Asianet Suvarna News Asianet Suvarna News

ಪ್ರೇತದ ಮೇಲೆ ಪ್ರೀತಿ ಹುಟ್ಟಿ ಮದ್ವೆಯಾದ್ಲು, ಈಗ ಫಜೀತಿ, ದೆವ್ವ ಬಿಡಿಸಿ ಅಂತಿದ್ದಾಳೆ!

ಸಮಾಜದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ರೋಬೋಟ್‌, ಕನಸಿನಲ್ಲಿ ಬರುವ ಹುಡುಗಿ, ವಿಮಾನದ ಜೊತೆ ಹೀಗೆ ಚಿತ್ರ-ವಿಚಿತ್ರವಾಗಿ ಮದ್ವೆಯಾಗ್ತಾರೆ. ಆದ್ರೆ ಇಲ್ಲೊಬ್ಬಾಕೆ ಎಲ್ಲಾ ಬಿಟ್ಟು ದೆವ್ವವನ್ನು ಮದ್ವೆಯಾಗಿದ್ದಾಳೆ. ಈಗ ಅಯ್ಯೋ ನನಗೆ ದೆವ್ವ ಕಾಟ ಕೊಡ್ತಿದೆ ಬಿಡಿಸ್ರಪ್ಪಾ ಅಂತಿದ್ದಾಳೆ. ಆ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

UK woman who married a ghost now wants an exorcism as spirit husband made her life hell Vin
Author
First Published Apr 11, 2023, 1:34 PM IST

ಕಾಲ ಬದಲಾಗುತ್ತಿದೆ. ಜೊತೆಗೆ ಸಂಬಂಧದ ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆಲ್ಲಾ ಒಬ್ಬ ಗಂಡು, ಒಬ್ಬ ಹೆಣ್ಣು ಮದುವೆಯಾಗುತ್ತಿದ್ದರು. ಪುರುಷ ಹಾಗೂ ಮಹಿಳೆ ಪರಸ್ಪರ ಮದುವೆಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡು ಮಕ್ಕಳನ್ನು ಪಡೆದು ಕುಟುಂಬವನ್ನು ಬೆಳೆಸಬಹುದಾಗಿದೆ. ಇದು ಸಮಾಜದಿಂದಲೇ ಅಂಗೀಕೃತಗೊಂಡಿರುವ ಸಂಬಂಧ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಮಾತ್ರವಲ್ಲ ಇದು ಜನಸಾಮಾನ್ಯರ ನಡುವೆಯೀಗ ಅಚ್ಚರಿಯ ವಿಷಯವಾಗಿಯೂ ಉಳಿದಿಲ್ಲ. 

ಇದೆಲ್ಲವನ್ನೂ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್‌ ವರ್ಷನ್ ವ್ಯಕ್ತಿ, ಹೋಲೋಗ್ರಾಮ್ (ವ್ಯಕ್ತಿಯ ಕಾಲ್ಪನಿಕ ರೂಪ), ಡಾಲ್‌, ಹೊದಿಕೆಯನ್ನು ಮದುವೆಯಾದವರೂ ಇದ್ದಾರೆ. ಆದರೆ ಇಂಗ್ಲೆಂಡ್‌ನ ಮಹಿಳೆಯೊಬ್ಬಳು ಇದೆಲ್ಲಕ್ಕಿಂತ ವಿಚಿತ್ರವಾಗಿ ದೆವ್ವವನ್ನೇ (Ghost) ಮದುವೆ (Wedding)ಯಾಗಿದ್ದಾಳೆ.

ಹುಡುಗರ ಸಹವಾಸನೇ ಬೇಡಾಂತ ಗೊಂಬೆಯನ್ನೇ ಮದ್ವೆಯಾದ್ಲು, ಮುದ್ದಾಗ ಮಗುವೂ ಇದೆ..!

ದೆವ್ವದೊಂದಿಗೆ ಮದುವೆ, ಗಂಡ ಎಲ್ಹೋದ್ರು ಹಿಂಬಾಲಿಸ್ತಾನೆ ಅಂತಿದ್ದಾಳೆ
ಯುಕೆಯ ಮಹಿಳೆಯೊಬ್ಬಳು ದೆವ್ವವನ್ನು ಮದುವೆಯಾಗಿದ್ದು, ಈಗ ಅದರ ಕಾಟ ತಡೆಯಲಾದರೆ ಡಿವೋರ್ಸ್ ಬೇಕು ಅಂತಿದ್ದಾಳೆ. ರಾಕರ್ ಬ್ರೋಕಾರ್ಡ್ ಹ್ಯಾಲೋವೀನ್ ಎಂಬಾಕೆ 2022ರಂದು ಚರ್ಚ್‌ನಲ್ಲಿ ಎಡ್ವರ್ಡೊ ಎಂಬ ದೆವ್ವವನ್ನು ವಿವಾಹವಾದರು. ವೃತ್ತಿಯಲ್ಲಿ ಗಾಯಕಿಯಾಗಿರುವ ಮಹಿಳೆ (Woman), ದೆವ್ವವನ್ನು ಭೇಟಿಯಾದ ಕೇವಲ ಐದು ತಿಂಗಳೊಳಗೆ ಮದುವೆಯಾದರು. ಆದರೆ ಆರಂಭದಲ್ಲಿ ನನ್ನ ವೈವಾಹಿಕ ಜೀವನ (Married life) ಚೆನ್ನಾಗಿತ್ತು. ಆದರೆ ಈಗ ನನ್ನ ಗಂಡ (Husband) ಜೀವನವನ್ನು ನರಕ ಮಾಡಿಟ್ಟಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ. ಬ್ರೋಕಾರ್ಡ್ ಪ್ರಕಾರ, ಗಂಡ ಎಲ್ಲಿ ಹೋದರೂ ನನ್ನನ್ನು ಹಿಂಬಾಲಿಸುತ್ತಿದ್ದಾನೆ. ಆತನನ್ನು ನನ್ನ ಜೀವನದಿಂದ ಹೊರಹಾಕಲು ಭೂತೋಚ್ಚಾಟನೆಯನ್ನು ಪರಿಗಣಿಸುತ್ತಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

'ದೆವ್ವವನ್ನು ಮದುವೆಯಾಗುವ ಮೊದಲೇ ನಾನು ಈ ಬಗ್ಗೆ ಸಲಹೆಗಳನ್ನು ತೆಗೆದುಕೊಳ್ಳಬೇಕು ಎಂದು ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲ್ಲಿಲ್ಲ. ಆದರೆ ಈಗ ದೆವ್ವವನ್ನು ಮದುವೆಯಾಗಿ ಜೀವನ ನಡೆಸಲು ಸಾಧ್ಯವಿಲ್ಲ ಎಂಬುದು ಅರ್ಥವಾಯಿತು' ಎಂದು ಮಹಿಳೆ ಹೇಳಿದರು. ಈ ಸಂದರ್ಭದಲ್ಲಿ ಮಹಿಳೆ ತನ್ನ ಮದುವೆಯ ದಿನವನ್ನು ನೆನಪಿಸಿಕೊಂಡರು. 'ನನ್ನ ಮದುವೆ ಸಮಾರಂಭವು ಜೀವಂತ ಮತ್ತು ಸತ್ತವರಿಗೆ ಮುಕ್ತ ಆಹ್ವಾನವನ್ನು ಹೊಂದಿತ್ತು. ಮರ್ಲಿನ್ ಮನ್ರೋ, ಎಲ್ವಿಸ್ ಮತ್ತು ಹೆನ್ರಿ VIIIರಂತಹವರು ಪ್ರಾರ್ಥನಾ ಮಂದಿರಕ್ಕೆ ಆಗಮಿಸಿದರು. ಆದರೆ ಇಲ್ಲಿ ನನ್ನ ಪತಿಯ ವರ್ತನೆ ನನ್ನನ್ನು ಕೆರಳಿಸಿತ್ತು' ಎಂದು ಮಹಿಳೆ ತಿಳಿಸಿದ್ದಾರೆ. 

ಇಲ್ಲಿ ಮಹಿಳೆಗೆ ಮಹಿಳೆಯೊಂದಿಗೇ ಮದುವೆ, ಆದರೆ, ಸೆಕ್ಸ್ ಮಾತ್ರ ಬೇರೆಯವರೊಂದಿಗೆ!

'ಮದುವೆಯ ದಿನ ನಾನು ತುಂಬಾ ಖುಷಿಯಾಗಿದ್ದೆ. ಆದರೆ ಮದುವೆಯ ದಿನ ಸಂಜೆ ಪತಿಯೊಂದಿಗೆ ಸಮಯ ಕಳೆಯಲು ಹೊರಟಿದ್ದು ನನಗೆ ನಿಜವಾಗಿಯೂ ನಿರಾಸೆಯನ್ನುಂಟು ಮಾಡಿತ್ತು. ಪತಿ ರೋಮ್ಯಾಂಟಿಕ್ ಆಗಿರುವ ಬದಲು ನನ್ನ ಜೊತೆ ಕಿರಿಕ್ ಮಾಡುತ್ತಿದ್ದ. ನಾನು ಐಸ್‌ಕ್ರೀಂನ್ನು ಶೇರ್ ಮಾಡಿ ತಿನ್ನಲು ಯತ್ನಿಸಿದೆ. ಆದರೆ ಅದು ರೋಮ್ಯಾಂಟಿಕ್ ಆಗಿ ಹೋಗುವ ಬದಲು ನನ್ನ ಮುಖದಲ್ಲೆಲ್ಲಾ ಚೆಲ್ಲಾಡಿತು. ನಾನು ನಿಜವಾಗಿಯೂ ಬೇಸರಗೊಂಡೆ. ಯಾವುದೋ ಒಂದು ಭೀಕರ ಜೀವಿಯೊಂದಿಗೆ ಹೋರಾಡುವ ಅನುಭವ ನನಗಾಯಿತು' ಎಂದು ಮಹಿಳೆ ವಿವರಿಸಿದ್ದಾರೆ.

ಈ ಮಧ್ಯೆ, ಬ್ರೋಕಾರ್ಡ್ ತನ್ನ ಡಿವೋರ್ಸ್‌ ನಿರ್ಧಾರಕ್ಕೆ ಮುಂಚಿತವಾಗಿ, ಸಂಬಂಧವನ್ನು ಗಂಭೀರವಾಗಿ ಪರಿಗಣಿಸಲು ತನ್ನ ಪತಿಗೆ ಕೇಳಿಕೊಂಡಿದ್ದೇನೆ ಎಂದು ಹೇಳಿದರು. ಆದರೆ ಅವಳ ಕೋರಿಕೆ ವ್ಯರ್ಥವಾಯಿತು. ಅಳುವ ಶಿಶುಗಳ ಕಿರುಚಾಟದೊಂದಿಗೆ ತನ್ನನ್ನು ಕಾಡುವ ಮೂಲಕ ದೆವ್ವ ತನ್ನ ಜೀವನವನ್ನು ನರಕವನ್ನಾಗಿ ಮಾಡಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಅದೇನೆ ಇರ್ಲಿ, ದೆವ್ವವನ್ನು ಮದ್ವೆಯಾಗಿದ್ದೇ ಅಸಹಜ ಮತ್ತು ವಿಪರ್ಯಾಸ. ಹೀಗಿರುವಾಗ ದೆವ್ವ ಕಾಟ ಕೊಡ್ತಿದೆ ಅಂತ ಆರೋಪಿಸೋದ್ರಲ್ಲಿ ಅರ್ಥಾನೆ ಇಲ್ಲ ಅಂತಿದ್ದಾರೆ ನೆಟ್ಟಿಗರು.

Follow Us:
Download App:
  • android
  • ios