ಸಂವಿಧಾನದ ನೆರಳಲ್ಲಿ ಭವ್ಯ ಭವಿಷ್ಯ: ಮೋದಿ ಮಾತು ಕೇಳುವುದು ಅವಶ್ಯ!

ಸಂವಿಧಾನ ದಿನಾಚರಣೆ ಅಂಗವಾಗಿ ಇಂದು ಪ್ರಧಾನಿ ಮೋದಿ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ನಮ್ಮ ಪೂರ್ವಿಕರು ನೀಡಿದ ಅತ್ಯಂತ ವಿಶಿಷ್ಟ ಕೊಡುಗೆಯಾದ ಸಂವಿಧಾನವನ್ನು ಜತನದಿಂದ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರಧಾನಿ ಈ ವೇಳೆ ನುಡಿದರು.

First Published Nov 26, 2019, 2:21 PM IST | Last Updated Nov 26, 2019, 2:21 PM IST

ನವದೆಹಲಿ(ನ.26): ಸಂವಿಧಾನ ದಿನಾಚರಣೆ ಅಂಗವಾಗಿ ಇಂದು ಪ್ರಧಾನಿ ಮೋದಿ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ನಮ್ಮ ಪೂರ್ವಿಕರು ನೀಡಿದ ಅತ್ಯಂತ ವಿಶಿಷ್ಟ ಕೊಡುಗೆಯಾದ ಸಂವಿಧಾನವನ್ನು ಜತನದಿಂದ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರಧಾನಿ ಈ ವೇಳೆ ನುಡಿದರು. ಭಾರತದ ಭವಿಷ್ಯ ಸಂವಿಧಾನದ ಸರಿಯಾದ ಅನುಷ್ಠಾನದ ಮೇಲೆ ನಿಂತಿದೆ ಎಂದು ಹೇಳಿದ ಪ್ರಧಾನಿ ಮೋದಿ, ಸಂವಿಧಾನದ ನೆರಳಲ್ಲಿ ಭವ್ಯ ಭವಿಷ್ಯವನ್ನು ಕಾಣುವ ಭರವಸೆ ವ್ಯಕ್ತಪಡಿಸಿದರು. ಈ ವೇಳೆ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹಾಗೂ ಸಂಸದರು ಹಾಜರಿದ್ದರು. ಆದರೆ ಕಾಂಗ್ರೆಸ್ ಸಮಾರಂಭವನ್ನು ಬಹಿಷ್ಕರಿಸಿದ್ದು ವಿಶೇಷವಾಗಿತ್ತು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ....