Asianet Suvarna News Asianet Suvarna News

ಬೆಂಗಳೂರಿಗೆ ಮಾರಕವಾಯ್ತಾ ಲಾಕ್‌ಡೌನ್ ಸಡಿಲಿಕೆ?

ಲಾಕ್‌ಡೌನ್ ಸಡಿಲಿಕೆ ಬೆಂಗಳೂರಿನ ಪಾಲಿಗೆ ಮಾರಕವಾಯ್ತಾ ಎನ್ನುವ ಅನುಮಾನ ಆರಂಭವಾಗ ತೊಡಗಿದೆ. ಕೊರೋನಾ ಇದೀಗ ಹೊಸ ವಾರ್ಡ್‌ಗಳಿಗೆ ಲಗ್ಗೆಯಿಡಲಾರಂಭಿಸಿದೆ. ಒಂದು ವಾರದೊಳದಾಗಿ ನಗರದಲ್ಲಿ ಕಂಟೈನ್‌ಮೆಂಟ್ ಝೋನ್‌ಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಬೆಂಗಳೂರು(ಜೂ.01): ಮದ್ದಿಲ್ಲದ ಮಹಾಮಾರಿ ಕೊರೋನಾ ವೈರಸ್ ಉದ್ಯಾನನಗರಿ ಬೆಂಗಳೂರಿನಲ್ಲಿ ತನ್ನ ಅಟ್ಟಹಾಸವನ್ನು ಬೀರುತ್ತಾ ಮುನ್ನುಗ್ಗುತ್ತಿದೆ. ಅದರಲ್ಲೂ ಲಾಕ್‌ಡೌನ್ ಸಡಿಲಿಕೆ ಬಳಿಕ ಬೆಂಗಳೂರಿನಲ್ಲಿ ಕೊರೋನಾ ಹರಡುತ್ತಿರುವ ವೇಗ ಮತ್ತಷ್ಟು ಹೆಚ್ಚಾಗಿದೆ.

ಲಾಕ್‌ಡೌನ್ ಸಡಿಲಿಕೆ ಬೆಂಗಳೂರಿನ ಪಾಲಿಗೆ ಮಾರಕವಾಯ್ತಾ ಎನ್ನುವ ಅನುಮಾನ ಆರಂಭವಾಗ ತೊಡಗಿದೆ. ಕೊರೋನಾ ಇದೀಗ ಹೊಸ ವಾರ್ಡ್‌ಗಳಿಗೆ ಲಗ್ಗೆಯಿಡಲಾರಂಭಿಸಿದೆ. ಒಂದು ವಾರದೊಳದಾಗಿ ನಗರದಲ್ಲಿ ಕಂಟೈನ್‌ಮೆಂಟ್ ಝೋನ್‌ಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನ ಕೊರೋನಾ ಕಾರ್ಖಾನೆಯಾಗುತ್ತಾ ಡಿಜೆ ಹಳ್ಳಿ?

ಈಗ ಗ್ರೀನ್‌ ಝೋನ್‌ನಲ್ಲಿದ್ದ ದಾಸರಹಳ್ಳಿಗೂ ಕೊರೋನಾ ಎಂಟ್ರಿಕೊಟ್ಟಿದೆ. ಇನ್ನು ಕಾಡುಗೋಡಿ, HSR ಲೇ ಔಟ್ ಸೇರಿದಂತೆ ಹಲವೆಡೆ ಕೊರೋನಾ ತನ್ನ ಕೆನ್ನಾಲಿಗೆ ಚಾಚಿದೆ. ಟ್ರಾವೆಲ್ ಹಿಸ್ಟರಿ ಇಲ್ಲದಿರುವವರಿಗೂ ಕೊರೋನಾ ವಕ್ಕರಿಸಿರುವುದು ಬೆಂಗಳೂರಿಗರ ನಿದ್ದೆಗೆಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.