ಮದುವೆಯಾದ 10 ದಿನಕ್ಕೇ ಮಗುವಿಗೆ ಜನ್ಮ ನೀಡಿದ ವಧು, ಮನೆಯಿಂದ ಹೊರ ಹಾಕಿದ ಅತ್ತೆ!
ಆಗಷ್ಟೇ ಮದುವೆ ಮುಗಿದ ಮನೆ. ಮದ್ವೆ ಮುಗಿದು ಇನ್ನೂ ಹತ್ತು ದಿನ ಕಳೆದಿತ್ತಷ್ಟೆ. ಆದ್ರೆ ಅಷ್ಟರಲ್ಲೇ ವಧುವಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಏನೋ ತಿಂದಿದ್ದು ಸರಿಯಾಗಿರಲ್ಲ ಅಂದ್ಕೊಂಡ್ರೆ ವಧು ಏಳು ತಿಂಗಳ ಗರ್ಭಿಣಿ ಅನ್ನೋದು ವೈದ್ಯರ ಪರೀಕ್ಷೆಯಿಂದ ಗೊತ್ತಾಯಿತು. ಅಳ್ತಾ ವಧು ಹೇಳಿದ್ದೇನು ಗೊತ್ತಾ?
ಕಾನ್ಪುರ: ಮದುವೆಯಾದ ಹತ್ತೇ ದಿನದಲ್ಲಿ ವಧು ಮಗುವಿಗೆ ಜನ್ಮ ನೀಡಿದ ಘಟನೆ ಯುಪಿಯ ಕಾನ್ಪುರದಲ್ಲಿ ನಡೆದಿದೆ. ಕಾನ್ಪುರ್ ದೇಹತ್ ಗ್ರಾಮವೊಂದರಲ್ಲಿ ಇತ್ತೀಚೆಗೆ ವಿವಾಹವಾದ ಮಹಿಳೆ 7 ತಿಂಗಳ ಗರ್ಭಿಣಿ ಎಂಬುದು ತಿಳಿದುಬಂತು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವಧುವನ್ನು ಅತ್ತೆ ಮನೆಯವರು ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಮಗುವಿಗೆ ಜನ್ಮ ನೀಡಿದಳು. ಆಪರೇಷನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆದರೆ ಮಗು ಬದುಕುಳಿಯಲ್ಲಿಲ್ಲ ಎಂದು ತಿಳಿದುಬಂದಿದೆ. ಸೊಸೆ ಗರ್ಭಿಣಿಯೆಂದು ತಿಳಿದ ನಂತರ ಅತ್ತೆ ಆಕೆಯನ್ನು ಮನೆಯೊಳಗೆ ಕರೆಸಿಕೊಳ್ಳಲು ನಿರಾಕರಿಸಿದಳು.
ಲಭ್ಯ ಮಾಹಿತಿಯ ಪ್ರಕಾರ ಎರಡು ಕುಟುಂಬಗಳು ಹುಡುಗಿಯನ್ನು ಅವಳ ಸ್ವಂತ ಸೋದರ ಮಾವನಿಗೆ ಮದುವೆ (Marriage) ಮಾಡಲು ಪರಸ್ಪರ ನಿರ್ಧರಿಸಿದ್ದವು. ಮೇ 25 ರಂದು ಮದುವೆ ನಡೆದಿತ್ತು. ಆದರೆ ಅತ್ತೆಯ (Mother in law) ಮನೆಗೆ ತಲುಪಿದ ನಾಲ್ಕನೇ ದಿನದಲ್ಲಿ ಆಕೆಗೆ ಹೊಟ್ಟೆನೋವು (Stomach pain) ಕಾಣಿಸಿಕೊಂಡಿತ್ತು. ತಕ್ಷಣ ಆಕೆಯನ್ನು ಅಕ್ಬರ್‌ಪುರದ ಆಸ್ಪತ್ರೆಗೆ (Hospital) ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಆಕೆ 7 ತಿಂಗಳ ಗರ್ಭಿಣಿ (Pregnant)ಯಾಗಿದ್ದು, ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ. ಈ ಸುದ್ದಿ ಅತ್ತೆ ಮನೆಯವರನ್ನು ಬೆಚ್ಚಿ ಬೀಳಿಸಿತು.
3 ಈಡಿಯಟ್ಸ್ ಸಿನಿಮಾ ಥರ ವಿಡಿಯೋ ನೋಡಿ ಹೆರಿಗೆ ಮಾಡಿಸಲು ಮುಂದಾದರು, ಮುಂದೆ ಆಗಿದ್ದೇನು?
ಗ್ರಾಮಸ್ಥರಿಂದಲೇ ನಡೆದಿತ್ತು ಯುವತಿಯ ಮೇಲೆ ಅತ್ಯಾಚಾರ
ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಅದೇ ಗ್ರಾಮದ ಕೊಳವೆ ಬಾವಿ ನಿರ್ವಾಹಕ ತನ್ನ ಸ್ನೇಹಿತನೊಂದಿಗೆ ಸೇರಿ ತನ್ನ ಮಗಳ ಮೇಲೆ ಅತ್ಯಾಚಾರ (Rape) ಎಸಗಿದ್ದಾನೆ ಎಂದು ಬಾಲಕಿಯ ತಾಯಿ ತಿಳಿಸಿದ್ದಾಳೆ. ಅಲ್ಲದೇ ಘಟನೆಯನ್ನು ಯಾರೊಂದಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಭಯದಿಂದ, ಅವಳು ಯಾವುದೇ ವ್ಯಕ್ತಿಗೆ ಘಟನೆಯ ಬಗ್ಗೆ ಹೇಳಲಿಲ್ಲ ಮತ್ತು ಗರ್ಭಧಾರಣೆಯ ವಿಷಯವನ್ನು ಮರೆಮಾಚಬೇಕಾಯಿತು ಎಂಬುದಾಗಿ ತಿಳಿಸಿದ್ದಾಳೆ.
ಅತ್ತೆಯಂದಿರು ವಧುವನ್ನು (Bride) ತಮ್ಮ ಮನೆಗೆ ಕರೆದುಕೊಂಡು ಹೋಗದಿರಲು ನಿರಾಕರಿಸಿದರು. ಹುಡುಗಿಯ ಜನರು ಮತ್ತು ಕುಟುಂಬ ಸದಸ್ಯರು ಮತ್ತು ಹತ್ತಿರದ ಸಂಬಂಧಿಕರು (Relatives) ಮಾತುಕತೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಯತ್ನಿಸಿದರೂ ಪ್ರಯೋಜನವಾಗಲ್ಲಿಲ್ಲ. ಸಂತ್ರಸ್ತೆಯ ವಿರುದ್ಧ ದೂರು (Complaint) ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ರೂರಾ ಪೊಲೀಸ್ ಠಾಣೆ ಅಧ್ಯಕ್ಷ ಸಮರ್ ಬಹದ್ದೂರ್ ಸಿಂಗ್ ಖಚಿತಪಡಿಸಿದ್ದಾರೆ.
ಮದುವೆಯಾಗಿ ಆರು ತಿಂಗಳಲ್ಲೇ ಪ್ರೆಗ್ನೆಂಸಿ ನ್ಯೂಸ್ ಕೊಟ್ಟ ಸ್ವರಾ ಭಾಸ್ಕರ್
ಸಂತ್ರಸ್ತೆ ತನಗಾದ ಸಂಕಷ್ಟವನ್ನು ಹೇಳಿಕೊಂಡಿದ್ದು, ಗ್ರಾಮದ ನಿವಾಸಿಗಳಾದ ಅರುಣ್ ಪಾಲ್ ಮತ್ತು ವಿನಯ್ ಪಾಲ್ ತನ್ನ ಮೇಲೆ ಹಲವಾರು ಬಾರಿ ಬಲವಂತವಾಗಿ ಅತ್ಯಾಚಾರವೆಸಗಿದ್ದಾರೆ ಮತ್ತು ಇದನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾಳೆ. ಇದೀಗ ಜೂನ್ 6 ರಂದು ಸಂತ್ರಸ್ತೆಯ ದೂರಿನ ಮೇರೆಗೆ ಅರುಣ್ ಪಾಲ್ ಮತ್ತು ವಿನಯ್ ಪಾಲ್ ವಿರುದ್ಧ ಅತ್ಯಾಚಾರ ಮತ್ತು ಎಸ್‌ಸಿ-ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.