Asianet Suvarna News Asianet Suvarna News

ಕರುಳ ಕುಡಿಯ ರಕ್ಷಣೆಗಾಗಿ ಜೀವವನ್ನೇ ಪಣಕಿಟ್ಟ ತಾಯಿ ಕೋತಿ... ವೈರಲ್ ವೀಡಿಯೋ

ಮನುಷ್ಯಳಾದರೂ ಪ್ರಾಣಿಯಾದರೂ ತಾಯಿ ತಾಯಿಯೇ ಪ್ರಾಣಿಗಳು ಸಹ ತಮ್ಮ ಜೀವದ ಹಂಗು ತೊರೆದು ಅಪಾಯಕ್ಕೆ ಸಿಲುಕಿದ ತಮ್ಮ ಕಂದನನ್ನು ರಕ್ಷಿಸಿದ ಅನೇಕ ಉದಾಹರಣೆಗಳಿವೆ. ಹಾಗೆಯೇ ಇಲ್ಲೊಂದು ತಾಯಿ ಕೋತಿ ತನ್ನ ಜೀವದ ಆಸೆಯನ್ನು ಬಿಟ್ಟು ತನ್ನ ಕಂದನನ್ನು ರಕ್ಷಿಸಿದೆ.

Mother always mother, monkey proved it again, watch viral video that monkey saved its cube akb
Author
First Published Dec 15, 2022, 4:01 PM IST

ತನ್ನ ಕರುಳ ಕುಡಿಯ ರಕ್ಷಣೆಗಾಗಿ ತಾಯಿ ಏನು ಬೇಕಾದರೂ ಮಾಡಬಲ್ಲಳು. ತನ್ನದೇ ಜೀವ ಹೋಗುವ ಸಂದರ್ಭ ಬಂದರೂ ಸರಿ ತಾಯಿ ಹಿಂದೆ ಮುಂದೆ ನೋಡುವುದಿಲ್ಲ. ಮಗುವಿನ ರಕ್ಷಣೆಗೆ ತನ್ನಿಂದ ಏನು ಸಾಧ್ಯವೋ ಅದೆಲ್ಲವನ್ನು ಮಾಡುತ್ತಾಳೆ. ಇದೇ ಕಾರಣಕ್ಕೆ ತಾಯಿಯ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂದು ಹೇಳುವುದು. ತಾಯಿ ಎಂದ ಮೇಲೆ ಅಲ್ಲಿ ಮನುಷ್ಯ ಪ್ರಾಣಿ ಎಂಬ ಬೇಧವಿಲ್ಲ. ಮನುಷ್ಯಳಾದರೂ ಪ್ರಾಣಿಯಾದರೂ ತಾಯಿ ತಾಯಿಯೇ ಪ್ರಾಣಿಗಳು ಸಹ ತಮ್ಮ ಜೀವದ ಹಂಗು ತೊರೆದು ಅಪಾಯಕ್ಕೆ ಸಿಲುಕಿದ ತಮ್ಮ ಕಂದನನ್ನು ರಕ್ಷಿಸಿದ ಅನೇಕ ಉದಾಹರಣೆಗಳಿವೆ. ಹಾಗೆಯೇ ಇಲ್ಲೊಂದು ತಾಯಿ ಕೋತಿ ತನ್ನ ಜೀವದ ಆಸೆಯನ್ನು ಬಿಟ್ಟು ತನ್ನ ಕಂದನನ್ನು ರಕ್ಷಿಸಿದೆ. ಮನ ಕಲುಕುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಈ ವಿಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ (Emotional). ಅಂದಹಾಗೆ ವಿಡಿಯೋದಲ್ಲಿ ಕಾಣಿಸುವಂತೆ ದೋಣಿಯೊಂದರಲ್ಲಿ (Boat) ತಾಯಿ ಕೋತಿ ತನ್ನ ಮರಿಕೋತಿಯೊಂದಿಗೆ ಕುಳಿತಿದ್ದು, ಇದೇ ದೋಣಿಯಲ್ಲಿ ನಾಯಿಗಳಿದ್ದು, ಕೋತಿಯ ಮೇಲೆ ದಾಳಿಗೆ ಯತ್ನಿಸುತ್ತಿವೆ. ತಾಯಿ(Mother) ಕೋತಿಗೆ ಪಾರಾಗುವುದಕ್ಕೆ ಅಲ್ಲಿ ಯಾವುದೇ ಮಾರ್ಗವೇ ಇಲ್ಲ ಏಕೆಂದರೆ ದೋಣಿಯಿಂದ ಕೆಳಗೆ ಹಾರಿದರೆ ನೀರಲ್ಲಿ ಮುಳುಗುವ ಸ್ಥಿತಿ. ಅತ್ತಲೂ ಇತ್ತಲೂ ಹುರಿದು ಮುಕ್ಕಲು ಸಿದ್ಧಗೊಂಡಿರುವ ನಾಯಿಗಳು. ದೋಣಿಯಲ್ಲೇ ಇದ್ದರೆ ನಾಯಿಗಳ ಪಾಲಿಗೆ ಆಹಾರವಾಗುವ (Food) ಸಂಕಷ್ಟ ಸ್ಥಿತಿ. ಆದರೂ ಧೈರ್ಯಗೆಡದ ತಾಯಿ ತನ್ನ ಮರಿಯನ್ನು ಒಡಲಿನಲ್ಲಿ ತಬ್ಬಿಕೊಂಡು ನಾಯಿಗಳ ಪಾಲಿಗೆ ಸಿಗದಂತೆ ಮಾಡುತ್ತದೆ. ಇತ್ತ ನಾಯಿ ತನ್ನ ಕುತ್ತಿಗೆಗೆ ಬಾಯಿ ಹಾಕಿ ಕಚ್ಚಿ ಎಳೆಯಲು ಯತ್ನಿಸಿದರು ಒಮ್ಮೆ ನೀರಿಗೆ (Water) ಹಾರಿ ಮತ್ತೆ ಮೇಲೇರಿ ಸೋಲೊಪ್ಪದೇ ಬದುಕುವ ಸಾಹಸ ಮಾಡುತ್ತದೆ. ಇತ್ತ ಕೋತಿ ನೀರಿಗೆ ಹಾರಿದಾಗ ಶ್ವಾನವೂ (Dog) ಅದರೊಂದಿಗೆ ನೀರಿಗೆ ಹಾರಿದ್ದು, ಅಲ್ಲೂ ಕಚ್ಚಿ ಎಳೆದಾಡಲು ನೋಡುತ್ತದೆ. ನೀರಿನಲ್ಲಿ ಮುಳುಗಿ ನಾಯಿಯಿಂದ ರಕ್ಷಿಸಿಕೊಳ್ಳುವ ಕೋತಿ ನಂತರ ಮೇಲೆದ ಬಂದು ಮತ್ತೆ ದೋಣಿಗೇರುತ್ತದೆ. ಅಲ್ಲದೇ ತನ್ನ ಮರಿ ಈ ದುಷ್ಟರ ಕೈಗೆ ಸಿಗದಂತೆ ರಕ್ಷಣೆಗೆ ಮುಂದಾಗುತ್ತದೆ. ಒಮ್ಮೆ ದೋಣಿಯ ಆ ತುದಿಗೆ ಮತ್ತೊಮ್ಮೆ ಈ ತುದಿಗೆ ಓಡುತ್ತದೆ. ಮತ್ತೊಮ್ಮೆ ನೀರಿಗೆ ಹಾರುತ್ತದೆ. ಇಷ್ಟೊತ್ತಿಗೆ ದೋಣಿಯೊಂದು ನದಿ ನಡುವೆ ಇರುವ ಕಂಬದ ಬಳಿ ತಲುಪಿದ್ದು, ಕೂಡಲೇ ಕೋತಿ ತಾಯಿ ಆ ಕಂಬವನ್ನು ಏರಿ ಪಾರಾಗುತ್ತಿದೆ.

ಗೂಡಿಗೆ ನುಗ್ಗಿದ ಮಳೆ ನೀರು: ಜೀವದ ಹಂಗು ತೊರೆದು ಮರಿಗಳ ರಕ್ಷಿಸಿದ ತಾಯಿ ಇಲಿ

ತನ್ನ ಮರಿಯನ್ನು ಉಳಿಸುವ ಸಲುವಾಗಿ ಅದು ಬಹಳ ತಾಳ್ಮೆಯಿಂದ ತನ್ನ ಜೀವನದ ಹಂಗು ತೊರೆದು ಮಗುವನ್ನು ರಕ್ಷಿಸುತ್ತಿರುವ ರೀತಿಗೆ ಅನೇಕರು ಭಾವುಕರಾಗಿದ್ದಾರೆ. @NazneenAkhtar10 ಎಂಬ ಟ್ವಿಟ್ಟರ್ ಖಾತೆಯಿಂದ ಈ ಹೃದಯವನ್ನು ಭಾವುಕವಾಗಿಸುವ ವಿಡಿಯೋ ವೈರಲ್ ಆಗಿದ್ದು, 2 ನಿಮಿಷ 20 ಸೆಕೆಂಡ್‌ಗಳ ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಅಮ್ಮ ಯಾವತ್ತಿಗೂ ಅಮ್ಮನೇ, ನಾಯಿಗಳಿಂದ ಮರಿಯನ್ನು ರಕ್ಷಿಸಿಕೊಳ್ಳಲು ಕೋತಿ ಇನ್ನಿಲ್ಲದ ಸಾಹಸ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಈ ವಿಡಿಯೋ ಮಾಡಿದವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಮಡಿದವ ಅತ್ಯಂತ ಕೆಟ್ಟ ವ್ಯಕ್ತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಂದರೆ ಈ ಸಂಕಟದ ದೃಶ್ಯವನ್ನು ವಿಡಿಯೋ ಮಾಡುವ ಬದಲು ಕೋತಿಯ ರಕ್ಷಣೆಗೆ ಧಾವಿಸಬೇಕಿತ್ತು ಎಂದು ಕೆಲವರು ಆಗ್ರಹಿಸಿದ್ದಾರೆ.

ಸಿಂಹದ ದಾಳಿಯಿಂದ ಕಂದನ ರಕ್ಷಿಸಿದ ಎಮ್ಮೆ... ವಿಡಿಯೋ ವೈರಲ್

ಕೋತಿ ತಾನು ತಾಯಿಯಾಗಿ ಮಾಡಬೇಕಾದ ಕೆಲಸವನ್ನು ಮಾಡಿದೆ. ಆದರೆ ಮನುಷ್ಯನಾಗಿ ಈತ ತಾನು ಮಾಡಬೇಕಾದನ್ನು ಮಾಡಿಲ್ಲ ಎಂದು ವಿಡಿಯೋ ಮಾಡಿದವರ ವಿರುದ್ಧ ಅನೇಕರು ಕಿಡಿಕಾರಿದ್ದಾರೆ. ತಾಯಿಯ ಪ್ರೀತಿಗೆ ಮಿತಿ ಇಲ್ಲ. ತಾಯಿಯ ಪ್ರೀತಿಗೆ ಬೆಲೆ ಕಟ್ಟಲಾಗದು. ಒಟ್ಟಿನಲ್ಲಿ ಮನುಷ್ಯರಾದರೂ ಪ್ರಾಣಿಯಾದರೂ ತಾಯಿ ತಾಯಿಯೇ ಎಂಬುದನ್ನು ಈ ವಿಡಿಯೋ ಸಾಬೀತುಪಡಿಸಿದೆ.

 

Follow Us:
Download App:
  • android
  • ios