ಮೈಸೂರಿನ ಮಹಾರಾಣಿ ತ್ರಿಷಿಕಾ ಕುಮಾರಿ (Trishika Kumari Devi) ಮರ ಉಳಿಸುವ ಹೋರಾಟಕ್ಕೆ ತನ್ನ ಪುಟ್ಟ ಕಂದನನ್ನೂ ಜೊತೆಯಾಗಿಸಿದಂತಿದೆ. ಮಗ ತಬ್ಬಿ ನಿಂತಿರುವ ಮೈಸೂರಿನ ಪುಟ್ಟ ಮಹಾರಾಜರ ಫೋಟೋ ಹೇಗಿದೆ ನೋಡಿ.. 

ರಾಜ ನಗರಿಯ ಗತ್ತು, ಗೈರತ್ತು ಇರುವ ಮೈಸೂರಿನಲ್ಲಿ ಹಲವು ಸಮಯದಿಂದ ಮರಗಳನ್ನು ಕಡಿಯುವ, ಬೆಟ್ಟಕ್ಕೆ ಕನ್ನ ಹಾಕುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಇಲ್ಲಿನ ಪ್ರಜ್ಞಾವಂತರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದೀಗ ಮೈಸೂರಿನ ಮಹಾರಾಣಿ ತ್ರಿಷಿಕಾ ಕುಮಾರಿಯೂ (Trishika Kumari Devi) ಮರಗಳ ಪರವಾದ ಆಂದೋಲನದಲ್ಲಿ ಭಾಗಿಯಾಗಿ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ವಿಶೇಷ ಅಂದರೆ ಇವರ ಪುಟ್ಟ ಮಗುವೂ ಈ ಆಂದೋಲನಕ್ಕೆ ಕೈ ಜೋಡಿಸಿದೆ. ಅದು ಹೇಗೆ ಅನ್ನೋದನ್ನು ತ್ರಿಷಿಕಾ ಕುಮಾರಿ ಕ್ಯೂಟ್ ಆಗಿ ಹೇಳಿದ್ದಾರೆ.

ಹಾಗೆ ನೋಡಿದರೆ ರಿಷಿಕಾ ಮೈಸೂರು ಅರಮನೆಗೆ ಬಂದು ಕೆಲವು ವರ್ಷಗಳಾಗಿವೆಯಷ್ಟೇ. ಅಷ್ಟರಲ್ಲೇ ಅವರು ಮೈಸೂರಲ್ಲಿ ಮನೆಮಾತಾಗಿದ್ದಾರೆ. ಡುಂಗರಪುರ ರಾಜಮನೆತನದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶ್ರೀ ಕುಮಾರಿ ದಂಪತಿಯ ಪುತ್ರಿ ಇವರು. ರಾಜಮನೆತನದ ಸ್ಥಾನಮಾನದ ಹೊರತಾಗಿಯೂ, ತ್ರಿಷಿಕಾ ಕುಮಾರಿ ಸರಳ ಜೀವನಶೈಲಿಗೆ ಹೆಸರಾಗಿದ್ದಾರೆ. ಹೆಚ್ಚು ಸಾಂಪ್ರದಾಯಿಕ ಭಾರತೀಯ ಉಡುಪಿನಲ್ಲಿ ಕಾಣಿಸಿಕೊಳ್ಳುವ ಇವರು ರೂಪದಲ್ಲೂ ಸುಂದರಿ. ತ್ರಿಷಿಕಾ ಸೀರೆಯಲ್ಲೂ ಸುಂದರವಾಗಿ ಕಾಣುತ್ತಾರೆ. ಇವರ ಸೀರೆಗೆ ಅಭಿಮಾನಿಗಳೇ ಇದ್ದಾರೆ. ಫಿಟ್ನೆಸ್ ಚೆನ್ನಾಗಿ ಮೈಂಟೇನ್ ಮಾಡಿದ್ದಾರೆ. ಮಾಡರ್ನ್ ಉಡುಗೆಯಲ್ಲೂ ಪಸಂದಾಗಿ ಕಾಣ್ತಾರೆ.

ನಮ್ಮ ಮರ ಅಭಿಯಾನದಲ್ಲಿ ಮಹಾರಾಣಿ 

ದ್ಯ ಈಗ ಮೈಸೂರು ಸಂಸ್ಥಾನದ ಮಹಾರಾಣಿಯಾಗಿರುವ ತ್ರಿಷಿಕಾ ದೇವಿ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ರಸ್ತೆ ಬದಿಯ ಮರಗಳ ಸರ್ವೆ ಕೆಲಸದಲ್ಲಿ ಚುರುಕಾಗಿ ಪಾಲ್ಗೊಂಡರು. ಸಾಂಸ್ಕೃತಿಕ ನಗರಿಯ ಮರಗಳ ಗಣತಿ ಮತ್ತು ಸಂರಕ್ಷಣೆಗಾಗಿ ಹಮ್ಮಿಕೊಂಡಿರುವ 'ನಮ್ಮ ಮರ' ಅಭಿಯಾನಕ್ಕೆ ಮಹಾರಾಣಿ ತ್ರಿಷಿಕಾ ಕುಮಾರಿ ಒಡೆಯರ್ ಕೈಜೋಡಿಸಿದ್ದಾರೆ. ʻಮರಗಳು ಭೂಮಿಯ ಶ್ವಾಸಕೋಶಗಳುʼ ಎಂಬ ಸಂದೇಶದೊಂದಿಗೆ ಪ್ರಕೃತಿ ಉಳಿಸಲು ಅವರು ಮುಂದಾಗಿರುವುದು ಮೆಚ್ಚುಗೆಗೆ ಕಾರಣವಾಗಿದೆ. ಮೈಸೂರು ಸಂಸ್ಥಾನದ ಪರಿಸರ ಪ್ರೇಮದ ಪರಂಪರೆ ಮುಂದುವರಿಸುತ್ತಿರುವ ಮಹಾರಾಣಿಯವರ ಈ ನಡೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ. ಅವರ ಪಾಲ್ಗೊಳ್ಳುವಿಕೆಯಲ್ಲಿ ಹಸಿರು ಮೈಸೂರಿನ ನಿರ್ಮಾಣಕ್ಕಾಗಿ ಆರಂಭವಾಗಿರುವ ಈ ಆಂದೋಲನ ಈಗ ಹೊಸ ಚೈತನ್ಯ ಪಡೆದುಕೊಂಡಿದೆ.

ಇನ್ನೊಂದು ವಿಶೇಷ ಅಂದರೆ ತ್ರಿಷಿಕಾ ದೇವಿ ಅವರ ಪುಟ್ಟ ಮಗ ದ್ವಿತೀಯ ಪುತ್ರನೂ ಅಮ್ಮನೊಂದಿಗೆ ಈ ಆಂದೋಲನದಲ್ಲಿ ಭಾಗವಹಿಸಿದ್ದಾನೆ. ಮರವನ್ನು ಸರ್ವೆ ಮಾಡುವಂತೆ ಆತ ಹಿಡಿದು ನಿಂತಿರುವ ಫೋಟೋವನ್ನು ಶೇರ್ ಮಾಡಿರುವ ತ್ರಿಷಿಕಾ ಕುಮಾರಿ, 'ನಮ್ಮ ಆಂದೋಲನಕ್ಕೆ ಅದೃಷ್ಟ ಖುಲಾಯಿಸಿದಂತಿದೆ ನೋಡಿ' ಅಂತ ನೋಟ್ ಹಾಕಿದ್ದಾರೆ.

ಬೆಟ್ಟದ ಕೋಟೆ ಕುಟುಂಬದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಪ್ರಮೋದಾ ದೇವಿ ಒಡೆಯರ್ ಅವರು ಫೆಬ್ರವರಿ 23, 2015 ರಂದು ದತ್ತು ಪಡೆದರು. ಪ್ರಮೋದಾ ದೇವಿ ಅವರ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಡಿಸೆಂಬರ್ 10, 2013 ರಂದು ನಿಧನರಾದರು. ನಂತರ ಮೇ 28, 2015 ರಂದು ಯದು ರಾಜವಂಶದ 27ನೇ ಮಹಾರಾಜರಾಗಿ ಯದುವೀರ ಅಧಿಕೃತವಾಗಿ ಪಟ್ಟ ಏರಿದರು. ಸದ್ಯ ಸಂಸದರೂ ಆಗಿ ಗಮನ ಸೆಳೆಯುತ್ತಿದ್ದಾರೆ.ಜೂನ್ 27, 2016 ರಂದು ಯದುವೀರ್ ರಾಜ್ಕೋಟ್ನ ರಾಜಮನೆತನದ ತ್ರಿಷಿಕಾ ದೇವಿಯನ್ನು ವಿವಾಹವಾದರು. ದಂಪತಿಗಳು ತಮ್ಮ ಮೊದಲ ಮಗು ಆದ್ಯವೀರ್ ನರಸಿಂಹದತ್ತ ಒಡೆಯರ್ಗೆ ಡಿಸೆಂಬರ್ 6, 2017ರಂದು ಜನ್ಮ ನೀಡಿದರು. ತ್ರಿಷಿಕಾ ಅವರು 2024ರಲ್ಲಿ ಮೈಸೂರಿನ ಯಾದವಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದರು.

View post on Instagram