ಮದುವೆಯಾಗಿ ಆರು ತಿಂಗಳಲ್ಲೇ ಪ್ರೆಗ್ನೆಂಸಿ ನ್ಯೂಸ್ ಕೊಟ್ಟ ಸ್ವರಾ ಭಾಸ್ಕರ್
ಬಿ ಟೌನ್‌ನ ಇನ್ನೊಂದು ಜೋಡಿ ತಮ್ಮ ಮನೆಗೆ ಪುಟ್ಟ ಅತಿಥಿಯ ಸ್ವಾಗತಕ್ಕೆ ರೆಡಿಯಾಗಿದ್ದಾರೆ. ಬಾಲಿವುಡ್ ನಟಿ ಸ್ವರಾ ಭಾಸ್ಕರ್(Swara Bhasker) ಮತ್ತು ಪತಿ ಫಹಾದ್ ಅಹ್ಮದ್ (Fahad Ahmad) ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವನ್ನು ಸ್ವತಃ ನಟಿ ಹಂಚಿಕೊಂಡಿದ್ದಾರೆ, ಈ ವರ್ಷದ ಆರಂಭದಲ್ಲಿ ಮದುವೆಯಾದ ದಂಪತಿಯ ಮೊದಲ ಮಗು ಆಕ್ಟೋಬರ್‌ನಲ್ಲಿ ಬರಲಿದೆ ಎಂದು ಹೇಳಿಕೊಂಡಿದ್ದಾರೆ.
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ತಮ್ಮ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ. ಕೆಲವೇ ಗಂಟೆಗಳ ಮೊದಲು ಸ್ವರಾ ಅವರು ಸೋಶಿಯಲ್ ಮೀಡಿಯಾದಲ್ಲಿ ತಾವು ತಾಯಿಯಾಗಲಿರುವ ಸುದ್ದಿ ಹಂಚಿಕೊಂಡಿದ್ದಾರೆ.
ಸ್ವರಾ ಭಾಸ್ಕರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಪ್ರೆಗ್ನೆಂಸಿ ವಿಷಯ ಘೋಷಿಸುವುದರ ಜೊತೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಫೋಟೋಗಳಲ್ಲಿ, ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಟೆರೇಸ್‌ನಲ್ಲಿ ಒಟ್ಟಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಸ್ವರಾ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ಫಹಾದ್ ಬೀಜ್ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ವರಾ ಅವರು ತಮ್ಮ ಪತಿ ಫಹಾದ್ ಮಡಿಲಲ್ಲಿ ಕುಳಿತು ಪೋಸ್ ನೀಡಿದ್ದಾರೆ. ಒಟ್ಟು ಮೂರು ಫೋಟೋಗಳನ್ನು ಹಂಚಿಕೊಂಡಿದ್ದು ನಟಿ ಬೇಬಿ ಬಂಪ್ ಅನ್ನು ತೋರಿಸಿದ್ದಾರೆ.
'ಕೆಲವೊಮ್ಮೆ ನಿಮ್ಮ ಎಲ್ಲಾ ಪ್ರಾರ್ಥನೆಗಳು ಒಟ್ಟಾಗಿ ಉತ್ತರಿಸಲ್ಪಡುತ್ತವೆ! ನಾವು ಸಂಪೂರ್ಣ ಹೊಸ ಜಗತ್ತಿಗೆ ಕಾಲಿಡುತ್ತಿದ್ದಂತೆಯೇ ಬ್ಲೆಸ್ಡ್, ಕೃತಜ್ಞತೆ, ಉತ್ಸುಕ' ಎಂದು ಫೋಟೋಗಳಿಗೆ ಕ್ಯಾಪ್ಷನ್ ನೀಡಿ ಪತಿಯನ್ನು ಡ್ಯಾಗ್ ಮಾಡಿದ್ದಾರೆ.
Swara Bhasker
ಈ ವರ್ಷದ ಫೆಬ್ರವರಿಯಲ್ಲಿ, ಸ್ವರಾ ಭಾಸ್ಕರ್ ಅವರು ರಾಜಕೀಯ ಕಾರ್ಯಕರ್ತ ಫಹಾದ್ ಅಹ್ಮದ್ ಅವರೊಂದಿಗೆ ತಮ್ಮ ವಿವಾಹವನ್ನು ಘೋಷಿಸಿದರು. ಜನವರಿ 6, 2023 ರಂದು ಕೋರ್ಟ್ ಮ್ಯಾರೇಜ್ ಆದ ಈ ದಂಪತಿಗಳು ಮಾರ್ಚ್‌ನಲ್ಲಿ ಅದ್ಧೂರಿ ಆಚರಣೆಯನ್ನು ಸಹ ಹೊಂದಿದ್ದರು.
Swara Bhasker
ಈ ಜೋಡಿಯ ಮದುವೆಯ ಪೂರ್ವ ಫಂಕ್ಷನ್‌ಗಳಾದ ಹಲ್ದಿ, ಸಂಗೀತ, ಮೆಹೆಂದಿ ಸಮಾರಂಭಗಳ ಆಚರಣೆಗಳ ಫೋಟೋಗಳನ್ನು ಹಂಚಿಕೊಂಡಿದ್ದರು.
2019 ರಲ್ಲಿ CAA ಪ್ರತಿಭಟನೆಯ ಸಂದರ್ಭದಲ್ಲಿ ಸ್ವರಾ ಮತ್ತು ಫಹಾದ್ ಮೊದಲ ಬಾರಿಗೆ ಭೇಟಿಯಾದರು. ಫೆಬ್ರವರಿಯಲ್ಲಿ, ಅವರು ಅಧಿಕೃತವಾಗಿ ತಮ್ಮ ಸಂಬಂಧದ ಟೈಮ್‌ಲೈನ್‌ನ ಒಂದು ಝಲಕ್‌ನ ವೀಡಿಯೊವನ್ನು ಹಂಚಿಕೊಂಡರು.