇಂದ್ರ ಚಹಲ್

ಧರ್ಮಶಾಲಾದಲ್ಲಿ ಟಾಸ್ ಸೋತ ಆರ್‌ಸಿಬಿ ಇದೀಗ ಅನಿವಾರ್ಯವಾಗಿ ಮೊದಲು ಬ್ಯಾಟಿಂಗ್ ಮಾಡಬೇಕಿದೆ. ಆದರೆ ಈ ಪಿಚ್‌ನಲ್ಲಿ ಆರ್‌ಸಿಬಿ ಕೂಡ ಮೊದಲು ಬೌಲಿಂಗ್ ಮಾಡಲು ಬಯಸಿತ್ತು. ಟಾಸ್ ಬಳಿ ನಾಯಕ ಜಿತೇಶ್ ಶರ್ಮಾ ಮಾತು ಹೇಳಿದ್ದರು. ಇದೇ ವೇಳೆ ಮುಂದಿನ ಪಂದ್ಯಕ್ಕೆ ರಜತ್ ಪಾಟಿದಾರ್ ಲಭ್ಯರಿದ್ದಾರೆ ಎಂದಿದ್ದಾರೆ. ಒಂದು ಗೆಲುವು ಆರ್‌ಸಿಬಿ ಪ್ಲೇಆಫ್ ಸ್ಥಾನ ಖಚಿತಪಡಿಸಲಿದೆ. ಹೀಗಾಗಿ ತಂಡ ಎಂದಿನಂತೆ ಉತ್ತಮ ಪ್ರದರ್ಶನ ಮುಂದುವರಿಸಲಿದೆ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.

ಸದ್ಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆರ್‌ಸಿಬಿ 16 ಅಂಕ ಪಡೆದುಕೊಂಡಿದೆ. ಈ ಪಂದ್ಯ ಸೇರಿದಂತೆ ಎರಡು ಪಂದ್ಯಗಳಿವೆ. ಕನಿಷ್ಠ ಒಂದು ಗೆಲುವು ಬೇಕೆ ಬೇಕು. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿ ಪ್ಲೇಆಫ್ ಸ್ಥಾನ ಖಚಿತಗೊಳ್ಳಲಿದೆ. ಇಷ್ಟೇ ಅಲ್ಲ ಅತ್ತ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಆಸೆ ಜೀವಂತವಾಗಿರಲಿದೆ.