ನೇಪಾಳ ಸಂಕಷ್ಟದಲ್ಲಿದೆ. ಒಂದೆಡೆ ಪರಿಹಾರ ಕಾರ್ಯಗಳು, ಮತ್ತೊಂದೆಡೆ ತಮ್ಮವರಿಗಾಗಿ ಹುಡುಕಾಟಗಳು ನಡೆಯುತ್ತಿದೆ. ಇದರ ನಡುವೆ ಕಳ್ಳರು ಶವಗಳ ಕೂದಲು ಹಿಡಿದು ಎಳೆದು ಚಿನ್ನ ಕದಿಯುತ್ತಿರುವ ಘಟನೆಗಳು ನಡೆದಿದೆ.
ಕಾಠ್ಮಂಡು (ಆ.28) ನೇಪಾಳ ಪ್ರವಾಹದಲ್ಲಿ ಸಾವಿನ ಸಂಖ್ಯೆ 469ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆಗಳಿಗೆ ಅಡೆ ತಡೆ ಎದುರಾಗಿದೆ. ಹಲವರು ತಮ್ಮ ಆಪ್ತರನ್ನು ಕಳೆದುಕೊಂಡಿದ್ದಾರೆ. ನಾಪತ್ತೆಯಾದವರಿಗೆ ಹುಡುಕಾಟ ತೀವ್ರಗೊಂಡಿದೆ. ಇದರ ನಡುವೆ ಕಳ್ಳರು ತಮ್ಮ ಕೈಚಳ ತೋರಿಸುತ್ತಿದ್ದಾರೆ. ಶವಗಳ ಕೂದಲು ಹಿಡಿದು ಮೇಲಕ್ಕೆತ್ತಿ ಕಿವಿಯೋಲೆ ಸೇರಿದಂತೆ ಚಿನ್ನ ಕದಿಯುತ್ತಿರುವ ಪ್ರಕರಣಗಳು ನಡೆಯುತ್ತಿದೆ. ಇದೀಗ ಇಬ್ಬರು ಮಹಿಳೆಯೊಬ್ಬರ ಶವದ ಕಿವಿಯೋಲೆ ಎಗರಿಸುತ್ತಿರುವ ವಿಡಿಯೋ ಒಂದು ಬಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ನೇಪಾಳ ಪೊಲೀಸರು ಇಬ್ಬರು ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ.
ಪ್ರವಾಹ ಸಂಕಷ್ಟದ ನಡುವೆ ಹೃದವಿದ್ರಾವಕ ಘಟನೆ
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಂತರ, ಒಂದು ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪಿದ ವ್ಯಕ್ತಿಯ ಶವದಿಂದ ಚಿನ್ನಾಭರಣಗಳನ್ನು ಕದಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಪ್ರವಾಹದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಶವದ ಬಳಿ ನಿಂತು, ಅದರ ಕೈಯಿಂದ ಚಿನ್ನದ ಬಳೆಗಳನ್ನು ತೆಗೆಯುತ್ತಿರುವುದು ಕಾಣಿಸುತ್ತದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿವೆ. ಮಾನವೀಯತೆ ಎಲ್ಲಿದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಕಾರ್ಯಪ್ರವೃತ್ತರಾದ ಪೊಲೀಸ್, ಇಬ್ಬರು ಅಪೆಸ್ಟ್
ಈ ಘಟನೆಯ ಬಳಿಕ ನೇಪಾಳ ಪೊಲೀಸರು ತನಿಖೆ ನಡೆಸಿ, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರವಾಹದಂತಹ ದುರಂತದ ಸಮಯದಲ್ಲಿ ಮಾನವೀಯತೆ ಕಾಪಾಡಿಕೊಳ್ಳುವುದು ಮುಖ್ಯ ಎಂದು ಪೊಲೀಸರು ಹೇಳಿದ್ದಾರೆ.
ನೇಪಾಳದಲ್ಲಿ ಈಗಾಗಲೇ 469ಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ಸಾವನ್ನಪ್ಪಿದ್ದಾರೆ. 750ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಇಂತಹ ದುಃಖದ ಸಮಯದಲ್ಲಿ ಈ ರೀತಿಯ ಕೃತ್ಯಗಳು ಸಮಾಜದ ನೈತಿಕ ಪತನವನ್ನು ತೋರಿಸುತ್ತವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಚೀನಾ ಇದೀಗ ಮತ್ತೊಂದು ಎಚ್ಚರಿಕೆ ನೀಡಿದೆ. ನೇಪಾಳ ಹಾಗೂ ಟಿಬೇಟ್ ಗಡಿಯಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದಿದೆ. ತೀವ್ರ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. ಇತ್ತ ಭಾರತ ಸರ್ಕಾರ ನೇಪಾಳ ಪ್ರಧಾನಿ ಜೊತೆ ಮಾತುಕತೆ ನಡೆಸಿದೆ. ಎಲ್ಲಾ ನೇರವು ನೀಡುವುದಾಗಿ ಭರವಸೆ ನೀಡಿದೆ. ಈಗಾಗಲೇ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದೆ.


