21 ವರ್ಷದ ಹೆಣ್ಣುಮಕ್ಕಳ ಒತ್ತೆ ಇಟ್ಟುಕೊಂಡ ಈಗ ನಿತ್ಯಾ ಎಲ್ಲಿದ್ದಾನೆ?
ಬೆಂಗಳೂರು(ನ. 20) ನಿತ್ಯಾನಂದ ಆಶ್ರಮದಲ್ಲಿ ಯುವತಿಯರನ್ನು ಒತ್ತೆಯಾಳಾಗಿ ಇರಿಸಿಕೊಂಡ ಪ್ರಕರಣದಕ್ಕೆ ಸಂಬಂಧಿಸಿ
ಇಬ್ಬರು ನಿತ್ಯಾನಂದ ಶಿಷ್ಯೆಯರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಎ1 ಆರೋಪಿ ಸ್ವಾಮಿ ನಿತ್ಯಾನಂದ ಹೊರತುಪಡಿಸಿ 2ನೇ ಆರೋಪಿ ಸಾದ್ವಿ ಮಾಪ್ರಾಣಪ್ರಿಯ ಅಲಿಯಾಸ್ ಹರಿಣಿ ಚನ್ನಪ್ಪ, 3ನೇ ಆರೋಪಿ ನಿತ್ಯಾತತ್ವಪ್ರಿಯ ಅಲಿಯಾಸ್ ರವಿರಿದ್ದಿಕರಣ್ ಎಂಬುವರನ್ನು ಬಂಧಿಸಲಾಗಿದೆ.

ನಿತ್ಯಾ ಶಿಷ್ಯೆಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 5 ದಿನ ಪೊಲೀಸರ ವಶಕ್ಕೆ ನೀಡಲಾಗಿದೆ. ಗುಜರಾತ್ ನಲ್ಲಿರುವ ನಿತ್ಯಾನಂದ ಶಾಖಾ ಆಶ್ರಮದಲ್ಲಿ ತನ್ನ ಮಕ್ಕಳನ್ನು ಹಿಡಿದಿಟ್ಟುಕೊಂಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಅಲ್ಲಿನ ಹೈಕೋರ್ಟ್ ಮೆಟ್ಟಿಲು ಏರಿದ ನಂತರ ಪ್ರಕರಣ ಬೆಳವಣಿಗೆ ಕಂಡಿದೆ.
ಈಕ್ವೆಡಾರ್ ನಲ್ಲಿ ನಿತ್ಯಾನಂದ ಅಡಗಿ ಕುಳಿತಿದ್ದಾನೆ ಎನ್ನಲಾಗಿದೆ. ಆಶ್ರಮದ ವಿರುದ್ಧ ಕೇಸ್ ದಾಖಲಾದರೂ ವಿದೇಶಕ್ಕೆ ನಿತ್ಯಾ ಹಾರಿದ್ದಾನೆ. ಕಳೆದ ವರ್ಷ ನೇಪಾಳಕ್ಕೆ ತೆರಳಿ ಅಲ್ಲಿಂದ ನಕಲಿ ಪಾಸ್ ಪೋರ್ಟ್ ಮೂಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.