ಇಲ್ಲಿ ಮಹಿಳೆಗೆ ಮಹಿಳೆಯೊಂದಿಗೇ ಮದುವೆ, ಆದರೆ, ಸೆಕ್ಸ್ ಮಾತ್ರ ಬೇರೆಯವರೊಂದಿಗೆ!
ಇತ್ತೀಚೆಗೆ ಒಂದೇ ಲಿಂಗ ವಿವಾಹವು ಸಾಮಾನ್ಯ. ಹಲವು ಪ್ರದೇಶಗಳಲ್ಲಿ ಇದನ್ನು ಕಾನೂನು ಸಹ ಮಾನ್ಯಗೊಳಿಸಿದೆ. ಇದೆಲ್ಲವೂ ಇತ್ತಿಚಿನ ದಿನಗಳಲ್ಲಿ ನಡೆದಂತಹ ವಿದ್ಯಮಾನ. ಆದರೆ ಶತಮಾನಗಳ ಹಿಂದಿನಿಂದಲೂ ಮಹಿಳೆಯರು ಪರಸ್ಪರ ಮದುವೆಯಾಗುತ್ತಿರುವ ಒಂದು ಸಂಪ್ರದಾಯವು ಒಂದೆಡೆ ಇದೆ. ಇಲ್ಲಿ ದೈಹಿಕ ಸಂಬಂಧ ಮಾತ್ರ ಬೇರೆಯವರ ಜೊತೆ ನಡೆಯುತ್ತೆ. ಹಾಗಿದ್ರೆ ಆ ಪ್ರದೇಶ ಯಾವುದು? ಎಲ್ಲಿದೆ ಇಂತಹ ಸಂಪ್ರದಾಯ ಅನ್ನೋದನ್ನು ತಿಳಿಯೋಣ.

LGBT ಕಾಯ್ದೆ ಅನುಷ್ಠಾನದ ನಂತರ, ಸ್ವ ಲಿಂಗದಲ್ಲಿಯೇ ಮದುವೆಯಾಗಿರುವ ಅನೇಕ ಘಟನೆಗಳ ಬಗ್ಗೆ ನೀವು ಕೇಳಿರಬಹುದು. ಇದರಲ್ಲಿ 2 ಮಹಿಳೆಯರು ಅಥವಾ ಇಬ್ಬರು ಪುರುಷರು ಪರಸ್ಪರ ಮದುವೆಯಾಗುತ್ತಾರೆ. ಇತ್ತೀಚಿiಗೆ ಈ ಸಂಸ್ಕೃತಿಯನ್ನು ಸಾಕಷ್ಟು ಹೆಚ್ಚುತ್ತಿದೆ. ಹಿಂದೆ ಈ ಮದುವೆ ಬಗ್ಗೆ ಕೇಳಿದ್ರೆ ಅಚ್ಚರಿ ಪಡುತ್ತಿದ್ದ ಜನ, ಇದೀಗ ಅದನ್ನು ಸ್ವೀಕರಿಸಲು ಕಲಿತಿದ್ದಾರೆ.
ಆದರೆ ಶತಮಾನಗಳಿಂದ ಮಹಿಳೆಯರು ಪರಸ್ಪರ ಮದುವೆಯಾಗುತ್ತಿರುವ ಒಂದು ಸ್ಥಳ ಜಗತ್ತಿನಲ್ಲಿದೆ ಮತ್ತು ಇದರ ಹಿಂದಿನ ಕಾರಣವು ತುಂಬಾ ವಿಶೇಷವಾಗಿದೆ ಅನ್ನೋದು ನಿಮಗೆ ಗೊತ್ತಾ? ನಾವು ಇಂದು ನಿಮಗೆ ತಾಂಜೇನಿಯಾದ ಬುಡಕಟ್ಟಿನ ಬಗ್ಗೆ ತಿಳಿಸುತ್ತೇವೆ, ಅಲ್ಲಿ ಮಹಿಳೆಯರು ಪರಸ್ಪರ ಮದುವೆಯಾಗುತ್ತಾರೆ, ಆದರೆ ದೈಹಿಕ ಸಂಬಂಧ ಮಾತ್ರ ಬೇರೆಯವರೊಂದಿಗೆ ಮಾಡ್ತಾರೆ. ಏನು ಇಲ್ಲಿನ ವಿಶೇಷತೆ ತಿಳಿಯೋಣ.
ಇಬ್ಬರು ಮಹಿಳೆಯರ ಮದುವೆ
ಪ್ರಪಂಚದಾದ್ಯಂತ ಮದುವೆಯ ಬಗ್ಗೆ ಅನೇಕ ರೀತಿಯ ಸಂಪ್ರದಾಯಗಳಿವೆ, ಅವುಗಳಲ್ಲಿ ಕೆಲವು ಸಾಕಷ್ಟು ವಿಲಕ್ಷಣವಾಗಿವೆ. ಅವುಗಳಲ್ಲಿ ಒಂದು ತಾಂಜೇನಿಯಾದ ನಯಾಮೊಂಗೊ ಗ್ರಾಮದ ಕುರಿಯಾ ಬುಡಕಟ್ಟು ಜನಾಂಗ, ಅಲ್ಲಿ ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುತ್ತಾಳೆ.
ಈ ಸಂಪ್ರದಾಯವು ಶತಮಾನಗಳಿಂದ ಇಲ್ಲಿ ನಡೆಯುತ್ತಿದೆ. ಇದನ್ನು ನೆವಂಬಾ ನ್ಯೋಭು ಎಂದು ಕರೆಯಲಾಗುತ್ತೆ, ಅಂದರೆ ಮಹಿಳೆಯರ ಮನೆ ಎಂದರ್ಥ. ಮದುವೆಯ ನಂತರ, ಇಬ್ಬರೂ ಮಹಿಳೆಯರು ಒಂದೇ ಮನೆಯಲ್ಲಿ ಸಂಗಾತಿಗಳಾಗಿ ಒಟ್ಟಿಗೆ ವಾಸಿಸುತ್ತಾರೆ. ಆದರೆ ಅವರು ಪರಸ್ಪರ ದೈಹಿಕ ಸಂಬಂಧಗಳನ್ನು ಹೊಂದೋದಿಲ್ಲ. ಇಬ್ಬರೂ ಪರಸ್ಪರ ಮಾನಸಿಕವಾಗಿ ಸಂಪರ್ಕ ಹೊಂದಿದ್ದಾರೆ, ಆದರೆ ಸಲಿಂಗಕಾಮಿ ಸಂಬಂಧವನ್ನು ರೂಪಿಸಲು ಸಾಧ್ಯವಾಗುವುದಿಲ್ಲ.
ಮಗುವನ್ನು ಹೊಂದುವ ಹಕ್ಕು
ತಾಂಜೇನಿಯಾದ ಮಹಿಳೆಯರು ಯಾವುದೇ ಪುರುಷನೊಂದಿಗೆ ಸಂಬಂಧವನ್ನು ಹೊಂದಬಹುದು ಮತ್ತು ಅದರಿಂದ ಜನಿಸಿದ ಮಗುವನ್ನು ಇನ್ನೊಬ್ಬ ಮಹಿಳೆಯನ್ನು ಮದುವೆಯಾದ ನಂತರ ನೋಡಿಕೊಳ್ಳಲಾಗುತ್ತದೆ. ಇದನ್ನು ಅವರು ತಮ್ಮದೇ ಮಗುವಿನಂತೆ ಸಾಕುತ್ತಾರೆ.
ಇನ್ನು ಹುಟ್ಟಿದ ಮಗುವಿನ ಮೇಲೆ ಗಂಡನಿಗೆ ಈ ಮಗುವಿನ ಮೇಲೆ ಯಾವುದೇ ಹಕ್ಕಿಲ್ಲ, ಇಲ್ಲಿ ಮಹಿಳೆಯರು ಮಗುವನ್ನು ಹೊಂದಲು ಪುರುಷನೊಂದಿಗೆ ದೈಹಿಕ ಸಂಬಂಧವನ್ನು ಮಾಡಿಕೊಳ್ಳುತ್ತಾರೆ. ಮಗುವನ್ನು ಪಡೆದ ನಂತರ, ಅವಳು ಪುರುಷನನ್ನು ತೊರೆದು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುತ್ತಾನೆ.
ಇದರ ಹಿಂದಿನ ಕಾರಣವೇನು?
ತಾಂಜೇನಿಯಾದ ಈ ಬುಡಕಟ್ಟಿನ ಇಬ್ಬರು ಮಹಿಳೆಯರು ಪರಸ್ಪರ ಮದುವೆಯಾಗುತ್ತಾರೆ, ಇದರಿಂದ ಪಿತೃಪ್ರಧಾನತೆಯನ್ನು ತೆಗೆದುಹಾಕಬಹುದು ಎಂಬುದು ಅವರ ನಂಬಿಕೆ. ಈ ಬುಡಕಟ್ಟುಗಳ ಮಹಿಳೆಯರು ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಈ ಸಂಪ್ರದಾಯ ಅನುಸರಿಸುತ್ತಾರೆ.
ಮಗುವನ್ನು ಹೊಂದಿರದ ಅಥವಾ ವಿಧವೆಯರಾಗಿರುವ ಮಹಿಳೆಯರಿಗೆ ತಮ್ಮ ಆಸ್ತಿಯನ್ನು ಹೊಂದುವ ಹಕ್ಕು ಇರುವುದಿಲ್ಲ, ಆದ್ದರಿಂದ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವ ಮೂಲಕ ಅವರು ಮತ್ತೆ ಆಸ್ತಿಯ ಹಕ್ಕನ್ನು ಹೊಂದುತ್ತಾರೆ. ಇದು ಇಲ್ಲಿನ ವಿಶೇಷ ಸಂಪ್ರದಾಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.