girl child protection : ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದು ಎಷ್ಟು ಮುಖ್ಯವೋ, ಅವರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದೂ ಅಷ್ಟೇ ಮುಖ್ಯ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಕೆಲವು ಸುರಕ್ಷತಾ ನಿಯಮಗಳನ್ನು ಚಿಕ್ಕ ವಯಸ್ಸಿನಲ್ಲೇ ತಿಳಿಸಿಕೊಟ್ಟರೆ, ಅನೇಕ ಅಪಾಯಗಳಿಂದ ದೂರ ಇರಲು ಸಹಾಯವಾಗುತ್ತದೆ.

ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದು ಎಷ್ಟು ಮುಖ್ಯವೋ, ಅವರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದೂ ಅಷ್ಟೇ ಮುಖ್ಯ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಕೆಲವು ಸುರಕ್ಷತಾ ನಿಯಮಗಳನ್ನು ಚಿಕ್ಕ ವಯಸ್ಸಿನಲ್ಲೇ ತಿಳಿಸಿಕೊಟ್ಟರೆ, ಅನೇಕ ಅಪಾಯಗಳಿಂದ ದೂರ ಇರಲು ಸಹಾಯವಾಗುತ್ತದೆ.

ಹೆಣ್ಮಕ್ಕಳಿಗೆ ಸುರಕ್ಷಿತೆ ಪಾಠ 

  • ಸೋಶಿಯಲ್‌ ಮೀಡಿಯಾವನ್ನು ಈಗ ಪ್ರತಿಯೊಬ್ಬರು ಬಳಕೆ ಮಾಡ್ತಿದ್ದಾರೆ. ಮಕ್ಕಳು ಏನು ಮಾಡ್ತಾರೆ, ಯಾವುದನ್ನು ಪೋಸ್ಟ್‌ ಮಾಡ್ತಾರೆ ಎಂಬ ವಿಷ್ಯ ಅನೇಕ ಪಾಲಕರಿಗೆ ತಿಳಿದಿರೋದಿಲ್ಲ. ಪೋಸ್ಟ್ ಮಾಡುವ ಮುನ್ನ ಯೋಚಿಸುವಂತೆ ಮಕ್ಕಳಿಗೆ ತಿಳಿ ಹೇಳಿ. ಒಮ್ಮೆ ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಂಡ್ರೆ ಅದನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳದಂತೆ ಅವರಿಗೆ ಸಲಹೆ ನೀಡಿ.

https://kannada.asianetnews.com/gallery/sandalwood/sandalwood-actress-dimple-queen-rachita-ram-stardom-and-popularity-behind-secret-revealed-x4cs2hr

  • ಮಕ್ಕಳಿಗೆ ತಪ್ಪನ್ನು ವಿರೋಧಿಸಲು ಕಲಿಸಿ. ಯಾರಾದರೂ ನಿಮ್ಮನ್ನು ಅಸಹಜವಾಗಿ ಸ್ಪರ್ಶಿಸಿದರೆ ಅಥವಾ ನಿಮ್ಮ ಇಚ್ಛೆಗೆ ವಿರುದ್ಧವಾಗಿ ವರ್ತಿಸಿದರೆ ಧೈರ್ಯವಾಗಿ ಬೇಡ ಎಂಬುದನ್ನು ಹೇಳಲು ಕಲಿಸಿ.
  • ಖಾಸಗಿ ಫೋಟೋಗಳನ್ನು ಹಂಚಿಕೊಳ್ಳದಂತೆ ಮಕ್ಕಳಿಗೆ ತಿಳಿ ಹೇಳಿ. ಯಾರೇ ಕೇಳಿದರೂ ನಿಮ್ಮ ವೈಯಕ್ತಿಕ ಫೋಟೋ ಅಥವಾ ವಿಡಿಯೋಗಳನ್ನು ಕಳುಹಿಸುವುದು ಅಪಾಯಕಾರಿ. ಅದ್ರಿಂದ ಏನೆಲ್ಲ ಸಮಸ್ಯೆ ಆಗುತ್ತೆ ಎಂಬುದನ್ನು ಮಕ್ಕಳಿಗೆ ತಿಳಿಸಿ.
  • ನೀವು ಅರ್ಧ ಕುಡಿದು ಅಲ್ಲೇ ಬಿಟ್ಟು ಹೋದ ಪಾನೀಯವನ್ನು ಮತ್ತೆ ಕುಡಿಯಬೇಡಿ. ನಿಮ್ಮ ಗಮನ ಪಾನೀಯದ ಮೇಲಿರಲಿಲ್ಲ ಎಂದಾದ್ರೆ ಮತ್ತೆ ಆ ಪಾನೀಯ ಕುಡಿಯುವ ಪ್ರಯತ್ನಕ್ಕೆ ಹೋಗ್ಬೇಡಿ.
  • ಅಪರಿಚಿತರಿಂದ ಆಹಾರ ಅಥವಾ ಪಾನೀಯ ಸ್ವೀಕರಿಸಬೇಡಿ.ಅವರು ಸ್ನೇಹಪರವಾಗಿ ಕಂಡರೂ, ಅಪರಿಚಿತರಿಂದ ಆಹಾರ ಅಥವಾ ಪಾನೀಯ ತೆಗೆದುಕೊಳ್ಳದಿರುವುದು ಉತ್ತಮವಲ್ಲ ಎಂಬುದನ್ನು ಮಕ್ಕಳಿಗೆ ಕಲಿಸಿ.
  • ಅಸುರಕ್ಷಿತ ಅನಿಸಿದರೆ ತಕ್ಷಣ ಕುಟುಂಬಕ್ಕೆ ಕರೆ ಮಾಡುವಂತೆ ಮಕ್ಕಳಿಗೆ ಹೇಳಿ.ಯಾವುದೇ ಸ್ಥಳದಲ್ಲಿ ಭಯ, ಅಸಹಜತೆ ಅಥವಾ ಅನುಮಾನ ಉಂಟಾದರೆ ಮುಜುಗರಪಡದೆ ಪೋಷಕರಿಗೆ ಅಥವಾ ನಂಬಿಕೆಯ ವ್ಯಕ್ತಿಗೆ ತಕ್ಷಣ ಕರೆ ಮಾಡಬೇಕು.

https://kannada.asianetnews.com/health-life/get-natural-burgundy-hair-colour-with-this-homemade-beetroot-hair-pack/articleshow-lc9812g

  • ಮಾದಕ ವಸ್ತುಗಳಿಂದ ದೂರವಿರಿ.ಸ್ನೇಹಿತರ ಒತ್ತಡಕ್ಕೆ ಮಣಿದು ಮದ್ಯ, ಧೂಮಪಾನ ಅಥವಾ ಮಾದಕ ವಸ್ತುಗಳನ್ನು ಬಳಸಬೇಡಿ. ಒಂದು ತಪ್ಪು ನಿರ್ಧಾರ ಜೀವನವನ್ನೇ ಹಾಳು ಮಾಡಬಹುದು.
  • ಎಚ್ಚರಿಕೆಯಿಂದಿರಿ ಯಾರದ್ದೋ ಬ್ಯಾಗ್, ಪಾರ್ಸೆಲ್ ಅಥವಾ ಅನುಮಾನಾಸ್ಪದ ವಸ್ತುಗಳನ್ನು ತೆಗೆದುಕೊಳ್ಬೇಡಿ. ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ. ಸಮಸ್ಯೆಯನ್ನು ಮರೆಮಾಚಬೇಡಿ ಅಂತ ಮಕ್ಕಳಿಗೆ ತಿಳಿ ಹೇಳೋದು ಪಾಲಕರ ಕರ್ತವ್ಯ.
  • ಯಾರಾದರೂ ಬೆದರಿಸಿದರೆ, ಕಿರುಕುಳ ನೀಡಿದರೆ ಅಥವಾ ಅನುಮಾನಾಸ್ಪದ ಘಟನೆ ನಡೆದರೆ ಅದನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳಬೇಡಿ. ತಕ್ಷಣ ಪೋಷಕರು, ಶಿಕ್ಷಕರು ಅಥವಾ ನಂಬಿಕೆಯ ಹಿರಿಯರಿಗೆ ತಿಳಿಸುವಂತೆ ಮಕ್ಕಳನ್ನು ಜಾಗೃತಗೊಳಿಸಿ. 

ಆತ್ಮವಿಶ್ವಾಸ 

ಮಕ್ಕಳಿಗೆ ಭಯದ ಬದಲು ಅರಿವು ಮತ್ತು ಆತ್ಮವಿಶ್ವಾಸವನ್ನು ಕಲಿಸಬೇಕು. ಪೋಷಕರೊಂದಿಗೆ ಮುಕ್ತವಾಗಿ ಮಾತನಾಡುವ ಅಭ್ಯಾಸ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಮತ್ತು ಸುರಕ್ಷತಾ ಅರಿವು ಇದ್ದರೆ, ಮಕ್ಕಳು ಆತ್ಮವಿಶ್ವಾಸದಿಂದ ಜೀವನ ನಡೆಸಬಹುದು.