Asianet Suvarna News Asianet Suvarna News

ದೇಶ ಸೇವೆಗಾಗಿ 9 ತಿಂಗಳ ಮಗುವನ್ನೇ ಬಿಟ್ಟು ಹೋದ ಮಹಿಳಾ ಯೋಧೆ, ವಿಡಿಯೋ ವೈರಲ್‌

ತಾಯಿ-ಮಗುವಿನ ಬಾಂಧವ್ಯ ಅನನ್ಯವಾದುದು. ಪುಟ್ಟ ಕಂದಮ್ಮ ಯಾವಾಗಲೂ ತಾಯಿಯ ಪಕ್ಕವೇ ಇರಲು ಬಯಸುತ್ತದೆ. ಹಾಗೆಯೇ ತಾಯಿಯೂ ಕೂಡಾ. ಹೀಗಿರುವಾಗ ದೇಶ ಸೇವೆಗಾಗಿ ತನ್ನ 9 ತಿಂಗಳ ಮಗುವನ್ನೇ ಬಿಟ್ಟು ಹೋಗುವ ಮಹಿಳಾ ಯೋಧೆಯ ವಿಡಿಯೋ ಎಂಥವರನ್ನೂ ಭಾವುಕರಾಗಿಸುತ್ತದೆ.

Woman soldier gets emotional as she leaves her 9 month-old baby behind to serve the country Vin
Author
First Published Jul 25, 2023, 10:53 AM IST

ಎಂಟು ತಿಂಗಳು ಹೊಟ್ಟೆಯಲ್ಲಿ ಹೊತ್ತು ನೋವನ್ನೆಲ್ಲಾ ಸಹಿಸಿಕೊಂಡು ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ. ಅಲ್ಲೊಂದು ಮಗು ಜನಿಸುವ ಹಾಗೆಯೇ ತಾಯಿಯ ಜನ್ಮವೂ ಆಗುತ್ತದೆ. ಪ್ರೀತಿ, ತ್ಯಾಗ, ನಿಸ್ವಾರ್ಥ, ಕಾಳಜಿ, ಕರುಣೆ ಎಲ್ಲವನ್ನೂ ತುಂಬಿಕೊಂಡಿರುವ ಮಮತಾಮಯಿ. ತನ್ನ ಮಗುವಿಗಾಗಿ ಆಕೆ ಏನನ್ನು ಸಹ ಮಾಡಬಲ್ಲಳು. ಮಗು ಕಣ್ಣ ಮುಂದೆ ಇಲ್ಲವಾದರೆ ಒದ್ದಾಡುತ್ತಾಳೆ. ಮಗು ದೊಡ್ಡದಾಗುವ ವರೆಗೂ ಅದರದ್ದೇ ಲಾಲನೆ-ಪಾಲನೆ, ಆಟ-ಪಾಠದಲ್ಲಿ ಸಮಯ ಕಳೆಯುತ್ತಾಳೆ. ನಂತರ ಮಗುವನ್ನು ಸ್ಕೂಲಿಗೆ ಸೇರಿಸಿದಾ ಬಿಟ್ಟಿರಲಾಗದೆ ಕಷ್ಟಪಡುತ್ತಾಳೆ. ತಾಯಿ-ಮಗುವಿನ ಬಾಂಧವ್ಯವೇ ಅಂಥಹದ್ದು.

ಆದರೆ ಇತ್ತೀಚಿನ ದಿನಗಳಲ್ಲಿ ವರ್ಕಿಂಗ್ ವುಮೆನ್‌ ಅನಿವಾರ್ಯವಾಗಿ ಪುಟ್ಟ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುತ್ತಾರೆ. ಮಗುವನ್ನು ಬಿಟ್ಟಿರುವುದು ಕಷ್ಟವಾದರೂ ಸಹಿಸಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬ ತಾಯಿ ಮತ್ತು ಬಿಎಸ್‌ಎಫ್ ಮಹಿಳಾ ಯೋಧೆಯಾಗಿರುವ ಮಹಿಳೆ ಪುಟ್ಟ ಮಗುವನ್ನು ಬಿಟ್ಟು ರೈಲು ಹತ್ತುವ ವಿಡಿಯೋ ಎಂಥವರನ್ನೂ ಭಾವುಕರಾಗುವಂತೆ ಮಾಡುತ್ತದೆ.

ಟ್ರಾಫಿಕ್‌ನಲ್ಲಿ ಸೆರೆ ಆಯ್ತು ಅಮ್ಮನ ಅಮೋಘ ಪ್ರೀತಿ: ವೈರಲ್ ವೀಡಿಯೋ

ಬಿಎಸ್‌ಎಫ್ ಮಹಿಳಾ ಯೋಧೆಯಾಗಿರುವ ಮಹಿಳೆ ತನ್ನ 9 ತಿಂಗಳ ಮಗುವನ್ನು ದೇಶ ಸೇವೆಗಾಗಿ ಬಿಟ್ಟು ಹೋಗುತ್ತಿರುವಾಗವಿಡಿಯೋ ಎಲ್ಲರ ಕಣ್ಣಲ್ಲಿ ನೀರು ತರಿಸುವಂತಿದೆ. ಮಹಿಳಾ ಸೈನಿಕ ಮತ್ತು ಆಕೆಯ ಮಗುವಿನ ಭಾವನಾತ್ಮಕ ವಿದಾಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಾವು ನಮ್ಮ ದಿನನಿತ್ಯದ ಜೀವನವನ್ನು ಶಾಂತಿಯುತವಾಗಿ ಆನಂದಿಸುತ್ತಿರುವಾಗ, ನಮ್ಮ ಸೈನಿಕರು ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಬದ್ಧರಾಗಿದ್ದಾರೆ ಮತ್ತು ಅವರ ಮನೆ ಮತ್ತು ಕುಟುಂಬದಿಂದ ತಿಂಗಳುಗಟ್ಟಲೆ ದೂರವಿರುತ್ತಾರೆ. ವರ್ಷಗಳ ಕಾಲ ದೂರವಿದ್ದು, ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಕೆಲವು ದಿನಗಳ ರಜೆಯನ್ನು ಪಡೆದು ಬರುತ್ತಾರೆ. ಹೀಗಿದ್ದೂ ಅವರು ಮತ್ತೆ ತಮ್ಮ ಕುಟುಂಬವನ್ನು ಬಿಟ್ಟು ದೇಶ ಸೇವೆ ಮಾಡುವ ತಮ್ಮ ಕರ್ತವ್ಯಕ್ಕೆ ಮರಳಬೇಕಾಗುತ್ತದೆ.

20 ವರ್ಷದಿಂದ ಒಂದೇ ಪ್ಲೇಟ್ ಬಳಸ್ತಿದ್ದ ತಾಯಿ: ಟ್ವಿಟರ್‌ ಪೋಸ್ಟಿಗೆ ನೆಟ್ಟಿಗರು ಭಾವುಕ

ಮನೆಗೆ ರಜೆಯಲ್ಲಿ ಬಂದಿದ್ದ ಬಿಎಸ್‌ಎಫ್ ಮಹಿಳಾ ಯೋಧರೊಬ್ಬರು ರೈಲಿನಲ್ಲಿ ಕರ್ತವ್ಯಕ್ಕೆ ಹಿಂತಿರುಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಮಹಿಳೆ ರೈಲು ಹತ್ತುವಾಗ ತನ್ನ ಮಗು ತೋಳುಗಳಲ್ಲಿ ಅಳುವುದನ್ನು ಮುಂದುವರೆಸಿದಾಗ ನೋಡಿ ಭಾವುಕಳಾಗುತ್ತಾಳೆ. ನಂತರ, ರೈಲು ಪ್ಲಾಟ್‌ಫಾರ್ಮ್‌ನಿಂದ ಹೊರಡುತ್ತಿದ್ದಂತೆ ಆಕೆಯ ಪತಿ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಭಾವುಕರಾಗಿರುವ ಮಹಿಳೆ ಸಾಕಷ್ಟು ಧೈರ್ಯಶಾಲಿಯಾಗಿರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಕಣ್ಣೀರನ್ನು ಕಷ್ಟಪಟ್ಟು ಹಿಡಿದು ಆಕೆ ಎಲ್ಲರಿಗೂ ವಿದಾಯ ಹೇಳುತ್ತಾಳೆ. 

ಹೃದಯ ವಿದ್ರಾವಕ ಕ್ಷಣವು ಇಂಟರ್ನೆಟ್‌ನ್ನು ಭಾವುಕವಾಗಿಸಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ನಂತರ 50 ಸಾವಿರ ವೀಕ್ಷಣೆಗಳೊಂದಿಗೆ ವೀಡಿಯೊ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 'ಹ್ಯಾಟ್ಸ್ ಆಫ್. ಅವರು ಮಾಡುವ ತ್ಯಾಗಕ್ಕೆ ನಾವು ಏನನ್ನೂ ಮರಳಿ ಕೊಡಲು ಸಾಧ್ಯವಿಲ್ಲ. ನಮ್ಮ ಪ್ರೀತಿಯ ಭಾರತಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ಅಂತಹ ಧೈರ್ಯಶಾಲಿ ಹೃದಯಗಳು ಯಾವಾಗಲೂ ಸುರಕ್ಷಿತವಾಗಿ, ಸಂತೋಷದಿಂದ ಮತ್ತು ಸಮೃದ್ಧವಾಗಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಜೈ ಹಿಂದ್' ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಈ ಜಗತ್ತಿನಲ್ಲಿ ಅತೀ ದೊಡ್ಡ ಯೋಧೆ, ತಾಯಿ' ಎಂದು ಕಮೆಂಟಿಸಿದ್ದಾರೆ.

ಕರುಳ ಕುಡಿಯ ರಕ್ಷಣೆಗಾಗಿ ಜೀವವನ್ನೇ ಪಣಕಿಟ್ಟ ತಾಯಿ ಕೋತಿ... ವೈರಲ್ ವೀಡಿಯೋ

Follow Us:
Download App:
  • android
  • ios