ಹಸಿವು ಕಲಿಸಿದ ಪಾಠಗಳನ್ನು ಯಶಸ್ಸಿನ ಮೆಟ್ಟಿಲಾಗಿಸಿಕೊಂಡ ವ್ಯಕ್ತಿ ಬೆಳಗೆರೆ: ಜೋಗಿ

ಅಕ್ಷರ ಲೋಕದ ಮಾಂತ್ರಿಕ, ಹಿರಿಯ ಪತ್ರಕರ್ತ, ಲೇಖಕ ರವಿ ಬೆಳೆಗೆರೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ರವಿ ಬೆಳಗೆರೆ ಜೊತೆ ಸುಮಾರು 30 ವರ್ಷಗಳ ಕಾಲ ಒಡನಾಟ ಹೊಂದಿದ್ದ ಹಿರಿಯ ಪತ್ರಕರ್ತ ಜೋಗಿಯವರು ಅವರ ಒಡನಾಟವನ್ನು ನೆನೆಸಿಕೊಂಡಿದ್ದು ಹೀಗೆ.

Share this Video
  • FB
  • Linkdin
  • Whatsapp

ಬೆಂಗಳೂರು (ನ. 13): ಅಕ್ಷರ ಲೋಕದ ಮಾಂತ್ರಿಕ, ಹಿರಿಯ ಪತ್ರಕರ್ತ, ಲೇಖಕ ರವಿ ಬೆಳೆಗೆರೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ರವಿ ಬೆಳಗೆರೆ ಜೊತೆ ಸುಮಾರು 30 ವರ್ಷಗಳ ಕಾಲ ಒಡನಾಟ ಹೊಂದಿದ್ದ ಹಿರಿಯ ಪತ್ರಕರ್ತ ಜೋಗಿಯವರು ಅವರ ಒಡನಾಟವನ್ನು ನೆನೆಸಿಕೊಂಡಿದ್ದು ಹೀಗೆ.

ಬೆಳಗೆರೆ ಹೊರಗಡೆ ಹುಲಿಯಂತಿದ್ರೂ, ಹೃದಯದಲ್ಲಿ ಮಗುವಾಗಿದ್ದ, ಅದ್ಭುತ ವ್ಯಕ್ತಿತ್ವ ಅವರದ್ದು: ಶ್ಯಾಂ ಸುಂದರ್

ರವಿ ಬೆಳಗೆರೆ ಜೊತೆ ಸುಮಾರು 30 ವರ್ಷಗಳ ಕಾಲ ಒಡನಾಟ ಹೊಂದಿದ್ದ ಹಿರಿಯ ಪತ್ರಕರ್ತ ಜೋಗಿಯವರು ಅವರ ಒಡನಾಟವನ್ನು ನೆನೆಸಿಕೊಂಡಿದ್ದು ಹೀಗೆ. ' ನಾನು ಬೆಳೆಗೆರೆ ಸುಮಾರು 30 ವರ್ಷಗಳ ಸ್ನೇಹಿತರು. ಕನ್ನಡ ಪತ್ರಿಕೋದ್ಯಮಕ್ಕೆ ಶ್ರೀಮಂತಿಕೆ ತಂದು ಕೊಟ್ಟವರು. ಹಸಿವು ಕಲಿಸಿದ ಪಾಠಗಳನ್ನು ಬಳಸಿಕೊಂಡು ಅವುಗಳನ್ನು ಯಶಸ್ಸಿನ ಮೆಟ್ಟಿಲಾಗಿಸಿಕೊಂಡ ವ್ಯಕ್ತಿ. ಅವರ ಬರಹಗಳಲ್ಲಿ ಒಂದು ಆರ್ದ್ರತೆ ಇತ್ತು. ಯುವಕರ ಮೇಲೆ ಬಹಳ ಪ್ರಭಾವ ಬೀರಿದವರು. ಇನ್ನು ನನ್ನ ಅವರ ಗೆಳೆತನದ ಬಗ್ಗೆ ಹೇಳುವುದಾದರೆ ನಾವು ಆಗಾಗ ಭೇಟಿಯಾಗುತ್ತಿದ್ದೆವು. ಪುಸ್ತಕದ ಬಗ್ಗೆ, ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದೆವು' ಎಂದು ನೆನೆಪಿಸಿಕೊಂಡಿದ್ದಾರೆ. 

Related Video