Asianet Suvarna News Asianet Suvarna News

UPSC CSE 2022: ಟಾಪರ್ ಇಶಿತಾ ಕಿಶೋರ್ ಮಾರ್ಕ್ಸ್‌ಕಾರ್ಡ್‌ ವೈರಲ್‌

ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿಯ ಫಲಿತಾಂಶದಲ್ಲಿ ಮೊದಲ ಶ್ರೇಯಾಂಕ ಪಡೆದುಕೊಂಡಿರುವ ಇಶಿತಾ ಕಿಶೋರ್ ಅವರ ಅಂಕಪಟ್ಟಿ ವೈರಲ್ ಆಗಿದೆ. ಇಶಿತಾ ಕಿಶೋರ್ ಮಾರ್ಕ್ಸ್‌ ಕುರಿತಾದ ಮಾಹಿತಿ ಇಲ್ಲಿದೆ.

UPSC topper Ishita Kishores marksheet goes viral, check her marks Vin
Author
First Published Jun 2, 2023, 3:35 PM IST

ನವದೆಹಲಿಯ ಶ್ರೀರಾಮ್‌ ಕಾಲೇಜ್‌ ಆಫ್‌ ಕಾಮರ್ಸ್‌ನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪದವೀಧರೆಯಾಗಿದ್ದ ಇಶಿತಾ ಕಿಶೋರ್‌ 2022ರ ಯುಪಿಎಸ್‌ಪಿ ಪರೀಕ್ಷೆಯಲ್ಲಿ ಟಾಪ್‌ ಆಗಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಯುಪಿಎಸ್‌ಸಿ ಸಿಎಸ್‌ಇ 2022 ರ ಅಂತಿಮ ಫಲಿತಾಂಶವನ್ನು ಇತ್ತೀಚಗೆ ಪ್ರಕಟಿಸಿದೆ. ಇಶಿತಾ ಕಿಶೋರ್ ಅವರು UPSC ಸಿವಿಲ್ ಸರ್ವೀಸಸ್ ಪರೀಕ್ಷೆ 2022 ರ ಟಾಪರ್ ಆಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಇಶಿತಾ ಕಿಶೋರ್‌ ಹೆಸರು ಟ್ರೆಂಡ್ ಆಗಿದೆ. ಇದರ ಜೊತೆಯಲ್ಲೇ ಇಶಿತಾ ಕಿಶೋರ್ ಅವರ ಅಂಕಪಟ್ಟಿ ವೈರಲ್ ಆಗಿದೆ. ಇಶಿತಾ ಕಿಶೋರ್ ಮಾರ್ಕ್ಸ್‌ ಕುರಿತಾದ ಮಾಹಿತಿ ಇಲ್ಲಿದೆ.

UPSC ಟಾಪರ್ ಇಶಿತಾ ಕಿಶೋರ್ ಅವರ ಅಂಕಪಟ್ಟಿ (Markscard) ವೈರಲ್ ಆಗಿದೆ. ಇಶಿತಾ ಕಿಶೋರ್ ಈ ವರ್ಷ UPSC CSE ಪರೀಕ್ಷೆಯಲ್ಲಿ ತನ್ನ ಮೂರನೇ ಪ್ರಯತ್ನದಲ್ಲಿ (Third attempt) ಅಖಿಲ ಭಾರತದಲ್ಲಿ 1ನೇ ಸ್ಥಾನದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಐಎಎಸ್ ಟಾಪರ್ ಇಶಿತಾ ಕಿಶೋರ್ ಅವರ 2022ರ ಅಂಕಪಟ್ಟಿ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗಿದೆ. ಮಾರ್ಕ್‌ಶೀಟ್‌ನಲ್ಲಿ ಸಾಮಾನ್ಯ ಅಧ್ಯಯನದಿಂದ ತೊಡಗಿ ವಿವಿಧ ಪರೀಕ್ಷೆಗಳಲ್ಲಿ ಮತ್ತು ಐಚ್ಛಿಕ ವ್ಯಕ್ತಿತ್ವ ಪರೀಕ್ಷೆಯಲ್ಲಿ (Exam) ಆಕೆಯ ಅಂಕಗಳ ಮಾಹಿತಿ ನೀಡಿದೆ. ಅವರ ಮಾರ್ಕ್ಸ್‌ ಅಂತಿಮ ಮೊತ್ತವು 1094 ಆಗಿತ್ತು.

ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಅಗ್ರ 10 ಸ್ಥಾನ ಪಡೆದವರು!

ಇಶಿತಾ ಕಿಶೋರ್ ಮಾರ್ಕ್ಸ್ ಡೀಟೈಲ್ಸ್ ಇಲ್ಲಿದೆ

ಪ್ರಬಂಧ (ಪೇಪರ್-I): 137
ಸಾಮಾನ್ಯ ಅಧ್ಯಯನಗಳು-I (ಪೇಪರ್-II): 121
ಸಾಮಾನ್ಯ ಅಧ್ಯಯನಗಳು-II (ಪೇಪರ್-III): 130
ಸಾಮಾನ್ಯ ಅಧ್ಯಯನಗಳು-III (ಪೇಪರ್-IV): 088
ಸಾಮಾನ್ಯ ಅಧ್ಯಯನಗಳು-IV (ಪೇಪರ್-V): 112
ಐಚ್ಛಿಕ-I (ರಾಜಕೀಯ ವಿಜ್ಞಾನ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು) (ಪೇಪರ್-VI): 147
ಐಚ್ಛಿಕ-II (ರಾಜಕೀಯ ವಿಜ್ಞಾನ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು) (ಪೇಪರ್-VII): 166
ಒಟ್ಟು ಮೊತ್ತ: 901
ವ್ಯಕ್ತಿತ್ವ ಪರೀಕ್ಷೆ: 193
ಅಂತಿಮ ಒಟ್ಟು: 1094

26 ವರ್ಷದ ಇಶಿತಾ ಕಿಶೋರ್ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ (SRCC), DU ನಲ್ಲಿ ಪದವಿ ಪಡೆದಿದ್ದಾರೆ. ಅವರು ಬಹುರಾಷ್ಟ್ರೀಯ ಕಂಪನಿ EY ನಲ್ಲಿ ಕೆಲಸ ಮಾಡಿದ್ದಾಳೆ. ಇದು UPSCಗೆ ಅವರ ಮೂರನೇ ಪ್ರಯತ್ನವಾಗಿತ್ತು. ಕಳೆದ ಎರಡು ಪ್ರಯತ್ನಗಳಲ್ಲಿ ಆಕೆ ಸಂದರ್ಶನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು. ಈ ಹಿಂದೆ, ಆಕೆಯ ಅಣಕು UPSC ಸಂದರ್ಶನವು ವೈರಲ್ ಆಗಿತ್ತು ಮತ್ತು ಫಲಿತಾಂಶಗಳು ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

Who is Ishita Kishore: 'ಕಂಡಿದ್ದು ಒಂದೇ ಕನಸು.. ಅದು ನಿಜವಾಗಿದೆ..' ಯುಪಿಎಸ್‌ಸಿ ಟಾಪರ್‌ ಇಶಿತಾ ಕಿಶೋರ್‌ ಮಾತು!

ತಮ್ಮ ಇನ್ಸ್‌ಟಾಗ್ರಾಮ್‌ ಪುಟದಲ್ಲಿ ಒಂದು ಪೋಸ್ಟ್‌ಅನ್ನು ಹಂಚಿಕೊಂಡಿರುವ ಇಶಿತಾ ಕಿಶೋರ್, ನಾನು ಕಂಡಿದ್ದು ಒಂದೇ ಒಂದು ಕನಸು ಅದೀಗ ನಿಜವಾಗಿದೆ ಎಂದು ಬರೆದುಕೊಂಡಿದ್ದಾರೆ. ಇಶಿತಾ ಕಿಶೋರ್ ಅರ್ಥಶಾಸ್ತ್ರ ಪದವೀಧರೆ. ಅವರು 2017 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಇದರ ನಂತರ, ಅವರು ಅರ್ನ್ಸ್ಟ್ ಮತ್ತು ಯಂಗ್ ಕಂಪನಿಯಲ್ಲಿ ರಿಸ್ಕ್‌ ಅಡ್ವೈಸರ್‌ ಆಗಿ ಕೆಲ ಕಾಲ ಕೆಲಸ ಮಾಡಿದ್ದರು.  ಸಕ್ರೀಯ ಕ್ರೀಡಾಪಟು ಕೂಡ ಆಗಿರುವ ಈಕೆ ಶಾಲೆಯಲ್ಲೂ ಉತ್ತಮ ಆಲ್ರೌಂಡರ್‌ ಪರ್ಫಾಮರ್‌ ಆಗಿದ್ದರು.

Follow Us:
Download App:
  • android
  • ios