Asianet Suvarna News Asianet Suvarna News

Who is Ishita Kishore: 'ಕಂಡಿದ್ದು ಒಂದೇ ಕನಸು.. ಅದು ನಿಜವಾಗಿದೆ..' ಯುಪಿಎಸ್‌ಸಿ ಟಾಪರ್‌ ಇಶಿತಾ ಕಿಶೋರ್‌ ಮಾತು!

ನವದೆಹಲಿಯ ಶ್ರೀರಾಮ್‌ ಕಾಲೇಜ್‌ ಆಪ್‌ ಕಾಮರ್ಸ್‌ನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪದವೀಧರೆಯಾಗಿರುವ ಇಶಿತಾ ಕಿಶೋರ್‌ 2022ರ ಸೆಪ್ಟೆಂಬರ್‌ನಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಟ್ವಿಟರ್‌ನಲ್ಲಿ ಅವರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

UPSC First Rank Hodler Who is Ishita Kishore shri ram college of commerce graduate san
Author
First Published May 23, 2023, 3:16 PM IST

ಬೆಂಗಳೂರು (ಮೇ.23): ನವದೆಹಲಿಯ ಶ್ರೀರಾಮ್‌ ಕಾಲೇಜ್‌ ಆಫ್‌ ಕಾಮರ್ಸ್‌ನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪದವೀಧರೆಯಾಗಿದ್ದ ಇಶಿತಾ ಕಿಶೋರ್‌ 2022ರ ಯುಪಿಎಸ್‌ಪಿ ಪರೀಕ್ಷೆಯಲ್ಲಿ ಟಾಪ್‌ ಆಗಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಯುಪಿಎಸ್‌ಸಿ ಸಿಎಸ್‌ಇ 2022 ರ ಅಂತಿಮ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ. ಇಶಿತಾ ಕಿಶೋರ್ ಅವರು UPSC ಸಿವಿಲ್ ಸರ್ವೀಸಸ್ ಪರೀಕ್ಷೆ 2022 ರ ಟಾಪರ್ ಆಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿರುವ ಇಶಿತಾ ಕಿಶೋರ್‌ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಆರಂಭವಾಗಿದೆ. ತಮ್ಮ ಇನ್ಸ್‌ಟಾಗ್ರಾಮ್‌ ಪುಟದಲ್ಲಿ ಒಂದು ಪೋಸ್ಟ್‌ಅನ್ನು ಹಂಚಿಕೊಂಡಿರುವ ಆಕೆ, ನಾನು ಕಂಡಿದ್ದು ಒಂದೇ ಒಂದು ಕನಸು ಅದೀಗ ನಿಜವಾಗಿದೆ ಎಂದು ಬರೆದುಕೊಂಡಿದ್ದಾರೆ. ಇಶಿತಾ ಕಿಶೋರ್ ಅರ್ಥಶಾಸ್ತ್ರ ಪದವೀಧರೆ. ಅವರು 2017 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಇದರ ನಂತರ, ಅವರು ಅರ್ನ್ಸ್ಟ್ ಮತ್ತು ಯಂಗ್ ಕಂಪನಿಯಲ್ಲಿ ರಿಸ್ಕ್‌ ಅಡ್ವೈಸರ್‌ ಆಗಿ ಕೆಲ ಕಾಲ ಕೆಲಸ ಮಾಡಿದ್ದರು.  ಸಕ್ರೀಯ ಕ್ರೀಡಾಪಟು ಕೂಡ ಆಗಿರುವ ಈಕೆ ಶಾಲೆಯಲ್ಲೂ ಉತ್ತಮ ಆಲ್ರೌಂಡರ್‌ ಪರ್ಫಾಮರ್‌ ಆಗಿದ್ದರು.

UPSC Civil Services: ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಟಾಪ್‌ 4 ರ‍್ಯಾಂಕ್‌ ಮಹಿಳೆಯರ ಪಾಲು

ಇಶಿತಾ ಕಿಶೋರ್‌ (Ishita Kishore) ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ (UPSC CSE Exam) ಪಾಸ್‌ ಆಗಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಗೆ ಅರ್ಹತೆ ಪಡೆಯುವ ಮೂರನೇ ಹಂತವಾದ ಸಂದರ್ಶನದ ಸುತ್ತಿಗೆ ಇಶಿತಾ ಕಿಶೋರ್‌ ಮೊದಲ ಬಾರಿಗೆ ಅರ್ಹತೆ ಪಡೆದಿದ್ದರು. ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ, ಇಶಿತಾ ಕಿಶೋರ್‌, ಯುಪಿಎಸ್‌ಸಿ ಪ್ರಿಲಿಮ್ಸ್‌ (Prilims) ಹಂತವನ್ನು ಪಾಸ್‌ ಮಾಡಲೂ ಯಶ ಕಂಡಿರಲಿಲ್ಲ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್‌ ಆಗಲು, ಕ್ರಮವಾಗಗಿ ಪ್ರಿಲಿಮ್ಸ್‌, ಪ್ರಧಾನ ಹಾಗೂ ಸಂದರ್ಶನದ ಸುತ್ತುಗಳಲ್ಲಿ ಪಾಸ್‌ ಆಗಬೇಕಿರುತ್ತದೆ.

ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಅಗ್ರ 10 ಸ್ಥಾನ ಪಡೆದವರು!

ನಾನು ರಿಸಲ್ಟ್‌ನ ಪಿಡಿಎಫ್‌ ನೋಡುವ ಮುನ್ನವೇ ನನಗೆ ಫೋನ್‌ಗಳು ಬರಲು ಆರಂಭಿಸಿದ್ದವು. ಎರಡು ನಿಮಿಷಗಳ ಅಂತರವಿತ್ತು. ಆದರೆ, ನಾನು ಪೋನ್‌ನ ಒಂದು ಬದಿಯಲ್ಲಿಟ್ಟು ರಿಸಲ್ಟ್‌ ನೋಡುತ್ತಿದ್ದೆ. ಅಷ್ಟರಲ್ಲಿ ರಿಸಲ್ಟ್‌ ಬಂದಿತ್ತು. ಅದನ್ನು ನೋಡಿ ಬಹಳ ಸಂತಸವಾಯಿತು. ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತೀರಿ ಎಂದು ನಿರ್ಧಾರ ಮಾಡಿದ ಕ್ಷಣದಿಂದಲೇ ಪ್ರಾಮಾಣಿಕವಾಗಿ ಇರಬೇಕಾಗುತ್ತದೆ. ಶಿಸ್ತಂತೂ ಇರಲೇಬೇಕಾಗುತ್ತದೆ. ಇದಿಲ್ಲದೆ ಇದರಲ್ಲಿ ಯಶಸ್ಸು ಸಾಧ್ಯವಿಲ್ಲ. ಎರಡು ಬಾರಿ ನಾನು ಪ್ರಿಲಿಮ್ಸ್‌ನಲ್ಲಿ ಫೇಲ್‌ ಆದರೂ ನನ್ನ ಕುಟುಂಬದವರು ನನ್ನ ಮೇಲಿನ ವಿಶ್ವಾಸ ಬಿಟ್ಟಿರಲಿಲ್ಲ. ನನಗೆ ದೊಡ್ಡ ವಿಶ್ವಾಸ ತುಂಬಿದ್ದೇ ನಮ್ಮ ಕುಟುಂಬದವರು. ಪದವಿ ಮುಗಿದ ಬಳಿಕವೇ ನನಗೆ ಸಾಕಷ್ಟು ಆಫರ್‌ಗಳು ಬಂದಿದ್ದವು. ಕಾಲೇಜಿನಲ್ಲಿಯೇ ಹಲವು ಅವಕಾಶ ಸಿಕ್ಕಿತ್ತು. ಕಾರ್ಪೋರೇಟ್‌ ಕಂಪನಿಗೆ ಸೇರಿಕೊಂಡೆ. ಇದು ಕೂಡ ನನಗೆ ಪರೀಕ್ಷೆಯ ಸಮಯದಲ್ಲಿ ಲಾಭ ನೀಡಿತು ಎಂದು ಇಶಿತಾ ಕಿಶೋರ್‌ ಪ್ರತಿಕ್ರಿಯೆ ನೀಡಿದ್ದಾರೆ.

Follow Us:
Download App:
  • android
  • ios