ಮೇಕಪ್ ಮತ್ತು ಮಹಿಳೆಯರಿಗೆ ಎಲ್ಲಿಲ್ಲದ ನಂಟು. ಹೀಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರ ಮೇಕಪ್ ಕುರಿತಾದ ಹಲವು ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಸದ್ಯ 10,000 ಅಡಿ ಎತ್ತರದಿಂದ ಜಿಗಿಯುವಾಗ ಯುವತಿಯೊಬ್ಬಳು ಮೇಕಪ್‌ ಮಾಡಿಕೊಂಡ ವೀಡಿಯೋ ಎಲ್ಲರನ್ನು ನಿಬ್ಬೆರಗಾಗಿಸುತ್ತಿದೆ.

ಮಹಿಳೆಯರಿಗೆ ಹಾಗೂ ಮೇಕ್​ಪ್‌ ​​​​ಗೆ ಹಿಂದಿನಿಂದಲೂ ಅವಿನಾಭಾವ ಸಂಬಂಧ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ ಪ್ರತಿಯೊಂದು ಹೆಣ್ಣು ಮೇಕ್​ಅಪ್​​​ ಮಾಡೋಕೆ ಇಷ್ಟ ಪಡುತ್ತಾಳೆ. ಆದ್ರೆ ಸಾಮಾನ್ಯವಾಗಿ ಕನ್ನಡಿಯ ಮುಂದೆ ಕುಳಿತು ಮೇಕ್​ಅಪ್​​ ಮಾಡಿಕೊಳ್ಳುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬಳು ಮಹಿಳೆಯರು ಈಗ ಅಬಲೆಯರಲ್ಲ ಸಬಲೆಯರು ಎಂದು ತೋರಿಸಿಕೊಳ್ಳುವುದಕ್ಕೆ 10,000 ಅಡಿ ಎತ್ತರದಿಂದ ಸ್ಕೈಡೈವಿಂಗ್​​ ಮಾಡುವಾಗ ಮೇಕ್​​ಅಪ್​​ ಮಾಡಿಕೊಂಡಿದ್ದಾಳೆ. ಈಕೆ ಆಕಾಶದಲ್ಲಿ ಗಾಳಿಯಲ್ಲಿ ತೇಲಾಡುತ್ತಾ ಮೇಕ್​​ಅಪ್​​​ ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದೀಗಾ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಮೇಕಪ್ ಕುರಿತಾದ ವೀಡಿಯೋವನ್ನು ಮಹಿಳೆಯರು (Woman) ಹೆಚ್ಚು ನೋಡುವ ಕಾರಣ ಹಲವು ವೀಡಿಯೋಗಳನ್ನು ನಾವು ಸೋಷಿಯಲ್ ಮೀಡಿಯಾದಲ್ಲಿ ನೋಡಬಹುದು. ಸಿಂಪಲ್ ಆಗಿ ಮೇಕಪ್ ಮಾಡುವುದು ಹೇಗೆ, ಕಾರಲ್ಲಿ ಹೋಗುವಾಗ ಹೇಗೆ ಮೇಕಪ್‌ ಮಾಡೋದು? ಒಂದೇ ಕೈಯಲ್ಲಿ ಹೇಗೆ ಮೇಕಪ್‌ ಮಾಡೋದು, ಹೀಗೆ ಬೇರೆ ಬೇರೆ ಮೇಕಪ್‌ ಚಾಲೆಂಜ್‌ಗಳನ್ನು ಸಹ ನಾವು ಆನ್‌ಲೈನ್‌ಲ್ಲಿ ನೋಡಲು ಸಿಗುತ್ತವೆ. ಆದರೆ ಈ ಯುವತಿ (Girl) ಮಾತ್ರ ಸ್ಕೈಡೈವಿಂಗ್ ಮಾಡುತ್ತಾ ಮೇಕಪ್ ಮಾಡ್ಕೊಂಡಿದ್ದಾಳೆ.

Beauty Tips: ಅಂಬಾನಿ ಫ್ಯಾಮಿಲಿಯ ಬೆಡಗಿಯರು ಮೇಕಪ್ ಹೇಗ್ ಮಾಡ್ತಾರೆ?

10,000 ಅಡಿ ಎತ್ತರದಿಂದ ಜಿಗಿಯುವಾಗ ಮೇಕ್​​ಅಪ್ ಮಾಡ್ಕೊಂಡ ಯುವತಿ
ಸ್ಕೈಡೈವಿಂಗ್ ಎಂದರೆ ಮೈಯೆಲ್ಲಾ ಕಣ್ಣಾಗಿಸಿಕೊಂಡು ಮಾಡುವಂಥಾ ಸ್ಟಂಟ್‌. ಹೀಗಾಗಿ ಎಲ್ಲರೂ ಹೆಚ್ಚು ಜಾಗರೂಕರಾಗಿರುತ್ತಾರೆ. ಆದ್ರೆ ಈಕೆ ಮಾತ್ರ 10ಸಾವಿರ ಅಡಿ ಎತ್ತರದಿಂದ (Height) ಸ್ಕೈಡೈವಿಂಗ್​​ ಮಾಡುವಾಗ ಮೇಕ್​​ಅಪ್​​ ಮಾಡಿಕೊಂಡಿದ್ದಾಳೆ. ಮಾತ್ರವಲ್ಲ ಸ್ಕಿನ್‌ ಕೇರ್‌ ಮತ್ತು ಬ್ಯೂಟಿ ಹ್ಯಾಕ್‌ ಬಗ್ಗೆ ತಿಳಿಸಿದ್ದಾಳೆ. ಫ್ಲೋರಿಡಾದ ಮೆಕೆನ್ನಾ ನೈಪ್ 10,000 ಅಡಿ ಎತ್ತರದಿಂದ ಜಿಗಿಯುವಾಗ ಮೇಕ್​​ಅಪ್​ ಮಾಡಿಕೊಂಡ ಮಹಿಳೆ. ಸ್ವತಃ ಈಕೆಯ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. 

ಈಕೆಯ ಇನ್‌ಸ್ಟಾಗ್ರಾಮ್‌ ಪುಟದಲ್ಲಿ ಸ್ಕೈಡೈವಿಂಗ್‌ಗೆ ಸಂಬಂಧಿಸಿದ ಹಲವಾರು ಆಸಕ್ತಿದಾಯಕ ಪೋಸ್ಟ್‌ಗಳನ್ನು ನೋಡಬಹುದಾಗಿದೆ. ಈಕೆ ಆಕಾಶದಲ್ಲಿ ಗಾಳಿಯಲ್ಲಿ ತೇಲಾಡುತ್ತಾ ಮೇಕ್​​ಅಪ್​​​ ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. "ನಿಮ್ಮ ಚರ್ಮದ ಆರೈಕೆ (Skin care) ದಿನಚರಿ ಏನು?" ಎಂಬ ಶೀರ್ಷಿಕೆಯೊಂದಿಗೆ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೌಂದರ್ಯವರ್ಧಕವೊಂದರ ಪ್ರಚಾರದ ಭಾಗವಾಗಿದ್ದು, ಆ ಉತ್ಪನ್ನಗಳನ್ನು ಸಹ ಈಕೆ ಉಲ್ಲೇಖಿಸಲಾಗಿದೆ. 10,000 ಅಡಿ ಎತ್ತರದಲ್ಲಿ ನನ್ನ ತ್ವಚೆಯ ಆರೈಕೆ ಮಾಡಲು ಇದಕ್ಕಿಂತ ಬೇರೆ ಉತ್ಪನ್ನವಿಲ್ಲ. ನೀವೂ ಕೂಡ ಉತ್ತಮ ತ್ವಚೆಗಾಗಿ ಈ ಉತ್ಪನ್ನ ಬಳಸಿ ಎಂದು ಬರೆದುಕೊಂಡಿದ್ದಾರೆ.

ನೀತಾ ಅಂಬಾನಿ ಮೇಕಪ್ ಆರ್ಟಿಸ್ಟ್‌ ಕಂಪೆನಿ ಸಿಇಒಗಳಿಗಿಂತ ಹೆಚ್ಚು ಸಂಭಾವನೆ ಪಡೀತಾರಂತೆ!

ವಿಡಿಯೋಗೆ ಭಾರಿ ಮೆಚ್ಚುಗೆ
ಮೆಕೆನ್ನಾ ನೈಪ್ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಹಲವು ಪರ-ವಿರೋಧದ ಮೆಸೇಜ್‌ಗಳು ಬಂದಿವೆ. ಕೆಲ ಬಳಕೆದಾರರು ಆಕೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು 'ನಿಮ್ಮ ಜೀವನವನ್ನು ಹೀಗೆ ಆನಂದಿಸಿ ಮತ್ತು ನಿಮಗೆ ಸಾಧ್ಯವಾದಷ್ಟು ಹಾರುತ್ತಿರಿ' ಎಂದು ಕಾಮೆಂಟ್ ಮಾಡಿದ್ದಾರೆ.

Beauty Tips : ಮೇಕಪ್ ಹಚ್ಚೋದು ಮಾತ್ರವಲ್ಲ, ತೆಗೆಯೋದೂ ಗೊತ್ತು ಮಾಡ್ಕೊಳ್ಳಿ

ಮೇಕ್‌ಅಪ್​​ ಮಾಡಿಕೊಳ್ಳುವ ವಿಡಿಯೋ ಇಲ್ಲಿದೆ ನೋಡಿ:

View post on Instagram