Asianet Suvarna News Asianet Suvarna News

ಹುಡುಗರ ಸಹವಾಸನೇ ಬೇಡಾಂತ ಗೊಂಬೆಯನ್ನೇ ಮದ್ವೆಯಾದ್ಲು, ಮುದ್ದಾಗ ಮಗುವೂ ಇದೆ..!

ಸಮಾಜ (Society)ದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು (Men-women) ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ರೋಬೋಟ್‌ (Robot), ಕನಸಿನಲ್ಲಿ ಬರುವ ಹುಡುಗಿ, ವಿಮಾನದ ಜೊತೆ ಹೀಗೆ ಚಿತ್ರ-ವಿಚಿತ್ರವಾಗಿ ಮದ್ವೆಯಾಗ್ತಾರೆ. ಇಲ್ಲಾಗಿದ್ದು ಇದೇ. ಇಲ್ಲೊಬ್ಬಾಕೆ ಎಲ್ಲಾ ಬಿಟ್ಟು ಗೊಂಬೆ (Doll)ಯನ್ನೇ ಮದ್ವೆಯಾಗಿದ್ದಾಳೆ. ಅರೆ ಇದೆಂಥಾ ವಿಚಿತ್ರ ಅನ್ಬೇಡಿ. ಫುಲ್ ಸ್ಟೋರಿ ಓದಿ. 

Brazil Woman Who Married Rag Doll Now Has A Baby With Her Soulmate Vin
Author
Bengaluru, First Published Jun 24, 2022, 11:17 AM IST

ಕಾಲ ಬದಲಾಗುತ್ತಿದೆ. ಜೊತೆಗೆ ಸಂಬಂಧದ (Relationship) ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆಲ್ಲಾ ಒಬ್ಬ ಗಂಡು(Men), ಒಬ್ಬ ಹೆಣ್ಣು (Woman) ಮದುವೆಯಾಗುತ್ತಿದ್ದರು. ಪುರುಷ ಹಾಗೂ ಮಹಿಳೆ ಪರಸ್ಪರ ಮದುವೆಯಾಗಿ ಲೈಂಗಿಕ ಕ್ರಿಯೆ (Sex)ಯಲ್ಲಿ ತೊಡಗಿಕೊಂಡು ಮಕ್ಕಳನ್ನು ಪಡೆದು ಕುಟುಂಬವನ್ನು ಬೆಳೆಸಬಹುದಾಗಿದೆ. ಇದು ಸಮಾಜದಿಂದಲೇ ಅಂಗೀಕೃತಗೊಂಡಿರುವ ಸಂಬಂಧ. ಆದರೆ ಈಗ ಕಾಲ ಬದಲಾಗಿದೆ.

ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಮಾತ್ರವಲ್ಲ ಇದು ಜನಸಾಮಾನ್ಯರ ನಡುವೆಯೀಗ ಅಚ್ಚರಿಯ ವಿಷಯವಾಗಿಯೂ ಉಳಿದಿಲ್ಲ. ಇದೆಲ್ಲವನ್ನೂ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್‌ ವರ್ಷನ್ ವ್ಯಕ್ತಿ, ಹೋಲೋಗ್ರಾಮ್ (ವ್ಯಕ್ತಿಯ ಕಾಲ್ಪನಿಕ ರೂಪ)ನ್ನೂ ಮದುವೆಯಾದವರೂ ಇದ್ದಾರೆ.  ಹಾಗೆಯೇ ಬ್ರೆಜಿಲ್‌ನಲ್ಲೊಬ್ಬ ಮಹಿಳೆ ಡಾಲ್‌ ಅನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಮಾತ್ರವಲ್ಲ, ತಾನು ಡಾಲ್‌ನ್ನು ಮದ್ವೆಯಾಗಿ ಮಗುವನ್ನೂ ಪಡೆದುಕೊಂಡಿರುವುದಾಗಿ ಹೇಳಿದ್ದಾಳೆ. 

Sologamy Marriage: ತನ್ನನ್ನು ತಾನು ಮದುವೆಯಾಗ್ತಿರೋ ಹುಡುಗಿ ಹನಿಮೂನ್ ಎಲ್ಲಿ?

ಮೆರಿವೊನ್ ರೋಚಾ ಮೊರೇಸ್ ಅವರು  ಡಾಲ್‌ ಮಾರ್ಸೆಲೊ ಅವರನ್ನು ಭೇಟಿಯಾದಾಗ ಮೊದಲ ನೋಟದಲ್ಲೇ ಪ್ರೀತಿ ಉಂಟಾಗಿತ್ತಂತೆ. ಮೆರಿವೊನ್ ಒಂಟಿಯಾಗಿದ್ದು ಬೇಸರ ಪಟ್ಟುಕೊಳ್ಳುತ್ತಿದ್ದ ಕಾರಣ ಆಕೆಯ ತಾಯಿ ಅವರಿಗೆ ಈ ಡಾಲ್ ಗಿಫ್ಟ್ ಕೊಟ್ಟಿದ್ರಂತೆ. ಆದ್ರೆ ಕ್ರಮೇಣ ಮೆರಿವೊನ್‌ಗೆ ಡಾಲ್‌ ಮೇಲೆ ಪ್ರೀತಿ ಉಂಟಾಗಿ ಅದನ್ನೇ ಮದ್ವೆಯಾಗಲು ನಿರ್ಧರಿಸಿದ್ರಂತೆ. ಮೆರಿವೊನ್ ಮತ್ತು ಮಾರ್ಸೆಲೊ ಅವರು ಭೇಟಿಯಾದ ದಿನದಿಂದಲೂ ಪ್ರಣಯ ಸಂಬಂಧವನ್ನು ಹೊಂದಿದ್ದಾರಂತೆ.

250 ಅತಿಥಿಗಳು ಭಾಗವಹಿಸಿದ್ದ ಸುಂದರ ಸಮಾರಂಭದಲ್ಲಿ ದಂಪತಿಗಳು ವಿವಾಹವಾದರು. ಇದು ನನಗೆ ಅದ್ಭುತವಾದ ದಿನ, ಬಹಳ ಮುಖ್ಯ, ತುಂಬಾ ಭಾವನಾತ್ಮಕವಾಗಿದೆ. ಅವನು ನನ್ನ ಜೀವನದಲ್ಲಿ ನಾನು ಯಾವಾಗಲೂ ಬಯಸಿದ ವ್ಯಕ್ತಿ. ಅವನೊಂದಿಗೆ ವೈವಾಹಿಕ ಜೀವನ ಅದ್ಭುತವಾಗಿದೆ. ಅವನು ನನ್ನೊಂದಿಗೆ ಜಗಳವಾಡುವುದಿಲ್ಲ, ವಾದ ಮಾಡುವುದಿಲ್ಲ ಮತ್ತು ನನ್ನ ಎಲ್ಲಾ ಭಾವನೆಯನ್ನು ಅರ್ಥಮಾಡಿಕೊಳ್ಳುತ್ತಾನೆ ಎಂದು ಮೆರಿವೊನ್ ಹೇಳುತ್ತಾರೆ.

ದಂಪತಿಗಳು ಮೇ 21 ರಂದು ತಮ್ಮ ಗೊಂಬೆ-ಮಗು ಮಾರ್ಸೆಲಿನ್ಹೋ ಅವರನ್ನು ಸ್ವಾಗತಿಸಿದರು. ಮೈರಿವೊನ್ ಅವರು 200 ಜನರ ಪ್ರೇಕ್ಷಕರಿಗೆ ಲೈವ್-ಸ್ಟ್ರೀಮ್ ಮಾಡುವಾಗ ವೈದ್ಯರು ಮತ್ತು ನರ್ಸ್ ಸಮ್ಮುಖದಲ್ಲಿ ಮನೆಯಲ್ಲಿ ಕೇವಲ 35 ನಿಮಿಷಗಳಲ್ಲಿ ಜನ್ಮ ನೀಡಿದರು ನನ್ನದು ನಿಜವಾದ ಕುಟುಂಬ, ಜನರು ಇದನ್ನು ನಕಲಿ ಎನ್ನುವುದನ್ನು ನಾನು ಇಷ್ಟಪಡುವುದಿಲ್ಲ ಎಂದು ಮೆರಿವೊನ್ ಹೇಳುತ್ತಾರೆ.

ಹುಡುಗರು ಯಾರೂ ಇಷ್ಟವಾಗ್ತಿಲ್ವಂತೆ ! ವಿಮಾನಾನೇ ಬಾಯ್‌ಫ್ರೆಂಡ್, ಅದನ್ನೇ ಮದ್ವೆಯಾಗ್ತೀನಿ ಅಂತಾಳೆ

ಮಾರ್ಸೆಲೊ ಒಬ್ಬ ಶ್ರೇಷ್ಠ ಮತ್ತು ನಿಷ್ಠಾವಂತ ಪತಿ. ಅವನಂತಹಾ ಸಂಗಾತಿ ಸಿಗುವುದು ತುಂಬಾ ಕಷ್ಟ. ಮತ್ತು ಎಲ್ಲಾ ಮಹಿಳೆಯರು ಅವನನ್ನು ನೋಡಿ ಅಸೂಯೆಪಡುತ್ತಿದ್ದಾರೆ ಎಂದು ಮೆರಿವೊನ್ ಹೇಳುತ್ತಾರೆ. ಕೆಲವೊಂದು ವಿಷಯದಲ್ಲಿ ಮಾರ್ಸೆಲೊ ಸೋಮಾರಿಯೂ ಹೌದು. ಅದನ್ನು ನಾನು ಸರಿಪಡಿಸುತ್ತೇನೆ ಎಂದು ಮಾರ್ಸೆಲೊ ಹೇಳಿದ್ದಾರೆ.

ಇತ್ತೀಚಿಗೆ ಮಹಿಳೆಯೊಬ್ರು ವಿಮಾನದೊಂದಿಗೆ ಸಂಬಂಧ ಹೊಂದಿರುವ ಸಾರಾ ರೋಡೋ ಅದನ್ನು ತನ್ನ ಗೆಳೆಯ ಎಂದು ಉಲ್ಲೇಖಿಸಿದ್ದರು.. ಡಿಕ್ಕಿ ಎಂಬ ವಿಮಾನದೊಂದಿಗಿನ ತನ್ನ ವಿಲಕ್ಷಣ ಸಂಬಂಧವನ್ನು ಯುವತಿ ತಿಳಿಸಿದ್ದರು. ನಾನು ಈ ವಿಮಾನವನ್ನು ಎಲ್ಲಾ ರೀತಿಯಲ್ಲಿ ಪ್ರೀತಿಸುತ್ತಿರುವುದಾಗಿ ಸಾರಾ ಹೇಳಿದ್ದಳು. ತಾನು ವಿಮಾನದಲ್ಲಿ ಸುರಕ್ಷಿತವಾಗಿರುತ್ತೇನೆ. ಹೀಗಾಗಿ ಅದರ ಜೊತೆ ಸಂಬಂಧ ಬೆಳೆಸಿಕೊಳ್ಳಲು ನನಗೆ ಭರವಸೆಯಿದೆ. ನಾನು ವಿಮಾನದ ಜೊತೆ ಇರುವುದರೊಂದಿಗೆ ತನ್ನ ಎಲ್ಲಾ ಸಮಯವನ್ನು ಅದರ ಜೊತೆಯೇ ಕಳೆಯಲು ಬಯಸುತ್ತೇನೆ ಎಂದು ತಿಳಿಸಿದ್ದಳು.

Follow Us:
Download App:
  • android
  • ios