20 ವರ್ಷದಿಂದ ಒಂದೇ ಪ್ಲೇಟ್ ಬಳಸ್ತಿದ್ದ ತಾಯಿ: ಟ್ವಿಟರ್‌ ಪೋಸ್ಟಿಗೆ ನೆಟ್ಟಿಗರು ಭಾವುಕ

ಮನೆಯಲ್ಲಿ ಸಾಕಷ್ಟು ಪಾತ್ರೆಗಳಿರುತ್ತವೆ. ಆದ್ರೆ ಕೆಲವರು ಪ್ರತಿ ದಿನ ಒಂದೇ ಲೋಟ, ಒಂದೇ ಪ್ಲೇಟ್ ಬಳಕೆ ಮಾಡ್ತಾರೆ. ಅದ್ರ ಜೊತೆ ಅವರಿಗೆ ವಿಶೇಷ ನಂಟಿರುತ್ತದೆ. ತಾಯಿಯೊಬ್ಬಳು ಕಳೆದ 2 ದಶಕದಿಂದ ಒಂದೇ ತಟ್ಟೆ ಬಳಕೆ ಮಾಡ್ತಿದ್ದಳು. ಅದಕ್ಕೆ ಕಾರಣ ಏನು ಗೊತ್ತಾ?
 

Viral Twitter Posts Ammas Special Plate

ಇದು ಸಾಮಾಜಿಕ ಜಾಲತಾಣದ ಯುಗ. ದಿನದಲ್ಲಿ ಹತ್ತಾರು ಬಾರಿ ಒಂದಾದ್ಮೇಲೆ ಒಂದರಂತೆ ಸಾಮಾಜಿಕ ಜಾಲತಾಣ ನೋಡ್ತಾ ಟೈಂಪಾಸ್ ಮಾಡುವ ಜನರಿದ್ದಾರೆ. ಕೆಲವರು ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಮೂಲಕ ಪ್ರಸಿದ್ಧಿ ಪಡೆದ್ರೆ ಮತ್ತೆ ಕೆಲವರು ಇದೇ ಫ್ಲಾಟ್ಫಾರ್ಮ್ ನಲ್ಲಿ ವಿವಾದಕ್ಕೆ ಒಳಗಾಗ್ತಾರೆ. ಕೆಲವೊಂದು ಪೋಸ್ಟ್ ಗಳು ನಗು ತರಿಸಿದ್ರೆ ಮತ್ತೆ ಕೆಲವರ ಪೋಸ್ಟ್ ನೋವು ತರುತ್ತದೆ. ಈಗ ಅಂಥಹದ್ದೇ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಜನರ ಕಣ್ಣಲ್ಲಿ ನೀರಿನ ಹನಿ ತುಂಬುತ್ತೆ. 

ತಾಯಿ (Mother) ಯ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ತಾಯಿಯ ಪ್ರೀತಿ (Love) ಯನ್ನು ಪದಗಳಲ್ಲಿ ಹೇಳೋದು ಅಸಾಧ್ಯ. ಇದು ಈಗ ಮತ್ತೊಂದು ಪೋಸ್ಟ್ ನಲ್ಲಿ ಸಾಭೀತಾಗಿದೆ. ವ್ಯಕ್ತಿಯೊಬ್ಬ ತಾಯಿ 20 ವರ್ಷಗಳಿಂದ ಒಂದೇ ತಟ್ಟೆಯಲ್ಲಿ ತಿನ್ನುತ್ತಿದ್ದಳು ಅಂತಾ ಆ ಪ್ಲೇಟ್ (Plate) ಪೋಟೋ ಫೋಸ್ಟ್ ಮಾಡಿದ್ದಾನೆ. ಅಷ್ಟಕ್ಕೂ ಆ ಪ್ಲೇಟ್ ಯಾಕೆ ವಿಶೇಷವಾಗಿತ್ತು, ಅದ್ರಲ್ಲೇ ತಾಯಿ ಏಕೆ ಆಹಾರ ಸೇವನೆ ಮಾಡ್ತಿದ್ದಳು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ನಾವಿಂದು ಆ ಪೋಸ್ಟ್ ಯಾರು ಹಾಕಿದ್ದು ಮತ್ತೆ ಅದಕ್ಕೆ ಏನೆಲ್ಲ ಕಮೆಂಟ್ ಬಂದಿದೆ ಎಂಬುದನ್ನು ನಿಮಗೆ ಹೇಳ್ತೇವೆ.

ಟ್ವಿಟರ್ ನಲ್ಲಿ ವೈರಲ್ ಆದ ಪೋಸ್ಟ್ ಏನು? : ಟ್ವಿಟರ್ ನಲ್ಲಿ ಈ ಪೋಸ್ಟ್ ಹಾಕಲಾಗಿದೆ. ಟ್ವೀಟ್ ಮಾಡಿರೋರು ವಿಕ್ರಮ್ ಎಸ್ ಬುಧನೇಶನ್. ವೃತ್ತಿಯಲ್ಲಿ ದಂತವೈದ್ಯ. ಅವರು ಒಂದು ಪ್ಲೇಟ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದ್ರ ಕೆಳಗೆ, `` ಇದು ನನ್ನ ತಾಯಿಯ ತಟ್ಟೆ. ಕಳೆದ 2 ದಶಕಗಳಿಂದ ಈ ತಟ್ಟೆಯಲ್ಲಿಯೇ ಅವರು ಆಹಾರ ಸೇವನೆ ಮಾಡ್ತಿದ್ದರು. ನನ್ನ ತಾಯಿಯನ್ನು ಹೊರತುಪಡಿಸಿ ಇದ್ರಲ್ಲಿ ನನಗೆ ಮತ್ತು ನನ್ನ ತಂಗಿಗೆ ಮಾತ್ರ ಆಹಾರ ಸೇವನೆ ಮಾಡಲು ಅವಕಾಶವಿತ್ತು. ನನ್ನ ತಾಯಿ ತೀರಿಕೊಂಡ ನಂತರ ಈ ಪ್ಲೇಟ್ ವಿಶೇಷತೆ ನನಗೆ ತಿಳಿಯಿತು. ನಾನು ಬಹುಮಾನವಾಗಿ ಗೆದ್ದ ಪ್ಲೇಟ್ ಇದಾಗಿತ್ತು ಎಂಬುದು ನನ್ನ ತಂಗಿಯಿಂದ ನನಗೆ ತಿಳಿಯಿತು’’ ಹೀಗೆಂದು ವಿಕ್ರಮ್ ಪೋಸ್ಟ್ ಮಾಡಿದ್ದಾರೆ. 

ಬದುಕಿಲ್ಲ ಎಂದು ಭಾವಿಸಿದ್ದ ಅಪ್ಪನನ್ನು ಹುಡುಕಿದ ಮಗಳು: ಬೇರೆ ದೇಶದಲ್ಲಿದ್ರೂ ಅಪ್ಪ ಮರಳಿ ಸಿಕ್ಕ ಕತೆ

ತಾಯಿ 20 ವರ್ಷಗಿಂದ ಒಂದೇ ಪ್ಲೇಟ್ ನಲ್ಲಿ ಆಹಾರ ಸೇವನೆ ಮಾಡಲು ಕಾರಣ ಅದು ಮಗನ ಪ್ಲೇಟ್ ಎಂಬ ಮಮತೆ. ಯಾವುದೋ ಸ್ಪರ್ಧೆಯಲ್ಲಿ ವಿಕ್ರಮ್ ಗೆ ಈ ಪ್ಲೇಟ್ ಬಹುಮಾನವಾಗಿ ಸಿಕ್ಕಿತ್ತಂತೆ. ಅದ್ರಿಂದ ಖುಷಿಯಾಗಿದ್ದ ತಾಯಿ, ಪ್ರತಿ ದಿನ ಇದೇ ಪ್ಲೇಟ್ ನಲ್ಲಿ ಆಹಾರ ಸೇವನೆ ಮಾಡ್ತಿದ್ದಳಂತೆ. ಹಿಂದೆ ಬಹುಮಾನದ ರೂಪದಲ್ಲಿ ಪ್ಲೇಟ್, ಲೋಟಗಳನ್ನು ನೀಡಲಾಗ್ತಿತ್ತು. ಮನೆ ಮಂದಿಯೆಲ್ಲ ಇದನ್ನು ಬಳಸ್ತಿದ್ದರು. ಆದ್ರೆ ವಿಕ್ರಮ್ ತಾಯಿ, ಮಗನಿಗೆ ಬಹುಮಾನವಾಗಿ ಬಂದ ವಸ್ತುವನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ಇಷ್ಟಪಡಲಿಲ್ಲ ಎನ್ನುವುದೇ ವಿಶೇಷ.

ನೋಟು ಎಣಿಸಲು ಪೇಚಾಡಿದ ವರ, ಇವನೆಂಥಾ ಬೆಪ್ಪ ಅಂತ ಮದ್ವೆ ಕ್ಯಾನ್ಸಲ್ ಮಾಡಿದ ವಧು

ಭಾವುಕರಾದ ಬಳಕೆದಾರರು : ಡಾಕ್ಟರ್ ವಿಕ್ರಮ್ ಪೋಸ್ಟ್ ವೈರಲ್ ಆಗ್ತಿದ್ದಂತೆ ಸಾಮಾಜಿಕ ಮಾಧ್ಯಮದ ಬಳಕೆದಾರರು ತುಂಬಾ ಭಾವುಕರಾಗಿದ್ದಾರೆ.  ಕಮೆಂಟ್ ನಲ್ಲಿ ನಮ್ಮ ಅಮ್ಮಂದಿರನ್ನು ನೆನಪು ಮಾಡಿಕೊಳ್ತಿದ್ದಾರೆ. ಅವರ ಕಥೆಗಳನ್ನು ಹೇಳಲು ಶುರು ಮಾಡಿದ್ದಾರೆ.  ಒಬ್ಬ ವ್ಯಕ್ತಿ, ತಾಯಿಯ ಪ್ರೀತಿಯನ್ನು ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ಮತ್ತೊಬ್ಬರು ತಾಯಿ ಸಾವನ್ನಪ್ಪಿದ ನಂತರವೇ ಅವರನ್ನು ನಾವು ಹೆಚ್ಚಾಗಿ ಗೌರವಿಸುತ್ತೇವೆ ಎಂದು ಬರೆದಿದ್ದಾರೆ. ಇದು ನೂರಕ್ಕೆ ನೂರು ಸತ್ಯ ಕೂಡ. ಯಾವುದೇ ಒಬ್ಬ ವ್ಯಕ್ತಿಯ ಮಹತ್ವ ಆತ ನಮ್ಮ ಜೊತೆಗಿದ್ದ ಸಮಯಕ್ಕಿಂತ ಆತನನ್ನು ಕಳೆದುಕೊಂಡ ಮೇಲೆ ತಿಳಿಯುತ್ತದೆ. 

Latest Videos
Follow Us:
Download App:
  • android
  • ios